Wednesday, December 19, 2007

ವರ್ಷದ ನಟ ಗಣೇಶ್, ವರ್ಷದ ನಿರ್ದೇಶಕ ಯೋಗರಾಜ್!


(ಕ‌ರ್ಟೆಸೀ: ವ‌ನ್ ಇಂಡಿಯಾ)


ವರ್ಷ ಮುಗಿಯಲು ಇನ್ನೂ ಹತ್ತಾರು ದಿನಗಳಿವೆ. ಯಥಾ ಪ್ರಕಾರ ಎದ್ದ ಚಿತ್ರಗಳಿಗಿಂತಲೂ ಬಿದ್ದ ಚಿತ್ರಗಳೇ ಹೆಚ್ಚು. ಹೊಸ ಹುಡುಗರ ಪ್ರವೇಶ, ಹೊಸ ನಿರ್ಮಾಪಕರ ಪ್ರವೇಶ ಸ್ಯಾಂಡಲ್ ವುಡ್ ಮೇಲೆ ಪರಿಣಾಮ ಬೀರಿವೆ. ಗಣೇಶ್, ಪುನೀತ್ ಮತ್ತು ವಿಜಯ್ ಕ್ರೇಜ್ ವರ್ಷದುದ್ದಕ್ಕೂ ಮುಂದುವರೆದಿದ್ದು, ಶಿವು ಮತ್ತು ರವಿಚಂದ್ರನ್ ಪಾಲಿಗೆ ಇದು ನಿರಾಸೆಯ ವರ್ಷ. ನೆನಪಿರಲಿ ಪ್ರೇಮ್ ಪಾಲಿಗೆ ಇದು ಸೋಲಿನ ವರ್ಷ.
ಪತ್ರಿಕೆಯೊಂದರ ಲೆಕ್ಕಾಚಾರದ ಪ್ರಕಾರ : 2007ರಲ್ಲಿ ಸೆಟ್ಟೇರಿದ ಚಿತ್ರಗಳ ಸಂಖ್ಯೆ 190. ತೆರೆ ಕಂಡ ಚಿತ್ರಗಳ ಸಂಖ್ಯೆ 90. ಇವುಗಳಲ್ಲಿ 'ಮುಂಗಾರು ಮಳೆ'ಯ ಕಲೆಕ್ಷನ್ 50ಕೋಟಿ, 'ದುನಿಯಾ'ಕಲೆಕ್ಷನ್ 30ಕೋಟಿ, 'ಚೆಲುವಿನ ಚಿತ್ತಾರ'ಕಲೆಕ್ಷನ್ 25ಕೋಟಿ. ಹೀಗಾಗಿ ಈ ಮೂರು ಚಿತ್ರಗಳ ಒಟ್ಟು ಕಲೆಕ್ಷನ್ 105ಕೋಟಿ! ವಿಜಯ್ ಅಭಿನಯದ 'ಚಂಡ'ಸೂಪರ್ ಹಿಟ್. ಒಂದು ಕೋಟಿಯ ಈ ಚಿತ್ರ ಗಳಿಸಿದ ಲಾಭ ಮೂರು ಕೋಟಿ. 'ತಾಯಿಯ ಮಡಿಲು 'ಚಿತ್ರದಿಂದ ಎರಡು ಕೋಟಿ ಕಳೆದುಕೊಂಡ ಎಸ್. ನಾರಾಯಣ್ ಈಗ ಸುಖಿ.
ಹೀಗಾಗಿ ಗಣೇಶ್ ವರ್ಷದ ನಾಯಕನ ಪಟ್ಟಕ್ಕೇರಿದ್ದಾರೆ. 'ಯುಗ'ಚಿತ್ರ ಬಿದ್ದರೂ, ದುನಿಯಾ ಮತ್ತು ಚಂಡ ಚಿತ್ರಗಳ ಗೆಲುವಿನಿಂದಾಗಿ ವಿಜಯ್ ಎರಡನೇ ಸ್ಥಾನದಲ್ಲಿದ್ದಾರೆ. 'ಅರಸು'ನಿರೀಕ್ಷೆಯಷ್ಟು ದುಡ್ಡು ಬಾಚಲಿಲ್ಲ. ಆದರೆ 'ಮಿಲನ'ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪುನೀತ್ ಮೂರನೇ ಸ್ಥಾನದಲ್ಲಿದ್ದಾರೆ. ಮಳೆ ಮುಖಾಂತರ ಮೋಡಿ ಮಾಡಿದ ನಿರ್ದೇಶಕ ಯೋಗರಾಜ ಭಟ್ ವರ್ಷದ ನಿರ್ದೇಶಕ. ಮನೋಮೂರ್ತಿ ವರ್ಷದ ಸಂಗೀತ ನಿರ್ದೇಶಕ. ಪಾತ್ರದಿಂದ ಪಾತ್ರಕ್ಕೆ ಮಿಂಚುತ್ತಿರುವ ರಂಗಾಯಣ ರಘು, ವರ್ಷದ ಪೋಷಕ ನಟ. ಚಿತ್ರಗಳಲ್ಲಿ ಸದ್ದು ಮಾಡದೇ, ವಿವಾದಗಳಿಂದಲೇ ಸುದ್ದಿ ಮಾಡಿದ ರಮ್ಯಾ ವರ್ಷದ ಕಿರಿಕ್ ತಾರೆ!

No comments: