Tuesday, November 27, 2007

ಬಿಪಾಷಾ ರೂಲ್ಡ್ "ಗೋಲ್"

ತನ್ನ ಕೂಲ್ ಮತ್ತು ಹಾಟ್ ಸೌಂದರ್ಯದ ಮೂಲಕ ಬಾಲಿವುಡ್ ನಟಿ ಬಿಪಾಶಾ ಬಸು ತನ್ನ ಇತ್ತೀಚಿನ ಚಿತ್ರ ಧನ್ ಧನಾ ಧನ್ ಗೋಲ್‌ನಲ್ಲಿ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಲಿದ್ದಾರೆ.ಧನ ಧನಾ ಧನ ಚಿತ್ರಕಥೆಯನ್ನು ಕೇಳಿದ ನಂತರ ಚಿತ್ರದಲ್ಲಿ ನೂತನ ವಸ್ತ್ರಧಾರಿಯಾಗಿ ಕಾಣಿಸಿಕೊಂಡಿದ್ದಾಳೆ.ಈ ಚಿತ್ರದಲ್ಲಿ ನಾನು ಫಿಸಿಯೋತೆರಪಿಸ್ಟ್ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ನನಗೆ ಆ ಪಾತ್ರದಲ್ಲಿ ವಾಸ್ತವತೆ ಬೇಕಾಗಿತ್ತು. ಹಾಗಾಗಿ ತುಂಬಾ ಚರ್ಚೆ ನಡೆಸಿದ ನಂತರ ಪಾತ್ರಧಾರಿಯು ತನ್ನ ಕರ್ತವ್ಯದ ವೇಳೆಯಲ್ಲಿ ಟ್ರಾಕ್ ಪ್ಯಾಂಟ್ ಮತ್ತು ಟಿಶರ್ಟ್, ಗ್ಲಾಸ್ ಧರಿಸಿ ಪೋನಿ ಟೈಲ್ ಹಾಕಬೇಕು. ಕರ್ತವ್ಯದಲ್ಲಿರದ ವೇಳೆಯಲ್ಲಿ ಮುಸ್ಲಿಂ ಹುಡುಗಿಯ ರೀತಿಯಲ್ಲಿ ಪಾಕಿಸ್ತಾನಿ ಸಲ್ವಾರ್ ಕಮಾಜ್ ಧರಿಸುವುದು ಎಂಬುದಾಗಿ ಬಿಪಾಶಾ ಹೇಳಿದ್ದಾರೆ.ಬಿಪಾಶಾ ಪ್ರತಿಯೊಂದು ಸಿನಿಮಾದಲ್ಲಿ ವಿಭಿನ್ನವಾಗಿ ಕಾಣುವಂತೆ ಪ್ರಯತ್ನಿಸುತ್ತೇನೆ. ಈ ಸಿನಿಮಾದಲ್ಲಿನ ವಸ್ತ್ರ ವಿನ್ಯಾಸಗಳನ್ನು ರಾಕಿ ಅವರು ಮಾಡಿದ್ದಾರೆ ಎಂದು ಹೇಳಿದ್ದಾರೆ.

No comments: