"ಓಂ ಶಾಂತಿ ಓಂ"ನಲ್ಲಿ ದೀಪಿಕಾ ಪಡುಕೋಣೆ ಧ್ವನಿಯನ್ನು ಡಬ್ ಮಾಡಲಾಗಿದೆಯೇ? ಅಧಿಕೃತವಾಗಿ ಈ ಬಗ್ಗೆ ಹೇಳಿಕೆ ನೀಡಿರದಿದ್ದರೂ ಗುಸು ಗುಸು ಮಾತುಗಳು ಕೇಳಿಬರುತ್ತಿವೆ. ಆದರೆ ಇದು ಸತ್ಯವೋ, ಸುಳ್ಳೋ ಅಂತಹ ವಿಷಯಗಳು ಬಾಲಿವುಡ್ ಜಗತ್ತಿನಲ್ಲಿ ಹಬ್ಬುವುದು ಅಸಾಮಾನ್ಯವಲ್ಲ. ಗ್ರೇಪ್‌ವೈನ್ ತಜ್ಞರಾಗಿರುವ ಕೆಲವು ಪಟ್ಟಭದ್ರರು ಇಂತಹ ಸುದ್ದಿಗಳನ್ನು ಮಾಧ್ಯಮಕ್ಕೆ ಉಣಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಅದು ನಿಜವೂ ಆಗಿರುತ್ತದೆ. ಈ ಹಿಂದೆ ವೃತ್ತಿಪರ ಕಲಾವಿದರೊಬ್ಬರು ಹೊಸಬ ನಟನ ಧ್ವನಿಯನ್ನು ಡಬ್ ಮಾಡಿದ್ದರು. ಧೋಕಾದಲ್ಲಿ ಮುಜಮಿಲ್ ಇಬ್ರಾಹಿಂ ದ್ವನಿ ಡಬ್ ಮಾಡಿರುವುದು ಇತ್ತೀಚಿನ ಘಟನೆ.ಪ್ರಶ್ನೆಗಳು ಈಗ ಕೇಳಲು ಬಹಳ ಉಳಿದುಕೊಂಡಿವೆ. ಇನ್ನೊಬ್ಬ ಮಹಿಳೆ ದೀಪಿಕಾ ಧ್ವನಿಯನ್ನು ಡಬ್ ಮಾಡಿರಬಹುದೇ? ದೀಪಿಕಾಗೆ ಈ ಜವಾಬ್ದಾರಿಯನ್ನು ವಹಿಸಬಹುದಿತ್ತಲ್ಲಾ? 70ರ ದಶಕದಲ್ಲಿ ಡಬ್ಬಿಂಗ್ ಸೇವೆಗೆ ಬಳಸಿಕೊಂಡ ಮಹಿಳೆಯ ಸೇವೆಯನ್ನು ಈಗಲೂ ಪಡೆಯಲಾಗಿದೆಯೇ? ದೀಪಿಕಾಗೆ ಬೇರೆ ಯಾರಾದರೂ ಧ್ವನಿದಾನ ನೀಡಿದ್ದರೆ ಅದನ್ನು ಒಳ್ಳೆಯ ಮನೋಭಾವದಿಂದ ಸ್ವೀಕರಿಸಿದ್ದಾರೆಯೇ? ಇವೆಲ್ಲ ಊಹಾಪೋಹಗಳಿಗೆ ತೆರೆಎಳೆದು ಸರಿಯಾದ ಉತ್ತರ ಪಡೆಯಲು ನಾವು ಚಿತ್ರದ ಹಾಟ್ ಸೀಟ್‌ನಲ್ಲಿರುವ ಮಹಿಳೆಯನ್ನು ಭೇಟಿಯಾಗಿ ಸ್ಪಷ್ಟಕರಣ ಬಯಸಿದೆವು. ಇಂತಹ ಅಸಂಬದ್ದ ಕತೆಗಳು ನಿಮಗೆ ಎಲ್ಲಿ ಸಿಗುತ್ತವೆ ಎಂದು ಫರಾ ಕೂಡಲೇ ಪ್ರಶ್ನೆಯ ಬಾಣ ಎಸೆದರು. ಚಿತ್ರವನ್ನು ಸಿಂಕ್ ಸೌಂಡ್‌ನಲ್ಲಿ ಚಿತ್ರೀಕರಿಸಲಾಗಿದ್ದು, ಡಬ್ಬಿಂಗ್ ಮಾಡುವ ಪ್ರಶ್ನೆಯೇ ಇಲ್ಲ ಎಂದು ಉತ್ತರಿಸಿದರು.
Subscribe to:
Post Comments (Atom)
No comments:
Post a Comment