(ಕರ್ಟೆಸೀ: ಯಾಹೂ)
ವಿವಾಹಪೂರ್ವ ಲೈಂಗಿಕತೆ ತಪ್ಪಲ್ಲ ಎಂದು ಹೇಳುವ ಮುಖಾಂತರ ವಿವಾದದ ಬೆಂಕಿ ಹಚ್ಚಿದ್ದ ಖುಷ್ಬೂ, ಶಿಲ್ಪಾಶೆಟ್ಟಿ, ರೀಮಾಸೇನ್ ಸಾಲಿಗೆ ಮಾಜಿ ಭುವನ ಸುಂದರಿ, ಹಾಲಿ ಬಾಲಿವುಡ್ ನಟಿ ಸುಸ್ಮಿತಾ ಸೇನ್ ಹೊಸ ಸೇರ್ಪಡೆ. ಈ ಮಾಜಿ ನಟಿಯರು ಕೆಲಸವಿಲ್ಲದಾಗ, ವಿವಾದಗಳ ಮುಖಾಂತರ ಸುದ್ದಿ ಮಾಡಲು ಯತ್ನಿಸುತ್ತಾರೆ. ಪ್ರಸ್ತುತ ಸ್ಥಿತಿಯಲ್ಲಿ ಭಾರತದ ಯಾವುದೇ ಮಹಿಳೆಯೂ ಕನ್ಯತ್ವ ಉಳಿಸಿಕೊಂಡಿಲ್ಲ. ಹಾಗಾಗಿ ವಿವಾಹಪೂರ್ವ ಲೈಂಗಿಕ ಸಂಬಂಧ ತಪ್ಪಲ್ಲ ಎಂದು ಅವರು ಟಿ.ವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಅದನ್ನು ತಮಿಳಿನ 'ದಿನತಂತಿ' ಪತ್ರಿಕೆ ಯಥಾವತ್ ಪ್ರಕಟಿಸಿತ್ತು. ಆದರೆ ಈ ವಿಚಾರ ಇಲ್ಲಿಗೆ ನಿಂತಿಲ್ಲ. ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಸುಸ್ಮಿತಾ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಂಡಿಲ್ಲ ಎಂದು ವಿವಿಧ ಸಂಘಟನೆಗಳು ದೂರಿವೆ. ಈ ಸಂಬಂಧ ವಕೀಲರಾದ ಎಸ್. ಗಿರೀಶ್ ಕುಮಾರ್ ಎಂಬುವವರು ಸುಶ್ಮಿತಾ ಹಾಗೂ 'ದಿನತಂತಿ' ಪತ್ರಿಕೆಯ ವಿರುದ್ಧ ಕೇಸು ದಾಖಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಮದ್ರಾಸ್ ಉಚ್ಚನ್ಯಾಯಾಲಯದ ಮಧುರೈ ಪೀಠ ಸುಶ್ಮಿತಾ ಸೇನ್ ಅವರಿಗೆ ನೋಟೀಸ್ ಜಾರಿಗೊಳಿಸಿದೆ.
No comments:
Post a Comment