
(ಕರ್ಟೆಸೀ:ವೆಬ್ ದುನಿಯಾ)
ಅನೇಕ ಚಿತ್ರಗಳಲ್ಲಿ ತನ್ನ ಸಿಝ್ಲಿಂಗ್ ನೃತ್ಯದ ಮೂಲಕ ಎಲ್ಲರ ಚಿರಪರಿಚಿತರಾಗಿರುವ ಬಾಲಿವುಡ್ ನಟಿ ರಾಖಿ ಸಾವಂತ್. ಎಕ್ತಾ ಕಪೂರ್ ಧಾರಾವಾಹಿಯಲ್ಲಿ ಬಿನ್ನಾಣದ ಸೊಸೆಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ತನ್ನ ಇಮೇಜ್ ಹೆಚ್ಚಿಸಿಕೊಳ್ಳಲಿದ್ದಾರೆ.ಅನೇಕ ಚಿತ್ರಗಳಲ್ಲಿ ನನ್ನ ಹಾಟ್ ಮತ್ತು ಸೆಕ್ಸ್ ಪಾತ್ರಗಳಿಂದ ನಾನು ರೋಸಿ ಹೋಗಿದ್ದೇನೆ. ಎಕ್ತಾ ಅವರ ಧಾರಾವಾಹಿಯಲ್ಲಿ ಸೊಸೆಯ ಪಾತ್ರದಲ್ಲಿ ಅಭಿನಯಿಸಲು ನನಗೆ ನಿಜವಾಗಿಯೂ ಮನಸ್ಸಿದೆ ಎಂದು ಸಾವಂತ್ ಸುದ್ದಿಗಾರರಿಗೆ ಹೇಳಿದರು.ಅತ್ಯಂತ ಸೆಕ್ಸಿಯಾಗಿ ಕಾಣಿಸಬೇಕೆಂದು ನಾನು ಯಾವಾಗಲೂ ಬಯಸುತ್ತಿದ್ದೆ. ಆದರೆ ಇದಕ್ಕಾಗಿ ನಾನು ಹೆಚ್ಚು ಡಯಟ್ ಮತ್ತು ಮೇಕಪ್‌ಗಳನ್ನು ಮಾಡಬೇಕಾದ ಕಾರಣ ಇದು ನನ್ನ ದೇಹದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುವ ಸಾಧ್ಯತೆಗಳಿವೆ.ಆದುದರಿಂದ ನಾನು ಇನ್ನುಮುಂದೆ ಅಂತಹ ಪಾತ್ರಗಳನ್ನು ಮಾಡುವುದಿಲ್ಲ ಎಂದು ಸಾವಂತ್ ಹೇಳಿದ್ದಾರೆ.ಟೆಲಿವಿಶನ್ ಸೋಪ್ ಅಪೆರಾಗಳಲ್ಲಿ ಕೆಲಸ ಮಾಡಲು ನನಗೆ ಅನೇಕ ಆಫರ್‌ಗಳು ಬಂದಿವೆ ಅಲ್ಲದೆ ಎರಡು ಧಾರಾವಾಹಿಯಲ್ಲಿ ಅಭಿನಯಿಸುವ ಅವಕಾಶ ಕೂಡಾ ಬಂದಿದೆ ಎಂದು ಅವರು ಹೇಳಿದರು.ತನ್ನ ಪ್ರಿಯತಮನೊಂದಿಗೆ ಮದುವೆಯಾಗುವ ಕುರಿತಾದ ವದಂತಿಗಳನ್ನು ತಳ್ಳಿಹಾಕಿದ ಸಾವಂತ್, ಸದ್ಯಕ್ಕೆ ನನ್ನ ವೃತ್ತಿಯತ್ತ ಹೆಚ್ಚು ಗಮನ ನೀಡಬೇಕಾಗಿದೆ ಎಂದು ಹೇಳಿದರು.
No comments:
Post a Comment