Monday, December 31, 2007

ರಾಜ್ ಕುಂದ್ರಾ ಆಂಡ್ ಶಿಲ್ಪಾ ಶೆಟ್ಟಿ'ಡೇಟಿಂಗ್'


(ಕರ್ಟೆಸೀ: ವೆಬ್ ದುನಿಯಾ)
ಬ್ರಿಟನ್‌ನಲ್ಲಿ ತಾನು 32 ವರ್ಷದ ಲಂಡನ್‌ನಲ್ಲಿ ಜನಿಸಿದ ಭಾರತೀಯ ಮೂಲದ ಕೋಟ್ಯಾಧಿಪತಿ ರಾಜ್ ಕುಂದ್ರಾ ಅವರೊಂದಿಗೆ ಡೇಟಿಂಗ್ ಮಾಡಿರುವುದಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಪ್ಪಿಕೊಂಡಿದ್ದಾರೆ. ಈ ಹೊಸ ಸಂಬಂಧವು ನನ್ನ ಒಂಟಿತನವನ್ನು ದೂರ ಮಾಡಿ ನನ್ನ ಬಾಳಿನಲ್ಲಿ ಲವಲವಿಕೆಯನ್ನು ಉಂಟುಮಾಡಿದೆ ಎಂಬುದನ್ನು ಶಿಲ್ಪಾ ಶೆಟ್ಟಿ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ನಾನು ಒಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದೆ. ಅವರ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಅವರ ಬಗ್ಗೆ ಹೆಚ್ಚಿನ ಕುರಿತಾಗಿ ನಾನು ಹೇಳಲು ಬಯಸುವುದಿಲ್ಲ ಯಾಕೆಂದರೆ ಇದು ನಮ್ಮಿಬ್ಬರ ನಡುವಿನ ಸಂಬಂಧದ ಪ್ರಾರಂಭವಾಗಿದೆ ಎಂದು ಶಿಲ್ಪಾ ಹೇಳಿದರು. ತನ್ನ ನೂತನ ಪ್ರಿಯತಮನ ಹೆಸರನ್ನು ಶಿಲ್ಪಾ ಬಹಿರಂಗಪಡಿಸದಿದ್ದರೂ, ಲಂಡನ್‌ನಲ್ಲಿ ಜನಿಸಿದ ಭಾರತೀಯ ಮೂಲದ ಮಿಲಿಯನರ್ ರಾಜ್ ಕುಂದ್ರಾ ಎಂಬವರೇ ಈಕೆಯ ಗೆಳೆಯ ಎಂದು ಪತ್ರಿಕೆಯೊಂದು ವರದಿ ಮಾಡಿದ್ದು ತಮ್ಮಿಬ್ಬರ ಸಂಬಂಧವನ್ನು ಹಾಳುಮಾಡಿದಕ್ಕಾಗಿ ಶಿಲ್ಪಾ ಶೆಟ್ಟಿಯನ್ನು ರಾಜ್ ಕುಂದ್ರಾ ಅವರ ಮಾಜಿ ಪತ್ನಿ ದೂಷಿಸಿದ್ದಾರೆ ಎಂಬ ವಿಷಯವನ್ನು ಕೂಡಾ ಬಹಿರಂಗಗೊಳಿಸಿದೆ. ಈ ವಿಚಾರವನ್ನು ನಾನು ತಳ್ಳಿಹಾಕುವುದಿಲ್ಲ ಆದರೆ ಅವರೇ ಎಂಬುದನ್ನು ನಾನು ಹೇಳುವುದಿಲ್ಲ ಯಾಕೆಂದರೆ ನನಗೆ ಅವರನ್ನು ದಿಗಿಲುಗೊಳಿಸಲು ಇಷ್ಟವಿಲ್ಲ, ಅವರು ನನ್ನನ್ನು ಗೌರವಿಸುತ್ತಾರೆ ಮತ್ತು ಅರ್ಥೈಸುತ್ತಾರೆ. ಅಲ್ಲದೆ ನನ್ನ ಬಗ್ಗೆ ಅತಿಯಾದ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ. ತುಂಬಾ ಸಮಯಗಳಿಂದ ನಾನು ಒಂಟಿಯಾಗಿದ್ದೆ. ಆದರೆ ಈಗ ನನ್ನ ಬಗ್ಗೆ ಕಾಳಜಿವಹಿಸಲು ಯಾರೋ ಒಬ್ಬರು ಇದ್ದಾರೆ ಎಂದು ತಿಳಿದು ಸಂತೋಷವಾಗುತ್ತಿದೆ. ಎಂದು ಶಿಲ್ಪಾ ಶೆಟ್ಟಿ ಹೇಳುತ್ತಾರೆ. ಈ ವರ್ಷವು ನನಗೆ ನಂಬಲಾರದ ವರ್ಷವಾಗಿದೆ ಆದರೆ ನಾನು ತುಂಬಾ ತುಂಬಾ ಒಂಟಿಯಾಗಿದ್ದೆ. ನಾನು ನನ್ನ ಮನೆಯವರಿಂದ ದೂರ ಇರುವುದರಿಂದ ತುಂಬಾ ಸಮಯಗಳವರೆಗೆ ನನಗೆ ಯಾರು ಗೆಳೆಯರಿರಲಿಲ್ಲ. ಯಾರಾದರೂ ನನ್ನನ್ನು ಪ್ರೇಮಿಸಬೇಕು ಎಂದು ನನಗೆ ಅನಿಸಿತ್ತು. ನಾನು ತುಂಬಾ ಸುಂದರಿಯಾಗಿದ್ದು ನೂರಾರು ಯುವಕರು ನನ್ನನ್ನು ಪ್ರೀತಿಸಲು ತಯಾರಿದ್ದಾರೆ ಎಂಬುದಾಗಿ ಪತ್ರಿಕೆಗಳು ಯಾವಾಗಲೂ ಹೇಳಿಕೊಂಡಿದ್ದವು. ಆದರೆ ಯಾರೂ ಆ ರೀತಿ ಮಾಡುತ್ತಿರಲಿಲ್ಲ ಎನ್ನುತ್ತಾರೆ ಶಿಲ್ಪಾ. ನಾನು ಪಾರ್ಟಿಗಳಿಗೆ ಹೋದರೆ ಅಲ್ಲಿ ಎಲ್ಲಾ ಯುವಕರು ನನ್ನನ್ನು ಇಷ್ಟಪಡುತ್ತಾರೆ ಎಂಬುದಾಗಿ ನಾನು ತಿಳಿದಿದ್ದೆ. ಆದರೆ ನನ್ನ ಮೇಲಿನ ಭಯಮಿಶ್ರಿತ ಗೌರವದಿಂದಾಗಿ ಎಲ್ಲರೂ ನನ್ನಿಂದ ದೂರ ಉಳಿಯುತ್ತಿದ್ದರು. ಯಾರೂ ನನ್ನೊಂದಿಗೆ ಡೇಟಿಂಗ್‌ಗೆ ಬರುತ್ತಿರಲಿಲ್ಲ ಎಂದು ಶಿಲ್ಪಾ ಬೇಸರ ವ್ಯಕ್ತಪಡಿಸುತ್ತಾರೆ.

Friday, December 28, 2007

'ಕ್ರೇಜಿ 4'ನಲ್ಲಿ ಐಟಂ ಬಾಯ್ ಆಗಿ ಹೃತಿಕ್ ರೋಶನ್

(ಕರ್ಟೆಸೀ:ವೆಬ್ ದುನಿಯಾ)
ಮೊದಲ ಬಾರಿಗೆ ತನ್ನ ಪುತ್ರ ಹೀರೋ ಆಗಿ ನಟಿಸದ ರಾಕೇಶ್ ರೋಶನ್ ಅವರ ಕಾಮಿಡಿ ಚಿತ್ರ 'ಕ್ರೇಜಿ 4'ನಲ್ಲಿ ತನ್ನ ಮೊಣಕಾಲು ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಹೃತಿಕ್ ಅಭಿನಯಿಸಲು ಸಿದ್ಧರಾಗಿದ್ದಾರೆ. ಎರಡು ವಾರಗಳ ಹಿಂದೆ ಸಿಂಗಾಪುರದಿಂದ ಮರಳಿದ್ದ ಹೃತಿಕ್ ಈಗ ಆಸ್ಟ್ರೇಲಿಯಾದಲ್ಲಿ ಗುಣಮುಖ ಹೊಂದುತ್ತಿದ್ದಾರೆ. ರಾಜಾ ಸೇನ್ ನಿರ್ದೇಶಿಸುತ್ತಿರುವ 'ಕ್ರೇಜಿ 4' ಹಾಸ್ ಚಿತ್ರದಲ್ಲಿ ಐಟಂ ಬಾಯ್ ಆಗಿ ಹೃತಿಕ್ ಕಾಣಿಸಿಕೊಳ್ಳಲಿದ್ದು,ಇದರಲ್ಲಿ ಆರ್ಶದ್ ವಾರ್ಸಿ, ಇರ್ಫಾನ್ ಖಾನ್, ಸುರೇಶ್ ಮೆನನ್ ಮತ್ತು ರಾಜ್‌ಪಾಲ್ ಯಾದವ್ ತಾರಾಗಣವಿಗದೆ. ಹೃತಿಕ ಇಲ್ಲದೆ ನಾನು ಹೇಗೆ ಚಿತ್ರ ಮಾಡುತ್ತೇನೆ ಎಂದು ಪ್ರೇಕ್ಷಕರು ಯಾವತ್ತೂ ಆಶ್ಚರ್ಯಪಡುತ್ತಿದ್ದರು.ಈ ಚಿತ್ರದಲ್ಲಿ ಹೃತಿಕ್ ಅವರು ತನ್ನ ವೃತ್ತಿ ಜೀವನದ ಮೊದಲ ಐಟಂ ಸಾಂಗ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದು ರಾಕೇಶ್ ರೋಶನ್ ಹೇಳಿದರು. ಚಿತ್ರದ ಹಾಡುಗಳನ್ನು ನನ್ನ ಸಹೋದರ ರಾಜೇಶ್ ರೋಶನ್ ಈಗಾಗಲೇ ರೆಕಾರ್ಡ್ ಮಾಡಿದ್ದು, ಇದನ್ನು ಮಾರ್ಚ್ 2008ರಲ್ಲಿ ಚಿತ್ರೀಕರಣ ನಡೆಸಲು ನಾನು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದೇನೆ. ಒಂದು ವೇಳೆ ಹೃತಿಕ‌ಗೆ ಮೊಣಕಾಲು ನೋವಿದ್ದಲ್ಲಿ ಹಾಡನ್ನು ಚಿತ್ರೀಕರಣ ಮಾಡುವುದಿಲ್ಲ ಎಂದು ಕಾಳಜಿಯುಕ್ತ ತಂದೆ ಹೇಳಿದರು. ರೋಶನ್ ಅವರು ನಿರ್ದೇಶಕ ವೃತ್ತಿಯಿಂದ ದೀರ್ಘ ರಜೆಯನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದು, ಅದಕ್ಕೂ ಮೊದಲು ತನ್ನ ನೂತನ ಚಿತ್ರವೊಂದು ಜುಲೈ 2008ರಲ್ಲಿ ಪ್ರಾರಂಭವಾಗಲಿದ್ದು, ಅದರಲ್ಲಿ ಹೃತಿಕ ಈ ಮೊದಿಗಿಂತಲೂ ವಿಶಿಷ್ಟವಾದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Wednesday, December 26, 2007

"ಅಜಾತ ಶತ್ರು" ಕೆಸಿಎನ್ ಚಂದ್ರಶೇಖರ್ ಅವರಿಗೆ ರಾಷ್ಟ್ರಮಟ್ಟದ ಮನ್ನಣೆ

(Courtesy:one India)
ಕನ್ನಡ ಚಿತ್ರೋದ್ಯಮದ "ಅಜಾತ ಶತ್ರು" ಕೆ.ಸಿ.ಎನ್ ಚಂದ್ರಶೇಖರ್ ಭಾರತೀಯ ಚಲನಚಿತ್ರ ಒಕ್ಕೂಟದ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಚಂದ್ರಶೇಖರ್ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಭಾರತ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಕನ್ನಡ ಚಿತ್ರೋದ್ಯಮದಲ್ಲಿ ಹಲವಾರು ಚಿತ್ರಗಳನ್ನು ನಿರ್ಮಿಸಿರುವ ಚಂದ್ರಶೇಖರ್ ಭಾರತೀಯ ಚಲನಚಿತ್ರ ಒಕ್ಕೂಟಕ್ಕೆ ಇದೇ ಮೊದಲ ಬಾರಿಗೆ ಆಯ್ಕೆಯಾಗುತ್ತಿದ್ದಾರೆ. 500ಕ್ಕೂ ಹೆಚ್ಚು ಕನ್ನಡಚಿತ್ರಗಳ ವಿತರಕರಾಗಿ, 50ಕ್ಕೂ ಅಧಿಕ ಸದಭಿರುಚಿಯ ಕನ್ನಡ ಚಿತ್ರಗಳ ನಿರ್ಮಾಪಕರಾಗಿ ಕನ್ನಡ ಚಿತ್ರೋದ್ಯಮಕ್ಕೆ ತಮ್ಮದೇ ಆದಂತಹ ಸೇವೆ ಸಲ್ಲಿಸಿದ್ದ ಚಂದ್ರಶೇಖರ್ ಅವರನ್ನು ಭಾರತೀಯ ಚಲನಚಿತ್ರ ಒಕ್ಕೂಟಕ್ಕೆ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಆ ಮಟ್ಟಿಗಾದರೂ ಕನ್ನಡಿಗರಿಗೆ ರಾಷ್ಟ್ರ ಮಟ್ಟದಲ್ಲಿ ಸ್ಥಾನ ಕಲ್ಪಿಸುತ್ತಿರುವುದು ಸ್ವಾಗತಾರ್ಹ.

Tuesday, December 25, 2007

ಫ್ಯಾಷನ್‌ನಲ್ಲಿ ಅರ್ಬಾಜ್ ಖಾನ್ ಪ್ರಿಯಾಂಕಾ ಚೋಪ್ರಾ ಜೋಡಿ


(ಕರ್ಟೆಸೀ: ವೆಬ್ ದುನಿಯಾ)
ಸಣ್ಣ ಪಾತ್ರಗಳಿಗೆ ಮಾತ್ರ ಸೀಮಿತವಾಗಿದ್ದ ಅರ್ಬಾಜ್ ಖಾನ್ ಮೊದಲ ಬಾರಿಗೆ ಮಧುರ್ ಭಂಡಾರಕರ್ ಅವರ ಫ್ಯಾಷನ್ ಚಿತ್ರದ ಹೀರೋ. ಇನ್ನೊಂದು ಪ್ಲಸ್ ಪಾಯಿಂಟ್ ಫ್ಯಾಷನ್‌ಗೆ ನಾಯಕಿಯಾಗಿರುವುದು ಪ್ರಿಯಾಂಕಾ ಚೋಪ್ರಾ. ಅಂತೂ ಕೊನೆಗೂ ಅರ್ಬಾಜ್‌ನ ಖರಾಬ್ ನಸೀಬ್ ಹಳಿ ತಪ್ಪುವ ಹಾದಿಯಲ್ಲಿದೆ ಅಂತಾಯಿತು. ಮಧುರ್ ಅವರು ನನಗೆ ಪಾತ್ರದ ಬಗ್ಗೆ ಹೇಳಿದಾಗ, ಚಿತ್ರದ ಅವಧಿಯ ಬಗ್ಗೆ ನಾನು ಸ್ವಲ್ಪ ಬೇಸರಗೊಂಡಿದ್ದೆ. ಅತ್ಯಂತ ಸುಂದರಿಯರಾದ ಪ್ರಿಯಾಂಕ ಮತ್ತು ಕಂಗಾನಾ ಅವರು ಈಗಾಗಲೇ ಸಹಿ ಹಾಕಿದ ಮೇಲೆ ಈ ಪಾತ್ರದಲ್ಲಿ ಅಭಿನಯಿಸಲು ನನ್ನಂತಹ ಸುಂದರ ನಟ ಸಾಕು ಎಂದು ಮಾತಿಗೆ ಹಾಸ್ಯದ ಲೇಪ ಸೇರಿಸಿದರು. ಮೊದಲ ಬಾರಿಗೆ ಇಬ್ಬರು ನಟಿಯರೊಂದಿಗೆ ನಟಿಸುವ ಅವಕಾಶ ಪಡೆದಿದ್ದೇನೆ. ನನ್ನ ಸಹೋದರ ಸಲ್ಮಾನ್ ಅವರ ಅನೇಕ ಚಿತ್ರಗಳಲ್ಲಿ ಪ್ರಿಯಾಂಕಾ ನಟಿಸಿದ್ದು, ಅವರ ಬಗ್ಗೆ ಹೆಚ್ಚು ತಿಳಿದಿದೆ. ಆದರೆ ಕಂಗಾನಾ ಅವರನ್ನು ಒಮ್ಮೆ ಮಾತ್ರ ಭೇಟಿಯಾಗಿದ್ದೆ.ಎಂದು ಅವರು ಹೇಳಿದರು.

Monday, December 24, 2007

ಎಕ್ತಾ ಕಪೂರ್ ಧಾರಾವಾಹಿಯಲ್ಲಿ ಬಾಲಿವುಡ್ ನಟಿ ರಾಖಿ ಸಾವಂತ್



(ಕ‌ರ್ಟೆಸೀ:ವೆಬ್ ದುನಿಯಾ)


ಅನೇಕ ಚಿತ್ರಗಳಲ್ಲಿ ತನ್ನ ಸಿಝ್ಲಿಂಗ್ ನೃತ್ಯದ ಮೂಲಕ ಎಲ್ಲರ ಚಿರಪರಿಚಿತರಾಗಿರುವ ಬಾಲಿವುಡ್ ನಟಿ ರಾಖಿ ಸಾವಂತ್. ಎಕ್ತಾ ಕಪೂರ್ ಧಾರಾವಾಹಿಯಲ್ಲಿ ಬಿನ್ನಾಣದ ಸೊಸೆಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ತನ್ನ ಇಮೇಜ್ ಹೆಚ್ಚಿಸಿಕೊಳ್ಳಲಿದ್ದಾರೆ.ಅನೇಕ ಚಿತ್ರಗಳಲ್ಲಿ ನನ್ನ ಹಾಟ್ ಮತ್ತು ಸೆಕ್ಸ್ ಪಾತ್ರಗಳಿಂದ ನಾನು ರೋಸಿ ಹೋಗಿದ್ದೇನೆ. ಎಕ್ತಾ ಅವರ ಧಾರಾವಾಹಿಯಲ್ಲಿ ಸೊಸೆಯ ಪಾತ್ರದಲ್ಲಿ ಅಭಿನಯಿಸಲು ನನಗೆ ನಿಜವಾಗಿಯೂ ಮನಸ್ಸಿದೆ ಎಂದು ಸಾವಂತ್ ಸುದ್ದಿಗಾರರಿಗೆ ಹೇಳಿದರು.ಅತ್ಯಂತ ಸೆಕ್ಸಿಯಾಗಿ ಕಾಣಿಸಬೇಕೆಂದು ನಾನು ಯಾವಾಗಲೂ ಬಯಸುತ್ತಿದ್ದೆ. ಆದರೆ ಇದಕ್ಕಾಗಿ ನಾನು ಹೆಚ್ಚು ಡಯಟ್ ಮತ್ತು ಮೇಕಪ್‌ಗಳನ್ನು ಮಾಡಬೇಕಾದ ಕಾರಣ ಇದು ನನ್ನ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ.ಆದುದರಿಂದ ನಾನು ಇನ್ನುಮುಂದೆ ಅಂತಹ ಪಾತ್ರಗಳನ್ನು ಮಾಡುವುದಿಲ್ಲ ಎಂದು ಸಾವಂತ್ ಹೇಳಿದ್ದಾರೆ.ಟೆಲಿವಿಶನ್ ಸೋಪ್ ಅಪೆರಾಗಳಲ್ಲಿ ಕೆಲಸ ಮಾಡಲು ನನಗೆ ಅನೇಕ ಆಫರ್‌ಗಳು ಬಂದಿವೆ ಅಲ್ಲದೆ ಎರಡು ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಕೂಡಾ ಬಂದಿದೆ ಎಂದು ಅವರು ಹೇಳಿದರು.ತನ್ನ ಪ್ರಿಯತಮನೊಂದಿಗೆ ಮದುವೆಯಾಗುವ ಕುರಿತಾದ ವದಂತಿಗಳನ್ನು ತಳ್ಳಿಹಾಕಿದ ಸಾವಂತ್, ಸದ್ಯಕ್ಕೆ ನನ್ನ ವೃತ್ತಿಯತ್ತ ಹೆಚ್ಚು ಗಮನ ನೀಡಬೇಕಾಗಿದೆ ಎಂದು ಹೇಳಿದರು.

Saturday, December 22, 2007

Press Clippings of "Om' film.

Kannada Prabha (Chitra Prabha)
Prajavani
Prajavani
Samyukta Karnataka
Udayavani
Udayavani
Vijaya Karnataka
Vijaya Karnataka

Vijaya Karnataka

ವಿಷ್ಣು ವರ್ದನ್ ,ಜಯಪ್ರದಾರ'ಈ ಬಂಧನ'...


(ಕರ್ಟೆಸೀ: ವನ್ ಇಂಡಿಯಾ)
ಪತಿದೇವರು ಜೈಜಗದೀಶ್ ನಿರ್ದೇಶನದ 'ಮದನ'ಅಡ್ಡಡ್ಡ ಬಿದ್ದ ಪರಿಣಾಮ, ಗೆಲ್ಲುವ ಉತ್ಸಾಹದಿಂದ ಅವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಆಕ್ಷನ್ ಕಟ್ ಹೇಳಿದರು. ಅವರ ನಿರ್ದೇಶನದ 'ಈ ಬಂಧನ'ಶುಕ್ರವಾರ(ಡಿ.21) ತೆರೆಕಂಡಿದೆ. ಹಲವು ವರ್ಷಗಳ ನಂತರ ವಿಷ್ಣು ಮತ್ತು ಜಯಪ್ರದಾ ನಟಿಸುತ್ತಿರುವ 'ಈ ಬಂಧನ'ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಸಹಜ ಕುತೂಹಲ. ಲಾಂಗು, ಮಚ್ಚು ಚಿತ್ರಗಳ ನಡುವೆ ಕೌಟುಂಬಿಕ ಕಥಾಹಂದರದ ಚಿತ್ರ ಪ್ರೇಕ್ಷಕರನ್ನು ಸೆಳೆಯುತ್ತದೋ ಇಲ್ಲವೋ ಕೆಲವೇ ದಿನಗಳಲ್ಲಿ ಗೊತ್ತಾಗಲಿದೆ. ದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎನ್ನುತ್ತಾರೆ ಚಿತ್ರದ ನಿರ್ದೇಶಕಿ ವಿಜಯಲಕ್ಷ್ಮೀಸಿಂಗ್. ಜೈಜಗದೀಶ್ ನಿರ್ಮಿಸುತ್ತಿರುವ ಚಿತ್ರಕ್ಕೆ ಮನೋಮೂರ್ತಿ ಸಂಗೀತವಿದೆ. ಛಾಯಾಗ್ರಹಣ ಅಜಯ್ ವಿನ್ಸೆಂಟ್, ಸಂಕಲನ ಕೆಂಪರಾಜ್, ಸಂಭಾಷಣೆ ಬಿ.ಎ. ಮಧು, ಚಿನ್ನಿ ಪ್ರಕಾಶ್ ನೃತ್ಯ ಸಂಯೋಜನೆ ಇದೆ. ಚಿತ್ರದ ತಾರಾಗಣದಲ್ಲಿ ವಿಷ್ಣು, ಜಯ ಜೊತೆಗೆ ದರ್ಶನ್, ಜೆನಿಫರ್, ವೈಭವಿ, ಆರುಂಧತಿ ಜಟ್ಕರ್, ತರುಣ್ ಮುಂತಾದವರು ಇದ್ದಾರೆ. ಕಿಟ್ಟಿ ರಂಗಮಂಚ್, ಜಯರಾಜ್‌ಸಿಂಗ್, ವಿ.ಕೆ.ಮೂರ್ತಿ, ಇಸ್ಮಾಯಿಲ್ ಮತ್ತಿತರರ ಚಿತ್ರದ ತಾಂತ್ರಿಕ ಬಳಗದಲ್ಲಿದ್ದಾರೆ.

Friday, December 21, 2007

ವಿವಾಹಪೂರ್ವ ಲೈಂಗಿಕತೆ ತಪ್ಪಲ್ಲ: ಈಗ ಬಾಲಿವುಡ್ ನಟಿ ಸುಸ್ಮಿತಾ ಸೇನ್ ಸರದಿ



(ಕ‌ರ್ಟೆಸೀ: ಯಾಹೂ)
ವಿವಾಹಪೂರ್ವ ಲೈಂಗಿಕತೆ ತಪ್ಪಲ್ಲ ಎಂದು ಹೇಳುವ ಮುಖಾಂತರ ವಿವಾದದ ಬೆಂಕಿ ಹಚ್ಚಿದ್ದ ಖುಷ್ಬೂ, ಶಿಲ್ಪಾಶೆಟ್ಟಿ, ರೀಮಾಸೇನ್ ಸಾಲಿಗೆ ಮಾಜಿ ಭುವನ ಸುಂದರಿ, ಹಾಲಿ ಬಾಲಿವುಡ್ ನಟಿ ಸುಸ್ಮಿತಾ ಸೇನ್ ಹೊಸ ಸೇರ್ಪಡೆ. ಈ ಮಾಜಿ ನಟಿಯರು ಕೆಲಸವಿಲ್ಲದಾಗ, ವಿವಾದಗಳ ಮುಖಾಂತರ ಸುದ್ದಿ ಮಾಡಲು ಯತ್ನಿಸುತ್ತಾರೆ. ಪ್ರಸ್ತುತ ಸ್ಥಿತಿಯಲ್ಲಿ ಭಾರತದ ಯಾವುದೇ ಮಹಿಳೆಯೂ ಕನ್ಯತ್ವ ಉಳಿಸಿಕೊಂಡಿಲ್ಲ. ಹಾಗಾಗಿ ವಿವಾಹಪೂರ್ವ ಲೈಂಗಿಕ ಸಂಬಂಧ ತಪ್ಪಲ್ಲ ಎಂದು ಅವರು ಟಿ.ವಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದರು. ಅದನ್ನು ತಮಿಳಿನ 'ದಿನತಂತಿ' ಪತ್ರಿಕೆ ಯಥಾವತ್ ಪ್ರಕಟಿಸಿತ್ತು. ಆದರೆ ಈ ವಿಚಾರ ಇಲ್ಲಿಗೆ ನಿಂತಿಲ್ಲ. ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಸುಸ್ಮಿತಾ ಭಾರತೀಯ ಸಂಸ್ಕೃತಿಯನ್ನು ಅರ್ಥಮಾಡಿಕೊಂಡಿಲ್ಲ ಎಂದು ವಿವಿಧ ಸಂಘಟನೆಗಳು ದೂರಿವೆ. ಈ ಸಂಬಂಧ ವಕೀಲರಾದ ಎಸ್. ಗಿರೀಶ್ ಕುಮಾರ್ ಎಂಬುವವರು ಸುಶ್ಮಿತಾ ಹಾಗೂ 'ದಿನತಂತಿ' ಪತ್ರಿಕೆಯ ವಿರುದ್ಧ ಕೇಸು ದಾಖಲಿಸಿದ್ದರು. ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿರುವ ಮದ್ರಾಸ್ ಉಚ್ಚನ್ಯಾಯಾಲಯದ ಮಧುರೈ ಪೀಠ ಸುಶ್ಮಿತಾ ಸೇನ್ ಅವರಿಗೆ ನೋಟೀಸ್ ಜಾರಿಗೊಳಿಸಿದೆ.

Thursday, December 20, 2007

'ಬಿಂದಾಸ್'ಐಟಂ ಸಾಂಗಿಗಾಗಿ ಮತ್ತೆ ಬಂದಳು ಮತ್ತು ನಟಿ ಸುಮನ್ ರಂಗನಾಥ್!


(ಕರ್ಟೆಸೀ: ವನ್ ಇಂಡಿಯಾ)


ಬೆಂಗಳೂರು ಮೂಲದ ರೂಪದರ್ಶಿ ಮತ್ತು ನಟಿ ಸುಮನ್ ರಂಗನಾಥ್, ನಮ್ಮೂರ ಹಮ್ಮೀರ ಸೇರಿದಂತೆ ಕೆಲವು ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಚೆನ್ನೈ ನೀರು ಕುಡಿದ ಮೇಲೆ ಮತ್ತೆ ತವರಿನತ್ತ ಅವರು ಮುಖಮಾಡಲಿಲ್ಲ. ತಮಿಳಲ್ಲಿ ನಂತರ ಹಿಂದಿಯಲ್ಲಿ ಒಂದಿಷ್ಟು ಅವಕಾಶ ಗಿಟ್ಟಿಸಿದ ಸುಮನ್, ಈಗ ಐಟಂ ಡ್ಯಾನ್ಸ್ ಶುರುಮಾಡಿದ್ದಾರೆ. ಸುಮನ್ ಸುತ್ತಲೂ ಸುತ್ತಿದ ಹುಡುಗರು, ಮದುವೆ ಇವೆಲ್ಲವೂ ಅವರಿಗೆ ಕಹಿಯನ್ನೇ ತಂದಿವೆ. ಬಾಲಿವುಡ್ ನಲ್ಲಿ ಪ್ರಾಬಲ್ಯ ಮುಗಿದಿದೆ ಅನ್ನಿಸಿದ ತಕ್ಷಣ, ಈಯಮ್ಮ ಬೆಂಗಳೂರಿಗೆ ಬಂದಿದ್ದಾರೆ. ಜೊತೆಗೆ ಕನ್ನಡ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದೀಗ ಪುನೀತ್ ಅಭಿನಯದ ಬಿಂದಾಸ್ ಚಿತ್ರದ ಐಟಂ ಸಾಂಗ್ ಒಂದರಲ್ಲಿ ಸುಮನ್ ಕಾಣಿಸಿಕೊಳ್ಳುತ್ತಿದ್ದಾರೆ. ಬಿಂದಾಸ್ ಚಿತ್ರದ ನಿರ್ದೇಶಕರು ಡಿ.ರಾಜೇಂದ್ರ ಬಾಬು. ಉಪೇಂದ್ರ ಅಭಿನಯದ 'ಬುದ್ಧಿವಂತ'ದಲ್ಲೂ ಸುಮನ್ ಪ್ರಮುಖ ಪಾತ್ರ ಗಿಟ್ಟಿಸಿದ್ದಾರೆ. ಈ ಚಿತ್ರದ ನಿರ್ದೇಶಕರು ರಾಮನಾಥ ಋಗ್ವೇದಿ. ಸ್ಯಾಂಡಲ್ ವುಡ್ನಲ್ಲಿ ಹೊಸ ಬ್ರೇಕ್ ಸಿಗಬಹುದೇ, ಎರಡನೇ ಇನ್ನಿಂಗ್ಸ್ ಸಾಧ್ಯವೇ ಎಂದು ಸುಮನ್ ಕಾಯ್ತಾ ಇದ್ದಾರೆ. ಅಕ್ಕನ ಪಾತ್ರಕ್ಕೆ ಬರ್ತೀರಾ, ಅತ್ತಿಗೆ ಪಾತ್ರ ಮಾಡ್ತೀರಾ ಎನ್ನುತ್ತಿದ್ದಾರೆ ಸ್ಯಾಂಡಲ್ ವುಡ್ ನಿರ್ಮಾಪಕರು.

Wednesday, December 19, 2007

Press coverage's on Pyramid Saimira Group in Bengalore

Dinakaran Daily
The Economic Times Daily
Kannada Prabha Daily
Praja Vani Daily


The Economic Times Daily

ವರ್ಷದ ನಟ ಗಣೇಶ್, ವರ್ಷದ ನಿರ್ದೇಶಕ ಯೋಗರಾಜ್!


(ಕ‌ರ್ಟೆಸೀ: ವ‌ನ್ ಇಂಡಿಯಾ)


ವರ್ಷ ಮುಗಿಯಲು ಇನ್ನೂ ಹತ್ತಾರು ದಿನಗಳಿವೆ. ಯಥಾ ಪ್ರಕಾರ ಎದ್ದ ಚಿತ್ರಗಳಿಗಿಂತಲೂ ಬಿದ್ದ ಚಿತ್ರಗಳೇ ಹೆಚ್ಚು. ಹೊಸ ಹುಡುಗರ ಪ್ರವೇಶ, ಹೊಸ ನಿರ್ಮಾಪಕರ ಪ್ರವೇಶ ಸ್ಯಾಂಡಲ್ ವುಡ್ ಮೇಲೆ ಪರಿಣಾಮ ಬೀರಿವೆ. ಗಣೇಶ್, ಪುನೀತ್ ಮತ್ತು ವಿಜಯ್ ಕ್ರೇಜ್ ವರ್ಷದುದ್ದಕ್ಕೂ ಮುಂದುವರೆದಿದ್ದು, ಶಿವು ಮತ್ತು ರವಿಚಂದ್ರನ್ ಪಾಲಿಗೆ ಇದು ನಿರಾಸೆಯ ವರ್ಷ. ನೆನಪಿರಲಿ ಪ್ರೇಮ್ ಪಾಲಿಗೆ ಇದು ಸೋಲಿನ ವರ್ಷ.
ಪತ್ರಿಕೆಯೊಂದರ ಲೆಕ್ಕಾಚಾರದ ಪ್ರಕಾರ : 2007ರಲ್ಲಿ ಸೆಟ್ಟೇರಿದ ಚಿತ್ರಗಳ ಸಂಖ್ಯೆ 190. ತೆರೆ ಕಂಡ ಚಿತ್ರಗಳ ಸಂಖ್ಯೆ 90. ಇವುಗಳಲ್ಲಿ 'ಮುಂಗಾರು ಮಳೆ'ಯ ಕಲೆಕ್ಷನ್ 50ಕೋಟಿ, 'ದುನಿಯಾ'ಕಲೆಕ್ಷನ್ 30ಕೋಟಿ, 'ಚೆಲುವಿನ ಚಿತ್ತಾರ'ಕಲೆಕ್ಷನ್ 25ಕೋಟಿ. ಹೀಗಾಗಿ ಈ ಮೂರು ಚಿತ್ರಗಳ ಒಟ್ಟು ಕಲೆಕ್ಷನ್ 105ಕೋಟಿ! ವಿಜಯ್ ಅಭಿನಯದ 'ಚಂಡ'ಸೂಪರ್ ಹಿಟ್. ಒಂದು ಕೋಟಿಯ ಈ ಚಿತ್ರ ಗಳಿಸಿದ ಲಾಭ ಮೂರು ಕೋಟಿ. 'ತಾಯಿಯ ಮಡಿಲು 'ಚಿತ್ರದಿಂದ ಎರಡು ಕೋಟಿ ಕಳೆದುಕೊಂಡ ಎಸ್. ನಾರಾಯಣ್ ಈಗ ಸುಖಿ.
ಹೀಗಾಗಿ ಗಣೇಶ್ ವರ್ಷದ ನಾಯಕನ ಪಟ್ಟಕ್ಕೇರಿದ್ದಾರೆ. 'ಯುಗ'ಚಿತ್ರ ಬಿದ್ದರೂ, ದುನಿಯಾ ಮತ್ತು ಚಂಡ ಚಿತ್ರಗಳ ಗೆಲುವಿನಿಂದಾಗಿ ವಿಜಯ್ ಎರಡನೇ ಸ್ಥಾನದಲ್ಲಿದ್ದಾರೆ. 'ಅರಸು'ನಿರೀಕ್ಷೆಯಷ್ಟು ದುಡ್ಡು ಬಾಚಲಿಲ್ಲ. ಆದರೆ 'ಮಿಲನ'ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಪುನೀತ್ ಮೂರನೇ ಸ್ಥಾನದಲ್ಲಿದ್ದಾರೆ. ಮಳೆ ಮುಖಾಂತರ ಮೋಡಿ ಮಾಡಿದ ನಿರ್ದೇಶಕ ಯೋಗರಾಜ ಭಟ್ ವರ್ಷದ ನಿರ್ದೇಶಕ. ಮನೋಮೂರ್ತಿ ವರ್ಷದ ಸಂಗೀತ ನಿರ್ದೇಶಕ. ಪಾತ್ರದಿಂದ ಪಾತ್ರಕ್ಕೆ ಮಿಂಚುತ್ತಿರುವ ರಂಗಾಯಣ ರಘು, ವರ್ಷದ ಪೋಷಕ ನಟ. ಚಿತ್ರಗಳಲ್ಲಿ ಸದ್ದು ಮಾಡದೇ, ವಿವಾದಗಳಿಂದಲೇ ಸುದ್ದಿ ಮಾಡಿದ ರಮ್ಯಾ ವರ್ಷದ ಕಿರಿಕ್ ತಾರೆ!

Tuesday, December 18, 2007

ಹೀರೋ ಗಣೇಷ‌ ರೊಮ್ಯಾಂಟಿಕ್ ಲವ್ ಸಾಂಗ್ ಇನ್ "ಗಾಲಿಪಾಟ"


(ಕ‌ರ್ಟೆಸೀ: ಗಾಲಿಪಾಟ‌)


ಮಿಂಚಾಗಿ ನೀನು ಬರಲು ನಿಂತಲ್ಲಿಯೇ ಮಳೆಗಾಲ
ಬೆಚ್ಚಗೆ ನೀ ಜೊತೆಗಿರಲು ಕೂತಲ್ಲಿಯೇ ಚಳಿಗಾಲ
ವಿರಹದ ಬೇಗೆ ಸುಡಲು ಎದೆಯಲಿ ಬೇಸಿಗೆಕಾಲ
ಇನ್ನೆಲ್ಲಿ ನನಗೆ ಉಳಿಗಾಲ ಮಿಂಚಾಗಿ
ನಾ ನಿನ್ನ ಕನಸಿಗೆ ಚಂದಾದಾರನು
ಚಂದಾ ಬಾಕಿ ನೀಡಲು ಬಂದೇ ಬರುವೆನು
ನಾ ನೇರ ಹೃದಯದ ವರದಿಗಾರನು
ನಿನ್ನ ಕಂಡ ಕ್ಷಣದಲೇ ಮಾತೇ ಮರೆವೆನುಕ್ಷಮಿಸು
ನೀ ಕಿನ್ನರಿ ನುಡಿಸಲೇ ನಿನ್ನನು
ಹೇಳಿ ಕೇಳಿ ಮೊದಲೆ ಚೂರು ಪಾಪಿ ನಾನು ಮಿಂಚಾಗಿ

ನಿನ್ನ ಮನದ ಕವಿತೆ ಸಾಲ ಪಡೆವ ನಾನು ಸಾಲಗಾರ
ಕನ್ನ ಕೊರೆದು ದೋಚಿ ಕೊಂಡ ನೆನಪುಗಳಿಗೆ ಪಾಲುದಾರ
ನನ್ನ ಈ ವೇದನೆ ನಿನಗೆ ನಾ ನೀಡೆನು
ಹೇಳಿ ಕೇಳಿ ಮೊದಲೆ ಚೂರು ಕಳ್ಳ ನಾನು ಮಿಂಚಾಗಿ

Monday, December 17, 2007

ರಣಬೀರ್ ವಿಭಿನ್ನ ಪಾತ್ರದಲ್ಲಿ ನಟನೆ


(ಕರ್ಟೆಸೀ:ವೆಬ್ದುನಿಯಾ)
ಸಾವರಿಯಾ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ನವನಟ ರಣಬೀರ್ ಕಪೂರ್, ಸಿದ್ಧಾರ್ಥ ಆನಂದ ನಿರ್ದೇಶನದ ಸಿನಿಮಾದ ಪಾತ್ರದಲ್ಲಿ ಮೂರು ಹಂತಗಳ ಪ್ರೇಮ ಜೀವನದ ಬಗ್ಗೆ ನಟಿಸಬೇಕಾಗಿದೆ. ಮೂರು ಹಂತಗಳಲ್ಲಿನ ವಿಭಿನ್ನ ಮುಖಲಕ್ಷಣಗಳಿಗಾಗಿ ಇವರು ಪ್ರಯತ್ನಿಸುತ್ತಿದ್ದಾರೆ. 1990ರಲ್ಲಿ ಬಿಡುಗಡೆಯಾಗಿದ್ದ ಹಾಸ್ಯಮಯ ಪ್ರೇಮಚಿತ್ರ 'ದ ಬ್ಯಾಚುಲರ್‌'ನ ರಿಮೇಕ್ ಅಲ್ಲ ಎಂದು ಸ್ಪಷ್ಟಪಡಿಸರುವ ರಣಬೀರ್, ಮೂರು ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾರೆ. 25ರ ಹರೆಯದ ವ್ಯಕ್ತಿಯು ತನಗಿಂತ ಹತ್ತು ವರ್ಷಹೆಚ್ಚಿಗಿರುವ ಪಾತ್ರವನ್ನು ನಿರ್ವಹಿಸಲು ಸಾಧ್ಯವೇ?ಕಳೆದ ಒಂದು ವಾರದಿಂದ ನಿರ್ದೇಶಕ ಮತ್ತು ನಟ ರಣಬೀರ್‌ 35 ವರ್ಷದ ವ್ಯಕ್ತಿಯಾಗಿ ಕಾಣಿಸಲು ಪ್ರಯತ್ನಿಸುತ್ತಿದ್ದಾರೆ. ಹತ್ತು ವರ್ಷದವರವನ್ನು 25 ವರ್ಷದವರನ್ನಾಗಿ ಮಾಡಲು ಸಾಧ್ಯವೇ? ನಿರ್ದೇಶಕ ಮತ್ತು ನಟ ವಯಸ್ಸಾದವರಂತೆ ಕಾಣಲು ಕಳೆದ ಒಂದು ವಾರ ಪ್ರಯತ್ನಿಸಿದ್ದರು. ವಯಸ್ಸು ಹೆಚ್ಚಿದಂತೆ ಕಾಣಲು ರಣಬೀರ್ ಕುರುಚಲು ಗಡ್ಡವನ್ನು ಬಿಡಲಿದ್ದಾರೆ. ರಣಬೀರ್ 17ರ ಹರೆಯದವರಂತೆ ಕಾಣಲು ಉದ್ದ ಕೂದಲನ್ನು ಬಿಡಲಿದ್ದು, ಆ ವಯಸ್ಸಿಗೆ ಹೊಂದುಕೊಳ್ಳುವಂತಹ ವಸ್ತ್ರಗಳನ್ನು ಧರಿಸಲಿದ್ದಾರೆ.

Saturday, December 15, 2007

ಒಂದೇ ಸಿನಿಮಾದಲ್ಲಿ ರಾಘು, ಶಿವು ಮತ್ತು ಪುನೀತ್!



(ಕರ್ಟೆಸೀ:ದಟ್ಸ್ ಕನ್ನಡ)


ಅಪ್ಪ ಮಕ್ಕಳು ಒಂದೇ ಚಿತ್ರದಲ್ಲಿ ನಟಿಸಬೇಕು ಎನ್ನುವುದು ಅಭಿಮಾನಿಗಳು ಮತ್ತು ಕುಟುಂಬವರ್ಗದ ಬಯಕೆಯಾಗಿತ್ತು.'ಸೂಕ್ತ ಕತೆ ಸಿಕ್ಕರೇ ಯಾಕೆ ಆಗಬಾರದು'ಎಂದು ರಾಜ್ ಕುಮಾರ್ ಸಹಾ ಹಿಂದೆ ಹೇಳಿದ್ದರು. ಆ ಪ್ರಯತ್ನವಂತೂ ಆಗಲಿಲ್ಲ. ಇದೀಗ ರಾಜ್ ಅವರ ಮೂವರೂ ಪುತ್ರರು ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ. ಇತ್ತೀಚೆಗಷ್ಟೇ ನಟನೆಗೆ ಮರಳುವುದಾಗಿ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದರು. ಸದ್ಯದಲ್ಲೇ ಅವರ ನಾಯಕತ್ವದಲ್ಲಿ ಹೊಸ ಚಿತ್ರ ಸೆಟ್ಟೇರಲಿದೆ. ಅದಕ್ಕೂ ಮುನ್ನವೇ ರಾಘವೇಂದ್ರ ರಾಜ್ ಕುಮಾರ್ ಅವರ ಇನ್ನೊಂದು ಚಿತ್ರವನ್ನು ಸಮೀರಾ ಪಿರಮಿಡ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದೆ. ರಾಘವೇಂದ್ರ ರಾಜ್ ಕುಮಾರ್ ಜೊತೆ ಅವರ ಸಹೋದರರಾದ ಶಿವರಾಜ್ ಕುಮಾರ್, ಪುನೀತ್ ಸಹಾ ಅಭಿನಯಿಸಲಿದ್ದಾರೆ. 2008ರ ಏಪ್ರಿಲ್ 24ರಂದು ಹೊಸ ಚಿತ್ರ ಸೆಟ್ಟೇರಲಿದೆ. ಅಣ್ಣ ತಮ್ಮಂದಿರು ಒಂದೇ ಚಿತ್ರದಲ್ಲಿ ನಟಿಸುತ್ತಿರುವುದು ನಿಜಕ್ಕೂ ರೋಮಾಂಚನ ತಂದಿದೆ. ಅಪ್ಪಾಜಿ ಹುಟ್ಟಿದ ಹಬ್ಬಕ್ಕೆ ಈ ಚಿತ್ರ ಗೌರವ ಕಾಣಿಕೆಯಾಗಲಿದೆ ಎಂದು ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ. ತ್ರಿಮೂರ್ತಿಗಳ ಈ ಚಿತ್ರವನ್ನು ಉಪೇಂದ್ರ ನಿರ್ದೇಶನ ಮಾಡಲಿದ್ದಾರೆ. ಚಿತ್ರದ ಕತೆಯನ್ನು ಕೇಳಿರುವ ಮೂವರೂ ಸಹೋದರರು, ಸಮ್ಮತಿ ಸೂಚಿಸಿದ್ದಾರೆ. ಉಪೇಂದ್ರ ನಿರ್ದೇಶನ ಬಿಟ್ಟು ಬಹಳ ದಿನಗಳಾಗಿವೆ. ಅವರ ನಿರ್ದೇಶನದ ಕಡೆಯ ಚಿತ್ರ ಉಪೇಂದ್ರ. ಈ ಚಿತ್ರದಲ್ಲಿ ರವೀನಾ, ಪ್ರೇಮ, ದಾಮಿನಿ ನಾಯಕಿಯರಾಗಿದ್ದರು.

Friday, December 14, 2007

ಹನುಮಾನ್ ರಿಟರ್ನ್ಸ್ ಈಗ ದ ರಿಟರ್ನ್ ಆಫ್ ಹನುಮಾನ್




(ಕ‌ರ್ಟೆಸೀ : ವೆಬ್ ದುನಿಯಾ)


ಅನುರಾಗ್ ಕಶ್ಯಪ್ ನಿರ್ದೇಶನದ ಹನುಮಾನ್ ರಿಟರ್ನ್ ಚಿತ್ರದ ಶೀರ್ಷಿಕೆಯನ್ನು ದ ರಿಟರ್ನ್ಸ್ ಆಫ್ ಹನುಮಾನ್ ಎಂಬುದಾಗಿ ಬದಲಾಯಿಸಲಾಗಿದೆ.ದೀಪಾವಳಿ ಸಮಯದಲ್ಲಿ ಈ ಚಿತ್ರ ಬಿಡುಗಡೆಗೊಳ್ಳಲು ನಿಗದಿಯಾಗಿದ್ದರೂ, ನಂತರ ಡಿಸೆಂಬರ್ 28ಕ್ಕೆ ಮುಂದೂಡಲಾಗಿತ್ತು. ಆದರೆ ಈ ಚಿತ್ರವು ಡಿಸೆಂಬರ್ 27ರಂದು ಪರದೆಯ ಮೇಲೆ ಮೂಡಿಬರಲಿದೆ. ಚಿತ್ರದ ಶೀರ್ಷಿಕೆಯನ್ನು ದ ರಿಟರ್ನ್ ಆಫ್ ಹನುಮಾನ್ ಎಂಬುದಾಗಿ ಬದಲಾಯಿಸಲಾಗಿದೆ. ಸಂಖ್ಯಾಶಾಸ್ತ್ರದ ಮೇಲಿರುವ ನಂಬಿಕೆಯೇ ಬದಲಾವಣೆಗೆ ಮುಖ್ಯ ಕಾರಣವಾಗಿದೆ. ಈ ಚಿತ್ರವು ಅತ್ಯಂತ ಯಶಸ್ಸನ್ನು ಕಾಣುವ ಸಲುವಾಗಿ ಚಿತ್ರದ ಹೆಸರನ್ನು ಬದಲಿಸುವಂತೆ ನಮಗೆ ಸಲಹೆ ನೀಡಲಾಗಿತ್ತು ಎಂದು ಪರ್ಸೆಪ್ಟ್ ಪಿಕ್ಚರ್ ಕಂಪನಿ ವಕ್ತಾರ ಪ್ರೀತ್ ಬೇಡಿ ಈ ಕುರಿತಾಗಿ ಪ್ರತಿಕ್ರಯಿಸಿದ್ದಾರೆ. ಕೊನೆಯ ಹಂತದಲ್ಲಿ ಚಿತ್ರದ ಶೀರ್ಷಿಕೆಯ ಬದಲಾವಣೆಯು ಪ್ರೇಕ್ಷರಲ್ಲಿ ಗೊಂದಲವನ್ನು ಉಂಟುಮಾಡುವ ಸಾಧ್ಯತೆಗಳ ಕುರಿತಾಗಿ ಕೇಳಲಾದ ಪ್ರಶ್ನೆಗೆ, ಈ ಚಿತ್ರವನ್ನು ಶ್ರೇಷ್ಠ ಉತ್ಪನ್ನವಾಗಿಸುವ ಕಾರ್ಯದಲ್ಲಿ ನಾವು ಮಗ್ನರಾಗಿದ್ದ ಕಾರಣ ಈ ಮೊದಲು ಸಂಖ್ಯಾಶಾಸ್ತ್ರದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಈಗ ಹೆಸರನ್ನು ಬದಲಾಯಿಸುವಂತೆ ಸೂಚನೆ ಬಂದ ಮೇರೆಗೆ ನಾವು ಬದಲಾಯಿಸುತ್ತಿದ್ದೇವೆ. ಇಲ್ಲಿ ಪ್ರೇಕ್ಷಕರಿಗೆ ಗೊಂದಲ ಉಂಟುಮಾಡುವ ಪ್ರಶ್ನೆಯೇ ಬರುವುದಿಲ್ಲ ಎಂಬುದಾಗಿ ಉತ್ತರಿಸಿದ್ದಾರೆ. ಚಿತ್ರದ ನಿರ್ದೇಶಕ ಅನುರಾಗ್ ಕಶ್ಯಪ್ ಶೀರ್ಷಿಕೆ ಬದಲಾವಣೆಯ ಕುರಿತು ಅಸಮಧಾನವನ್ನು ಹೊಂದಿದ್ದಾರೆ ಎಂಬ ವರದಿಗಳನ್ನು ತಳ್ಳಿಹಾಕಿದ ಬೇಡಿ, ಈ ವರದಿಯು ಸತ್ಯಕ್ಕೆ ದೂರವಾದದ್ದು. ಹೆಸರು ಬದಲಾವಣೆಯ ನಿರ್ಧಾರದ ಕುರಿತು ಕಶ್ಯಪ್ ಯಾವುದೇ ಅಸಮಧಾನವನ್ನು ಹೊಂದಿಲ್ಲ ಎಂದು ಹೇಳಿದರು.

Thursday, December 13, 2007

ಐಟಂಸಾಂಗ್‌ನಲ್ಲಿ ಮಲೈಕಾ ಅರೋರಾ

(ಕ‌ರ್ಟೆಸೀ : ವೆಬ್ ದುನಿಯಾ)

ಬಾಲಿವುಡ್ಡಿನ ಸೆಕ್ಸೀ ಬೆಡಗಿ ಮಲೈಕಾ ಅರೋರಾ, ಮತ್ತೊಮ್ಮೆ ಐಟಂ ಸಾಂಗ್ ಒಂದರಲ್ಲಿ ಮಿಂಚಲಿದ್ದಾರೆ. ಈ ಬಾರಿ ಅನೀಸ್ ಬಾಜ್ಮೀನ್ ಅವರ ವೆಲ್‌ಕಂ ಚಿತ್ರದಲ್ಲಿ ನಾನಾ ಪಾಟೇಕರ್ ಮತ್ತು ಅನಿಲ್ ಕಪೂರ್ ಅವರೊಂದಿಗೆ ಐಟಂಸಾಂಗ್ ಮೂಲಕ ಈ ಬೆಡಗಿಯು ಪ್ರೇಕ್ಷಕರ ಎದೆಬಡಿತ ಹೆಚ್ಚಿಸಲಿದ್ದಾರೆ. ಮಲೈಕಾ ಈ ಮೊದಲು 31 ಸ್ಟಾರ್‌ಗಳನ್ನೊಳಗೊಂಡ ಓಂ ಶಾಂತಿ ಓಂ ಚಿತ್ರದ ಪ್ರಸಿದ್ಧ ಹಾಡು 'ದೀವಾಂಗಿ'ಯಲ್ಲಿ ಕಾಣಿಸಿಕೊಂಡಿದ್ದರು. ವೆಲ್‌ಕಂ ಚಿತ್ರವು ಹಾಸ್ಯ ಚಿತ್ರವಾಗಿದ್ದು, ಅಕ್ಷಯ್ ಕುಮಾರ್, ಕಟ್ರಿನಾ ಕೈಫ್, ಅನಿಲ್ ಕಪೂರ್, ನಾನಾ ಪಾಟೇಕರ್, ಮಲ್ಲಿಕಾ ಶೆರಾವತ್ ಮುಂತಾದ ತಾರಾಗಣವನ್ನೊಳಗೊಂಡಿದೆ. ಫಿರೋಜ್ ನಡೈವಾಲಾ ನಿರ್ಮಾಣದ ಈ ಚಿತ್ರವು ಡಿಸೆಂಬರ್ 21ರಂದು ಬಿಡುಗಡೆಯಾಗಲಿದೆ.

Wednesday, December 12, 2007

ಎತ್ತರಕ್ಕೆ ಹಾರಲಿರುವ ಗಾಳಿಪಟ



(ಕ‌ರ್ಟೆಸೀ : ವೆಬ್ ದುನಿಯಾ )


ಮಲ್ಟಿಪ್ಲೆಕ್ಸ್ ಜಮಾನಾ ಬಂದ ಮೇಲೆ ಈವರೆಗೆ ಪಿವಿಆರ್‌ನಲ್ಲಿ ಯಾವ ಚಿತ್ರವೂ ಒಂದು ವರ್ಷ ಸತತವಾಗಿ ಪ್ರದರ್ಶಿತವಾಗಿರಲಿಲ್ಲ. ಆದರೆ ಮುಂಗಾರುಮಳೆಗೆ ಆ ಯೋಗ ಒದಗಿಬಂತು. ಅದಕ್ಕೆ ಕನ್ನಡ ಚಿತ್ರರಂಗಕ್ಕೆ ತಾರುಣ್ಯ ತುಂಬಿದ ನಿರ್ದೇಶಕ ಯೋಗರಾಜ್ ಭಟ್ ಕಾರಣ. ಈಗ ಅವರ ನಿರ್ದೇಶನದಲ್ಲಿ ರೂಪುಗೊಳ್ಳುತ್ತಿರುವ ಗಾಳಿಪಟವೂ ಸಹಾ ಖಂಡಿತ ಹಾರುತ್ತದೆ ಎಂಬುದು ಅವರ ಆತ್ಮವಿಶ್ವಾಸ. ಈ ಚಿತ್ರ ಪ್ರೇಕ್ಷಕರಿಗೆ ಇದುವರೆಗೂ ಕಂಡರಿಯದ ಹೊಚ್ಚ ಹೊಸ ಅನುಭವ ನೀಡಲಿದೆ ಎಂಬುದು ಅವರ ವಿಶ್ವಾಸ. ಯಾವಾಗ ಒಬ್ಬ ಗಾಯಕ ಹಾಡಿನಲ್ಲಿ ಲೀನವಾಗಿ ಸಂಗೀತವನ್ನು ಆಸ್ವಾದಿಸಿಕೊಂಡು ಹಾಡುತ್ತಾನೋ ಆ ಹಾಡು ಕೇಳಲು ಇಂಪಾಗಿರುತ್ತದೆ. ಅದೇ ರೀತಿ ಗಾಳಿಪಟ ಚಿತ್ರ ನಿರ್ಮಾಣದ ವೇಳೆ ಖುಷಿ ಇತ್ತು. ಹಾಗಾಗಿ ಈ ಚಿತ್ರವೂ ಚೆನ್ನಾಗಿರುತ್ತದೆ ಎಂಬುದು ಅವರ ಲಾಜಿಕ್. ಪ್ರಕೃತಿ ಸಿರಿಯನ್ನು ಪ್ರೇಕ್ಷಕರಿಗೆ ಹಂಚಲು ಅವರ ಪಟ್ಟ ಶ್ರಮದಲ್ಲಿ ಅವರ ಖುಷಿಯಿತ್ತು. ಚಿತ್ರದ ಬಗ್ಗೆ ಹೇಳಬೇಕಾದರೆ ನೋಡಬೇಕಾದ್ರೆ ಖುಷಿ ಆಗ್ಬೇಕು. ಚಿತ್ರಗಳ ಮೂಲಕ ಸಂದೇಶನೀಡುವುದು ತಮ್ಮ ಉದ್ದೇಶ ಎಂದು ಭಟ್ ತಿಳಿಸಿದ್ದಾರೆ. ಮೈಸೂರು, ಮೇಲುಕೋಟೆ, ಮಡಿಕೇರಿ, ಸಕಲೇಶಪುರ ಮುಂತಾದ ಜಾಗಗಳಲ್ಲಿ 65 ದಿನಗಳ ಚಿತ್ರಣ ಮುಗಿಸಿದ ತಂಡ 2 ಹಾಡುಗಳನ್ನು ಸದ್ಯದಲ್ಲೇ ಮುಗಿಸಲಿದೆ.

Tuesday, December 11, 2007

ಶ್ರೀದೇವೀ,ಬೋನಿ ಕಪೂರ್ ಲ ಚಿತ್ರದಲ್ಲಿ ಸಲ್ಮಾನ್ ಖಾನ್

(ಕರ್ಟೆಸೀ :ಬೆಂಗುಲೂರ್ ಚಿತ್ರ )
ಶ್ರೀದೇವೀ, ಬೋನೀ ಕಪೂರ್ ನಿರ್ಮಾಣದ ಎರಡು ಚಿತ್ರಗಳು 2008ರ ದ್ವಿತೀಯಾರ್ಧದಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು, ಅದರಲ್ಲಿರುವ ಒಂದು ಚಿತ್ರದಲ್ಲಿ ಸಲ್ಮಾನ್ ಖಾನ್ ಅವರು ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಲ್ಮಾನ್ ನಾಯಕನಾಗಿ ನಟಿಸುತ್ತಿರುವ ಚಿತ್ರಕ್ಕೆ ಈ ಮೊದಲು 'ವಾಂಟೆಡ್ ಡೆಡ್ ಆಂಡ್ ಎಲೈವ್' ಎಂದು ಹೆಸರಿಡಲಾಗಿತ್ತು. ಈಗ ಇದು ಹೆಸರಿಡದ ಚಿತ್ರವಾಗಿದೆ. ಕಳೆದವಾರ ಹೈದರಾಬಾದಿನಲ್ಲಿ ಚಿತ್ರದ ಮಾತುಕತೆಯ ಭಾಗವನ್ನು ಮುಕ್ತಾಯಗೊಳಿಸಿದ್ದೇವೆ. ಕೇವಲ ನಾಲ್ಕು ಹಾಡುಗಳ ಚಿತ್ರೀಕರಣ ಮಾತ್ರವೇ ಬಾಕಿ ಉಳಿದಿದೆ ಎಂದು ಬೋನಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ತಮಿಳು ಹಿಟ್ ಪೋಕಿರಿ ರಿಮೇಕ್ ಚಿತ್ರದಲ್ಲಿ ನೋ ಎಂಟ್ರಿ ಸ್ಟಾರ್ ಪೊಲೀಸ್ ಪಾತ್ರದಲ್ಲಿ ನಟಿಸಲಿದ್ದಾರೆ. ಸಲ್ಮಾನ್ ಅಲ್ಲದೆ ಆಯೆಶಾ, ಓಂ ಪುರಿ ಮತ್ತು ಮಹೇಶ್ ಮಾಂಜ್ರೇಕರ್ ಮುಖ್ಯಪಾತ್ರದಲ್ಲಿ ಅಭಿನಯಿಸಲಿದ್ದಾರೆ. ತನ್ನ ನ್ಯಾಯಾಲಯದ ಕೇಸುಗಳ ಗೊಂದಲವಿದ್ದರೂ, ಸಲ್ಮಾನ್ ಅವರು ತಮ್ಮ ಆತ್ಮ ವಿಶ್ವಾಸವನ್ನು ಕಳೆದುಕೊಂಡಿಲ್ಲ ಎಂದು ಬೋನಿ ಹೇಳಿದ್ದಾರೆ.

Monday, December 10, 2007

ಅತ್ಯಂತ 'ಚೂಸಿ'ಯಾಗುತ್ತಿರುವ ಇಶಾ ಡಿಯೋಲ್



(ಕ‌ರ್ಟೆಸೀ :ವೆಬ್ ದುನಿಯಾ)


ಬಾಲಿವುಡ್ ನಟಿ ಇಶಾ ಡಿಯೋಲ್ ನಟಿಸಿರುವ ಇತ್ತೀಚೆಗೆ ಬಿಡುಗಡೆಯಾದ ಕ್ಯಾಶ್ ಮತ್ತು ಡಾರ್ಲಿಂಗ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಗುರುತು ಸಿಗದಷ್ಟು ಮುಳುಗಿಹೋದನಂತರ, ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಬಗ್ಗೆ ಈ ಅಭಿನೇತ್ರಿಯು ಹೆಚ್ಚು ಜಾಗರೂಕಳಾಗಿದ್ದಾಳೆ. ನಾನು ಈ ಮೊದಲು ಉತ್ತಮ ಆಯ್ಕೆಗಾರಳಾಗಿರಲಿಲ್ಲ. ನಾನು ವಿಶಾಲ ಹೃದಯವನ್ನು ಹೊಂದಿದ್ದು, ನನ್ನ ಸ್ನೇಹಿತರಿಗೆ ಇಲ್ಲ ಎನ್ನಲಾಗುವುದಿಲ್ಲ. ಏನೇ ಆದರೂ ಉತ್ತಮ ಯೋಜನೆಗಳನ್ನು ಆರಿಸುವ ಬಗೆಗಿನ ಅಗತ್ಯತೆಯು ನನಗೆ ಈಗ ಅರ್ಥವಾಗಿದೆ. ಎಂದು ಇಶಾ ಹೇಳಿದ್ದಾರೆ. ಪ್ರಖ್ಯಾತ ಸಿನಿಮಾ ಜೋಡಿ ಧರ್ಮೇಂದ್ರ ಮತ್ತು ಹೇಮಮಾಲಿನಿ ದಂಪತಿಗಳ ಪುತ್ರಿಯಾದ ಇಶಾ, ಕೋಯ್ ಮೇರೆ ದಿಲ್ ಸೆ ಪೂಚೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಧೂಮ್‌ನಲ್ಲಿ ತನ್ನ ನಿರ್ವಹಣೆಯಂದ ಪ್ರಖ್ಯಾತಿಯನ್ನು ಪಡೆದಿದ್ದರು ಅಲ್ಲದೆ ನೋ ಎಂಟ್ರೀ ಮತ್ತು ಆಂಕೇಹಿ ಚಿತ್ರಗಳಲ್ಲಿನ ನಟನೆಗೆ ಶ್ಲಾಘನೀಯ ವಿಮರ್ಷೆಯನ್ನು ಕೂಡಾ ಸಂಪಾದಿಸಿದ್ದರು. ತನ್ನ ಪಾತ್ರಗಳಲ್ಲಿ ವಿಭಿನ್ನತೆಯನ್ನು ಕಂಡುಕೊಳ್ಳುತ್ತಿದ್ದೇನೆ ಎಂದು ಹೇಳುವ ಇಶಾ, ನಿರ್ದೇಶಕರು ಸಾಹಿತ್ಯದೊಂದಿಗೆ ಪರದೆಯ ಮೇಲೆ ನನ್ನ ಪಾತ್ರದ ಗುಣಮಟ್ಟವು ಉತ್ತಮವಾಗಿರುವಂತಹ ಸಾಹಿತ್ಯವುಳ್ಳ ಚಿತ್ರವನ್ನು ಮಾತ್ರ ನಾನು ಆಯ್ಕೆ ಮಾಡುತ್ತೇನೆ. ಪ್ರತಿಬಾರಿಯೂ ನನಗೆ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಬಯಕೆಯಿದೆ ಎಂದು ಅವರು ಹೇಳಿದರು.ತಾಯಿಯೊಂದಿಗೆ ನಟಿಸುವ ಇಚ್ಛೆಯನ್ನು ಹೊಂದಿದ್ದೇನೆ ಆದರೆ ಅಂತಹ ಯಾವುದೇ ಯೋಜನೆ ಸದ್ಯಕ್ಕಿಲ್ಲ. ಉತ್ತಮ ಸಾಹಿತ್ಯಕ್ಕಾಗಿ ಕಾಯುತ್ತಿದ್ದೇನೆ ಎಂಬುದಾಗಿ ತನ್ನ ತಾಯಿ ಹೇಮ ಮತ್ತು ಸಹೋದರಿ ಆಹನಾರೊಂದಿಗೆ ನಟಿಸುವ ಕುರಿತಾಗಿ ಹೇಳಿದ್ದಾರೆ.

Monday, December 3, 2007

ಮಾಧುರಿ ದಿಕ್ಷೀತ್ ಚಿತ್ರ "ಆಜಾ ನಾಚ್ ಲೇ " ಹಳಿ ತಪ್ಪಿದ

(ಕರ್ಟೆಸೀ: ವೆಬ್ ದುನಿಯಾ)ಯಾವುದೇ ನಟಿಯಾಗಲಿ ನಟನಾಗಲಿ, ಪುನರಾಗಮನದ ಚಿತ್ರ ಎಂದರೆ ಬಹುದೊಡ್ಡ ನಿರೀಕ್ಷೆ ಅವರಲ್ಲಿ ಮತ್ತು ಮೇಲಾಗಿ ಅವರ ಅಭಿಮಾನಿಗಳಲ್ಲಿ ಇದ್ದೆ ಇರುತ್ತದೆ. ದಿಲೀಪ್ ಕುಮಾರ್, (ಕ್ರಾಂತಿ), ಅಮಿತಾಬ್ ಭಚ್ಚನ್( ಮೃತ್ಯುದಾತಾ) ವಿನೋದ್ ಖನ್ನಾ (ಇನ್ಸಾಫ್) ಡಿಂಪಲ್ ಕಪಾಡಿಯಾ ( ಸಾಗರ್) ಕಾಜೋಲ್ ( ಫನ್ಹಾ) ಕೆಲ ಚಿತ್ರಗಳನ್ನು ಮರೆಯುವುದು ಸಾಧ್ಯವಿಲ್ಲ ಯಾಕೆಂದರೆ ಅಂತಹ ಪುನರಾಗಮನದಲ್ಲಿ ಅದೇನೊ ಮಾಸದ ನೆನಪು ಬಿಟ್ಟು ಬಿಡುತ್ತಾರೆ.
ಧಕ್ ಧಕ್ ಬೇಡಗಿ ಮಾಧುರಿ ದಿಕ್ಷೀತ ಕಳೆದ ಶುಕ್ರವಾರ ಮತ್ತೆ ಆಜಾ ನಾಚ್‌ಲೇ ಮೂಲಕ ಬಾಲಿವುಡ್ ಜಗತ್ತಿಗೆ ಪುನರಾಗಮನ ಘೋಷಿಸಿದ್ದಾರೆ. ಅದು ದೇಶದ ನಂ1 ಬ್ಯಾನರ್ ನಿರ್ಮಿಸಿದ ಈ ಆಜಾ ಪ್ರೇಕ್ಷಕರ ಮನಸ್ಸನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗುತ್ತದೆಯೇ ? ಇಲ್ಲ ಎನ್ನುತ್ತದೆ ಚಿತ್ರ ವಿಮರ್ಶೆ. ಹೊಗಲಿ ಮಾಧುರಿ ದಿಕ್ಷೀತ್ ಮೊದಲಿನ ಹಾಗೆ ಅಭಿಮಾನಿಗಳಲ್ಲಿ ಮನಕ್ಕೆ ಕಚಗುಳಿ ಮತ್ತು ಕಿಚ್ಚು ಇಡಬಲ್ಲಳೆ ಎನ್ನುವುದು ಉತ್ತರ ಇಲ್ಲಿ ಸಿಕ್ಕಿಲ್ಲ. ಯಶ್-ಮಾಧುರಿ ಜೋಡಿಯ ಆಜಾ ನಾಚ್‌ಲೇ ನಿರೀಕ್ಷೆಗೆ ಮೀರಿ ತೋಪೆದ್ದು ಹೋಗಿದೆ. ಈ ರೀತಿ ಪ್ಲಾಪ್ ಎಂಬ ಹಣೆಪಟ್ಟಿ ಬರಲು ಕಾರಣ ಕಥೆ. ನೀಜ ಜೀವನದ ಕಥೆಯಂತೆ ಪ್ರಾರಂಭವಾಗುವ ಸಿನಿಮಾ ಒಂದು ಗಂಟೆಯ ನಂತರ ಎಲ್ಲ ಕುತೂಹಲಗಳನ್ನು ಕಳೆದುಕೊಳ್ಳುತ್ತದೆ ಅಲ್ಲದೆ ಚಿತ್ರದ ಹೆಸರು ಆಜಾ ನಾಚ್ ಲೇ ನೋಡಿದ ಮೇಲೆ ಮನತಟ್ಟುವ ಸಂಗೀತ ಆಸ್ವಾದಿಸಬಹುದು ಎನ್ನುವ ನಿರೀಕ್ಷೆ ಸುಳ್ಳಾಗುತ್ತದೆ. ಚಿತ್ರದ ಒಂದೇ ಒಂದು ಹಾಡು ಗುನುಗುನಿಸಲು ಅರ್ಹತೆ ಪಡೆದಿಲ್ಲ ಅದೇ ಚಿತ್ರದ ಮೈನಸ್ ಪಾಯಿಂಟ್. ಒಂದೇ ವಾಕ್ಯದಲ್ಲಿ ಹೇಳಬೇಕು ಎಂದರೆ ಆಜಾ ಚಿತ್ರಕಥೆ ಮತ್ತು ಸಂಗೀತದಲ್ಲಿ ಸಂಪೂರ್ಣ ವಿಫಲ.ಕಥೆ ಪ್ರಾರಂಭವಾಗುವುದೇ ನೃತ್ಯದಿಂದ. ಒಂದು ದಿನ ದಿಯಾ ( ಮಾಧುರಿ ದೀಕ್ಷಿತ್) ದೂರದ ನ್ಯೂಯಾರ್ಕ್‌ನಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ಸಮಯದಲ್ಲಿ ಭಾರತದಲ್ಲಿನ ಒಂದು ಹಳ್ಳಿ ಶಾಮ್ಲಿಯಿಂದ ಕರೆ ಬರುತ್ತದೆ. ಗುರುಗಳಾದ ಮಕರಂದ (ದರ್ಶನ್ ಜರಿವಾಲಾ) ತನ್ನ ಅಂತಿಮ ಯಾತ್ರೆಗೆ ಸಿದ್ಧವಾಗುತ್ತಿರುತ್ತಾನೆ. ಅದಕ್ಕೂ ಮುನ್ನ ತನ್ನ ಶಿಷ್ಯೆ ದಿಯಾಳಿಗೆ ಅಜಂತಾವನ್ನು ರಕ್ಷಿಸುವ ಜವಾಬ್ದಾರಿ ವಹಿಸುವುದಕ್ಕೆ ಬದ್ಧನಾಗಿರುತ್ತಾನೆ. ಇಲ್ಲಿಂದ ಅಕ್ಷರಶಃ ಅಜಂತಾ ರಕ್ಷಣೆಯ ಯುದ್ಧ ಪ್ರಾರಂಭ. ಪ್ರಮುಖ ಪಾತ್ರದಲ್ಲಿ ಮಾಧುರಿ ಇದ್ದು ಅವಳೊಂದಿಗೆ ಹೆಜ್ಜೆ ಹಾಕುವುದಕ್ಕೆ ವಿರೋಧ ಒಡ್ಡುವುದಕ್ಕೆ ಹಲವು ಪಾತ್ರಗಳಿವೆ.

Saturday, December 1, 2007

ಸ್ಯಾಂಡಲ್‌ ವುಡ್ ಅಭಿನೇತ್ರಿ "ರಮ್ಯ" ಬ‌ಯೋಗ್ರಫೀ


ಹುಟ್ಟಿದ್ದು ಬೆಂಗಳೂರು, ಬೆಳೆದಿದ್ದು ಇಡೀ ಕರ್ನಾಟಕದ ತುಂಬ ಅನ್ನೋ ಹಾಗಿದೆ ರಮ್ಯಾಳ ಚಿತ್ರ ಜೀವನ.
ಸದ್ಯದ ಸ್ಯಾಂಡಲ್‌ವುಡ್ ಬೆಡಗಿಯರಲ್ಲಿ ಮೋಹಕ ಹಾಗೂ ಪ್ರತಿಭಾವಂತ ತಾರೆಗಳ ಸಾಲಿನಲ್ಲಿ ರಮ್ಯಳಿಗೆ ಮೊದಲ ಸ್ಥಾನ. ಪುನೀತ್ ರಾಜಕುಮಾರ್ ಅವರು ನಾಯಕನಟನಾಗಿ ಅಭಿನಯಿಸಿದ ''ಅಭಿ'' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ರಮ್ಯಾಳ ಪಾದಾರ್ಪಣೆಯಾಯಿತು. ಇಲ್ಲಿಂದ ಸಾಗಿದ ಅವರ ಪಯಣ ಈಗ ತಮಿಳಿನತ್ತ ಕೂಡ ಸಾಗಿರುವುದು ವಿಶೇಷ. ಕನ್ನಡದಲ್ಲಿ ಇತ್ತೀಚಿನ ಅವರ ಹಿಟ್ ಚಿತ್ರ ಅರಸು. ಚಿತ್ರದಲ್ಲಿ ಪುನೀತ್ ರಾಜಕುಮಾರ ಮತ್ತು ಮಲಯಾಳಂ ನಟಿ ಮೀರಾ ಜಾಸ್ಮಿನ್ ಅವರೊಂದಿಗೆ ಅಭಿನಯದಲ್ಲಿ ನೀಡಿದ ಪೈಪೋಟಿಗೆ ಜನರಿಂದ ಹಾಗೂ ಚಿತ್ರೋದ್ಯಮಿಗಳಿಂದ ಮೆಚ್ಚುಗೆ ಪಡೆದಿದೆ. ಅವರು ನಟಿಸಿದ ಸುಮಾರು 15 ಚಿತ್ರಗಳಲ್ಲಿ 12 ಚಿತ್ರಗಳು ಸೂಪರ್ ಹಿಟ್ ಅದರಲ್ಲೂ ಅಮೃತಧಾರೆ, ಎಕ್ಸ್‌ಕ್ಯೂಜ್ ಮಿ, ರಂಗ ಎಸ್ ಎಸ್ ಎಲ್ ಸಿ ಮರೆಯಲಾರದಂತವು.ನಾಗತಿಹಳ್ಳಿ ಚಂದ್ರಶೇಖರ ನಿರ್ದೇಶನದ ಅಮೃತಧಾರೆಯಲ್ಲಿನ ರಮ್ಯಾ ನಟನೆಗೆ ಬಾಲಿವುಡ್ ಬಾದ ಷಹಾ ಅಮಿತಾಬ್ ಬಚ್ಚನ್ ಕೂಡ ಬೆರಗಾಗಿದ್ದರು.2003 ರಿಂದ ತಮಿಳು ಚಿತ್ರರಂಗದತ್ತ ವಾಲಿರುವ ರಮ್ಯಾ ಈಗಾಗಲೇ ನಾಲ್ಕು ಚಿತ್ರಗಳಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ. ವೇಂಕಟೇಶ ನಿರ್ಧೇಶನದ ಕುಥುನಲ್ಲಿ ಸಿಲಾಂಬರಸನ್ ಜೋತೆಗೆ,ಗಿರಿಯಲ್ಲಿ ಅರ್ಜುನ್ ಅವರಿಗೆ ನಾಯಕಿಯಾಗಿ, ಹಾಗೂ ಗೌತಮ ಮೆನನ್ ನಿರ್ದೇಶನದ ವರನಮ್ ಆಯಿರಾಮ್‌ನಲ್ಲಿ ಸೂರ್ಯಾ ಅವರೊಂದಿಗೆ ಅಭಿನಯಿಸುತ್ತಿದ್ದಾರೆ. ಜನನ ನವ್ಹಂಬರ್ 29 1982.ಪ್ರಾಥಮಿಕ ಶಿಕ್ಷಣ ಸೆಂಟ್ ಹಿಲ್ಡಾ ಸ್ಕೂಲ್ ಊಟಿಕಾಲೇಜು ಸೆಂಟ್ ಜೋಸೆಫ್ ಕಾಲೇಜು ಬೆಂಗಳೂರು.