Friday, October 12, 2007

ಜೋಧಾಅಕ್ಬರ್ ವೈಭವ







ಜೋಧಾ ಅಕ್ಬರ್ ಚಿತ್ರದ ಟ್ರೈಲರ್ ಕ್ಲಿಪ್‌ಗಳ ಪ್ರದರ್ಶನ ವ್ಯಾಖ್ಯಾನಿಸಲು ಅದ್ಭುತ ಎಂಬ ಪದ ಚಿಕ್ಕದಾಗಿ ಕಾಣುತ್ತದೆ. ದೀರ್ಘಕಾಲದವರೆಗೆ ತೆರೆಯ ಮೇಲೆ ಇಂತಹ ವೈಭವವನ್ನು ಕಾಣಲು ಸಾಧ್ಯವಾಗಿಲ್ಲ.
ಅತ್ಯಂತ ವರ್ಚಸ್ವಿ ಮೊಘಲ್ ದೊರೆ ಮತ್ತು ಅವರ ಕಡು ವೈರಿಗಳಾದ ರಜಪೂತ ರಾಜಕುಮಾರಿಯ ನಡುವೆ ಪ್ರೇಮ ವಿವಾಹ ಅಥವಾ ಮೈತ್ರಿ ವಿವಾಹವು ನಂಬಲಸಾಧ್ಯ ಘಟನೆಯಾಗಿದೆ. ಸುಮಾರು 500 ವರ್ಷಗಳ ಹಿಂದಿನ ಪ್ರೇಮ ವಿವಾಹದ ನೇಪಥ್ಯದಲ್ಲಿ ಭಾರತದ ರಾಜಕೀಯ ಒಳಸಂಚುಗಳ ಕಥೆಯನ್ನು ಜೋಧಾಅಕ್ಬರ್ ಹೊಂದಿದೆ.
ಜೋಧಾ ಬಲಶಾಲಿ ಮಹಿಳೆಯಾಗಿದ್ದು, ಕತ್ತಿವರಸೆಯಲ್ಲಿ ನಿಪುಣೆ. ಆದರೂ ಅವಳ ಅತೀಸೂಕ್ಷ್ಮ ಸ್ವಭಾವದಿಂದ ಯುವಕ ಅಕ್ಬರ್‌ನ ಚೆಲುವಿಗೆ ಮನಸೋತಳು. ಹಿಂದು-ಮುಸ್ಲಿಂ ಮಿಲನ ಅಶುಭವೆಂದು ಭಾವಿಸಿ ಅದಕ್ಕೆ ವ್ಯಕ್ತವಾದ ಭಾರೀ ವಿರೋಧ.
ಜೋಧಾ ಪಾತ್ರದಲ್ಲಿ ಐಶ್ವರ್ಯ ರೈ ಮತ್ತು ಅಕ್ಬರ್ ಪಾತ್ರದಲ್ಲಿ ರಿತಿಕ್ ರೋಷನ್ ಅಮೋಘ ಅಭಿನಯ.ಯುದ್ಧದ ಬೃಹತ್ ದೃಶ್ಯಗಳು ಕೆಲವು ಅತ್ಯುತ್ತಮ ಐತಿಹಾಸಿಕ ಚಿತ್ರಗಳಿಗೆ ಹೋಲಿಸಬಹುದಾಗಿದ್ದು, ಪ್ರತಿಯೊಬ್ಬರೂ ಕೆಚ್ಚೆದೆಯಿಂದ ಹೋರಾಡುವ ದೃಶ್ಯ.
ಕಿವಿಗಳಲ್ಲಿ ಮೊರೆಯುವ ಬಾಣಗಳ ಬಿರುಸು, ಗಾಳಿಯಲ್ಲಿ ಹಸಿ ರಕ್ತದ ವಾಸನೆ. ಸಿರಿವೈಭವದ ಸೆಟ್‌ಗಳು, ಕಣ್ಣುಗಳನ್ನು ಕೋರೈಸುವ ಆಭರಣಗಳು ಯಾವುದೇ ಹಾಲಿವುಡ್ ನಿರ್ಮಾಣವು ಹೆಮ್ಮೆ ಪಡುವಂತೆ ಮಾಡುತ್ತದೆ.

No comments: