(ಕರ್ಟೆಸೀ: ವನ್ ಇಂಡಿಯಾ)
ಬೆಂಗಳೂರು ಮೂಲದ ರೂಪದರ್ಶಿ ಮತ್ತು ನಟಿ ಸುಮನ್ ರಂಗನಾಥ್, ನಮ್ಮೂರ ಹಮ್ಮೀರ ಸೇರಿದಂತೆ ಕೆಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಚೆನ್ನೈ ನೀರು ಕುಡಿದ ಮೇಲೆ ಮತ್ತೆ ತವರಿನತ್ತ ಅವರು ಮುಖಮಾಡಲಿಲ್ಲ. ತಮಿಳಲ್ಲಿ ನಂತರ ಹಿಂದಿಯಲ್ಲಿ ಒಂದಿಷ್ಟು ಅವಕಾಶ ಗಿಟ್ಟಿಸಿದ ಸುಮನ್, ಈಗ ಐಟಂ ಡ್ಯಾನ್ಸ್ ಶುರುಮಾಡಿದ್ದಾರೆ. ಸುಮನ್ ಸುತ್ತಲೂ ಸುತ್ತಿದ ಹುಡುಗರು, ಮದುವೆ ಇವೆಲ್ಲವೂ ಅವರಿಗೆ ಕಹಿಯನ್ನೇ ತಂದಿವೆ. ಬಾಲಿವುಡ್ ನಲ್ಲಿ ಪ್ರಾಬಲ್ಯ ಮುಗಿದಿದೆ ಅನ್ನಿಸಿದ ತಕ್ಷಣ, ಈಯಮ್ಮ ಬೆಂಗಳೂರಿಗೆ ಬಂದಿದ್ದಾರೆ. ಜೊತೆಗೆ ಕನ್ನಡ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಪುನೀತ್ ಅಭಿನಯದ ಬಿಂದಾಸ್ ಚಿತ್ರದ ಐಟಂ ಸಾಂಗ್ ಒಂದರಲ್ಲಿ ಸುಮನ್ ಕಾಣಿಸಿಕೊಳ್ಳುತ್ತಿದ್ದಾರೆ. ಬಿಂದಾಸ್ ಚಿತ್ರದ ನಿರ್ದೇಶಕರು ಡಿ.ರಾಜೇಂದ್ರ ಬಾಬು. ಉಪೇಂದ್ರ ಅಭಿನಯದ 'ಬುದ್ಧಿವಂತ'ದಲ್ಲೂ ಸುಮನ್ ಪ್ರಮುಖ ಪಾತ್ರ ಗಿಟ್ಟಿಸಿದ್ದಾರೆ. ಈ ಚಿತ್ರದ ನಿರ್ದೇಶಕರು ರಾಮನಾಥ ಋಗ್ವೇದಿ. ಸ್ಯಾಂಡಲ್ ವುಡ್ನಲ್ಲಿ ಹೊಸ ಬ್ರೇಕ್ ಸಿಗಬಹುದೇ, ಎರಡನೇ ಇನ್ನಿಂಗ್ಸ್ ಸಾಧ್ಯವೇ ಎಂದು ಸುಮನ್ ಕಾಯ್ತಾ ಇದ್ದಾರೆ. ಅಕ್ಕನ ಪಾತ್ರಕ್ಕೆ ಬರ್ತೀರಾ, ಅತ್ತಿಗೆ ಪಾತ್ರ ಮಾಡ್ತೀರಾ ಎನ್ನುತ್ತಿದ್ದಾರೆ ಸ್ಯಾಂಡಲ್ ವುಡ್ ನಿರ್ಮಾಪಕರು.
No comments:
Post a Comment