Monday, December 3, 2007

ಮಾಧುರಿ ದಿಕ್ಷೀತ್ ಚಿತ್ರ "ಆಜಾ ನಾಚ್ ಲೇ " ಹಳಿ ತಪ್ಪಿದ

(ಕರ್ಟೆಸೀ: ವೆಬ್ ದುನಿಯಾ)ಯಾವುದೇ ನಟಿಯಾಗಲಿ ನಟನಾಗಲಿ, ಪುನರಾಗಮನದ ಚಿತ್ರ ಎಂದರೆ ಬಹುದೊಡ್ಡ ನಿರೀಕ್ಷೆ ಅವರಲ್ಲಿ ಮತ್ತು ಮೇಲಾಗಿ ಅವರ ಅಭಿಮಾನಿಗಳಲ್ಲಿ ಇದ್ದೆ ಇರುತ್ತದೆ. ದಿಲೀಪ್ ಕುಮಾರ್, (ಕ್ರಾಂತಿ), ಅಮಿತಾಬ್ ಭಚ್ಚನ್( ಮೃತ್ಯುದಾತಾ) ವಿನೋದ್ ಖನ್ನಾ (ಇನ್ಸಾಫ್) ಡಿಂಪಲ್ ಕಪಾಡಿಯಾ ( ಸಾಗರ್) ಕಾಜೋಲ್ ( ಫನ್ಹಾ) ಕೆಲ ಚಿತ್ರಗಳನ್ನು ಮರೆಯುವುದು ಸಾಧ್ಯವಿಲ್ಲ ಯಾಕೆಂದರೆ ಅಂತಹ ಪುನರಾಗಮನದಲ್ಲಿ ಅದೇನೊ ಮಾಸದ ನೆನಪು ಬಿಟ್ಟು ಬಿಡುತ್ತಾರೆ.
ಧಕ್ ಧಕ್ ಬೇಡಗಿ ಮಾಧುರಿ ದಿಕ್ಷೀತ ಕಳೆದ ಶುಕ್ರವಾರ ಮತ್ತೆ ಆಜಾ ನಾಚ್‌ಲೇ ಮೂಲಕ ಬಾಲಿವುಡ್ ಜಗತ್ತಿಗೆ ಪುನರಾಗಮನ ಘೋಷಿಸಿದ್ದಾರೆ. ಅದು ದೇಶದ ನಂ1 ಬ್ಯಾನರ್ ನಿರ್ಮಿಸಿದ ಈ ಆಜಾ ಪ್ರೇಕ್ಷಕರ ಮನಸ್ಸನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗುತ್ತದೆಯೇ ? ಇಲ್ಲ ಎನ್ನುತ್ತದೆ ಚಿತ್ರ ವಿಮರ್ಶೆ. ಹೊಗಲಿ ಮಾಧುರಿ ದಿಕ್ಷೀತ್ ಮೊದಲಿನ ಹಾಗೆ ಅಭಿಮಾನಿಗಳಲ್ಲಿ ಮನಕ್ಕೆ ಕಚಗುಳಿ ಮತ್ತು ಕಿಚ್ಚು ಇಡಬಲ್ಲಳೆ ಎನ್ನುವುದು ಉತ್ತರ ಇಲ್ಲಿ ಸಿಕ್ಕಿಲ್ಲ. ಯಶ್-ಮಾಧುರಿ ಜೋಡಿಯ ಆಜಾ ನಾಚ್‌ಲೇ ನಿರೀಕ್ಷೆಗೆ ಮೀರಿ ತೋಪೆದ್ದು ಹೋಗಿದೆ. ಈ ರೀತಿ ಪ್ಲಾಪ್ ಎಂಬ ಹಣೆಪಟ್ಟಿ ಬರಲು ಕಾರಣ ಕಥೆ. ನೀಜ ಜೀವನದ ಕಥೆಯಂತೆ ಪ್ರಾರಂಭವಾಗುವ ಸಿನಿಮಾ ಒಂದು ಗಂಟೆಯ ನಂತರ ಎಲ್ಲ ಕುತೂಹಲಗಳನ್ನು ಕಳೆದುಕೊಳ್ಳುತ್ತದೆ ಅಲ್ಲದೆ ಚಿತ್ರದ ಹೆಸರು ಆಜಾ ನಾಚ್ ಲೇ ನೋಡಿದ ಮೇಲೆ ಮನತಟ್ಟುವ ಸಂಗೀತ ಆಸ್ವಾದಿಸಬಹುದು ಎನ್ನುವ ನಿರೀಕ್ಷೆ ಸುಳ್ಳಾಗುತ್ತದೆ. ಚಿತ್ರದ ಒಂದೇ ಒಂದು ಹಾಡು ಗುನುಗುನಿಸಲು ಅರ್ಹತೆ ಪಡೆದಿಲ್ಲ ಅದೇ ಚಿತ್ರದ ಮೈನಸ್ ಪಾಯಿಂಟ್. ಒಂದೇ ವಾಕ್ಯದಲ್ಲಿ ಹೇಳಬೇಕು ಎಂದರೆ ಆಜಾ ಚಿತ್ರಕಥೆ ಮತ್ತು ಸಂಗೀತದಲ್ಲಿ ಸಂಪೂರ್ಣ ವಿಫಲ.ಕಥೆ ಪ್ರಾರಂಭವಾಗುವುದೇ ನೃತ್ಯದಿಂದ. ಒಂದು ದಿನ ದಿಯಾ ( ಮಾಧುರಿ ದೀಕ್ಷಿತ್) ದೂರದ ನ್ಯೂಯಾರ್ಕ್‌ನಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ಸಮಯದಲ್ಲಿ ಭಾರತದಲ್ಲಿನ ಒಂದು ಹಳ್ಳಿ ಶಾಮ್ಲಿಯಿಂದ ಕರೆ ಬರುತ್ತದೆ. ಗುರುಗಳಾದ ಮಕರಂದ (ದರ್ಶನ್ ಜರಿವಾಲಾ) ತನ್ನ ಅಂತಿಮ ಯಾತ್ರೆಗೆ ಸಿದ್ಧವಾಗುತ್ತಿರುತ್ತಾನೆ. ಅದಕ್ಕೂ ಮುನ್ನ ತನ್ನ ಶಿಷ್ಯೆ ದಿಯಾಳಿಗೆ ಅಜಂತಾವನ್ನು ರಕ್ಷಿಸುವ ಜವಾಬ್ದಾರಿ ವಹಿಸುವುದಕ್ಕೆ ಬದ್ಧನಾಗಿರುತ್ತಾನೆ. ಇಲ್ಲಿಂದ ಅಕ್ಷರಶಃ ಅಜಂತಾ ರಕ್ಷಣೆಯ ಯುದ್ಧ ಪ್ರಾರಂಭ. ಪ್ರಮುಖ ಪಾತ್ರದಲ್ಲಿ ಮಾಧುರಿ ಇದ್ದು ಅವಳೊಂದಿಗೆ ಹೆಜ್ಜೆ ಹಾಕುವುದಕ್ಕೆ ವಿರೋಧ ಒಡ್ಡುವುದಕ್ಕೆ ಹಲವು ಪಾತ್ರಗಳಿವೆ.

No comments: