Monday, October 29, 2007

ಮದ್ಯ ಪ್ರಚಾರ ಮಾಡಿದ ಶಾರುಖ್ ಮೇಲೆ ಕೇಸು ದಾಖಲು


ಸಾರ್ವಜನಿಕವಾಗಿ ಸಿಗರೇಟ್ ಸೇದಿದ ಕಾರಣಕ್ಕೆ ಎನ್ ಜಿಒ ವೊಂದರಿಂದ ನೋಟಿಸ್ ಪಡೆದ ಬೆನ್ನಲ್ಲೇ ಬಾಲಿವುಡ್ ನ ಸರದಾರ ಶಾರುಖ್ ಖಾನ್ ಮತ್ತೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಮದ್ಯ ಪ್ರಚಾರದ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಶಾರುಖ್ , 'ಯಶಸ್ಸಿಗೆ ಮಾಸ್ಟರ್ ಸ್ಟ್ರೋಕ್ ವಿಸ್ಕಿ ಹಿರಿ' ಎಂದು ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿರುವುದನ್ನು ಖಂಡಿಸಿ ವಿನೋದ್ ಕುಮಾರ್ ಎಂಬುವವರು ದಾವೆ ಹೂಡಿದ್ದಾರೆ. ಸಿಗರೇಟ್ ವಿವಾದದ ಹೊಗೆ ಕರಗುವ ಮುನ್ನ ಮಧ್ಯಪ್ರದೇಶದ ಜುಡಿಷಿಯಲ್ ನ್ಯಾಯಾಲಯದ ಕೇಸಿನ ಮತ್ತು ಶಾರುಖ್ ಖಾನ್ ತಲೆಗೆ ಏರಲಿದೆ. ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗಲಿರುವ ದೀಪಕಾ ಪಡುಕೋಣೆ ಜತೆಗಿನ 'ಓಂ ಶಾಂತಿ ಓಂ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಕಿಂಗ್ ಖಾನ್ ಗೆ ಈ ತರಲೆಗಳು ಸ್ವಲ್ಪ ಕಿರಿಕಿರಿ ತಂದಿದೆ.

No comments: