
ತಮ್ಮ ಹೆಸರನ್ನು ಬಳಸಿಕೊಂಡು ವೆಬ್ ಸೈಟು ನಿರ್ಮಿಸಿರುವ ನಕಲಿ ಅಭಿಮಾನಿಗಳ ವಿರುದ್ಧ, ನಟ ಕಮಲ್ ಹಾಸನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲವರು ಇಂಟರ್ ನೆಟ್ಟಿನಲ್ಲಿ ಕಿತಾಪತಿ ನಡೆಸಿದ್ದಾರೆ ಎಂದು ಕಮಲ್ , ದಟ್ಸ್ ಕನ್ನಡ ಡಾಟ್ ಕಾಂಗೆ ಫ್ಯಾಕ್ಸ್ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಆಪಾದಿಸಿದ್ದಾರೆ. ಅಂತರ್ಜಾಲ ತಾಣ ನಿರ್ಮಿಸುವುದಲ್ಲದೆ ತಮ್ಮನ್ನು ಅನಗತ್ಯ ವಿವಾದಕ್ಕೆ ಎಳೆದಿರುವ ಸ್ವಯಂ ಘೋಷಿತ ಅಭಿಮಾನಿಗಳಿಗೆ ಕಮಲ್ ಎಚ್ಚರಿಕೆ ಕೊಟ್ಟಿದ್ದಾರೆ. www.universalherokamal.com ಹೆಸರಿನಲ್ಲಿ ವೆಬ್ ತಾಣ ಕಟ್ಟಿಕೊಂಡು ಅದರ ಮೂಲಕ, ತಮ್ಮ ಹೆಸರಿನ ಟಿ ಶರ್ಟ್ ಮಾರಾಟ ಮಾಡುತ್ತಿದ್ದಾರೆ. ಇವೆಲ್ಲವೂ ನನ್ನ ಗಮನಕ್ಕೆ ತರದೆ ಮಾಡಿರುವ ಚೇಷ್ಟೆಗಳು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮಗೆ ಅನೇಕ ಅಭಿಮಾನಿಗಳಿರುವುದು ನಿಜ. ಆದರೆ ನಾನು ಎಂದೂ ಅವರನ್ನು ಅಭಿಮಾನಿ ಸಂಘದವರು ಎಂದು ಗುರುತಿಸಿಲ್ಲ. ಆ ಸಂಘಗಳೇನಿದ್ದರೂ ಸಮಾಜದ ಕ್ಷೇಮಾಭ್ಯುದಯ ಶಾಖೆಗಳಾಗಿ ಮಾತ್ರ ಕೆಲಸ ನಿರ್ವಹಿಸುತ್ತವೆ ಎಂದಿರುವ ಕಮಲ್,ನಕಲಿ ಅಭಿಮಾನಿಗಳು ತತ್ ಕ್ಷಣ ತಮ್ಮ ಹೆಸರು ದುರುಪಯೋಗ ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
No comments:
Post a Comment