Tuesday, November 20, 2007
ಐಟಿಸಿ ಸೋಪ್‌ಗೆ ಮಾಡೆಲ್ ಕರೀನಾ ಕಪೂರ್
ಈಗಾಗಲೇ ಸಿಟಿಜನ್ ವಾಚ್, ಇಮಾಮಿ ವಿಂಟರ್ ಕೇರ್ ಕ್ರೀಂ ಮತ್ತು ಐಸಿಐ ಪೈಂಟ್ಸ್‌ಗಳ ನಂತರ ಬಾಲಿವುಡ್ ನಟಿ ಕರೀನಾ ಅವರು ಈಗ ಇನ್ನೆರಡು ಬ್ರಾಂಡ್‌ಗಳಾದ ಹೆಡ್ ಆಂಡ್ ಶೋಲ್ಡರ್ ಮತ್ತು ಐಟಿಸಿ ಸೋಪ್‌ಗೆ ಸಹಿ ಹಾಕಿದ್ದಾರೆ.ಫೈಮಾ ಡಿ ವಿಲ್ಲಿಸ್ ತಯಾರಿಕೆಯ ಉತ್ಪನ್ನವಾದ ಐಟಿಸಿ ಸೋಪ್‌ಗೆ ಜಾಹಿರಾತಿಗಾಗಿ ಒಪ್ಪಂದ ಮಾಡಿಕೊಂಡಿದ್ದು, ಅಂತಾರಾಷ್ಟ್ರೀಯ ಕಂಪೆನಿಯ ಉತ್ಪನ್ನಗಳಿಗೂ ಒಪ್ಪಂದ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. 'ಜಬ್ ವಿ ಮೆಟ್ 'ಚಿತ್ರದ ಯಶಸ್ವಿನ ನಂತರ ಬಾಲಿವುಡ್‌ನಲ್ಲಿ ಉತ್ತಂಗ ಸ್ಥಾನದಲ್ಲಿದ್ದು ಯಶರಾಜ್ ಅವರ ತಶಾನ್ ಹಾಗೂ ಶ್ರೀ ಅಷ್ಟವಿನಾಯಕ ಸಿನಿವಿಜನ್ ಸಂಸ್ಥೆಯ ಗೋಲಮಾಲ್ ರಿಟರ್ನ್ ಚಿತ್ರದಲ್ಲಿ ಕರೀನಾ ನಟಿಸುತ್ತಿದ್ದಾರೆ.
Subscribe to:
Post Comments (Atom)
No comments:
Post a Comment