Thursday, November 29, 2007

ಹಾಲಿವುಡ್ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯ



(ಕರ್ಟೆಸೀ :ವೆಬ್ ದುನಿಯಾ)


ಈ ಹಿಂದೆ ಹಾಲಿವುಡ್‌ನ ಅನೇಕ ಚಲನಚಿತ್ರ ಸ್ಟುಡಿಯೊಗಳು ಬಾಲಿವುಡ್ ಚಿತ್ರನಟ ಹೃತಿಕ್ ಮೇಲೆ ಕಣ್ಣಿರಿಸಿದ್ದವು. ಅದರ ಜತೆಗೆ ತಮ್ಮ ಹಾಲಿವುಡ್ ಚಿತ್ರಗಳಲ್ಲಿ ಅನೇಕ ಎ ಪಟ್ಟಿಯ ಚಿತ್ರನಿರ್ಮಾಪಕರು ಕೂಡ ಹೃತಿಕ್‌ಗೆ ಪಾತ್ರಗಳನ್ನು ನೀಡುವ ಪ್ರಸ್ತಾಪ ಮಾಡಿದ್ದರು.ಆದರೆ ಹೃತಿಕ್ ಗಮನವನ್ನು ಹಾಲಿವುಡ್ ಚಿತ್ರಕ್ಕೆ ಸೆಳೆಯಲು ಬ್ರಿಲ್‌ಸ್ಟನ್ ಗ್ರೆ ಎಂಟರ್‌ಟೇನ್‌ಮೆಂಟ್ ಸಂಸ್ಥೆ ಯಶಸ್ವಿಯಾಗಿದೆ. ಅಂತಿಮವಾಗಿ ಹಾಲಿವುಡ್ ಅಭಿನಯಕ್ಕೆ ಹೃತಿಕ್ ಹಸಿರುನಿಶಾನೆ ತೋರಿಸಿದ್ದು, ಆ ದಿಸೆಯಲ್ಲಿ ಗಂಭೀರ ಹೆಜ್ಜೆ ಇಡುತ್ತಿದ್ದಾರೆ.ಹೃತಿಕ್‌ರಂತ ಅಂತಾರಾಷ್ಟ್ರೀಯ ನಟನ ಜತೆ ಕೆಲಸ ಮಾಡುವುದಕ್ಕೆ ನಮಗೆ ರೋಮಾಂಚನವಾಗುತ್ತದೆ. ಭಾರತದಲ್ಲಿ ಹೃತಿಕ್ ಚಿತ್ರಗಳಿಗೆ ಪ್ರೇಕ್ಷಕರು ಮುಗಿಬೀಳುತ್ತಾರೆ. ಈಗ ಹೃತಿಕ್‌ರನ್ನು ಅಮೆರಿಕಕ್ಕೆ ಪರಿಚಯಿಸಿ ಅವರ ವಿಶಿಷ್ಠ ಪ್ರತಿಭೆಗೆ ಇನ್ನೂ ವಿಸ್ತಾರ ವೇದಿಕೆ ಒದಗಿಸುತ್ತೇವೆ ಎಂದು ಹೃತಿಕ್ ಅವರ ನೂತನ ಅಂತಾರಾಷ್ಟ್ರೀಯ ಮ್ಯಾನೇಜರ್ ಜೈ ಖನ್ನಾ ದೃಢಪಡಿಸಿದ್ದಾರೆ, ಸ್ವದೇಶದಲ್ಲಿ ಹೃತಿಕ್ ಜೋದಾ ಅಕ್ಬರ್ ಕಡೆ ದೃಷ್ಟಿ ನೆಟ್ಟಿದ್ದು, ಜ.25ರಂದು ಬಿಡುಗಡೆಯಾಗಲಿದೆ. ಚಿತ್ರದ ಪ್ರೋಮೊ ಪ್ರೇಕ್ಷಕರಲ್ಲಿ ಸಂಚಲನ ಮೂಡಿಸಿದೆ. ಅಶುತೋಶ್ ಗೌರಿಕರ್ ಅವರ ಐತಿಹಾಸಿಕ ಕಥೆಗೆ ಎ.ಆರ್.ರೆಹಮಾನ್ ಸಂಗೀತವಿದೆ.

No comments: