ಕಳ್ಳನಾಗಿ ಚಾಣಕ್ಷತನದಿಂದ ಟೆನ್ನಿಸ್‌ಕೃಷ್ಣರೊಂದಿಗೆ ಸೇರಿ ವಸ್ತುಗಳನ್ನು ಅಪಹರಿಸುವ ಮದಕರಿ ಒಂದೆಡೆಯಾದರೆ ಅಂಥಾ ಕಳ್ಳರನ್ನು ಮಟ್ಟಹಾಕುವ ವೀರಮದಕರಿಯೊಬ್ಬನಿದ್ದಾನೆ. ಆತ ನಿಷ್ಠಾವಂತ ಪೊಲೀಸ್ ಅಧಿಕಾರಿ.
ದುಷ್ಟರನ್ನು ಸದೆಬಡೆಯುವಲ್ಲಿ ಸದಾ ಮುಂದಿರುವ ಮದಕರಿ ಹೇಯ ಕೃತ್ಯಗಳಲ್ಲಿ ತೊಡಗಿದ್ದ ಖಳನಟ ಗೋಪಿನಾಥ್‌ಭಟ್ ಅವರನ್ನು ಥಳಿಸುತ್ತಾರೆ. ಇಬ್ಬರ ನಡುವೆ ನಡೆಯುವ ಈ ಬೀಕರ ಕಾಳಗದ ಕೆಲ ತುಣುಕುಗಳನ್ನು ಚಿತ್ರದಲ್ಲಿ ವಿಶೇಷವಾಗಿ ತೋರಿಸಲಾಗಿದೆ ಎಂದು ನಿರ್ಮಾಪಕ ದಿನೇಶ್‌ಗಾಂಧಿ ತಿಳಿಸಿದ್ದಾರೆ. ೩೫೦ಕ್ಕೂ ಹೆಚ್ಚಿನ ಚಿತ್ರಗಳಿಗೆ ಸಾಹಸ ನಿರ್ದೇಶನ ನೀಡಿರುವ ಥ್ರಿಲ್ಲರ್‌ಮಂಜು ಈ ಸನ್ನಿವೇಶ ಅದ್ದೂರಿಯಾಗಿ ಮೂಡಿಬರುವಲ್ಲಿ ಅಪಾರ ಶ್ರಮವಹಿಸಿದ್ದಾರೆ.
ದಿನೇಶ್‌ಗಾಂಧಿ ನಿರ್ಮಿಸಿ, ಸುದೀಪ್ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ವಿಜೇಂದ್ರ ಪ್ರಸಾದ್ ಕತೆ, ರವಿರಾಜ್ ಸಂಭಾಷಣೆ, ಕೆಂಪರಾಜ್ ಸಂಕಲನ, ದಿನೇಶ್‌ಮಂಗಳೂರ್ ಕಲೆ, ಕೆ.ವಿ.ಮಂಜಯ್ಯ ನಿರ್ಮಾಣನಿರ್ವಹಣೆ, ಶ್ರೀವೆಂಕಟ್ ಅವರ ಛಾಯಾಗ್ರಹಣವಿರುವ ಚಿತ್ರದಲ್ಲಿ ಸುದೀಪ್, ರಾಗಿಣಿ, ಪವಿತ್ರ, ದಿನೇಶ್‌ಗಾಂಧಿ, ದೇವರಾಜ್, ಗೋಪಿನಾಥ್‌ಭಟ್, ಮನೋಜ್, ದೊಡ್ಡಣ್ಣ ಟೆನ್ನಿಸ್‌ಕೃಷ್ಣ ಅಭಿನಯಿಸಿದ್ದಾರೆ.
1 comment:
hello,i m a great fan of kicchasudeep............i liked all songs of veeramadhakari.........i wish a great victory to veeramadhakari& sudeep..............
Post a Comment