(ಕರ್ಟೆಸೀ: ವೆಬ್ ದುನಿಯಾ )
ಭಾರತದ ಈ ಬಾರಿಯ 38ನೇ ಅಂತರಾಷ್ಟ್ರೀಯ ಚಿತ್ರೋತ್ಸವವು ಮೊದಲಿನಂತಿರದೆ ಹಿಂದಿ ಚಿತ್ರಗಳಿಗಿಂತ ಹೆಚ್ಚು, ಪ್ರಾದೇಶಿಕ ಸಿನಿಮಾಗಳಿಗೆ ವೇದಿಕೆಯನ್ನು ನೀಡುತ್ತಿದೆ.ಪ್ರಾದೇಶಿಕ ಉದ್ಯಮವು ಚಿತ್ರಗಳು ತಮ್ಮ ಗುಣಮಟ್ಟವನ್ನು ವೃದ್ಧಿಸಿರುವುದರಿಂದ ಬಹುಶಃ ಇದು ಸಾಧ್ಯವಾಗಿದೆ ಎಂದು ಚಿತ್ರೋತ್ಸವದ ಮುಖ್ಯ ನಿರ್ದೇಶತರಾದ ನೀಲಿಮಾ ಕಪೂರ್ ತಿಳಿಸಿದ್ದಾರೆ.ಬಾಲಿವುಡ್ ನಟ ಶಾರುಖ್ ಖಾನ್ ಉದ್ಘಾಟಿಸಿದ 11 ದಿವಸಗಳ ಈ ಚಿತ್ರೋತ್ಸವದಲ್ಲಿ ,ನಾಕೋನ್ಮಣಿ ಮಾಂಗ್ಸಾಬಾ ನಿರ್ದೇಶನದ " ಎನ್ನಿಂಗ್ ಅಮಾಡಿ ಲಿಕ್ಲಾ " ಮಣಿಪುರಿ ಚಿತ್ರವು ಪ್ರಾಧಾನ್ಯತೆಯನ್ನು ಪಡೆದುಕೊಂಡಿದೆ ಎಂದು ನೀಲಿಮಾ ಸುದ್ದಿಗಾರರಿಗೆ ತಿಳಿಸಿದ್ದಾರೆ.ಬಾರತೀಯ ಪನೋರಮಾ ವಿಭಾಗದ 21 ಫೀಚರ್ ಸಿನಿಮಾಗಳಲ್ಲಿ ಧರ್ಮ್ ಮತ್ತು ಗಫ್ಲಾ ಎರಡೇ ಹಿಂದಿ ಚಿತ್ರಗಳಿದ್ದು, ಉಳಿದ ಐದು ಮಲಯಾಳಂ, ನಾಲ್ಕು ಮರಾಠಿ, ಮೂರು ಕನ್ನಡ ಮತ್ತು ಬೆಂಗಾಲಿ ಹಾಗೂ ಎರಡು ತಮಿಳು ಚಿತ್ರಗಳನ್ನು ಒಳಗೊಂಡಿದೆ ಅಲ್ಲದೆ ಒಂದು ಅಸ್ಸಾಮಿ ಹಾಗೂ ಮಣಿಪುರಿ ಚಿತ್ರಗಳಿವೆ.ಇತರ 15 ಚಿತ್ರಗಳಲ್ಲಿ ಮಣಿಪುರಿ, ಬೆಂಗಾಲಿ ಮತ್ತು ಮರಾಠಿ ಒಂದೊಂದು ಚಿತ್ರಗಳಿದ್ದು, ಮಲಯಾಳಂ ಮೂರು, ಇಂಗ್ಲಿಷ್ ನಾಲ್ಕು ಹಾಗೂ ಐದು ಹಿಂದಿ ಚಿತ್ರಗಳಿವೆ.
Subscribe to:
Post Comments (Atom)
No comments:
Post a Comment