ಸಂಜಯ್ ಲೀಲಾ ಭನ್ಸಾಲಿಯವರ ಪ್ರೇಮ ಕಥಾನಕ "ಸಾವರಿಯಾ" ಮತ್ತು ಫರಾ ಖಾನ್ ಅವರ 70ರ ದಶಕದ ಸಿನಿಮಾ ಕ್ಷೇತ್ರಕ್ಕೆ ನಮನ ಸಲ್ಲಿಸುವ "ಓಂ ಶಾಂತಿ ಓಂ" ಅವುಗಳ ಬಿಡುಗಡೆಯ ಕದನಕ್ಕೆ ದೀಪಾವಳಿಯ ವೇದಿಕೆ ಸಜ್ಜಾಗುತ್ತಿರುವಂತೆಯೇ ನಟ ಶಾರೂಖ್ ಖಾನ್ ಅವರು ತಮ್ಮ ಹೊಸ ಚಿತ್ರಗಳ ಬಗ್ಗೆ ಬೇರೆಯೇ ಅಭಿಪ್ರಾಯ ಹೊಂದಿದ್ದಾರೆ. ಪ್ರತಿ ವರ್ಷವೂ ನಾನು ಸ್ಪರ್ಧಿಸಬೇಕಾಗುತ್ತಿರುವುದು ಬೇರಾವುದೇ ಚಿತ್ರಗಳ ಜೊತೆ ಅಲ್ಲ, ನನ್ನದೇ ಚಿತ್ರದ ಜೊತೆ ಎಂಬುದೇ ನನ್ನ ವೃತ್ತಿಯಲ್ಲಿನ ವಿಶೇಷ. ಈ ವರ್ಷದ ಅತಿದೊಡ್ಡ ಹಿಟ್ 'ಚಕ್ ದೇ ಇಂಡಿಯಾ', "ಓಂ ಶಾಂತಿ ಓಂ"ನಲ್ಲಿ ನನ್ನ ಕೆಲಸವೆಂದರೆ 'ಚಕ್ ದೇ ಇಂಡಿಯಾ'ವನ್ನು ಹಿಂದಿಕ್ಕುವುದು. ಹಿಂದಿಕ್ಕಲು ನನಗೆ ಬೇರಾವುದೇ ಚಿತ್ರ ಇಲ್ಲ. ನನ್ನ ಸ್ಪರ್ಧೆ ನನ್ನ ಜತೆಗೆಯೇ ಎಂದಿದ್ದಾರೆ ಬಾಲಿವುಡ್ ಸೂಪರ್‌ಸ್ಟಾರ್ ಶಾರೂಖ್. ಬಾಲಿವುಡ್‌ಗೆ ಪಾದಾರ್ಪಣೆ ಮಾಡಿರುವ ರೂಪದರ್ಶಿ ದೀಪಿಕಾ ಪಡುಕೋಣೆ ಜತೆಗೆ ನಟಿಸಿರುವ 'ಓಂ ಶಾಂತಿ ಓಂ' ಚಿತ್ರವು ಈ ದೀಪಾವಳಿಗೆ ಬಿಡುಗಡೆಯಾಗಲಿದ್ದು, ಸಂಜಯ್ ಲೀಲಾ ಭನ್ಸಾರಿಯವರ, ಭಾರೀ ಪ್ರಚಾರವಿರುವ 'ಸಾವರಿಯಾ' ಚಿತ್ರವೂ ಇದೇ ಸಂದರ್ಭ ತೆರೆ ಕಾಣಲಿದೆ. 'ಸಾವರಿಯಾ'ದಲ್ಲಿ ಋಷಿ ಕಪೂರ್ ಪುತ್ರ ರಣಬೀರ್ ಕಪೂರ್ ಮತ್ತು ಅನಿಲ್ ಕಪೂರ್ ಪುತ್ರಿ ಸೋನಂ ನಟಿಸಿದ್ದು, ಇವೆರಡೂ ಚಿತ್ರಗಳ ಮಧ್ಯೆ ಭಾರೀ ಪೈಪೋಟಿ ಏರ್ಪಡಲಿದೆ ಎಂದು ತಜ್ಞರು ಲೆಕ್ಕಾಚಾರ ಹಾಕಿದ್ದಾರೆ. ಸಾವರಿಯಾ ಮತ್ತು ಓಂ ಶಾಂತಿ ಓಂ ಒಂದೇ ದಿನ ತೆರೆ ಕಾಣುತ್ತಿರುವುದು ಎರಡೂ ಚಿತ್ರಗಳ ವ್ಯವಹಾರದ ಮೇಲೆ ಹೊಡೆತ ನೀಡುವುದಿಲ್ಲವೇ ಎಂದು ಕೇಳಿದಾಗ, ಹಾಗೇನೂ ಆಗದು ಎಂದುತ್ತರಿಸಿದ್ದಾರೆ ಶಾರೂಖ್. ಎರಡೂ ಚಿತ್ರಗಳನ್ನು ತೆರೆಯಲ್ಲಿ ಪ್ರದರ್ಶಿಸಲು ಸಾಕಷ್ಟು ಸಿನಿಮಾ ಮಂದಿರಗಳಿವೆ ಎಂದ ಶಾರೂಖ್, ಸಾವರಿಯಾ ಕೂಡ ಒಂದೇ ದಿನ ಬಿಡುಗಡೆಯಾಗುತ್ತಿರುವುದರಿಂದ ಸ್ಪರ್ಧೆ ಅನಿಸುತ್ತಿಲ್ಲವೇ ಎಂದು ಕೇಳಿದಾಗ, ಏನೂ ಸಮಸ್ಯೆಯಿಲ್ಲ, ಸಾವರಿಯಾದಿಂದ ಸ್ಪರ್ಧೆಯೂ ಇಲ್ಲ. ಯಾಕೆಂದರೆ ಅದರಲ್ಲಿರೋರೆಲ್ಲಾ ನನ್ನ ಮಿತ್ರರೇ ಎಂದು ಉತ್ತರಿಸಿದರು. ಎರಡೂ ಚಿತ್ರಗಳು ತಲಾ 30 ಕೋಟಿ ರೂ. ಬಜೆಟ್‌ನ ಚಿತ್ರಗಳಾಗಿದ್ದು, ಪ್ರೇಕ್ಷಕರನ್ನು ಸೆಳೆದುಕೊಳ್ಳಲು ಎರಡೂ ಚಿತ್ರ ತಂಡಗಳು ಈಗಾಗಲೇ ಸಾಕಷ್ಟು ಕಸರತ್ತು ಆರಂಭಿಸಿವೆ.
Tuesday, October 30, 2007
ಮಿಸ್ ಬಿಕಿನಿ ಆರ್ತಿ ಈಗ ಬಾಲಿವುಡ್ ಮಂದಿಯ ರಸಿಕರ ರಾಣಿ
2007ರಲ್ಲಿ 'ಮಿಸ್ ಬಿಕಿನಿ'ಯಾಗಿ ಆಯ್ಕೆಯಾಗಿದ್ದ ನಟಿ ಆರ್ತಿ ಛಾಬ್ರಿಯಾ, ಈಗ ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾಳೆ. ಇದು ಇನ್ನೊಂದು ಖ್ಯಾತಿಯೋ, ಕ್ಯಾತೆಯೋ, ಕುಖ್ಯಾತಿಯೋ ಆ ವಿಷಯ ಇಲ್ಲಿ ಅಮುಖ್ಯ. ಬಾಲಿವುಡ್‌ನ ರಸಿಕರ ರಾಣಿ ಎಂಬ ಖ್ಯಾತಿಯಿಂದ ಆರ್ತಿ, ಉಬ್ಬಿ ಹೋಗಿದ್ದಾಳೆ. ದೂರವಾಣಿ ಮೂಲಕ ಸಂಗ್ರಹಿಸಲಾದ ಜನಾಭಿಪ್ರಾಯದಲ್ಲಿ, ಇತರ ತಾರೆಯರನ್ನು ಹಿಂದಿಕ್ಕಿ ಈ ಪಟ್ಟ ಧರಿಸಿದ್ದಾಳೆ ಆರ್ತಿ. ಐದು ದಿನಗಳ ಆನ್‌ಲೈನ್ ಮತದಾನದಲ್ಲಿ ಐದು ಲಕ್ಷ ಓಟುಗಳು ಈಕೆಯ ಮಡಿಲಿಗೆ ಬಿದ್ದಿವೆ. ಮಲ್ಲಿಕಾ ಶೆರಾವತ್, ಬಿಪಾಶ ಬಸು, ಪ್ರಿಯಾಂಕ ಚೋಪ್ರ ಈ ಎಲ್ಲಾ ಗಯ್ಯಾಳಿಗಳೂ ಸ್ಪರ್ಧೆಯಲ್ಲಿ ಇದ್ದರಾದರೂ. ರಸಿಕರ ರಾಣಿಯ ಪಟ್ಟ ಆರ್ತಿ ಛಾಬ್ರಿಯಾ ಪಾಲಾಗಿದೆ. ಸೆಲೀನಾ ಜೈಟ್ಲೆಗೆ ಕೇವಲ ಬೆರಳೆಣಿಕೆಯಷ್ಟು ಓಟುಗಳು ಮಾತ್ರ ಬಿದ್ದು ಠೇವಣಿ ಕಳೆದುಕೊಂಡಿದ್ದಾಳೆ. ಆನ್‌ಲೈನಲ್ಲಿ 500ಕ್ಕೂ ಅಧಿಕ ಸಂದರ್ಶನಗಳನ್ನು ಮಾಡಿ, ಅಂತರ್ಜಾಲದಲ್ಲಿ ಜನಾಭಿಪ್ರಾಯ ಸಂಗ್ರಹಿಸಿ ತಾಳೆ ಮಾಡಿ ನೋಡಿದಾಗ ಆರ್ತಿ ಛಾಬ್ರಿಯ ಎಲ್ಲರಿಗಿಂತ ಮುಂದಿದ್ದಳು. ಈಕೆ ಪ್ರತಿಸ್ಪರ್ಧಿಗಳನ್ನು ಮೈಲುಗಟ್ಟಲೆ ಹಿಂದಿಕ್ಕಿ ಮುನ್ನುಗ್ಗಿದ್ದಾಳೆ. ಹಿಂದಿ, ತಮಿಳು, ತೆಲುಗು ಮಾತ್ರವಲ್ಲದೇ ಕನ್ನಡದಲ್ಲೂ ಆರ್ತಿ ಛಾಬ್ರಿಯಾ ಕಾಲಿಟ್ಟಿದ್ದಾಳೆ. ರವಿಚಂದ್ರನ್ ಮತ್ತು ಶಿವರಾಜ್ ಕುಮಾರ್ ಚಿತ್ರಗಳಲ್ಲಿ(ಆಹಂ ಪ್ರೇಮಾಸ್ಮಿ ಮತ್ತು ಸಂತ) ಆರ್ತಿ ಮಿಂಚಿದ್ದಾಳೆ.
ಯೂಟ್ಯೂಬ್ ಪ್ರತಿಸ್ಪರ್ಧಿ ವೆಬ್ ಸೈಟ್ "ಹುಲು ಡಾಟ್ ಕಾಮ್" ಶುರು
ಲಾಸ್ ಏಂಜಲಿಸ್: ಗೂಗಲ್ ಕಂಪನಿಯ ಜನಪ್ರಿಯ ಯುಟ್ಯೂಬ್ ಗೆ ಸೆಡ್ಡು ಹೊಡೆಯಲು ಇನ್ನೊಂದು ಕಂಪನಿ ಸಿದ್ಧವಾಗಿದೆ. ಮನರಂಜಿಸುವ ವಿಡಿಯೋ ಚಿತ್ರ ಸಾಮಗ್ರಿಗಳ ಪ್ರಕಟಣೆಗೊಸ್ಕರ ತನ್ನದೇ ಆದ ವೆಬ್ ತಾಣವನ್ನು ಆರಂಭಿಸಿ ಗೂಗಲ್ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು, ಎನ್ಬಿಸಿ ಮತ್ತು ಫಾಕ್ಸ್ ಟೆಲಿವಿಷನ್ ವಾಹಿನಿಗಳು ಜಂಟಿಯಾಗಿ ಪ್ಲಾನ್ ಮಾಡಿವೆ. ಮನರಂಜನೆಯ ಸರಕುಗಳನ್ನು ಪೂರೈಸುವ ಜಗತ್ತಿನ ವಿವಿಧ ಕಂಪನಿಗಳಿಂದ ಸಿನಿಮಾ, ಧಾರಾವಾಹಿ ಮತ್ತಿತರ ಸರಕುಗಳನ್ನು ಪಡೆದು ತನ್ನ ವೆಬ್ ಜಾಲದ ಮುಖಾಂತರ ಜನಪ್ರಿಯಗೊಳಿಸಲು ಈ ಕಂಪನಿಗಳು ಯೋಜನೆ ಹಾಕಿವೆ. ಪೈಪೋಟಿ ಒಡ್ಡುವುದು ಎಂದರೆ ಹೀಗೆ ! ಹೊಸ ಜಾಲ ತಾಣದ ಹೆಸರು http://www.hulu.com/. ಅಕ್ಟೋಬರ್ 29ರ ಸೋಮವಾರ ಹೊಸ ಸೈಟಿನ ಪ್ರಯೋಗಾರ್ಥ ಪ್ರಸಾರ ಆರಂಭವಾಗುತ್ತದೆ. ಬರಲಿರುವ ಮೂರ್ನಾಲ್ಕು ತಿಂಗಳಲ್ಲಿ ಮನರಂಜನೆಯ ಸರಕು ಸಮಗ್ರವಾಗಿ ಪೂರೈಸಲಾಗುತ್ತದೆ ಎಂದು ಕಂಪನಿಯ ವಕ್ತಾರರು ಹೇಳಿದ್ದಾರೆ. ಈ ಸೈಟನ್ನು ಜನರಲ್ ಇಲೆಕ್ಟ್ರಿಕ್ ಕಂಪನಿಯ ಅಂಗಸಂಸ್ಥೆ ಎನ್ ಬಿ ಸಿ ಯೂನಿವರ್ಸ ಲ್ ಮತ್ತು ನ್ಯೂಸ್ ಕಾರ್ಪೋರೇಷನ್ ಕಂಪನಿಗಳು ಸಂಯುಕ್ತವಾಗಿ ನಿರ್ಮಿಸಿವೆ. ಈ ಜಾಲದಲ್ಲಿ ಚಲನಚಿತ್ರಗಳನ್ನು ಪೂರ್ತಿಯಾಗಿ ನೋಡಬಹುದು. ಜೊತೆಗೆ ಟೆಲಿ ಧಾರಾವಾಹಿಗಳು ಮತ್ತು ಜಾಹಿರಾತುಗಳು ಇದ್ದೇ ಇರುತ್ತವೆ.
Monday, October 29, 2007
ಮದ್ಯ ಪ್ರಚಾರ ಮಾಡಿದ ಶಾರುಖ್ ಮೇಲೆ ಕೇಸು ದಾಖಲು
ಸಾರ್ವಜನಿಕವಾಗಿ ಸಿಗರೇಟ್ ಸೇದಿದ ಕಾರಣಕ್ಕೆ ಎನ್ ಜಿಒ ವೊಂದರಿಂದ ನೋಟಿಸ್ ಪಡೆದ ಬೆನ್ನಲ್ಲೇ ಬಾಲಿವುಡ್ ನ ಸರದಾರ ಶಾರುಖ್ ಖಾನ್ ಮತ್ತೊಂದು ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ. ಮದ್ಯ ಪ್ರಚಾರದ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಶಾರುಖ್ , 'ಯಶಸ್ಸಿಗೆ ಮಾಸ್ಟರ್ ಸ್ಟ್ರೋಕ್ ವಿಸ್ಕಿ ಹಿರಿ' ಎಂದು ಪ್ರಚೋದನಾತ್ಮಕ ಹೇಳಿಕೆ ನೀಡುತ್ತಿರುವುದನ್ನು ಖಂಡಿಸಿ ವಿನೋದ್ ಕುಮಾರ್ ಎಂಬುವವರು ದಾವೆ ಹೂಡಿದ್ದಾರೆ. ಸಿಗರೇಟ್ ವಿವಾದದ ಹೊಗೆ ಕರಗುವ ಮುನ್ನ ಮಧ್ಯಪ್ರದೇಶದ ಜುಡಿಷಿಯಲ್ ನ್ಯಾಯಾಲಯದ ಕೇಸಿನ ಮತ್ತು ಶಾರುಖ್ ಖಾನ್ ತಲೆಗೆ ಏರಲಿದೆ. ದೀಪಾವಳಿ ಸಮಯದಲ್ಲಿ ಬಿಡುಗಡೆಯಾಗಲಿರುವ ದೀಪಕಾ ಪಡುಕೋಣೆ ಜತೆಗಿನ 'ಓಂ ಶಾಂತಿ ಓಂ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿರುವ ಕಿಂಗ್ ಖಾನ್ ಗೆ ಈ ತರಲೆಗಳು ಸ್ವಲ್ಪ ಕಿರಿಕಿರಿ ತಂದಿದೆ.
ಓಂ ಶಾಂತಿ, ಸವಾರಿಯ ನಡುವೆ ಕದನ
ಕ್ಷಣಗಣನೆ ಆರಂಭವಾಗಿದೆ. ಒಂದು ಕಡೆಯಲ್ಲಿ ಹಿಂದಿ ಚಿತ್ರರಂಗದ ದೊಡ್ಡ ತಾರೆ ಶಾರೂಕ್ ಖಾನ್. ಇನ್ನೊಂದು ದಿಕ್ಕಿನಲ್ಲಿ ಹಿಂದಿ ಸಿನೆಮಾದ ಮಹಾನ್ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಈ ವರ್ಷದ ದಿವಾಳಿಯಲ್ಲಿ ಇವರಿಬ್ಬರ ನಡುವೆ ಕದನವನ್ನು ಉದ್ಯಮದ ಹೊರಗೆ ಮತ್ತು ಒಳಗೆ ಕುತೂಹಲದಿಂದ ಜನರು ಗಮನಿಸುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಅನೇಕ ದಿವಾಳಿ ಬಿಡುಗಡೆಯ ಚಿತ್ರಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದಿವಾಳಿ ವಿಶೇಷ ಸಂದರ್ಭವಾಗಿದ್ದು, ಜನರು ಮನರಂಜನೆಗೆ, ಹಣ ಖರ್ಚು ಮಾಡಲು ಮತ್ತು ಮೋಜಿನಕೂಟಗಳಲ್ಲಿ ಕಳೆಯಲು ಆಶಿಸುತ್ತಾರೆ.ಓಂ ಶಾಂತಿ ಓಂ ಮತ್ತು ಸವಾರಿಯ ಚಿತ್ರಗಳು ದಿವಾಳಿ ಸಂದರ್ಭದಲ್ಲಿ ತಮ್ಮ ಅಸ್ತಿತ್ವವನ್ನು ಸುಲಭವಾಗಿ ಪಡೆಯಬಹುದು. ದಿವಾಳಿ ಹಬ್ಬದ ಸಂದರ್ಭದಲ್ಲಿ ಓಂ ಶಾಂತಿ ಓಂ ಮತ್ತು ಸವಾರಿಯ ಚಿತ್ರಗಳು ಚಿತ್ರೋದ್ಯಮಕ್ಕೆ ಕೋಟ್ಯಂತರ ರೂ. ಗಳಿಸಿಕೊಡಲಿ ಮತ್ತು ಬೆಳಕಿನ ಹಬ್ಬ ನವೆಂಬರ್‌ನಲ್ಲಿ ಚಿತ್ರೋದ್ಯಮವನ್ನು ಇನ್ನಷ್ಟು ಪ್ರಕಾಶಮಾನ ಮಾಡಲೆಂದು ಆಶಿಸೋಣ.
Saturday, October 27, 2007
ಅವಸರ ತೋರದ ಬೆಂಗಳೂರು ಹುಡುಗಿ ಶರ್ಮಿಳಾ ಮಾಂಡ್ರೆ!
ಶರ್ಮಿಳಾ ಮಾಂಡ್ರೆ ನಿಧಾನವಾಗಿ, ಎಚ್ಚರಿಕೆಯಿಂದ ಒಂದೊಂದೇ ಹೆಜ್ಜೆ ಇಡುತ್ತಿದ್ದಾರೆ. ಅವರಿಗೆ ಅವಸರವಿದ್ದಂತಿಲ್ಲ. ಪಾತ್ರಗಳ ಆಯ್ಕೆಯಲ್ಲಿ ಅವರು ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದು ಅವರ ಮಾತುಗಳಲ್ಲಿ ವ್ಯಕ್ತವಾಗಿದೆ.
ವರ್ಷಕ್ಕೆ 10 ಅಥವಾ 15ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಠ ನನ್ನಲ್ಲಿಲ್ಲ. ವೈವಿಧ್ಯಮಯ ಪಾತ್ರಗಳನ್ನಷ್ಟೇ ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ಗ್ಲಾಮರ್ ಗರ್ಲ್ ಆಗಿ ನನ್ನ ಮೊದಲ ಚಿತ್ರ 'ಸಜನಿ'ಯಲ್ಲಿ ಮಿಂಚಿದ್ದಾಯಿತು. ಈಗ ಹಳ್ಳಿ ಹುಡುಗಿಯಾಗಿ 'ಕೃಷ್ಣ'ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮುಂದಿನ ಚಿತ್ರ ಯಾವುದು ಎಂಬುದು ನನಗೆ ಗೊತ್ತಿಲ್ಲ. ಸದ್ಯಕ್ಕೆ ಒಳ್ಳೆ ಪಾತ್ರಕ್ಕಾಗಿ ನಾನು ಕಾಯುತ್ತಿದ್ದೇನೆ ಎನ್ನುತ್ತಾರೆ ಶರ್ಮಿಳಾ. ಈ ಹುಡುಗಿಯ ಎರಡನೇ ಸಿನಿಮಾ 'ಕೃಷ್ಣ'ಗೆ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಗಣೇಶ್ ಮತ್ತು ಪೂಜಾ ಗಾಂಧಿ ಮಧ್ಯೆಯೂ ಶರ್ಮಿಳಾ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.ತಮ್ಮ ಪಾತ್ರದ ಬಗ್ಗೆ ಅವರು ನಗುತ್ತಾ ಹೇಳಿದ್ದು ಹೀಗೆ; 'ಹಳ್ಳಿ ಹುಡುಗಿಯಾಗಿ ನಾನು ಕಾಣಿಸಿಕೊಳ್ಳಲು ಸ್ವಲ್ಪ ಕಷ್ಟವಾಯಿತು. ನನಗೆ ಲಂಗ ದಾವಣಿ ಹಾಕಿಕೊಳ್ಳುವುದು ಹೇಗೆ ಎಂಬುದೇ ಗೊತ್ತಿರಲಿಲ್ಲ..' ನಾನು ಕನ್ನಡ ಚಿತ್ರದ ಮುಖಾಂತರ ಬಣ್ಣದ ಲೋಕಕ್ಕೆ ಕಾಲಿಟ್ಟೆ. ನಾನು ಬೆಂಗಳೂರು ಹುಡುಗಿಯಾಗಿರುವುದೇ ಇದಕ್ಕೆ ಕಾರಣ. ಹಾಗೆಂದು ಬೇರೆ ಭಾಷೆಯಲ್ಲಿ ಅಭಿನಯಿಸಲು ಇಷ್ಟವಿಲ್ಲ ಎಂದೇನಿಲ್ಲ. ತಮಿಳಿನಲ್ಲಿ ಭರತ್ ಜೊತೆ ಒಂದು ಚಿತ್ರ ಮತ್ತು ಭಾಗ್ಯರಾಜ್ ಪುತ್ರನ ಜೊತೆ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದೇನೆ ಎನ್ನುವ ಶರ್ಮಿಳಾಗೆ, ನಂ.1,ನಂ.2 ಎಂಬ ಗೇಮ್ ನಲ್ಲಿ ಆಸಕ್ತಿ ಇಲ್ಲವಂತೆ. 'ನಾನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಕೆಲಸ ಮಾಡ್ತೇನೆ. ನನ್ನ ಅಭಿಮಾನಿಗಳು ಇಷ್ಟಪಡುತ್ತಾರೆ'ಎನ್ನುವ ಶರ್ಮಿಳಾ ಕಣ್ಣಲ್ಲಿ ಬಣ್ಣದ ಕನಸುಗಳಿವೆ. ಆದರೆ ಆತುರವಿಲ್ಲ. ಶರ್ಮಿಳಾ ಮುಂದಿನ ಚಿತ್ರ 'ಈ ಬಂಧನ'. ಆದಿತ್ಯನಿಗೆ ನಾಯಕಿಯಾಗಿ ಈಕೆ ಅಭಿನಯಿಸಿದ್ದಾರೆ. ವಿಷ್ಣುವರ್ಧನ್ ಮತ್ತು ಜಯಪ್ರದಾ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದ ನಿರ್ದೇಶಕರು ವಿಜಯಲಕ್ಷ್ಮಿ ಸಿಂಗ್ . ಪತಿ ದೇವರು ಜೈಜಗದೀಶ್ 'ಮದನ' ನಿರ್ದೇಶಿಸಿ ಸುಸ್ತಾಗಿ ಕುಳಿತಾಗ, ವಿಜಯಲಕ್ಷ್ಮೀ ಆರಂಭಿಸಿದ್ದು;'ಈ ಬಂಧನ'.
ವರ್ಷಕ್ಕೆ 10 ಅಥವಾ 15ಚಿತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಹಠ ನನ್ನಲ್ಲಿಲ್ಲ. ವೈವಿಧ್ಯಮಯ ಪಾತ್ರಗಳನ್ನಷ್ಟೇ ನಾನು ಆಯ್ಕೆ ಮಾಡಿಕೊಳ್ಳುತ್ತೇನೆ. ಗ್ಲಾಮರ್ ಗರ್ಲ್ ಆಗಿ ನನ್ನ ಮೊದಲ ಚಿತ್ರ 'ಸಜನಿ'ಯಲ್ಲಿ ಮಿಂಚಿದ್ದಾಯಿತು. ಈಗ ಹಳ್ಳಿ ಹುಡುಗಿಯಾಗಿ 'ಕೃಷ್ಣ'ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಮುಂದಿನ ಚಿತ್ರ ಯಾವುದು ಎಂಬುದು ನನಗೆ ಗೊತ್ತಿಲ್ಲ. ಸದ್ಯಕ್ಕೆ ಒಳ್ಳೆ ಪಾತ್ರಕ್ಕಾಗಿ ನಾನು ಕಾಯುತ್ತಿದ್ದೇನೆ ಎನ್ನುತ್ತಾರೆ ಶರ್ಮಿಳಾ. ಈ ಹುಡುಗಿಯ ಎರಡನೇ ಸಿನಿಮಾ 'ಕೃಷ್ಣ'ಗೆ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಗಣೇಶ್ ಮತ್ತು ಪೂಜಾ ಗಾಂಧಿ ಮಧ್ಯೆಯೂ ಶರ್ಮಿಳಾ ಪ್ರೇಕ್ಷಕರ ಗಮನ ಸೆಳೆದಿದ್ದಾರೆ.ತಮ್ಮ ಪಾತ್ರದ ಬಗ್ಗೆ ಅವರು ನಗುತ್ತಾ ಹೇಳಿದ್ದು ಹೀಗೆ; 'ಹಳ್ಳಿ ಹುಡುಗಿಯಾಗಿ ನಾನು ಕಾಣಿಸಿಕೊಳ್ಳಲು ಸ್ವಲ್ಪ ಕಷ್ಟವಾಯಿತು. ನನಗೆ ಲಂಗ ದಾವಣಿ ಹಾಕಿಕೊಳ್ಳುವುದು ಹೇಗೆ ಎಂಬುದೇ ಗೊತ್ತಿರಲಿಲ್ಲ..' ನಾನು ಕನ್ನಡ ಚಿತ್ರದ ಮುಖಾಂತರ ಬಣ್ಣದ ಲೋಕಕ್ಕೆ ಕಾಲಿಟ್ಟೆ. ನಾನು ಬೆಂಗಳೂರು ಹುಡುಗಿಯಾಗಿರುವುದೇ ಇದಕ್ಕೆ ಕಾರಣ. ಹಾಗೆಂದು ಬೇರೆ ಭಾಷೆಯಲ್ಲಿ ಅಭಿನಯಿಸಲು ಇಷ್ಟವಿಲ್ಲ ಎಂದೇನಿಲ್ಲ. ತಮಿಳಿನಲ್ಲಿ ಭರತ್ ಜೊತೆ ಒಂದು ಚಿತ್ರ ಮತ್ತು ಭಾಗ್ಯರಾಜ್ ಪುತ್ರನ ಜೊತೆ ಇನ್ನೊಂದು ಚಿತ್ರವನ್ನು ಒಪ್ಪಿಕೊಂಡಿದ್ದೇನೆ ಎನ್ನುವ ಶರ್ಮಿಳಾಗೆ, ನಂ.1,ನಂ.2 ಎಂಬ ಗೇಮ್ ನಲ್ಲಿ ಆಸಕ್ತಿ ಇಲ್ಲವಂತೆ. 'ನಾನು ಪ್ರಾಮಾಣಿಕವಾಗಿ, ಶ್ರದ್ಧೆಯಿಂದ ಕೆಲಸ ಮಾಡ್ತೇನೆ. ನನ್ನ ಅಭಿಮಾನಿಗಳು ಇಷ್ಟಪಡುತ್ತಾರೆ'ಎನ್ನುವ ಶರ್ಮಿಳಾ ಕಣ್ಣಲ್ಲಿ ಬಣ್ಣದ ಕನಸುಗಳಿವೆ. ಆದರೆ ಆತುರವಿಲ್ಲ. ಶರ್ಮಿಳಾ ಮುಂದಿನ ಚಿತ್ರ 'ಈ ಬಂಧನ'. ಆದಿತ್ಯನಿಗೆ ನಾಯಕಿಯಾಗಿ ಈಕೆ ಅಭಿನಯಿಸಿದ್ದಾರೆ. ವಿಷ್ಣುವರ್ಧನ್ ಮತ್ತು ಜಯಪ್ರದಾ ಪ್ರಮುಖ ಪಾತ್ರದಲ್ಲಿರುವ ಈ ಚಿತ್ರದ ನಿರ್ದೇಶಕರು ವಿಜಯಲಕ್ಷ್ಮಿ ಸಿಂಗ್ . ಪತಿ ದೇವರು ಜೈಜಗದೀಶ್ 'ಮದನ' ನಿರ್ದೇಶಿಸಿ ಸುಸ್ತಾಗಿ ಕುಳಿತಾಗ, ವಿಜಯಲಕ್ಷ್ಮೀ ಆರಂಭಿಸಿದ್ದು;'ಈ ಬಂಧನ'.
ಇಳಯರಾಜರ ರಿಕಾರ್ಡ್ : 30ನಿಮಿಷದಲ್ಲಿ 6ಹಾಡುಗಳಿಗೆ ಸಂಗೀತ
ಇಳಯರಾಜರ ಹೆಸರು ಕಂಡರೆ ಸಾಕು, ಕಿವಿಗಳು ಅರಳುತ್ತವೆ! ಕಿವಿಕಚ್ಚುವ ಸಂಗೀತದಿಂದ ಬೆಚ್ಚಿಬೀಳಿಸುವವರ ಮಧ್ಯೆ ಇಳಯರಾಜ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಇಳಯರಾಜ ಅವರ ಸಂಗೀತದಲ್ಲಿ ಒಂದು ಮ್ಯಾಜಿಕ್ ಇದೆ ಅನ್ನುತ್ತಾರೆ ಅವರ ಅಭಿಮಾನಿಗಳು. ತಮಿಳು ಚಿತ್ರವೊಂದಕ್ಕೆ ಅವರೀಗ ಸಂಗೀತ ನೀಡುತ್ತಿದ್ದಾರೆ. ಇದರಲ್ಲೇನು ವಿಶೇಷ ಅನ್ನುವಿರಾ? ಕೇವಲ 30ನಿಮಿಷಗಳಲ್ಲಿ ಆರು ಗೀತೆಗಳಿಗೆ ಅವರು ಸಂಗೀತ ಸಂಯೋಜಿಸಿದ್ದಾರೆ. ಇದು ಇಳಯರಾಜ ಅವರ ತಾಕತ್ತು! ಪಿ.ವಾಸು ಬಳಿ ಸಹಾಯಕ ನಿರ್ದೇಶಕರಾಗಿದ್ದ ಚಂದ್ರನಾಥ್ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅವರ ನಿರ್ದೇಶನದ ಚೊಚ್ಚಲ ತಮಿಳು ಚಿತ್ರಕ್ಕೆ ಸಂಗೀತ ನೀಡಿ, ಇಳಯರಾಜ ಶುಭಕೋರಿದ್ದಾರೆ. ಯುವ ನಿರ್ದೇಶಕರನ್ನು ಬೆಂಬಲಿಸುವ ಅವರ ಕೈಂಕರ್ಯ ಸಾಂಗವಾಗಿ ಮುಂದುವರೆದಿದೆ. ಆಕಾಶ್, ರಜಿತ್, ರತನ್ ಲಿತಿಕಾ, ಮೃದುಲಾ ಮತ್ತು ಲಕ್ಷಣ ಸೇರಿದಂತೆ ಆರು ಮಂದಿ ಹೊಸಬರನ್ನಿಟ್ಟುಕೊಂಡು ಚಿತ್ರ ಮಾಡುತ್ತಿದ್ದೇನೆ. ಚಿತ್ರದ ಕತೆಯನ್ನು ಆಸಕ್ತಿಯಿಂದ ಕೇಳಿದ ನಂತರ ಇಳಯರಾಜ, ಸಂಗೀತ ನೀಡಿದರು. ಇದು ನನ್ನ ಪೂರ್ವ ಜನ್ಮದ ಸುಕೃತ. ಹಾಡುಗಳು ಚೆನ್ನಾಗಿ ಮೂಡಿ ಬಂದಿವೆ ಎಂದು ಚಂದ್ರನಾಥ್ ಹೇಳಿದ್ದಾರೆ.
Friday, October 26, 2007
ಸ್ಯಾಂಡಲ್ವುಡ್ ಟಾಪ್5 : ಗಣೇಶ ನಿನ್ನ ಖ್ಯಾತಿ ಅಪಾರ!
ಕಳೆದ ಹದಿನೈದು ದಿನಗಳ ಬಾಕ್ಸಾಫೀಸ್ ಲೆಕ್ಕಾಚಾರದ ಪ್ರಕಾರ, ಗಣೇಶ್ ಅಭಿನಯದ 'ಕೃಷ್ಣ' ಮುನ್ನಡೆ ಸಾಧಿಸಿದೆ. ಜೊತೆಗೆ ಅವರ 'ಚೆಲುವಿನ ಚಿತ್ತಾರ' ಮತ್ತು 'ಮುಂಗಾರು ಮಳೆ'ಆರ್ಭಟ ಮುಂದುವರೆದಿದೆ. ಟಾಪ್5 ಪಟ್ಟಿ ಇಲ್ಲಿದೆ :
1. ಕೃಷ್ಣ : ಕಳೆದ 10ತಿಂಗಳಿಂದ ಗಣೇಶ್ ಚಿತ್ರಗಳೇ ಟಾಪ್ 1ರಲ್ಲಿ ಉಳಿದಿವೆ. ಇತ್ತೀಚೆಗೆ ಬಿಡುಗಡೆಯಾಗಿರುವ 'ಕೃಷ್ಣ' ಚಿತ್ರಕ್ಕೆ, ರಾಜ್ಯದೆಲ್ಲೆಡೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು,ಕೋಲಾರ ಮತ್ತು ತುಮಕೂರಿನಲ್ಲಿಯೇ ಚಿತ್ರ ಬಿಡುಗಡೆಯಾದ ಮೊದಲ ವಾರ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಪೂಜಾ ಗಾಂಧಿ ಮತ್ತು ಶರ್ಮಿಳಾ ಚಿತ್ರದ ನಾಯಕಿಯರು.
2. ಮಿಲನ : ಪಾರ್ವತಿ ಮತ್ತು ಪೂಜಾ ಗಾಂಧಿ ಜೊತೆ ಪುನೀತ್ ಅಭಿನಯಿಸಿರುವ ಈ ಚಿತ್ರ ನಿಧಾನವಾಗಿ, ಚಿತ್ರಮಂದಿರಗಳಿಗೆ ಕಚ್ಚಿಕೊಳ್ಳುತ್ತಿದೆ. ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿಗೆ 'ಮಿಲನ'ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳೂ ಇವೆ. ನಿರ್ದೇಶಕ ಪ್ರಕಾಶ್ ಗೆ ಚಿತ್ರದ ಯಶಸ್ಸು ಖುಷಿ ತಂದಿದೆ.
3. ಚೆಲುವಿನ ಚಿತ್ತಾರ : ರಜತ ಮಹೋತ್ಸವದತ್ತ ಚಿತ್ರ ಸಾಗುತ್ತಿದೆ. ಹುಬ್ಬಳ್ಳಿ ಏರಿಯಾ ಸೇರಿದಂತೆ ರಾಜ್ಯದ ವಿವಿಧೆಡೆ ಚಿತ್ರದ ಗಳಿಕೆ ಚೆನ್ನಾಗಿದೆ. ನಿರ್ಮಾಪಕ ಮತ್ತು ನಿರ್ದೇಶಕ ಎಸ್.ನಾರಾಯಣ್ ಅವರಂತೂ ದುಡ್ಡು ಎಣಿಸಿ, ಸುಸ್ತಾಗಿದ್ದಾರೆ!
4. ಮುಂಗಾರು ಮಳೆ : ಈಗಾಗಲೇ 300ದಿನ ಪೂರ್ಣಗೊಳಿಸಿರುವ ಚಿತ್ರ, ಮುಖ್ಯ ಚಿತ್ರಮಂದಿರಗಳಿಂದ ಸಣ್ಣಪುಟ್ಟ ಚಿತ್ರಮಂದಿರಗಳಿಗೆ ಎತ್ತಂಗಡಿಯಾಗಿದೆ. ಬೆಂಗಳೂರು ಹೊರವಲಯದಲ್ಲಿ, ತಾಲೂಕು ಕೇಂದ್ರಗಳಲ್ಲಿ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
5. ಅನಾಥರು : ಆರಂಭದ ಅಬ್ಬರ ಕಡಿಮೆಯಾಗಿದೆ. ಉಪೇಂದ್ರ, ದರ್ಶನ್ ಅವರಂಥ ಸ್ಟಾರ್ ಗಳಿದ್ದರೂ ಗಳಿಕೆ ಇತ್ತೀಚೆಗೆ ಇಳಿಮುಖವಾಗುತ್ತಿದೆ. ಪಿತಾಮಗನ್ ಎಂಬ ರೀಮೇಕ್ ಚಿತ್ರವನ್ನು ಸಾಧು ಕೋಕಿಲಾ ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. ಅಪಾರ ಮೊತ್ತಕ್ಕೆ ರಾಧಿಕಾ ಚಿತ್ರದ ಹಂಚಿಕೆ ಹಕ್ಕುಗಳ ಪಡೆದಿದ್ದು,ನಿರ್ಮಾಪಕರು ಬಚಾವ್ ಆಗಿದ್ದಾರೆ. ಲಾಭವೋ, ನಷ್ಟವೋ ಸದ್ಯಕ್ಕಂತೂ ರಾಧಿಕಾ ಈ ಬಗ್ಗೆ ಏನನ್ನೂ ಹೇಳಿಲ್ಲ.
1. ಕೃಷ್ಣ : ಕಳೆದ 10ತಿಂಗಳಿಂದ ಗಣೇಶ್ ಚಿತ್ರಗಳೇ ಟಾಪ್ 1ರಲ್ಲಿ ಉಳಿದಿವೆ. ಇತ್ತೀಚೆಗೆ ಬಿಡುಗಡೆಯಾಗಿರುವ 'ಕೃಷ್ಣ' ಚಿತ್ರಕ್ಕೆ, ರಾಜ್ಯದೆಲ್ಲೆಡೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು,ಕೋಲಾರ ಮತ್ತು ತುಮಕೂರಿನಲ್ಲಿಯೇ ಚಿತ್ರ ಬಿಡುಗಡೆಯಾದ ಮೊದಲ ವಾರ ಒಂದು ಕೋಟಿ ರೂಪಾಯಿಗೂ ಹೆಚ್ಚು ಹಣ ಸಂಗ್ರಹವಾಗಿದೆ. ಪೂಜಾ ಗಾಂಧಿ ಮತ್ತು ಶರ್ಮಿಳಾ ಚಿತ್ರದ ನಾಯಕಿಯರು.
2. ಮಿಲನ : ಪಾರ್ವತಿ ಮತ್ತು ಪೂಜಾ ಗಾಂಧಿ ಜೊತೆ ಪುನೀತ್ ಅಭಿನಯಿಸಿರುವ ಈ ಚಿತ್ರ ನಿಧಾನವಾಗಿ, ಚಿತ್ರಮಂದಿರಗಳಿಗೆ ಕಚ್ಚಿಕೊಳ್ಳುತ್ತಿದೆ. ವರ್ಷದ ಸೂಪರ್ ಹಿಟ್ ಚಿತ್ರಗಳ ಸಾಲಿಗೆ 'ಮಿಲನ'ಸೇರ್ಪಡೆಯಾಗುವ ಎಲ್ಲಾ ಲಕ್ಷಣಗಳೂ ಇವೆ. ನಿರ್ದೇಶಕ ಪ್ರಕಾಶ್ ಗೆ ಚಿತ್ರದ ಯಶಸ್ಸು ಖುಷಿ ತಂದಿದೆ.
3. ಚೆಲುವಿನ ಚಿತ್ತಾರ : ರಜತ ಮಹೋತ್ಸವದತ್ತ ಚಿತ್ರ ಸಾಗುತ್ತಿದೆ. ಹುಬ್ಬಳ್ಳಿ ಏರಿಯಾ ಸೇರಿದಂತೆ ರಾಜ್ಯದ ವಿವಿಧೆಡೆ ಚಿತ್ರದ ಗಳಿಕೆ ಚೆನ್ನಾಗಿದೆ. ನಿರ್ಮಾಪಕ ಮತ್ತು ನಿರ್ದೇಶಕ ಎಸ್.ನಾರಾಯಣ್ ಅವರಂತೂ ದುಡ್ಡು ಎಣಿಸಿ, ಸುಸ್ತಾಗಿದ್ದಾರೆ!
4. ಮುಂಗಾರು ಮಳೆ : ಈಗಾಗಲೇ 300ದಿನ ಪೂರ್ಣಗೊಳಿಸಿರುವ ಚಿತ್ರ, ಮುಖ್ಯ ಚಿತ್ರಮಂದಿರಗಳಿಂದ ಸಣ್ಣಪುಟ್ಟ ಚಿತ್ರಮಂದಿರಗಳಿಗೆ ಎತ್ತಂಗಡಿಯಾಗಿದೆ. ಬೆಂಗಳೂರು ಹೊರವಲಯದಲ್ಲಿ, ತಾಲೂಕು ಕೇಂದ್ರಗಳಲ್ಲಿ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
5. ಅನಾಥರು : ಆರಂಭದ ಅಬ್ಬರ ಕಡಿಮೆಯಾಗಿದೆ. ಉಪೇಂದ್ರ, ದರ್ಶನ್ ಅವರಂಥ ಸ್ಟಾರ್ ಗಳಿದ್ದರೂ ಗಳಿಕೆ ಇತ್ತೀಚೆಗೆ ಇಳಿಮುಖವಾಗುತ್ತಿದೆ. ಪಿತಾಮಗನ್ ಎಂಬ ರೀಮೇಕ್ ಚಿತ್ರವನ್ನು ಸಾಧು ಕೋಕಿಲಾ ಅಚ್ಚುಕಟ್ಟಾಗಿ ನಿರ್ದೇಶಿಸಿದ್ದಾರೆ. ಅಪಾರ ಮೊತ್ತಕ್ಕೆ ರಾಧಿಕಾ ಚಿತ್ರದ ಹಂಚಿಕೆ ಹಕ್ಕುಗಳ ಪಡೆದಿದ್ದು,ನಿರ್ಮಾಪಕರು ಬಚಾವ್ ಆಗಿದ್ದಾರೆ. ಲಾಭವೋ, ನಷ್ಟವೋ ಸದ್ಯಕ್ಕಂತೂ ರಾಧಿಕಾ ಈ ಬಗ್ಗೆ ಏನನ್ನೂ ಹೇಳಿಲ್ಲ.
ಟಾರ್ಜನ್ : ತೆರೆದೆದೆ ಸರ್ದಾರ ಸಲ್ಮಾನ್ ಮತ್ತೆ ಕಾಡಿಗೆ!
ತೆರೆದೆದೆಯ ಪ್ರದರ್ಶನದಿಂದ ಒಂದು ಹಂತ ಮುಂದೆ ಹೋಗಿರುವ ಸಲ್ಲು ಮಿಯಾ, ಮುಂದಿನ ತಮ್ಮ ಚಿತ್ರದಲ್ಲಿ ಶರ್ಟ್ ಜತೆ ಪ್ಯಾಂಟ್ ಕೂಡ ತೆಗೆದು ನಟಿಸುವ ಸಾಧ್ಯತೆಯಿದೆ. ಟಾರ್ಜನ್ ಹೆಸರಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ ಸಲ್ಮಾನ್. ಚಿತ್ರೀಕರಣ ಪೂರ್ತಿ ಕಾಡಿನಲ್ಲಿ ನಡೆಯಲಿದೆ ಎಂದು ಕೇಳಿ ಸಲ್ಮಾನ್ ಖುಷಿಯಾಗಿದ್ದಾನೆ. ನನ್ನ ಅಭಿಮಾನಿಗಳಲ್ಲಿ ಹೆಚ್ಚು ಜನ ಯುವಕರು ಹಾಗೂ ಮಕ್ಕಳು ಇರುವುದರಿಂದ, ಅವರಿಗೆ ನಾನು ಈ ಚಿತ್ರವನ್ನು ಕಾಣಿಕೆಯಾಗಿ ನೀಡುತ್ತೇನೆ. ಈ ಚಿತ್ರದಲ್ಲಿ ವಿಶೇಷವಾದ ಹೇರ್ ಸ್ಟೈಲ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಇದು ತೇರೆ ನಾಮ್ ಹೇರ್ ಸ್ಟೈಲ್ ನಂತೆ ಜನಪ್ರಿಯ ಆಗುವ ನಂಬಿಕೆ ಇದೆ ಎಂಬುದು ಸಲ್ಮಾನ್ ಉವಾಚ. ಅಲ್ಲಪ್ಪ ಸಲ್ಮಾನ್, ಮೊದಲೇ ನಿಂಗೂ ಕಾಡಿಗೂ ಆಗಿಬರೋಲ್ಲ. ಮತ್ತೆ ಕಾಡಿನಲ್ಲಿ ಉಳಿಯೋಕ್ಕೆ ತಯಾರಿದ್ದೀಯಾ ಎಂದರೆ ಮೆಚ್ಚಲೇ ಬೇಕು. ಈ ಸಲ ಕೃಷ್ಣ ಮೃಗಗಳ ತಂಟೆಗೆ ಹೋಗಬೇಡ ಎನ್ನುತ್ತಿದ್ದಾರೆ ಅಭಿಮಾನಿಗಳು. ಸುಮಾರು 20 ವರ್ಷಗಳ ಹಿಂದೆ ಹೇಮಂತ್ ಬಿರ್ಜೆ ನಟಿಸಿದ್ದ ಟಾರ್ಜನ್ ಚಿತ್ರ ಅತ್ಯಂತ ಜನಪ್ರಿಯವಾಗಿತ್ತು. ವಿಶೇಷವಾಗಿ ಮಕ್ಕಳಿಗೆ ಮುದನೀಡಿತ್ತು. ಈಗ ಮಕ್ಕಳಿಗಾಗಿ 'ತಾರೆ ಜಮೀನ್ ಪರ್' ಎಂಬ ಚಿತ್ರ ಮಾಡುತ್ತಿರುವ ಅಮೀರ್ ಖಾನ್ ಪ್ರಭಾವದಿಂದ, ಸಲ್ಮಾನ್ ಕೂಡ ಟಾರ್ಜನ್ ಚಿತ್ರವನ್ನು ಒಪ್ಪಿರುವ ಸಾಧ್ಯತೆಯಿದೆ.
ಅಮೀರ್ ಖಾನ್ ವಿರುದ್ಧ ಈಗ ಜಾಮೀನು ರಹಿತ ವಾರೆಂಟ್
ಅಮೀರ್ ಖಾನ್ ವಿರುದ್ಧ ಭೂಪಾಲ್ ಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪ ಎದುರಿಸುತ್ತಿರುವ ಖಾನ್ ವಿಚಾರಣೆಗಾಗಿ ಹಾಜರಾಗದೆ 3ಬಾರಿ ಕೋರ್ಟ್ ಆಜ್ಞೆಯನ್ನು ಉಲ್ಲಂಘಿಸಿದ್ದಾರೆ. ಈ ಕಾರಣ ಕೋರ್ಟ್ ವಾರೆಂಟ್ ಹೊರಡಿಸಿದೆ. ಕೋರ್ಟ್‌ನ ಯಾವುದೇ ಆದೇಶ ಗೊತ್ತಿಲ್ಲದ ಕಾರಣ ಅವರು ಹಾಜರಾಗಲು ವಿಫಲರಾಗಿದ್ದಾರೆ ಎಂದು ವಿವರಣೆ ನೀಡಲು ಅಮೀರ್ ಖಾನ್ ವಕೀಲರು ಪ್ರಯತ್ನಿಸಿದರು. ಆದರೆ, ಅವರ ವಾದವನ್ನು ತಿರಸ್ಕರಿಸಿದ ದಂಡಾಧಿಕಾರಿಗಳು ನ.7ರಂದು ಅಮೀರ್ ಖಾನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ಪೋಲೀಸರಿಗೆ ಆಜ್ಞಾಪಿಸಿದ್ದಾರೆ.
ಹಿನ್ನೆಲೆ : ಕಾರು ಕಂಪನಿಯೊಂದರ ರಾಯಭಾರಿಯಾಗಿದ್ದ ಅಮೀರ್ ಖಾನ್, ಜಾಹೀರಾತಿನಲ್ಲಿ ಭಾಗವಹಿಸಲು ಆಗಸ್ಟ್‌ನಲ್ಲಿ ಇಂಧೋರ್‌ಗೆ ಬಂದಿದ್ದರು. ಆ ಸಂದರ್ಭದಲ್ಲಿ ರಾಷ್ಟ್ರಧ್ವಜಕ್ಕೆ ಅವಮಾನ ನಡೆದಿದೆ ಎಂದು ಸ್ಥಳೀಯ ವಕೀಲರೊಬ್ಬರು ಆರೋಪಿಸಿ, ಅಮೀರ್ ಖಾನ್ ವಿರುದ್ಧ ದೂರು ದಾಖಲಿಸಿದ್ದರು. ರಾಷ್ಟ್ರಧ್ವಜ ಕಾರಿನ ಮೇಲ್ಚಾವಣಿಗೆ ಅಂಟಿಕೊಂಡಿತ್ತು. ಕಾರ್ಯಕ್ರಮ ಮುಗಿದ ಮೇಲೂ ರಾತ್ರಿಯಲ್ಲಾ ಅದು ಹಾಗೆಯೇ ಇತ್ತು. ಈ ವಿಚಾರವಾಗಿ ಕೋರ್ಟ್ ನನ್ನ ದೂರನ್ನು ಅಂಗೀಕರಿಸಿ ಅಮೀರ್ ಖಾನ್‌ಗೆ ಹಾಜರಾಗಲು ಆದೇಶಿಸಿತು. ಎರಡು ಬಾರಿ ವಾರೆಂಟ್ ಹೊರಡಿಸಲಾಯಿತು. ಆದರೂ ಕೋರ್ಟ್‌ಗೆ ಹಾಜರಾಗಲಿಲ್ಲ ಎಂದು ದೂರು ಕೊಟ್ಟಿರುವ ಸುರೇಶ್ ಕಂಗಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
Wednesday, October 24, 2007
ನಕಲಿ ಅಭಿಮಾನಿಗಳ ಕಿರಿಕಿರಿಗೆ ಕೆರಳಿದ ಕಮಲ್ ಹಾಸನ್
ತಮ್ಮ ಹೆಸರನ್ನು ಬಳಸಿಕೊಂಡು ವೆಬ್ ಸೈಟು ನಿರ್ಮಿಸಿರುವ ನಕಲಿ ಅಭಿಮಾನಿಗಳ ವಿರುದ್ಧ, ನಟ ಕಮಲ್ ಹಾಸನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಅಭಿಮಾನಿಗಳು ಎಂದು ಹೇಳಿಕೊಂಡು ಕೆಲವರು ಇಂಟರ್ ನೆಟ್ಟಿನಲ್ಲಿ ಕಿತಾಪತಿ ನಡೆಸಿದ್ದಾರೆ ಎಂದು ಕಮಲ್ , ದಟ್ಸ್ ಕನ್ನಡ ಡಾಟ್ ಕಾಂಗೆ ಫ್ಯಾಕ್ಸ್ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಆಪಾದಿಸಿದ್ದಾರೆ. ಅಂತರ್ಜಾಲ ತಾಣ ನಿರ್ಮಿಸುವುದಲ್ಲದೆ ತಮ್ಮನ್ನು ಅನಗತ್ಯ ವಿವಾದಕ್ಕೆ ಎಳೆದಿರುವ ಸ್ವಯಂ ಘೋಷಿತ ಅಭಿಮಾನಿಗಳಿಗೆ ಕಮಲ್ ಎಚ್ಚರಿಕೆ ಕೊಟ್ಟಿದ್ದಾರೆ. www.universalherokamal.com ಹೆಸರಿನಲ್ಲಿ ವೆಬ್ ತಾಣ ಕಟ್ಟಿಕೊಂಡು ಅದರ ಮೂಲಕ, ತಮ್ಮ ಹೆಸರಿನ ಟಿ ಶರ್ಟ್ ಮಾರಾಟ ಮಾಡುತ್ತಿದ್ದಾರೆ. ಇವೆಲ್ಲವೂ ನನ್ನ ಗಮನಕ್ಕೆ ತರದೆ ಮಾಡಿರುವ ಚೇಷ್ಟೆಗಳು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ತಮಗೆ ಅನೇಕ ಅಭಿಮಾನಿಗಳಿರುವುದು ನಿಜ. ಆದರೆ ನಾನು ಎಂದೂ ಅವರನ್ನು ಅಭಿಮಾನಿ ಸಂಘದವರು ಎಂದು ಗುರುತಿಸಿಲ್ಲ. ಆ ಸಂಘಗಳೇನಿದ್ದರೂ ಸಮಾಜದ ಕ್ಷೇಮಾಭ್ಯುದಯ ಶಾಖೆಗಳಾಗಿ ಮಾತ್ರ ಕೆಲಸ ನಿರ್ವಹಿಸುತ್ತವೆ ಎಂದಿರುವ ಕಮಲ್,ನಕಲಿ ಅಭಿಮಾನಿಗಳು ತತ್ ಕ್ಷಣ ತಮ್ಮ ಹೆಸರು ದುರುಪಯೋಗ ನಿಲ್ಲಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಶ್ರೀಮುತ್ತು"ವಿನಲ್ಲಿ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್ ಮನೆ ಕಟ್ಟಿದ್ದಾರೆ. ರಾಜ್ ಫ್ಯಾಮಿಲಿಯಲ್ಲಿ ಮೊದಲ ಬಾರಿಗೆ ಮನೆ ಕಟ್ಟಿದ ಹೆಮ್ಮೆ ಶಿವರಾಜ್ ಕುಮಾರ್ ಗೆ ಸಲ್ಲುತ್ತದೆ. ಈ ವರೆಗೆ ಅವರು ಸದಾಶಿವನಗರದ ಸ್ವಂತ ಮನೆಯಲ್ಲೇ ವಾಸವಾಗಿದ್ದರು. ಈಗ ಹೆಬ್ಬಾಳ ಬಳಿ ಹೂಸಮನೆ ಕಟ್ಟಿದ್ದಾರೆ. ಆ ಮನೆಗೆ "ಶ್ರೀಮುತ್ತು" ಎಂದು ಹೆಸರು. ಈ ಮನೆ ಕಟ್ಟುವ ಹಂತದಲ್ಲಿದ್ದಾಗ ರಾಜ್ ಕುಮಾರ್ ಈ ಮನೆಗೆ ಬಂದು ಹೋಗಿದ್ದರಂತೆ. "ವಿಶಾಲವಾಗಿ ಮನೆ ಕಟ್ಟುತ್ತಿದ್ದೀಯಾ ಸಂತೋಷವಾಗುತ್ತಿದೆ"ಎಂದು ಹೇಳಿದ್ದರಂತೆ. ಅಪ್ಪಾಜಿ ಮನೆ ಕಟ್ಟುವ ಸಂದರ್ಭದಲ್ಲೇ ನನಗೆ ಮತ್ತು ಮನೆಗೆ ಆಶೀರ್ವಾದಮಾಡಿದ್ದಾರೆ. ನಾನು ಕಟ್ಟಿದ ಮನೆಗೆ ಅಪ್ಪಾಜಿ ಬಂದು ಹೋದ ಖುಷಿ ನನಗಿದೆ"ಎನ್ನುತ್ತಾರೆ ಶಿವಣ್ಣ ಕಳೆದ ವಾರವಷ್ಟೇ ಮನೆಯ ಗೃಹ ಪ್ರವೇಶ ನಡೆಸಿದ್ದಾರೆ. "ಅಪ್ಪಾಜಿ ಇಲ್ಲದೆ ನಮ್ಮ ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯುತ್ತಿವೆ. ಗೃಹ ಪ್ರವೇಶದ ದಿನ ಅಪ್ಪಾಜಿ ಇದಿದ್ದರೆ ಅವರು ಖುಷಿಪಡುತ್ತಿದ್ದರು. ಆದರೆ ಅವರು ಇಲ್ಲ ಎಂದು ನಾನು ಹೇಳುವುದಿಲ್ಲ. ಅವರು ಸದಾ ನಮ್ಮೊಂದಿಗಿದ್ದಾರೆ. ಪ್ರತಿಕ್ಷಣ ನೆನಪಾಗುತ್ತಾರೆ. ಖುಷಿ ಅನುಭವಿಸುವ ಪ್ರತಿ ಸಂದರ್ಭದಲ್ಲೂ ಅವರು ಮತ್ತೆ ಮತ್ತೆ ನೆನಪಾಗುತ್ತಾರೆ ಎಂದರು.
Monday, October 22, 2007
ಯೋಗಾ ಗುರು ಭರತ್ ಠಾಕೂರ್‌ಗೆ ಒಲಿದ ಪ್ರೇಮ ಯೋಗ
ಬಾಲಿವುಡ್ ತಾರೆ ಭೂಮಿಕ ಚಾವ್ಲ ದಾಂಪತ್ಯ ಜೀವನಕ್ಕೆ ಭಾನುವಾರ (ಅ21) ಅಡಿಯಿಟ್ಟಳು. ನಾಸಿಕ್‌ನ ಗುರುನಾನಕ್ ದೇವ್ ಗುರುದ್ವಾರದಲ್ಲಿ ಅವರ ಸರಳ ವಿವಾಹ ನೆರವೇರಿತು. ಯೋಗ ಗುರು ಭರತ್ ಠಾಕೂರ್‌ರ ಯೋಗ ತರಗತಿಗಳು ಬೆಂಗಳೂರು, ನವದೆಹಲಿ, ಮುಂಬೈ, ಚೆನ್ನೈ, ದುಬೈ, ರಶ್ಯಾ, ಬೆಲ್ಜಿಯಂ ಹಾಗೂ ನೆದರ್‌ಲ್ಯಾಂಡ್‌ನಲ್ಲಿ ಬಹಳಷ್ಟು ಹೆಸರಾಗಿವೆ. 'Yoga for All,' 'Yoga for Family, 'Yoga for Stress Relief,' 'Yoga for Weight Loss,' ಎಂಬ ಪುಸ್ತಕಗಳನ್ನೂ ಬರೆದಿದ್ದಾರೆ ಭೂಮಿಕಳನ್ನು ವರಿಸಿರುವ ಭರತ್ ಠಾಕೂರ್. ‘ತೇರೆ ನಾಮ್’ ಚಿತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ಭೂಮಿಕ ತೆಲುಗು, ತಮಿಳಿನ ಚಿತ್ರಗಳಲ್ಲೂ ನಟಿಸಿದ್ದಳು. ಬಹಳಷ್ಟು ದಿನಗಳಿಂದ ಯೋಗ ಗುರುವಿನ ಗೆಳತಿಯೂ ಆಗಿದ್ದಳು. ಇವರ ತಂದೆ ಅಜಿತ್‌ಸಿಂಗ್ ಚಾವ್ಲಾ ನಿವೃತ್ತ ಕರ್ನಲ್. ವಿವಾಹ ಕಾರ್ಯಕ್ರಮದಲ್ಲಿ ಸಮೀಪದ ಬಂಧುಗಳು ಮಾತ್ರ ಪಾಲ್ಗೊಂಡಿದ್ದರು.
Friday, October 19, 2007
ಇಂತಿ ನಿನ್ನ ಪ್ರೀತಿಯಚಿ ತ್ರೀಕರಣದ ವೇಳೆ ಬೆಂಕಿ ಆಕಸ್ಮಿಕ ಸಂಭವಿಸಿದ್ದು ಹೀಗೆ..(ಪೋಟೋ ಗ್ಯಾಲರಿ)
It was a miraculous escape for newcomer Sonu and Srinath when a fire accident occurred during the shooting of the film Inthi Ninna Preethiya on Monday. A sequence involving Sonu and Srinath was being shot with a little fire set at a distance but suddenly the fire spread, causing slight injury to Srinath. Sonu fainted on the set; however, after a short break, the shooting resumed. Filmmaker Soori is directing the movie, which is his second directional venture after Duniya. Soori and Subramanya are producing the movie which also stars Bhavana in a pivotal role.
Thursday, October 18, 2007
ಚಿರಂಜೀವಿ ಮಗಳು ಹೆತ್ತವರ ಕಣ್ತಪ್ಪಿಸಿ ಮದುವೆಯಾದ ಕತೆ!
ಇದು ಸಿನಿಮಾ ಕತೆಯಲ್ಲ.. ಸಿನಿಮಾ ಆಗಬಲ್ಲ ಎಲ್ಲಾ ಅರ್ಹತೆಗಳಿರುವ ಕತೆ!
ತೆಲುಗಿನ ಸೂಪರ್ ಸ್ಟಾರ್ ಚಿರಂಜೀವಿ ಅವರ ಮುದ್ದಿನ ಕುವರಿ ಶ್ರೀಜಾ, ಅಪ್ಪ ಅಮ್ಮನ ಮಾತು ಮೀರಿ ಅಂತರ್ಜಾತಿ ವಿವಾಹಕ್ಕೆ ಜೈ ಎಂದಿದ್ದಾರೆ. ಅಪ್ಪಅಮ್ಮ ಬೆಳಗಿನ ನಿದ್ದೆಯಲ್ಲಿದ್ದಾಗಲೇ ಎದ್ದ ಶ್ರೀಜಾ(19), ಮನೆಬಿಟ್ಟು ಪರಾರಿ.. ತನ್ನ ಪ್ರಿಯಕರನ ಜೊತೆ ಹಸೆಮಣೆ ಏರುವ ಸಡಗರ ಆಕೆಗೆ.. ಮಗಳು ಕೈಕೊಟ್ಟಳಲ್ಲ ಎನ್ನುವ ನೋವು ಹೆತ್ತವರಿಗೆ.ಇಂಜಿನಿಯರ್ ಆಗಿರುವ ಶಿರೀಷ್(22) ಅವರನ್ನು ನಗರದ ಆರ್ಯ ಸಮಾಜ ಆಶ್ರಮದಲ್ಲಿ ಬುಧವಾರ ವರಿಸಿದ ಶ್ರೀಜಾ, ಜಿರಂಜೀವಿ ಅವರ ಕೊನೆ ಮಗಳು. ಸಿಎ ಓದುತ್ತಿದ್ದ ಶ್ರೀಜಾ ಮತ್ತು ಶಿರೀಷ್ ಅವರದು ನಾಲ್ಕು ವರ್ಷಗಳ ಪ್ರೇಮ. ಪ್ರೇಮಕ್ಕೆ ಹತ್ತಾರು ಅಡ್ಡಿಗಳು. ಪ್ರೀತಿ ಬಿಡಲು ಒಲ್ಲೆ ಎಂದಿದ್ದ ಶ್ರೀಜಾಗೆ, ಗೃಹಬಂಧನ ಸಹಾ ಪ್ರಾಪ್ತಿಯಾಗಿತ್ತು. ಹೀಗಾಗಿ ಹೆತ್ತವರ ಕಣ್ತಪ್ಪಿಸಿ, ಶ್ರೀಜಾ ಮದುವೆಯಾದಳು.ಚಿರಂಜೀವಿ ಮೊದಲನೇ ಪುತ್ರಿ ವಿವಾಹ ಕಳೆದ ವರ್ಷ ಚೆನ್ನೈನಲ್ಲಿ ಅದ್ಧೂರಿಯಾಗಿ ನಡೆದಿತ್ತು. ಎರಡನೇ ಪುತ್ರ ರಾಮ್ ಚರಣ್, ಇತ್ತೀಚೆಗಷ್ಟೇ 'ಚಿರುತ' ಚಿತ್ರದ ಮುಖಾಂತರ ತೆಲುಗು ಚಿತ್ರರಂಗಕ್ಕೆ ಪರಿಚಿತರಾಗಿದ್ದಾರೆ.
Wednesday, October 17, 2007
Saturday, October 13, 2007
ಸಾಹಸಸಿಂಹ ವಿಷ್ಣುವರ್ಧನ್
ಸುಮಾರು ಮೂರು ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನೆಲೆ ನಿಂತ ಅಭಿಜಾತ ಕಲಾವಿದ ಡಾ. ವಿಷ್ಣುವರ್ಧನ್ ಅವರಿಂದ ಕನ್ನಡ ಚಿತ್ರರಂಗ ಶ್ರೀಮಂತವಾಗಿದೆ.
ಚಿತ್ರರಸಿಕರಿಗಾಗಿ ಅವರು ನೀಡಿದ ಅನೇಕ ಚಿತ್ರಗಳಲ್ಲಿ ಇನ್ನು ಕೇಲವೊಂದು ಅಷ್ಟೆ ನಿತ್ಯ ನೂತನ ಬಂಧನ, ನಿಷ್ಕರ್ಷ,ಮಲಯ ಮಾರುತ, ಸುಪ್ರಭಾತ, ಮುತ್ತಿನ ಹಾರ, ಸೂರ್ಯವಂಶ, ಮತ್ತು ಮೊನ್ನೆ ಬಿಡುಗಡೆಯಾಗಿದೆ ಅನ್ನಬಹುದಾದ ವೀರಪ್ಪ ನಾಯಕ ಅವರ ಅಭಿನಯ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಬಹುದು.
ವಿಷ್ಣು ಅಭಿನಯಿಸಿದ ಹರಕೆಯ ಕುರಿ ಮತ್ತು ಮುತ್ತಿನ ಹಾರ ಚಿತ್ರಗಳು ಪ್ರಾದೇಶಿಕ ವಿಭಾಗದಲ್ಲಿ ಅತ್ಯುತ್ತಮ ಚಿತ್ರಗಳು ಎಂದು ರಾಷ್ಟ್ರ ಪ್ರಶಸ್ತಿ ಪಡೆದಿವೆ.
1972 ರಲ್ಲಿ ವಂಶ ವೃಕ್ಷದಲ್ಲಿ ಅಭಿನಯಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವಿಷ್ಣುವರ್ಧನ್ ಅವರು ಇಲ್ಲಿಯವರೆಗೆ ಕನ್ನಡದಲ್ಲಿ ಸುಮಾರು 194, ತಮಿಳಿನಲ್ಲಿ 5, ತೆಲುಗಿನಲ್ಲಿ 4, ಮಲಯಾಳಂನಲ್ಲಿ 2 ಮತ್ತು ಹಿಂದಿಯಲ್ಲಿ 4 ಚಿತ್ರಗಳಲ್ಲಿ ನಟಿಸುವ ಮೂಲಕ ಪಂಚಭಾಷಾ ತಾರೆ ಎಂದು ಗುರುತಿಸಿಕೊಂಡಿರುವ ಕನ್ನಡದ ಹಿರಿಯ ನಟರಲ್ಲಿ ಮೊದಲಿಗರು ಇವರ ನಂತರದ ಸ್ಥಾನ ರಮೇಶರದು.
ಕನ್ನಡಿಗರಿಂದ ಅಭಿನವ ಭಾರ್ಗವ ಎಂದು ಕರೆಸಿಕೊಂಡ ವಿಷ್ಣು ಅಭಿನಯದ ವಿಸ್ತಾರ ಕೂಡ ಅಷ್ಟೆ ಆಳ. ಭಾವನಾತ್ಮಕ ಮತ್ತು ಹೋರಾಟದ ದೃಶ್ಯಗಳು ಪ್ರೇಕ್ಷಕರ ಮೇಲೆ ಗಾಢವಾದ ಪರಿಣಾಮ ಬೀರುತ್ತವೆ. ಉದಾರಣೆಗೆ ಬಂಧನದ ಡಾ. ಹರೀಶ ಮತ್ತು ಸುನಿಲ್ ಕುಮಾರ್ ದೇಸಾಯಿ ಅವರ ನಿಷ್ಕರ್ಷದಲ್ಲಿನ ಕಮಾಂಡೊ ಪಾತ್ರ ಮುತ್ತಿನ ಹಾರದ ಅಚ್ಚಪ್ಪನ ಪಾತ್ರ ಹೀಗೆ ಹತ್ತು ಹಲವು ಪಾತ್ರಗಳಲ್ಲಿ ಅಭಿನಯದ ಸೋಗಡನ್ನು ಕನ್ನಡ ಚಿತ್ರರಂಗಕ್ಕೆ ವಿಷ್ಣುವರ್ಧನ್ ನೀಡಿದ್ದಾರೆ ಗಿರೀಶ್ ಕಾರ್ನಾಡರ ವಂಶವೃಕ್ಷದೊಂದಿಗೆ ಚಿತ್ರರಂಗದ ಪ್ರವೇಶವಾಯಿತು ಆದರೂ ನಾಯಕನಾಗಿ ಬಡ್ತಿ ಹೊಂದಿದ್ದು ಪುಟ್ಟಣ್ಣ ಕಣಗಾಲ್ ನಿರ್ಧೇಶನದ ನಾಗರ ಹಾವು ಚಿತ್ರದ ರಾಮಾಚಾರಿಯ ಮೂಲಕ.ಇದೇ ಚಿತ್ರದಲ್ಲಿ ಅವರ ಕಾಲೇಜು ಸಹಪಾಟಿ ಅಪ್ತಮಿತ್ರ ಅಂಬರೀಷ ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಜನನ ಮತ್ತು ಜೀವನ: ಸಪ್ಟಂಬರ್ 18, 1950ರಲ್ಲಿ ದಿವಂಗತ ಎಚ್ ಎಲ್ ನಾರಾಯಣರಾವ್ ಹಾಗೂ ದಿವಂಗತ ಕಾನಾಕ್ಷಮ್ಮ ಅವರ ಎರಡನೆ ಮಗನಾಗಿ ಮೈಸೂರಿನಲ್ಲಿ ಜನನ. ಪ್ರಾಥಮಿಕ ಶಿಕ್ಷಣ ಪಡೆದದ್ದು ಗೋಪಾಲ ಸ್ವಾಮಿ ಶಾಲೆಯಲ್ಲಿ, ಕಾಲೇಜು ಶಿಕ್ಷಣ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಆಯಿತು.
ಚಿತ್ರರಂಗಕ್ಕೆ ಕಾಲಿಟ್ಟ ಮೂರು ವರುಷಗಳ ನಂತರ ಫೆಬ್ರುವರಿ 27, 1975 ರಲ್ಲಿ ಕನ್ನಡದ ಚಿತ್ರ ನಟಿ ಭಾರತಿಯನ್ನು ವಿವಾಹವಾದರು.ಬ್ರಹ್ಮ ಕೆಲವೊಂದು ಬಾರಿ ವಿಚಿತ್ರ ಹಣೆ ಬರಹ ಬರೆದಿರುತ್ತಾನೆ ಇನ್ನೇನು ಜೀವನ ಉತ್ತುಂಗದತ್ತ ಸಾಗುತ್ತಿದೆ ಅಂದುಕೊಳ್ಳುವಷ್ಟರಲ್ಲಿ ಮಗ್ಗಲು ಮುಳ್ಳೊಂದನ್ನು ಹುಟ್ಟಿಕೊಂಡುಬಿಟ್ಟಿರುತ್ತದೆ.
ವಿಷ್ಣು ಜೀವನದಲ್ಲಿಯೂ ಇದೇ ಆಗಿದ್ದು, ಗಂಧದ ಗುಡಿ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಆದ ಒಂದು ಅವಗಢ ಮೇಲಾಗಿ ಮಾಧ್ಯಮದ ತಪ್ಪು ಅಭಿಪ್ರಾಯದ ಪ್ರಚಾರ ವಿಷ್ಣುವಿನ ಇಡಿ ಜೀವನವನ್ನು ಹೋರಾಟದ ಹಾದಿಗೆ ತಂದು ನಿಲ್ಲಿಸಿದ್ದು ಇತಿಹಾಸ, ಮತ್ತು ಆ ಯುದ್ದದಲ್ಲಿ ಅವರು ಗೆದ್ದದ್ದು ಅತಿ ದೊಡ್ಡ ಇತಿಹಾಸ.
Friday, October 12, 2007
ಜೋಧಾಅಕ್ಬರ್ ವೈಭವ
ಜೋಧಾ ಅಕ್ಬರ್ ಚಿತ್ರದ ಟ್ರೈಲರ್ ಕ್ಲಿಪ್‌ಗಳ ಪ್ರದರ್ಶನ ವ್ಯಾಖ್ಯಾನಿಸಲು ಅದ್ಭುತ ಎಂಬ ಪದ ಚಿಕ್ಕದಾಗಿ ಕಾಣುತ್ತದೆ. ದೀರ್ಘಕಾಲದವರೆಗೆ ತೆರೆಯ ಮೇಲೆ ಇಂತಹ ವೈಭವವನ್ನು ಕಾಣಲು ಸಾಧ್ಯವಾಗಿಲ್ಲ.
ಅತ್ಯಂತ ವರ್ಚಸ್ವಿ ಮೊಘಲ್ ದೊರೆ ಮತ್ತು ಅವರ ಕಡು ವೈರಿಗಳಾದ ರಜಪೂತ ರಾಜಕುಮಾರಿಯ ನಡುವೆ ಪ್ರೇಮ ವಿವಾಹ ಅಥವಾ ಮೈತ್ರಿ ವಿವಾಹವು ನಂಬಲಸಾಧ್ಯ ಘಟನೆಯಾಗಿದೆ. ಸುಮಾರು 500 ವರ್ಷಗಳ ಹಿಂದಿನ ಪ್ರೇಮ ವಿವಾಹದ ನೇಪಥ್ಯದಲ್ಲಿ ಭಾರತದ ರಾಜಕೀಯ ಒಳಸಂಚುಗಳ ಕಥೆಯನ್ನು ಜೋಧಾಅಕ್ಬರ್ ಹೊಂದಿದೆ.
ಜೋಧಾ ಬಲಶಾಲಿ ಮಹಿಳೆಯಾಗಿದ್ದು, ಕತ್ತಿವರಸೆಯಲ್ಲಿ ನಿಪುಣೆ. ಆದರೂ ಅವಳ ಅತೀಸೂಕ್ಷ್ಮ ಸ್ವಭಾವದಿಂದ ಯುವಕ ಅಕ್ಬರ್‌ನ ಚೆಲುವಿಗೆ ಮನಸೋತಳು. ಹಿಂದು-ಮುಸ್ಲಿಂ ಮಿಲನ ಅಶುಭವೆಂದು ಭಾವಿಸಿ ಅದಕ್ಕೆ ವ್ಯಕ್ತವಾದ ಭಾರೀ ವಿರೋಧ.
ಜೋಧಾ ಪಾತ್ರದಲ್ಲಿ ಐಶ್ವರ್ಯ ರೈ ಮತ್ತು ಅಕ್ಬರ್ ಪಾತ್ರದಲ್ಲಿ ರಿತಿಕ್ ರೋಷನ್ ಅಮೋಘ ಅಭಿನಯ.ಯುದ್ಧದ ಬೃಹತ್ ದೃಶ್ಯಗಳು ಕೆಲವು ಅತ್ಯುತ್ತಮ ಐತಿಹಾಸಿಕ ಚಿತ್ರಗಳಿಗೆ ಹೋಲಿಸಬಹುದಾಗಿದ್ದು, ಪ್ರತಿಯೊಬ್ಬರೂ ಕೆಚ್ಚೆದೆಯಿಂದ ಹೋರಾಡುವ ದೃಶ್ಯ.
ಕಿವಿಗಳಲ್ಲಿ ಮೊರೆಯುವ ಬಾಣಗಳ ಬಿರುಸು, ಗಾಳಿಯಲ್ಲಿ ಹಸಿ ರಕ್ತದ ವಾಸನೆ. ಸಿರಿವೈಭವದ ಸೆಟ್‌ಗಳು, ಕಣ್ಣುಗಳನ್ನು ಕೋರೈಸುವ ಆಭರಣಗಳು ಯಾವುದೇ ಹಾಲಿವುಡ್ ನಿರ್ಮಾಣವು ಹೆಮ್ಮೆ ಪಡುವಂತೆ ಮಾಡುತ್ತದೆ.
ಅತ್ಯಂತ ವರ್ಚಸ್ವಿ ಮೊಘಲ್ ದೊರೆ ಮತ್ತು ಅವರ ಕಡು ವೈರಿಗಳಾದ ರಜಪೂತ ರಾಜಕುಮಾರಿಯ ನಡುವೆ ಪ್ರೇಮ ವಿವಾಹ ಅಥವಾ ಮೈತ್ರಿ ವಿವಾಹವು ನಂಬಲಸಾಧ್ಯ ಘಟನೆಯಾಗಿದೆ. ಸುಮಾರು 500 ವರ್ಷಗಳ ಹಿಂದಿನ ಪ್ರೇಮ ವಿವಾಹದ ನೇಪಥ್ಯದಲ್ಲಿ ಭಾರತದ ರಾಜಕೀಯ ಒಳಸಂಚುಗಳ ಕಥೆಯನ್ನು ಜೋಧಾಅಕ್ಬರ್ ಹೊಂದಿದೆ.
ಜೋಧಾ ಬಲಶಾಲಿ ಮಹಿಳೆಯಾಗಿದ್ದು, ಕತ್ತಿವರಸೆಯಲ್ಲಿ ನಿಪುಣೆ. ಆದರೂ ಅವಳ ಅತೀಸೂಕ್ಷ್ಮ ಸ್ವಭಾವದಿಂದ ಯುವಕ ಅಕ್ಬರ್‌ನ ಚೆಲುವಿಗೆ ಮನಸೋತಳು. ಹಿಂದು-ಮುಸ್ಲಿಂ ಮಿಲನ ಅಶುಭವೆಂದು ಭಾವಿಸಿ ಅದಕ್ಕೆ ವ್ಯಕ್ತವಾದ ಭಾರೀ ವಿರೋಧ.
ಜೋಧಾ ಪಾತ್ರದಲ್ಲಿ ಐಶ್ವರ್ಯ ರೈ ಮತ್ತು ಅಕ್ಬರ್ ಪಾತ್ರದಲ್ಲಿ ರಿತಿಕ್ ರೋಷನ್ ಅಮೋಘ ಅಭಿನಯ.ಯುದ್ಧದ ಬೃಹತ್ ದೃಶ್ಯಗಳು ಕೆಲವು ಅತ್ಯುತ್ತಮ ಐತಿಹಾಸಿಕ ಚಿತ್ರಗಳಿಗೆ ಹೋಲಿಸಬಹುದಾಗಿದ್ದು, ಪ್ರತಿಯೊಬ್ಬರೂ ಕೆಚ್ಚೆದೆಯಿಂದ ಹೋರಾಡುವ ದೃಶ್ಯ.
ಕಿವಿಗಳಲ್ಲಿ ಮೊರೆಯುವ ಬಾಣಗಳ ಬಿರುಸು, ಗಾಳಿಯಲ್ಲಿ ಹಸಿ ರಕ್ತದ ವಾಸನೆ. ಸಿರಿವೈಭವದ ಸೆಟ್‌ಗಳು, ಕಣ್ಣುಗಳನ್ನು ಕೋರೈಸುವ ಆಭರಣಗಳು ಯಾವುದೇ ಹಾಲಿವುಡ್ ನಿರ್ಮಾಣವು ಹೆಮ್ಮೆ ಪಡುವಂತೆ ಮಾಡುತ್ತದೆ.
Thursday, October 11, 2007
ಪ್ರಪಂಚದಲ್ಲೆ ಟಾಪ್ ಟೆನ್ : ಆತಂಕ ಮೆಚ್ಚಿನ ಸಂಗ್ರಹಣ
1. ಪೈರೇಟ್ಸ್ ಆಫ್ ದಿ ಕರೇಬಿಯನ್ : ಎಟ್ ಅರಲ್ಡ್ ಎಂಡ್ (ಕಲೆಕ್ಷನ್ $960,570,418) 2. ಹ್ಯಾರೀ ಪೊಟ್ಟರ್ ಅಂಡ್ ದಿ ಆರ್ಡರ್ ಆಫ್ ಫಿನಿಕ್ಸ್ (ಕಲೆಕ್ಷನ್ $932,023,160) 3. ಸ್ಪೈಡರ್ ಮೆನ್_3 (ಕಲೆಕ್ಷನ್ $890,480,179)4. ಶ್ರೆಕ್ ದಿ ಥರ್ಡ್ (ಕಲೆಕ್ಷನ್ $785,047,008)
Wednesday, October 10, 2007
ತಾರಾ ಪರಿಚಯ : ಕ್ರೇಜಿಸ್ಟಾರ್ ರವಿಚಂದ್ರನ್
ರವಿಚಂದ್ರನ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗ ಇನ್ನು ಒಂದು ರೀತಿಯ ಸಂಪ್ರದಾಯ ನಮ್ಮ ಚಿತ್ರರಂಗದಲ್ಲಿತ್ತು. ಯಶಸ್ವಿ ಪರಭಾಷಾ ಚಿತ್ರಗಳ ರಿಮೇಕ್ ಇಲ್ಲವೆ ಡಬ್ಬಿಂಗ್ ಸಂಪ್ರದಾಯ ಆಗ ನಮ್ಮ ಕನ್ನಡ ಚಿತ್ರ ರಂಗಕ್ಕೆ ಕಾಲಿಟ್ಟಿರಲಿಲ್ಲ.
ಕನ್ನಡ ಚಿತ್ರರಂಗಕ್ಕೆ ಯಶಸ್ವಿ ಪರಭಾಷಾ ಚಿತ್ರಗಳ ಭಟ್ಟಿ ಇಳಿಸುವಿಕೆಯ ಸಂಪ್ರದಾಯವನ್ನು ಹುಟ್ಟು ಹಾಕಿದ್ದೆ ಕ್ರೆಜಿಸ್ಟಾರ್ ರವಿಚಂದ್ರನ್ ದುರಾದೃಷ್ಟ ಅಂದರೆ ಅವರ ನಿರ್ಮಾಣದ ನಿರ್ಧೇಶನದ ಸ್ವಂತ ಕತೆಯನ್ನಾಧರಿಸಿದ ಒಂದೇ ಒಂದು ಚಿತ್ರ ಯಶಸ್ವಿ ಆಗಿಯೇ ಇಲ್ಲ.
ಆದ್ದರಿಂದಲೊ ಏನೋ ಅವರು ನಿರ್ಮಾಪಕನಾಗಿ ನಿರ್ದೇಶಕನಾಗಿ ಪರಭಾಷಾ ಚಿತ್ರಗಳತ್ತ ಒಲವು ತೋರಿರಲು ಸಾಕು.
ರವಿಚಂದ್ರನ್ ನಟನಾಗಿ ಸಾಧಿಸಿದ್ದು ಕಡಿಮೆ ಎಂದರೆ ತಪ್ಪಾಗಲಿಕ್ಕಿಲ್ಲ ಎರಡು ದಶಕಗಳ ಅವಧಿಯಲ್ಲಿ ನಟನೆಗೆ ಸವಾಲು ಒಡ್ಡುವಂತಹ ಪಾತ್ರಗಳನ್ನು ಮಾಡಿಯೇ ಇಲ್ಲ. ನಿರ್ಧೇಶಕನ ರೂಪದಲ್ಲಿಯ ರವಿಚಂದ್ರನ್ ಅವರನ್ನು ಕಡೆಗಣಿಸಲಿಕ್ಕೆ ಸಾದ್ಯವೇ ಇಲ್ಲ ತಾಂತ್ರಿಕತೆಯ ಪರಿಪೂರ್ಣ ಜ್ಞಾನ ಹೊಂದಿರುವ ಹಾಗೂ ತಂತ್ರಜ್ಞಾನದ ವಿನೂತನ ರೀತಿಯ ಪ್ರಯೋಗ ಇವರ ನಿರ್ಧೇಶನದ ಚಿತ್ರಗಳಲ್ಲಿ ಕಾಣಬಹುದು.
ಇನ್ನೊಂದು ಇವರ ಚಿತ್ರಗಳಲ್ಲಿ ಕಂಡುಬರುವ ಪ್ರಮುಖ ಅಂಶವೆಂದರೆ ಸಂಗೀತ ಪ್ರತಿಯೊಂದು ಚಿತ್ರದಲ್ಲಿ ಹೊಸತು ಉದಾಹರಣೆಗೆ ಅವು ಮೊದಲ ನಿರ್ಧೇಶನದ ಚಿತ್ರ ಪ್ರೇಮಲೋಕದಿಂದ ಭಾರಿ ಯಶಸ್ಸು ಕಂಡ ರಾಮಾಚಾರಿ ತೆಗೆದುಕೊಳ್ಳಿ. 80ರ ದಶಕದಲ್ಲಿ ಪ್ರೇಮಲೋಕದ ಹಾಡುಗಳು ಚಿತ್ರಿಕರಣ ಕರ್ನಾಟಕದ ಮಟ್ಟಿಗೆ ಮೊದಲ ಪ್ರಯೋಗ ಕಥೆ ಮಾತ್ರ ಸಾಧಾರಣವಾದ ಪ್ರೇಮಕತೆ ಆದರೆ ಅದರಲ್ಲಿನ ಸೃಜನಾತ್ಮಕತೆ ಅಂದಿನ ದಿನಗಳಲ್ಲಿ ಬೆರಗು ಹುಟ್ಟಿಸುವಂತಹದು.
ಅದುನಿಕ ತಂತ್ರಜ್ಞಾನ ವಿದೇಶಗಳಲ್ಲಿ ಹಾಡುಗಳ ಚಿತ್ರಿಕರಣ ಕಾಲ ಪ್ರಾರಂಭವಾದ ಮೇಲೂ ರವಿಚಂದ್ರನ್ ರಾಮಾಚಾರಿಯ ಮೂಲಕ ಹಳ್ಳಿಯ ಸೋಗಡಿಗೆ ತಿರುಗಿ ಸಾಧಾರಣ ಭಾಷಾ ಸಾಹಿತ್ಯದ ಹಾಡುಗಳೊಂದಿಗೆ ಇಡಿ ಕತೆಯನ್ನು ಬಿಡಿಸಿಡುವ ಕಲೆಯಲ್ಲಿ ಅವರೊಬ್ಬರೆ ಪಾರಂಗತ.
ಈಶ್ವರ್, ಅಭಿಮಾನಿ, ಕನಸುಗಾರ, ಏಕಾಂಗಿ,ಮಲ್ಲ, ಮನೆದೇವ್ರು,ರಾಮಾಚಾರಿ,ಸ್ವಾಭಿಮಾನಿ, ಯುಗಪುರುಷ, ಯುದ್ದಕಾಂಡ, ಸ್ವಾಭಿಮಾನ,ಶಾಂತಿಕ್ರಾಂತಿ, ರಣಧೀರ,ಅಂಜದ ಗಂಡು ಪ್ರೇಮಲೋಕ ಮುಂತಾದ ಚಿತ್ರಗಳಲ್ಲಿ ಭಾರಿ ಯಶಸ್ಸು ಅಂದರೆ ಪ್ರೇಮಲೋಕ ಹಾಗೂ ರಾಮಾಚಾರಿಯದ್ದು, ರಣಧೀರ, ಅಂಜದ ಗಂಡು,ಯುಗಪುರುಷ, ಯುದ್ದಕಾಂಡಗಳು ಯಶಶ್ವಿ ಚಿತ್ರಗಳ ಸಾಲಿನಲ್ಲಿ ಸೇರಿದರೆ ಇನ್ನುಳಿದವುಗಳು ತೋಪಾಗಿದ್ದೆ ಹೆಚ್ಚು. ಇನ್ನೊಂದು ವಿಶೇಷ ಅಂದರೆ ಸ್ವಂತ ಕಥಾವಸ್ತು ಉಳ್ಳ ಅವರ ನಿರ್ಧೇಶನದ. ನಟನೆಯ ಎಲ್ಲ ಚಿತ್ರಗಳು ವಿಫಲಗೊಂಡಿದ್ದು ವಿಪರ್ಯಾಸ.
Subscribe to:
Posts (Atom)