(ಕರ್ಟೆಸೀ :ವೆಬ್ ದುನಿಯಾ)
ಬಾಲಿವುಡ್ ನಟಿ ಇಶಾ ಡಿಯೋಲ್ ನಟಿಸಿರುವ ಇತ್ತೀಚೆಗೆ ಬಿಡುಗಡೆಯಾದ ಕ್ಯಾಶ್ ಮತ್ತು ಡಾರ್ಲಿಂಗ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಗುರುತು ಸಿಗದಷ್ಟು ಮುಳುಗಿಹೋದನಂತರ, ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಈ ಅಭಿನೇತ್ರಿಯು ಹೆಚ್ಚು ಜಾಗರೂಕಳಾಗಿದ್ದಾಳೆ. ನಾನು ಈ ಮೊದಲು ಉತ್ತಮ ಆಯ್ಕೆಗಾರಳಾಗಿರಲಿಲ್ಲ. ನಾನು ವಿಶಾಲ ಹೃದಯವನ್ನು ಹೊಂದಿದ್ದು, ನನ್ನ ಸ್ನೇಹಿತರಿಗೆ ಇಲ್ಲ ಎನ್ನಲಾಗುವುದಿಲ್ಲ. ಏನೇ ಆದರೂ ಉತ್ತಮ ಯೋಜನೆಗಳನ್ನು ಆರಿಸುವ ಬಗೆಗಿನ ಅಗತ್ಯತೆಯು ನನಗೆ ಈಗ ಅರ್ಥವಾಗಿದೆ. ಎಂದು ಇಶಾ ಹೇಳಿದ್ದಾರೆ. ಪ್ರಖ್ಯಾತ ಸಿನಿಮಾ ಜೋಡಿ ಧರ್ಮೇಂದ್ರ ಮತ್ತು ಹೇಮಮಾಲಿನಿ ದಂಪತಿಗಳ ಪುತ್ರಿಯಾದ ಇಶಾ, ಕೋಯ್ ಮೇರೆ ದಿಲ್ ಸೆ ಪೂಚೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಧೂಮ್‌ನಲ್ಲಿ ತನ್ನ ನಿರ್ವಹಣೆಯಂದ ಪ್ರಖ್ಯಾತಿಯನ್ನು ಪಡೆದಿದ್ದರು ಅಲ್ಲದೆ ನೋ ಎಂಟ್ರೀ ಮತ್ತು ಆಂಕೇಹಿ ಚಿತ್ರಗಳಲ್ಲಿನ ನಟನೆಗೆ ಶ್ಲಾಘನೀಯ ವಿಮರ್ಷೆಯನ್ನು ಕೂಡಾ ಸಂಪಾದಿಸಿದ್ದರು. ತನ್ನ ಪಾತ್ರಗಳಲ್ಲಿ ವಿಭಿನ್ನತೆಯನ್ನು ಕಂಡುಕೊಳ್ಳುತ್ತಿದ್ದೇನೆ ಎಂದು ಹೇಳುವ ಇಶಾ, ನಿರ್ದೇಶಕರು ಸಾಹಿತ್ಯದೊಂದಿಗೆ ಪರದೆಯ ಮೇಲೆ ನನ್ನ ಪಾತ್ರದ ಗುಣಮಟ್ಟವು ಉತ್ತಮವಾಗಿರುವಂತಹ ಸಾಹಿತ್ಯವುಳ್ಳ ಚಿತ್ರವನ್ನು ಮಾತ್ರ ನಾನು ಆಯ್ಕೆ ಮಾಡುತ್ತೇನೆ. ಪ್ರತಿಬಾರಿಯೂ ನನಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬಯಕೆಯಿದೆ ಎಂದು ಅವರು ಹೇಳಿದರು.ತಾಯಿಯೊಂದಿಗೆ ನಟಿಸುವ ಇಚ್ಛೆಯನ್ನು ಹೊಂದಿದ್ದೇನೆ ಆದರೆ ಅಂತಹ ಯಾವುದೇ ಯೋಜನೆ ಸದ್ಯಕ್ಕಿಲ್ಲ. ಉತ್ತಮ ಸಾಹಿತ್ಯಕ್ಕಾಗಿ ಕಾಯುತ್ತಿದ್ದೇನೆ ಎಂಬುದಾಗಿ ತನ್ನ ತಾಯಿ ಹೇಮ ಮತ್ತು ಸಹೋದರಿ ಆಹನಾರೊಂದಿಗೆ ನಟಿಸುವ ಕುರಿತಾಗಿ ಹೇಳಿದ್ದಾರೆ.
No comments:
Post a Comment