ಕಮಲ್ ಹಾಸನ್ ಅವರ ಪುತ್ರಿ ಶೃತಿ ಹಾಸನ್ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ ಎಂಬುದಾಗಿ ತಿಳಿದು ಬಂದಿದ್ದು, ತಾನು ನಟಿಸುವ ಕುರಿತು ಶೃತಿ ಅವರು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಕಮಲಾ ಹಾಸನ್ ಅವರ ಸಮೀಪದ ಮೂಲಗಳು ತಿಳಿಸಿವೆ.ನಿಶಿಕಾಂತ್ ನಿರ್ದೇಶನದ ಸಿನಿಮಾದಲ್ಲಿ ಮಾಧವನ್, ಶೃತಿ ಹಾಸನ್ ಅವರ ಜೊತೆ ನಟಿಸಲಿದ್ದಾರೆ ಎಂಬ ವರದಿಗಳಿಂದ ಮಾಧವನ್ ಅವರು ದಿಗ್ಭ್ರಮೆಗೊಂಡಿದ್ದು, ಈ ವದಂತಿಗಳೆಲ್ಲ ಎಲ್ಲಿಂದ ಬರುತ್ತವೆ ಎಂದು ನನಗೆ ತಿಳಿದಿಲ್ಲ. ಸದ್ಯಕ್ಕೆ ಅಂತಹುದೇನು ನಡೆಯುವುದಿಲ್ಲ. ಇದು ಕೇವಲ ನನ್ನ ಮತ್ತು ನಿರ್ದೇಶಕ ನಿಶಿಕಾಂತ್ ಮನಸ್ಸಿಗೆ ಹೊಳೆದ ಕಲ್ಪನೆಯಷ್ಟೆ. ಇದಕ್ಕಿಂತ ಹೆಚ್ಚಿನದ್ದೆಲ್ಲವೂ ಕೇವಲ ಕಟ್ಟುಕಥೆಯಾಗಿದೆ ಎಂದು ಮಾಧವನ್ ಅವರು ಹೇಳಿದ್ದಾರೆ. ಶ್ರುತಿ ನನ್ನ ಆತ್ಮೀಯ ಸ್ನೇಹಿತರ ಪುತ್ರಿಯಾಗಿದ್ದಾರೆ. ನಾನು ಜೇಮ್‌ಶೆಡ್‌ಪುರದಿಂದ ತಮಿಳು ಉದ್ಯಮಕ್ಕೆ ಬಂದ ಸಮಯದಲ್ಲಿ ನನ್ನ ಪ್ರವೇಶಕ್ಕೆ ಅನೇಕ ಪ್ರತಿರೋಧಗಳಿತ್ತು. ನಂತರ ಕಮಲಾ ಹಾಸನ್ ನಿರ್ಮಿಸಿದ ಅಂಬೇ ಸಿವಂ ಚಿತ್ರದಲ್ಲಿ ನಾನು ಮತ್ತು ಕಮಲಾಜಿ ಅವರು ಜೊತೆಯಲ್ಲಿ ನಟಿಸಿದ್ದೆವು. ನನ್ನ ಹಿಂದಿ ಸಿನಿಮಾ ರಾಮ್ಜಿ ಲಂಡನ್‌ವೇಲ್‌ಗೆ ಕಮಲ್ ಅವರು ಸಾಹಿತ್ಯ ಬರೆದಿದ್ದರು. ನಾವಿಬ್ಬರು ಕುಟುಂಬ ಸ್ನೇಹಿತರಾಗಿದ್ದೇವೆ. ಸದ್ಯಕ್ಕೆ ಈ ಕುರಿತು ನಾವು ಯಾವುದೇ ವಿಚಾರವನ್ನು ಮಾಡಿಲ್ಲ ಎಂದು ಮಾಧವನ್ ಅವರು ಸ್ಪಷ್ಟಪಡಿಸಿದ್ದಾರೆ.
Subscribe to:
Post Comments (Atom)
No comments:
Post a Comment