ಇದು ಸಿನಿಮಾ ಕತೆಯಲ್ಲ.. ಸಿನಿಮಾ ಆಗಬಲ್ಲ ಎಲ್ಲಾ ಅರ್ಹತೆಗಳಿರುವ ಕತೆ!
ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ ಅವರ ಮುದ್ದಿನ ಕುವರಿ ಶ್ರೀಜಾ, ಅಪ್ಪ ಅಮ್ಮನ ಮಾತು ಮೀರಿ ಅಂತರ್ಜಾತಿ ವಿವಾಹಕ್ಕೆ ಜೈ ಎಂದಿದ್ದಾರೆ. ಅಪ್ಪಅಮ್ಮ ಬೆಳಗಿನ ನಿದ್ದೆಯಲ್ಲಿದ್ದಾಗಲೇ ಎದ್ದ ಶ್ರೀಜಾ(19), ಮನೆಬಿಟ್ಟು ಪರಾರಿ.. ತನ್ನ ಪ್ರಿಯಕರನ ಜೊತೆ ಹಸೆಮಣೆ ಏರುವ ಸಡಗರ ಆಕೆಗೆ.. ಮಗಳು ಕೈಕೊಟ್ಟಳಲ್ಲ ಎನ್ನುವ ನೋವು ಹೆತ್ತವರಿಗೆ.ಇಂಜಿನಿಯರ್ ಆಗಿರುವ ಶಿರೀಷ್(22) ಅವರನ್ನು ನಗರದ ಆರ್ಯ ಸಮಾಜ ಆಶ್ರಮದಲ್ಲಿ ಬುಧವಾರ ವರಿಸಿದ ಶ್ರೀಜಾ, ಜಿರಂಜೀವಿ ಅವರ ಕೊನೆ ಮಗಳು. ಸಿಎ ಓದುತ್ತಿದ್ದ ಶ್ರೀಜಾ ಮತ್ತು ಶಿರೀಷ್ ಅವರದು ನಾಲ್ಕು ವರ್ಷಗಳ ಪ್ರೇಮ. ಪ್ರೇಮಕ್ಕೆ ಹತ್ತಾರು ಅಡ್ಡಿಗಳು. ಪ್ರೀತಿ ಬಿಡಲು ಒಲ್ಲೆ ಎಂದಿದ್ದ ಶ್ರೀಜಾಗೆ, ಗೃಹಬಂಧನ ಸಹಾ ಪ್ರಾಪ್ತಿಯಾಗಿತ್ತು. ಹೀಗಾಗಿ ಹೆತ್ತವರ ಕಣ್ತಪ್ಪಿಸಿ, ಶ್ರೀಜಾ ಮದುವೆಯಾದಳು.ಚಿರಂಜೀವಿ ಮೊದಲನೇ ಪುತ್ರಿ ವಿವಾಹ ಕಳೆದ ವರ್ಷ ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಎರಡನೇ ಪುತ್ರ ರಾಮ್ ಚರಣ್, ಇತ್ತೀಚೆಗಷ್ಟೇ 'ಚಿರುತ' ಚಿತ್ರದ ಮುಖಾಂತರ ತೆಲುಗು ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ.
No comments:
Post a Comment