(ಕರ್ಟೆಸೀ: ವನ್ ಇಂಡಿಯಾ)
ಪತಿದೇವರು ಜೈಜಗದೀಶ್ ನಿರ್ದೇಶನದ 'ಮದನ'ಅಡ್ಡಡ್ಡ ಬಿದ್ದ ಪರಿಣಾಮ, ಗೆಲ್ಲುವ ಉತ್ಸಾಹದಿಂದ ಅವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಆಕ್ಷನ್ ಕಟ್ ಹೇಳಿದರು. ಅವರ ನಿರ್ದೇಶನದ 'ಈ ಬಂಧನ'ಶುಕ್ರವಾರ(ಡಿ.21) ತೆರೆಕಂಡಿದೆ. ಹಲವು ವರ್ಷಗಳ ನಂತರ ವಿಷ್ಣು ಮತ್ತು ಜಯಪ್ರದಾ ನಟಿಸುತ್ತಿರುವ 'ಈ ಬಂಧನ'ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಹಜ ಕುತೂಹಲ. ಲಾಂಗು, ಮಚ್ಚು ಚಿತ್ರಗಳ ನಡುವೆ ಕೌಟುಂಬಿಕ ಕಥಾಹಂದರದ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತದೋ ಇಲ್ಲವೋ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕಿ ವಿಜಯಲಕ್ಷ್ಮೀಸಿಂಗ್. ಜೈಜಗದೀಶ್ ನಿರ್ಮಿಸುತ್ತಿರುವ ಚಿತ್ರಕ್ಕೆ ಮನೋಮೂರ್ತಿ ಸಂಗೀತವಿದೆ. ಛಾಯಾಗ್ರಹಣ ಅಜಯ್ ವಿನ್ಸೆಂಟ್, ಸಂಕಲನ ಕೆಂಪರಾಜ್, ಸಂಭಾಷಣೆ ಬಿ.ಎ. ಮಧು, ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ ಇದೆ. ಚಿತ್ರದ ತಾರಾಗಣದಲ್ಲಿ ವಿಷ್ಣು, ಜಯ ಜೊತೆಗೆ ದರ್ಶನ್, ಜೆನಿಫರ್, ವೈಭವಿ, ಆರುಂಧತಿ ಜಟ್ಕರ್, ತರುಣ್ ಮುಂತಾದವರು ಇದ್ದಾರೆ. ಕಿಟ್ಟಿ ರಂಗಮಂಚ್, ಜಯರಾಜ್‌ಸಿಂಗ್, ವಿ.ಕೆ.ಮೂರ್ತಿ, ಇಸ್ಮಾಯಿಲ್ ಮತ್ತಿತರರ ಚಿತ್ರದ ತಾಂತ್ರಿಕ ಬಳಗದಲ್ಲಿದ್ದಾರೆ.
No comments:
Post a Comment