ಜಗತ್ತಿನಲ್ಲಿ ಅತ್ಯಂತ ಸುಂದರ ಮಹಿಳೆ ಎನಿಸಿಕೊಂಡ ಐಶ್ವರ್ಯ ರೈ ಗುರುವಾರ 34ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ತಾಜ್ ಮಹಲ್ ಕುರಿತ ಕಥಾವಸ್ತುವುಳ್ಳ ಬೆನ್ ಕಿಂಗ್ಸ್‌ಲೆ ಚಿತ್ರ ಮಮ್ತಾಜ್ ಮಹಲ್‌ನಲ್ಲಿ ನಟಿಸಿರುವ ಐಶ್ವರ್ಯ ಅವರ ನಿಜಜೀವನದ ಷಹಜಹಾನ್ ಅಭಿಷೇಕ್ ಬಚ್ಚನ್ ಜತೆ ಆಗ್ರಾದಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.ಅಭಿಷೇಕ್ ಆಗ್ರಾದಲ್ಲಿ ಜಾಹೀರಾತು ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ನಾನು ಮಾ(ಅತ್ತೆ ಜಯಾಬಾಧುರಿ) ಜತೆ ಸೇರಿಕೊಳ್ಳಲಿದ್ದು, ಪಾ(ಮಾವ ಅಮಿತಾಬ್ ಬಚ್ಚನ್) ಕೂಡ ನಮ್ಮ ಜತೆ ಸೇರಲಿದ್ದಾರೆ ಎಂದು ಐಶ್ವರ್ಯ ಹೇಳಿದರು. ನನ್ನ ಹುಟ್ಟುಹಬ್ಬ ತಾಜ್‌ಮಹಲ್ ಹಿನ್ನೆಲೆಯಲ್ಲಿ ಆಚರಣೆಯಾಗಲಿದೆ.ಆದರೆ ತಾಜ್‌ಮಹಲ್‌ನಲ್ಲಿ ಹುಟ್ಟುಹಬ್ಬ ಆಚರಿಸುವುದಿಲ್ಲ. ಅಲ್ಲಿ ನೆರೆದಿರುವ ಗುಂಪು ನೋಡಿದರೆ ಅಲ್ಲಿಗೆ ಹೋಗುವುದು ಸ್ವಲ್ಪ ರಿಸ್ಕಿ ಎನಿಸುತ್ತದೆ ಎಂದು ಐಶ್ವರ್ಯ ನುಡಿದರು.ಐಶ್ವರ್ಯ ತಂದೆ, ತಾಯಿ ಹುಟ್ಟುಹಬ್ಬದಲ್ಲಿ ಪಾಲ್ಗೊಳ್ಳದಿರುವುದು ಅವರಿಗೆ ದುಃಖವಾಗಿದೆಯಂತೆ. "ಇದು ನನ್ನ ವಿವಾಹದ ಬಳಿಕ ಮೊದಲ ಹುಟ್ಟುಹಬ್ಬವಾಗಿದ್ದು, ವಿಶೇಷ ಸಂದರ್ಭವೆನಿಸಿದೆ.ನಾನು ಪ್ರೀತಿಸುವ ಜನರ ಜತೆ ಸಮಯ ಕಳೆಯುವುದು ಅತ್ಯಂತ ಸಂತಸಕರ" ಎಂದು ಐಶ್ವರ್ಯ ಉದ್ಗರಿಸಿದರು. ನನ್ನ ಜೀವನಕ್ಕೆ ಪರಿಪೂರ್ಣತೆ ತಂದ ಮೂವರ ಜತೆ ಇರುವುದು ಸಂತಸ ತಂದಿದೆ ಎಂದು ಹೇಳಿದರು. ನಾವೆಲ್ಲ ಒಂದೇ ಕುಟುಂಬದವರಾಗಿದ್ದು, ಪರಸ್ಪರ ಪ್ರೀತಿಯಿಂದ ಇದ್ದೇವೆ ಎಂದು ಅವರು ಹೇಳಿದರು.ಹುಟ್ಟುಹಬ್ಬದ ಆಚರಣೆ ಬಳಿಕ ಅವರು ನೇರವಾಗಿ ಕಾರ್ಜಾತ್‌ಗೆ ತೆರಳಿ ಅಶುತೋಷ್ ಗೌರೀಕರ್ ಅವರ ಜೋಧಾ ಅಕ್ಬರ್ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆನ್ ಕಿಂಗ್ಸ್‌ಲೆ ಜತೆ ತಾಜ್ ಮಹಲ್ ಚಿತ್ರದಲ್ಲಿ ನಟಿಸಲು ಅವರು ರೋಮಾಂಚಿತರಾಗಿದ್ದಾರೆ. ಲಾಸ್ಟ್ ಲೀಜನ್ ಚಿತ್ರೀಕರಣದ ಮೊದಲ ದಿನವೇ ಬೆನ್ ನನ್ನ ಬಳಿ ಬಂದು ಶೆಹಜಹಾನ್-ಮಮ್ತಾಜ್ ಮಹಲ್ ಚಿತ್ರ ತಯಾರಿಕೆ ಯೋಜನೆ ಬಗ್ಗೆ ತಿಳಿಸಿದರು.ತಾಜ್ ಮಹಲ್ ವಿಷಯ ಅನೇಕ ಸಂರ್ಭಗಳಲ್ಲಿ ಬಂದಿದ್ದನ್ನು ಐಶ್ವರ್ಯ ಬೆನ್‌ಗೆ ಹೇಳಿದರು. ಆದರೆ ಬೆನ್ ಈ ವಿಷಯವನ್ನು ಎತ್ತಿಕೊಂಡ ರೀತಿ ಆಸಕ್ತಿದಾಯಕವಾಗಿತ್ತು ಎಂದು ಅವರು ನುಡಿದರು. ಐಶ್ವರ್ಯ ತಮ್ಮ ಹುಟ್ಟುಹಬ್ಬಕ್ಕೆ ಯಾವ ಉಡುಗೊರೆಯನ್ನು ಬಯಸುತ್ತಾರೆಂದು ಪ್ರಶ್ನಿಸಿದಾಗ, ಕೇವಲ ಆಶೀರ್ವಾದ ಮತ್ತು ಶುಭಾಶಯ ಹೇಳಿದರೆ ಸಾಕು. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ ಎಂದು ಐಶ್ವರ್ಯ ಉದ್ಘರಿಸಿದರು.
Subscribe to:
Post Comments (Atom)
No comments:
Post a Comment