ತೆರೆದೆದೆಯ ಪ್ರದರ್ಶನದಿಂದ ಒಂದು ಹಂತ ಮುಂದೆ ಹೋಗಿರುವ ಸಲ್ಲು ಮಿಯಾ, ಮುಂದಿನ ತಮ್ಮ ಚಿತ್ರದಲ್ಲಿ ಶರ್ಟ್ ಜತೆ ಪ್ಯಾಂಟ್ ಕೂಡ ತೆಗೆದು ನಟಿಸುವ ಸಾಧ್ಯತೆಯಿದೆ. ಟಾರ್ಜನ್ ಹೆಸರಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ ಸಲ್ಮಾನ್. ಚಿತ್ರೀಕರಣ ಪೂರ್ತಿ ಕಾಡಿನಲ್ಲಿ ನಡೆಯಲಿದೆ ಎಂದು ಕೇಳಿ ಸಲ್ಮಾನ್ ಖುಷಿಯಾಗಿದ್ದಾನೆ. ನನ್ನ ಅಭಿಮಾನಿಗಳಲ್ಲಿ ಹೆಚ್ಚು ಜನ ಯುವಕರು ಹಾಗೂ ಮಕ್ಕಳು ಇರುವುದರಿಂದ, ಅವರಿಗೆ ನಾನು ಈ ಚಿತ್ರವನ್ನು ಕಾಣಿಕೆಯಾಗಿ ನೀಡುತ್ತೇನೆ. ಈ ಚಿತ್ರದಲ್ಲಿ ವಿಶೇಷವಾದ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇದು ತೇರೆ ನಾಮ್ ಹೇರ್ ಸ್ಟೈಲ್ ನಂತೆ ಜನಪ್ರಿಯ ಆಗುವ ನಂಬಿಕೆ ಇದೆ ಎಂಬುದು ಸಲ್ಮಾನ್ ಉವಾಚ. ಅಲ್ಲಪ್ಪ ಸಲ್ಮಾನ್, ಮೊದಲೇ ನಿಂಗೂ ಕಾಡಿಗೂ ಆಗಿಬರೋಲ್ಲ. ಮತ್ತೆ ಕಾಡಿನಲ್ಲಿ ಉಳಿಯೋಕ್ಕೆ ತಯಾರಿದ್ದೀಯಾ ಎಂದರೆ ಮೆಚ್ಚಲೇ ಬೇಕು. ಈ ಸಲ ಕೃಷ್ಣ ಮೃಗಗಳ ತಂಟೆಗೆ ಹೋಗಬೇಡ ಎನ್ನುತ್ತಿದ್ದಾರೆ ಅಭಿಮಾನಿಗಳು. ಸುಮಾರು 20 ವರ್ಷಗಳ ಹಿಂದೆ ಹೇಮಂತ್ ಬಿರ್ಜೆ ನಟಿಸಿದ್ದ ಟಾರ್ಜನ್ ಚಿತ್ರ ಅತ್ಯಂತ ಜನಪ್ರಿಯವಾಗಿತ್ತು. ವಿಶೇಷವಾಗಿ ಮಕ್ಕಳಿಗೆ ಮುದನೀಡಿತ್ತು. ಈಗ ಮಕ್ಕಳಿಗಾಗಿ 'ತಾರೆ ಜಮೀನ್ ಪರ್' ಎಂಬ ಚಿತ್ರ ಮಾಡುತ್ತಿರುವ ಅಮೀರ್ ಖಾನ್ ಪ್ರಭಾವದಿಂದ, ಸಲ್ಮಾನ್ ಕೂಡ ಟಾರ್ಜನ್ ಚಿತ್ರವನ್ನು ಒಪ್ಪಿರುವ ಸಾಧ್ಯತೆಯಿದೆ.
Subscribe to:
Post Comments (Atom)
No comments:
Post a Comment