ಹೆಂಗಸರ ವಯಸ್ಸು, ಗಂಡಸರ ಸಂಬಳ ಕೇಳಬಾರದು ಎಂಬ ಗಾದೆಯೇ ಇರುವುದರಿಂದ ಪೂಜಾ ವಯಸ್ಸು ಇಲ್ಲಿ ಅಪ್ರಸ್ತುತ. ಪ್ರಸ್ತುತ ಪೂಜಾ 'ಗಾಂಧಿ'ನಗರದಲ್ಲಿ ಬ್ಯುಸಿಯಾಗಿರುವ ನಟಿ. ಜನುಮದ ಗೆಳತಿ, ಮಹರ್ಷಿ, ಅನು ಚಿತ್ರಗಳು ತೆರೆಕಾಣಬೇಕಾಗಿವೆ। ತಮಿಳಿನಲ್ಲಿ ಅರ್ಜುನ್ ಸರ್ಜಾ ಜತೆ ಒಂದು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಇಂದು ಅವರು ಬೆಂಗಳೂರಿನ ರಮಣಶ್ರೀ ಅಂಧರ ಶಾಲೆಯ ಮಕ್ಕಳ ಜೊತೆ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಕನ್ನಡಕ್ಕೆ ಬಂದು ಕನ್ನಡದವರೇ ಆದ ಬಹಳಷ್ಟು ನಟಿಯರು ಇದ್ದಾರೆ। ಅವರಲ್ಲಿ ಮುಖ್ಯವಾಗಿ ಲಕ್ಷ್ಮಿ, ಸರಿತಾ, ಮಾಧವಿ, ಗೀತಾ, ಸುಹಾಸಿನಿ, ಮಾಲಾಶ್ರೀ ಅವರ ಹೆಸರುಗಳನ್ನು ಪ್ರಸ್ತಾಪಿಸಬಹುದು. ಆದರೆ ಇತ್ತಿತ್ತಲಾಗಿ ಹಾಗೆ ಬಂದು ಹೀಗೆ ಹೋಗುವವರು ಹೆಚ್ಚಾಗುತ್ತಿದ್ದಾರೆ. ಆದರೆ ಪೂಜಾಗಾಂಧಿ ಮಾತ್ರ ಇದಕ್ಕೆ ಅಪವಾದ. ಕನ್ನಡ ಚಿತ್ರರಂಗಕ್ಕೆ ತಮ್ಮ ಪ್ರತಿಭೆ, ಸಾಧನೆಗಳನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ನಟಿ ಎನ್ನಬಹುದು. ಅವರು ಮುಂದೆಯೂ ಸದಭಿರುಚಿಯ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಾ ಅವರ ಬಾಳ ಪಯಣ ಹೀಗೇ ಸಾಗಲಿ ಎಂದು ದಟ್ಸ್ ಕನ್ನಡ ಸಿನಿ ತಂಡ ಹಾರೈಸುತ್ತದೆ.
(ಕರ್ಟೆಸೀ: ವ್ಯಾನ್ ಇಂಡಿಯಾ)
No comments:
Post a Comment