ಕಿಚ್ಚ ಸುದೀಪ್‌ಗೆ ಶುಕ್ರದೆಸೆ ಶುರುವಾದಂತಿದೆ.ಬಾಲಿವುಡ್‌ನ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾಲೀಕತ್ವದ ವರ್ಮಾ ಫಿಲ್ಮ್ ಕಂಪನಿ ಇದೀಗ ಕನ್ನಡ ಚಿತ್ರ ನಿರ್ಮಿಸಲು ಮುಂದೆ ಬಂದಿದೆ. ಈ ಚಿತ್ರದ ನಾಯಕನಾಗಿ ಆಯ್ಕೆಯಾಗಿರೋದು ಸುದೀಪ್.ಹಾಗೆ ನೋಡಿದರೆ ಸುದೀಪ್ ವರ್ಮಾ ಫಿಲ್ಮ್ ಕಂಪನಿಯಲ್ಲಿ ಕೆಲಸ ಮಾಡಲಿದ್ದಾರೆ ಅನ್ನೋದು ಗಾಂಧಿನಗರದಲ್ಲಿ ಹಳೆಯ ಮಾತಾಗಿತ್ತು. ವರ್ಮಾ ನಿರ್ದೇಶನದ 'ಸರ್ಕಾರ್' ಚಿತ್ರವನ್ನು ನೋಡಿದ ಸುದೀಪ್ ಕನ್ನಡದಲ್ಲೂ ಸಹಭಾಗಿತ್ವದಲ್ಲಿ ಚಿತ್ರ ನಿರ್ಮಾಣ ಮಾಡಲು ವರ್ಮಾರೊಂದಿಗೆ ಚರ್ಚೆ ನಡೆಸಿದ್ದರಂತೆ. ಅಲ್ಲದೆ ಹಿಂದಿಯ ಸರ್ಕಾರ್ ಚಿತ್ರವನ್ನು ಕನ್ನಡದಲ್ಲಿ ರಿಮೇಕ್ ಮಾಡುವ ಉದ್ದೇಶವೂ ಸುದೀಪ್‌ಗೆ ಇತ್ತಂತೆ. ಆದರೆ ಕಾರಣಾಂತರಗಳಿಂದ ಆ ಯೋಜನೆ ಕೈಬಿಟ್ಟರು ಸುದೀಪ್. ಇಷ್ಟಾದರೂ ವರ್ಮಾ ಮತ್ತು ಸುದೀಪ್ ಬಾಂಧವ್ಯಕ್ಕೆ ಧಕ್ಕೆಯಾಗಿರಲಿಲ್ಲ. ಈ ಸ್ನೇಹದ ಪ್ರತಿಫಲವೇ ಈ ಹೊಸಾ ಚಿತ್ರ.ವರ್ಮಾ ಫಿಲ್ಮ್ ಕಂಪನಿ ವತಿಯಿಂದ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಾಯಕನಾಗಿ ಸುದೀಪ್ ಅಭಿನಯಿಸುತ್ತಿದ್ದರೆ, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಸತ್ಯ ಚಿತ್ರದಲ್ಲಿ ನಟಿಸಿದ್ದ ಚಕ್ರವರ್ತಿ ಈ ಚಿತ್ರದ ನಿರ್ದೇಶಕ. "ವರ್ಮಾ ಕಂಪನಿಯಲ್ಲಿ ಅಭಿನಯಿಸುವುದಕ್ಕೆ ನನಗೆ ನಿಜಕ್ಕೂ ಖುಷಿಯಾಗುತ್ತದೆ, ಅವರು ನನಗೆ ಮಾದರಿ ನಿರ್ದೇಶಕ" ಎನ್ನುವ ಸುದೀಪ್ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಸಣ್ಣ ಸುಳಿವನ್ನೂ ನೀಡಿಲ್ಲ. ಅಂದಹಾಗೆ ಚಿ.ಗುರುದತ್ ನಿರ್ದೇಶನ 'ಕಾಮಣ್ಣನ ಮಕ್ಕಳು' ಚಿತ್ರದ ಚಿತ್ರೀಕರಣ ಮುಗಿದ ನಂತರ ಈ ಹೊಸಾ ಚಿತ್ರದ ಚಿತ್ರೀಕರಣ ಪ್ರಾರಂಭವಾಗಲಿದೆಯಂತೆ.
ಎನಿ ಹೌ ಕಂಗ್ರಾಟ್ಸ್ ಸುದೀಪ್.
No comments:
Post a Comment