ಸಂಜಯ್ ಲೀಲಾ ಭನ್ಸಾಲಿಯವರ ಪ್ರೇಮ ಕಥಾನಕ "ಸಾವರಿಯಾ" ಮತ್ತು ಫರಾ ಖಾನ್ ಅವರ 70ರ ದಶಕದ ಸಿನಿಮಾ ಕ್ಷೇತ್ರಕ್ಕೆ ನಮನ ಸಲ್ಲಿಸುವ "ಓಂ ಶಾಂತಿ ಓಂ" ಅವುಗಳ ಬಿಡುಗಡೆಯ ಕದನಕ್ಕೆ ದೀಪಾವಳಿಯ ವೇದಿಕೆ ಸಜ್ಜಾಗುತ್ತಿರುವಂತೆಯೇ ನಟ ಶಾರೂಖ್ ಖಾನ್ ಅವರು ತಮ್ಮ ಹೊಸ ಚಿತ್ರಗಳ ಬಗ್ಗೆ ಬೇರೆಯೇ ಅಭಿಪ್ರಾಯ ಹೊಂದಿದ್ದಾರೆ. ಪ್ರತಿ ವರ್ಷವೂ ನಾನು ಸ್ಪರ್ಧಿಸಬೇಕಾಗುತ್ತಿರುವುದು ಬೇರಾವುದೇ ಚಿತ್ರಗಳ ಜೊತೆ ಅಲ್ಲ, ನನ್ನದೇ ಚಿತ್ರದ ಜೊತೆ ಎಂಬುದೇ ನನ್ನ ವೃತ್ತಿಯಲ್ಲಿನ ವಿಶೇಷ. ಈ ವರ್ಷದ ಅತಿದೊಡ್ಡ ಹಿಟ್ 'ಚಕ್ ದೇ ಇಂಡಿಯಾ', "ಓಂ ಶಾಂತಿ ಓಂ"ನಲ್ಲಿ ನನ್ನ ಕೆಲಸವೆಂದರೆ 'ಚಕ್ ದೇ ಇಂಡಿಯಾ'ವನ್ನು ಹಿಂದಿಕ್ಕುವುದು. ಹಿಂದಿಕ್ಕಲು ನನಗೆ ಬೇರಾವುದೇ ಚಿತ್ರ ಇಲ್ಲ. ನನ್ನ ಸ್ಪರ್ಧೆ ನನ್ನ ಜತೆಗೆಯೇ ಎಂದಿದ್ದಾರೆ ಬಾಲಿವುಡ್ ಸೂಪರ್‌ಸ್ಟಾರ್ ಶಾರೂಖ್. ಬಾಲಿವುಡ್‌ಗೆ ಪಾದಾರ್ಪಣೆ ಮಾಡಿರುವ ರೂಪದರ್ಶಿ ದೀಪಿಕಾ ಪಡುಕೋಣೆ ಜತೆಗೆ ನಟಿಸಿರುವ 'ಓಂ ಶಾಂತಿ ಓಂ' ಚಿತ್ರವು ಈ ದೀಪಾವಳಿಗೆ ಬಿಡುಗಡೆಯಾಗಲಿದ್ದು, ಸಂಜಯ್ ಲೀಲಾ ಭನ್ಸಾರಿಯವರ, ಭಾರೀ ಪ್ರಚಾರವಿರುವ 'ಸಾವರಿಯಾ' ಚಿತ್ರವೂ ಇದೇ ಸಂದರ್ಭ ತೆರೆ ಕಾಣಲಿದೆ. 'ಸಾವರಿಯಾ'ದಲ್ಲಿ ಋಷಿ ಕಪೂರ್ ಪುತ್ರ ರಣಬೀರ್ ಕಪೂರ್ ಮತ್ತು ಅನಿಲ್ ಕಪೂರ್ ಪುತ್ರಿ ಸೋನಂ ನಟಿಸಿದ್ದು, ಇವೆರಡೂ ಚಿತ್ರಗಳ ಮಧ್ಯೆ ಭಾರೀ ಪೈಪೋಟಿ ಏರ್ಪಡಲಿದೆ ಎಂದು ತಜ್ಞರು ಲೆಕ್ಕಾಚಾರ ಹಾಕಿದ್ದಾರೆ. ಸಾವರಿಯಾ ಮತ್ತು ಓಂ ಶಾಂತಿ ಓಂ ಒಂದೇ ದಿನ ತೆರೆ ಕಾಣುತ್ತಿರುವುದು ಎರಡೂ ಚಿತ್ರಗಳ ವ್ಯವಹಾರದ ಮೇಲೆ ಹೊಡೆತ ನೀಡುವುದಿಲ್ಲವೇ ಎಂದು ಕೇಳಿದಾಗ, ಹಾಗೇನೂ ಆಗದು ಎಂದುತ್ತರಿಸಿದ್ದಾರೆ ಶಾರೂಖ್. ಎರಡೂ ಚಿತ್ರಗಳನ್ನು ತೆರೆಯಲ್ಲಿ ಪ್ರದರ್ಶಿಸಲು ಸಾಕಷ್ಟು ಸಿನಿಮಾ ಮಂದಿರಗಳಿವೆ ಎಂದ ಶಾರೂಖ್, ಸಾವರಿಯಾ ಕೂಡ ಒಂದೇ ದಿನ ಬಿಡುಗಡೆಯಾಗುತ್ತಿರುವುದರಿಂದ ಸ್ಪರ್ಧೆ ಅನಿಸುತ್ತಿಲ್ಲವೇ ಎಂದು ಕೇಳಿದಾಗ, ಏನೂ ಸಮಸ್ಯೆಯಿಲ್ಲ, ಸಾವರಿಯಾದಿಂದ ಸ್ಪರ್ಧೆಯೂ ಇಲ್ಲ. ಯಾಕೆಂದರೆ ಅದರಲ್ಲಿರೋರೆಲ್ಲಾ ನನ್ನ ಮಿತ್ರರೇ ಎಂದು ಉತ್ತರಿಸಿದರು. ಎರಡೂ ಚಿತ್ರಗಳು ತಲಾ 30 ಕೋಟಿ ರೂ. ಬಜೆಟ್‌ನ ಚಿತ್ರಗಳಾಗಿದ್ದು, ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಎರಡೂ ಚಿತ್ರ ತಂಡಗಳು ಈಗಾಗಲೇ ಸಾಕಷ್ಟು ಕಸರತ್ತು ಆರಂಭಿಸಿವೆ.
Subscribe to:
Post Comments (Atom)
No comments:
Post a Comment