ನಿರ್ಧೇಶಕ ರಾಜ್‌ಕುಮಾರ್ ಸಂತೋಷಿಯ ಹೊಸ ಚಿತ್ರ 'ಹಲ್ಲಾ ಬೋಲ್' ಕತೆ ಜೆಸ್ಸಿಕಾ ಲಾಲ್ ಪ್ರಕರಣಕ್ಕೆ ಹೋಲಿಕೆಯಾಗುತ್ತಿದ್ದರೂ, ಈ ಚಿತ್ರ 1999ರಲ್ಲಿ ನಡೆದ ಮೋಡೆಲ್ ಜೆಸ್ಸಿಕಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಲ್ಲ ಎಂದು ಸಂತೋಷಿ ಹೇಳಿದ್ದಾರೆ. ಅಜಯ್ ದೇವಗನ್ ಮತ್ತು ವಿದ್ಯಾ ಬಾಲನ್ ನಟಿಸಲಿರುವ ಈ 'ಹಲ್ಲಾ ಬೋಲ್' ಚಿತ್ರ ಪ್ರಭಾವಿ ವ್ಯಕ್ತಿಗಳಿಂದ ಒಬ್ಬ ನಟಿಯ ಕೊಲೆಯಾಗಿ, ಈ ಪ್ರಭಾವಿ ವ್ಯಕ್ತಿಗಳು ತಮ್ಮ ರಾಜಕೀಯ ಪ್ರಭಾವದಿಂದ ಈ ಅಪರಾಧವನ್ನು ಮುಚ್ಚಿಹಾಕಲು ಪ್ರಯತ್ನಿಸುವ ಕತೆಯನ್ನು ಹೊಂದಿದೆ.ಸಾರ್ವಜನಿಕ ಕುತೂಹಲ ಕೆರಳಿಸಿದ್ದ 7 ವರ್ಷಗಳ ಸುದೀರ್ಘ ವಿಚಾರಣೆಯಲ್ಲಿ ಆಡಳಿತ ಕಾಂಗ್ರೆಸ್ ಪಕ್ಷದ ಪ್ರಭಾವಿ ಸದಸ್ಯರ ಮಗನಾದ ಮನು ಶರ್ಮರನ್ನು ಮೋಡೆಲ್ ಜೆಸ್ಸಿಕಾ ಲಾಲ್ ಕೊಲೆಯ ಆರೋಪಿ ಎಂದು ತೀರ್ಪಿತ್ತಿತ್ತು. ಅನೇಕ ಮಾದ್ಯಮ ವರದಿಗಳು 'ಹಲ್ಲಾ ಬೋಲ್ ಜೆಸ್ಸಿಕಾ ಲಾಲ್ ಶೂಟಿಂಗ್ ಪ್ರಕರಣಕ್ಕೆ ಸಂಬಂಧಿಸಿದೆ ಎಂದು ಹೇಳಿತ್ತು.ಸತ್ಯ ಘಟನೆಗೆ ಈ ಚಿತ್ರ ಕತೆ ಹೋಲಿಕೆ ಇದ್ದರೂ, ನನ್ನ ಚಿತ್ರ ಇದರಿಂದ ಉತ್ತೇಜಿತ ಗೊಂಡಿಲ್ಲ ಎಂದು ಜೆಸಿಕಾ ಲಾಲ್ ಕೊಲೆಯನ್ನು ಉಲ್ಲೇಖಿಸುತ್ತಾ ಸಂತೋಷಿ ತಿಳಿಸಿದರು. "ಈ ಚಿತ್ರ ಒಬ್ಬ ನಟನ ಕುರಿತಾಗಿದ್ದು, ಆತ ತಾನು ಜನರಿಗೆ ಒಂದು ರೀತಿಯ ಹೀರೋ ಆಗಿದ್ದೇನೆ ಎಂದು ಭಾವಿಸಿರುತ್ತಾನೆ. ನಂತರ ಒಂದು ದಿನ ನಟಿಯ ಕೊಲೆಯಾದಾಗ ಆತ ತಾನು ಏನು ಅಲ್ಲ ಕೇವಲ ಒಬ್ಬ ಪರದೆ ಚಹರೆಯಾಗಿದ್ದೇನೆ ಎಂದು ಅರಿಯುತ್ತಾನೆ. ನಂತರ ಆತ ನಟಿಗಾಗಿ ತನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸುತ್ತಿರುವ ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳ ವಿರುದ್ಧ ಹೋರಾಟ ನಡೆಸುತ್ತಾನೆ," ಎಂದು ಸಂತೋಷಿ ಕತೆಯ ತಿರುಳನ್ನು ಬಿಡಿಸಿದರು.
'ಹಲ್ಲಾ ಬೋಲ್' ಡಿಸೆಂಬರ್ 21 ರಂದು ಬಿಡುಗಡೆಯಾಗಲಿದೆ.
No comments:
Post a Comment