Tuesday, December 11, 2007

ಶ್ರೀದೇವೀ,ಬೋನಿ ಕಪೂರ್ ಲ ಚಿತ್ರದಲ್ಲಿ ಸಲ್ಮಾನ್ ಖಾನ್

(ಕರ್ಟೆಸೀ :ಬೆಂಗುಲೂರ್ ಚಿತ್ರ )
ಶ್ರೀದೇವೀ, ಬೋನೀ ಕಪೂರ್ ನಿರ್ಮಾಣದ ಎರಡು ಚಿತ್ರಗಳು 2008ರ ದ್ವಿತೀಯಾರ್ಧದಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು, ಅದರಲ್ಲಿರುವ ಒಂದು ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಈ ಮೊದಲು 'ವಾಂಟೆಡ್ ಡೆಡ್ ಆಂಡ್ ಎಲೈವ್' ಎಂದು ಹೆಸರಿಡಲಾಗಿತ್ತು. ಈಗ ಇದು ಹೆಸರಿಡದ ಚಿತ್ರವಾಗಿದೆ. ಕಳೆದವಾರ ಹೈದರಾಬಾದಿನಲ್ಲಿ ಚಿತ್ರದ ಮಾತುಕತೆಯ ಭಾಗವನ್ನು ಮುಕ್ತಾಯಗೊಳಿಸಿದ್ದೇವೆ. ಕೇವಲ ನಾಲ್ಕು ಹಾಡುಗಳ ಚಿತ್ರೀಕರಣ ಮಾತ್ರವೇ ಬಾಕಿ ಉಳಿದಿದೆ ಎಂದು ಬೋನಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ತಮಿಳು ಹಿಟ್ ಪೋಕಿರಿ ರಿಮೇಕ್ ಚಿತ್ರದಲ್ಲಿ ನೋ ಎಂಟ್ರಿ ಸ್ಟಾರ್ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ. ಸಲ್ಮಾನ್ ಅಲ್ಲದೆ ಆಯೆಶಾ, ಓಂ ಪುರಿ ಮತ್ತು ಮಹೇಶ್ ಮಾಂಜ್ರೇಕರ್ ಮುಖ್ಯಪಾತ್ರದಲ್ಲಿ ಅಭಿನಯಿಸಲಿದ್ದಾರೆ. ತನ್ನ ನ್ಯಾಯಾಲಯದ ಕೇಸುಗಳ ಗೊಂದಲವಿದ್ದರೂ, ಸಲ್ಮಾನ್ ಅವರು ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಂಡಿಲ್ಲ ಎಂದು ಬೋನಿ ಹೇಳಿದ್ದಾರೆ.

No comments: