Wednesday, November 21, 2007

ಅನುಭವ್ ಸಿನ್ಹಾರಿಂದ "ತುಮ್‌ಬಿನ್ "ರಿಮೇಕ್

(ಕರ್ಟೆಸೀ:ವೆಬ್ ದುನಿಯಾ)
ಕ್ಯಾಶ್ ಚಿತ್ರಕ್ಕೆ ಪ್ರೇಕ್ಷಕರಿಂದ ಬಂದ ವಿಭಿನ್ನ ವಿಮರ್ಶೆಗಳ ನಂತರ, ತನ್ನ ಮುಂದಿನ ಚಿತ್ರ " ಚೇಸ್‌"ನ್ನು ಅನುಭವ ಸಿನ್ಹಾ ಅವರು ಪುನರ್‌ನಿರ್ಮಾಣ ಮಾಡಲು ತಯಾರಿ ನಡೆಸಿದ್ದಾರೆ.2001ರಲ್ಲಿ ತಾನು ನಿರ್ದೇಶಿಸಿದ ಮೊದಲ ಚಿತ್ರ ತುಮ್‌ಬಿನ್‌ನನ್ನು, ಪ್ರಿಯಾಂಶು ಚಟರ್ಜಿ, ಹಿಮಾಂಶು ಮಾಲಿಕ್, ರಾಕೇಶ್ ಬಾಪತ್ ಮುಂತಾದ ನವ ಕಲಾವಿದರ ವಿಭಿನ್ನ ಪಾತ್ರಗಳ ಮೂಲಕ ಇನ್ನೊಂದು ಆಶ್ಚರ್ಯಕರ ಯೋಜನೆಯನ್ನು ಮಾಡಲಿದ್ದಾರೆ.ನಾನು ತುಮ್‌ಬಿನ್ ಸಿನಿಮಾವನ್ನು ರೀಮೇಕ್ ಮಾಡಲು ಸಿದ್ಧನಾಗಿದ್ದೇನೆ. ಇದು ಉತ್ತಮ ಕಥೆಯನ್ನು ಹೊಂದಿದೆ. ನಾನು ಇದನ್ನು ಮಾಡಿದಾಗ ಈ ಯೋಜನೆಯಲ್ಲಿ ಅನುಭವವಿಲ್ಲದ ಎಲ್ಲರೂ ನಮ್ಮೊಂದಿಗೆ ಭಾಗಿಯಾಗಿದ್ದರು. " ಟಿ " ಸೀರೀಸ್ ನಿರ್ಮಾಪಕರು ಕೂಡಾ ಹೊಸಬರಾಗಿದ್ದರು. ನಿರ್ದೇಶಕರೊಬ್ಬರು ತನ್ನದೇ ಸಿನಿಮಾವನ್ನು ರೀಮೇಕ್ ಮಾಡುತ್ತಿರುವುದು ಇದೇ ಮೊದಲಬಾರಿ.

No comments: