Saturday, November 3, 2007

ಅಕ್ಷಯ್‌ಗೆ ಖ್ಯಾತಿ ತಂದ ಭೂಲ್ ಭೂಲಾಯಿಯ




ಭೂಲ್ ಭೂಲಾಯಿಯಾ ಚಿತ್ರ ಅಕ್ಷಯ್ ವೃತ್ತಿಜೀವನದಲ್ಲಿ ಉತ್ತುಂಗಕ್ಕೇರಲು ನೆರವಾಗಿದೆ. ವೀನಸ್ ರೆಕಾರ್ಡ್ಸ್‌ನ ರತನ್ ಜೈನ್ ಪ್ರಿಯದರ್ಶನ್ ನಿರ್ದೇಶನದ ತಮ್ಮ ಮುಂದಿನ ಚಿತ್ರಕ್ಕೆ ಅಕ್ಷಯ್ ಅವರ ಸಹಿ ಹಾಕಿಸಿದ್ದಾರೆ. ಭೂಲ್ ಭೂಲಾಯಿಯ ಚಿತ್ರದಿಂದ ಅಕ್ಷಯ್ ಮಾರುಕಟ್ಟೆ ಬೆಲೆ ಗಗನಕ್ಕೇರಿದೆ. ಅಕ್ಷಯ್ ಬಾಲಿವುಡ್‌ ಚಿತ್ರರಂಗದ ದಿಗ್ಗಜ ನಟರಲ್ಲಿ ಒಬ್ಬರೆನಿಸಿದ್ದಾರೆ.ವೀನಸ್‌ನ ಇನ್ನೊಂದು ಚಿತ್ರ, ಸಂಜಯ್ ಚೇಲ್ ನಿರ್ದೇಶನದ ಮನ್ ಗಯೆ ಮೊಘಲ್‌-ಎ-ಅಜಾಂ 2007ರ ಅಂತ್ಯದೊಳಗೆ ಚಿತ್ರೀಕರಣ ಮುಗಿಸಲಿದೆ.ಮಲ್ಲಿಕಾ ಶೆರಾವತ್ ಮತ್ತು ರಾಹುಲ್ ಬೋಸ್ ಮುಖ್ಯ ಪಾತ್ರದಲ್ಲಿದ್ದಾರೆ. ಮೊಘಲ್-ಎ-ಅಜಾಮ್ ನಾಮಾಂಕಿತ ನಾಟಕ ಪ್ರದರ್ಶಿಸುವ ನಾಟಕ ತಂಡದ ಸುತ್ತ ಕಥೆ ಸುತ್ತುತ್ತದೆ. ಆದರೆ ಕೃತಿಗೂ, ಚಿತ್ರಕ್ಕೂ ಸಂಬಂಧವಿಲ್ಲ. ಸಂಪೂರ್ಣ ಹಾಸ್ಯಭರಿತ ತ್ರಿಲ್ಲರ್ ಚಿತ್ರ. ಪರೇಶ್ ಮತ್ತು ಮಲ್ಲಿಕಾ ನಾಟಕ ತಂಡದ ಸದಸ್ಯರಾಗಿದ್ದು, ನಾಟಕದಲ್ಲಿ ಅಭಿನಯಿಸುತ್ತಾರೆ.ರಾಹುಲ್ ಬೋಸ್ ಸಿಬಿಐ ಅಧಿಕಾರಿಯ ಪಾತ್ರ ಮತ್ತು ಕೆ.ಕೆ. ಮೆನನ್ ಗಜಲ್ ಗಾಯಕನ ಪಾತ್ರದಲ್ಲಿ ನಟಿಸಿದ್ದಾರೆಂದು ರತನ್ ಜೈನ್ ತಿಳಿಸಿದರು. ಮುಂದಿನ ವರ್ಷ ಏಪ್ರಿಲ್‌ನಲ್ಲಿ ಮಾನ್ ಗಯೆ ಮುಘಲ್‌-ಎ-ಅಜಮ್ ಚಿತ್ರ ಬೆಳ್ಳಿತೆರೆಗೆ ಬರಲಿದೆ.

No comments: