ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚೆಗೆ ಹೊರತಂದಿರುವ ಸುಗಂಧ ದ್ರವ್ಯ "ಎಸ್2" ಕಳೆದ ವಾರ ಇಂಗ್ಲೆಂಡಿನಲ್ಲಿ ಚಾರಿಟಿಗಾಗಿ ನಡೆಸಲಾದ ಹರಾಜಿನಲ್ಲಿ ಭರ್ಜರಿ 15 ಸಾವಿರ ಪೌಂಡ್ ಗಳಿಕೆ ತಂದಿದೆ.ಭಾರತದಲ್ಲಿರುವ ಅಶಕ್ತ ಮಕ್ಕಳ ಕಲ್ಯಾಣಕ್ಕಾಗಿರುವ ಸಂಸ್ಥೆ "ಅನಾಮಿಕಾ"ಕ್ಕೆ ಈ ಕಾರ್ಯಕ್ರಮದಲ್ಲಿ ಒಟ್ಟು ಸೇರಿದ ಹಣವನ್ನು ನೀಡಲಾಗುತ್ತದೆ.ಫ್ಯಾಶನ್ ದೊರೆ ಡ್ಯಾನಿ ಪಾಸ್ಸಿ ಅವರು ಈ ಸುಗಂಧ ದ್ರವ್ಯವನ್ನು ಹರಾಜಿನಲ್ಲಿ ಕೊಂಡುಕೊಂಡಿದ್ದು, ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿ ಅವರೂ ಉಪಸ್ಥಿತರಿದ್ದರು.ತನ್ನ ಸುಗಂಧ ದ್ರವ್ಯವು ಇಷ್ಟೊಂದು ಮೊತ್ತವನ್ನು ಚಾರಿಟಿಗೆ ತಂದುಕೊಟ್ಟಿದೆ ಎಂಬುದರಿಂದ ಶಿಲ್ಪಾ ಆಚ್ಚರಿಗೊಂಡಿದ್ದಾರೆ. "ಎಸ್2" ಹರಾಜಿನಲ್ಲಿ ಬಂದ ಹಣವು ಇತರ ವಜ್ರ ಮತ್ತು ಹರಳಿನ ನೆಕ್ಲೇಸ್ ಮತ್ತು ವಾಚ್‌ನ ಹರಾಜನ್ನೂ ಮೀರಿಸಿರುವುದು ಅಚ್ಚರಿಗೆ ಕಾರಣವಾಗಿದೆ ಎಂದು ಶಿಲ್ಪಾ ಅವರ ಪ್ರಚಾರ ವಿಭಾಗದ ಡೇಲ್ ಭಾಗವಗರ್ ತಿಳಿಸಿದ್ದಾರೆ.ಇದೇ ವೇಳೆ, ಶಿಲ್ಪಾ ಅವರ "ಮಿಸ್ ಬಾಲಿವುಡ್" ಮ್ಯೂಸಿಕಲ್ ಯೂರೋಪಿನಾದ್ಯಂತ ಪ್ರೇಕ್ಷಕರ ಮನರಂಜಿಸುತ್ತಿದೆ. ಜರ್ಮನಿಯಲ್ಲಿ ಭರ್ಜರಿ ಯಶ ಕಂಡಿರುವ ಈ ಪ್ರದರ್ಶನವು ಇದೀಗ
Subscribe to:
Post Comments (Atom)
No comments:
Post a Comment