(ಕರ್ಟೆಸೀ : ವೆಬ್ ದುನಿಯಾ)
ಅನುರಾಗ್ ಕಶ್ಯಪ್ ನಿರ್ದೇಶನದ ಹನುಮಾನ್ ರಿಟರ್ನ್ ಚಿತ್ರದ ಶೀರ್ಷಿಕೆಯನ್ನು ದ ರಿಟರ್ನ್ಸ್ ಆಫ್ ಹನುಮಾನ್ ಎಂಬುದಾಗಿ ಬದಲಾಯಿಸಲಾಗಿದೆ.ದೀಪಾವಳಿ ಸಮಯದಲ್ಲಿ ಈ ಚಿತ್ರ ಬಿಡುಗಡೆಗೊಳ್ಳಲು ನಿಗದಿಯಾಗಿದ್ದರೂ, ನಂತರ ಡಿಸೆಂಬರ್ 28ಕ್ಕೆ ಮುಂದೂಡಲಾಗಿತ್ತು. ಆದರೆ ಈ ಚಿತ್ರವು ಡಿಸೆಂಬರ್ 27ರಂದು ಪರದೆಯ ಮೇಲೆ ಮೂಡಿಬರಲಿದೆ. ಚಿತ್ರದ ಶೀರ್ಷಿಕೆಯನ್ನು ದ ರಿಟರ್ನ್ ಆಫ್ ಹನುಮಾನ್ ಎಂಬುದಾಗಿ ಬದಲಾಯಿಸಲಾಗಿದೆ. ಸಂಖ್ಯಾಶಾಸ್ತ್ರದ ಮೇಲಿರುವ ನಂಬಿಕೆಯೇ ಬದಲಾವಣೆಗೆ ಮುಖ್ಯ ಕಾರಣವಾಗಿದೆ. ಈ ಚಿತ್ರವು ಅತ್ಯಂತ ಯಶಸ್ಸನ್ನು ಕಾಣುವ ಸಲುವಾಗಿ ಚಿತ್ರದ ಹೆಸರನ್ನು ಬದಲಿಸುವಂತೆ ನಮಗೆ ಸಲಹೆ ನೀಡಲಾಗಿತ್ತು ಎಂದು ಪರ್ಸೆಪ್ಟ್ ಪಿಕ್ಚರ್ ಕಂಪನಿ ವಕ್ತಾರ ಪ್ರೀತ್ ಬೇಡಿ ಈ ಕುರಿತಾಗಿ ಪ್ರತಿಕ್ರಯಿಸಿದ್ದಾರೆ. ಕೊನೆಯ ಹಂತದಲ್ಲಿ ಚಿತ್ರದ ಶೀರ್ಷಿಕೆಯ ಬದಲಾವಣೆಯು ಪ್ರೇಕ್ಷರಲ್ಲಿ ಗೊಂದಲವನ್ನು ಉಂಟುಮಾಡುವ ಸಾಧ್ಯತೆಗಳ ಕುರಿತಾಗಿ ಕೇಳಲಾದ ಪ್ರಶ್ನೆಗೆ, ಈ ಚಿತ್ರವನ್ನು ಶ್ರೇಷ್ಠ ಉತ್ಪನ್ನವಾಗಿಸುವ ಕಾರ್ಯದಲ್ಲಿ ನಾವು ಮಗ್ನರಾಗಿದ್ದ ಕಾರಣ ಈ ಮೊದಲು ಸಂಖ್ಯಾಶಾಸ್ತ್ರದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಈಗ ಹೆಸರನ್ನು ಬದಲಾಯಿಸುವಂತೆ ಸೂಚನೆ ಬಂದ ಮೇರೆಗೆ ನಾವು ಬದಲಾಯಿಸುತ್ತಿದ್ದೇವೆ. ಇಲ್ಲಿ ಪ್ರೇಕ್ಷಕರಿಗೆ ಗೊಂದಲ ಉಂಟುಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂಬುದಾಗಿ ಉತ್ತರಿಸಿದ್ದಾರೆ. ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್ ಶೀರ್ಷಿಕೆ ಬದಲಾವಣೆಯ ಕುರಿತು ಅಸಮಧಾನವನ್ನು ಹೊಂದಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿದ ಬೇಡಿ, ಈ ವರದಿಯು ಸತ್ಯಕ್ಕೆ ದೂರವಾದದ್ದು. ಹೆಸರು ಬದಲಾವಣೆಯ ನಿರ್ಧಾರದ ಕುರಿತು ಕಶ್ಯಪ್ ಯಾವುದೇ ಅಸಮಧಾನವನ್ನು ಹೊಂದಿಲ್ಲ ಎಂದು ಹೇಳಿದರು.
No comments:
Post a Comment