
ಅತ್ಯಂತ ಭರವಸೆಯ ನಟಿಯಾಗಿ ಆಶಾವಾದ ಮೂಡಿಸಿರುವ ದೀಪಿಕಾ ಪಡುಕೋಣೆ ಕಿಂಗ್‌ಫಿಷರ್ ಏರ್‌ಲೈನ್ಸ್‌ನ ಬ್ರಾಂಡ್ ರಾಯಭಾರಿಯಾಗಿ ದರ್ಶನ ನೀಡಲಿದ್ದಾರೆ. ಅಪಾರ ಯುವ ಅಭಿಮಾನಿಗಳ ಬಳಗ ಹೊಂದಿರುವ ದೀಪಿಕಾ ಆಕಾಶ ಯಾನಿ ಯುವ ಪೀಳಿಗೆ ಭಾರತೀಯರ ಆಶೆ, ಆಕಾಂಕ್ಷೆ ಮತ್ತು ಜೀವನಶೈಲಿ ಅಗತ್ಯಗಳಿಗೆ ಕೈಗನ್ನಡಿಯಾಗಲಿದ್ದಾರೆ.ಅವರು ಕಿಂಗ್‌ಫಿಷರ್ ಏರ್‌ಲೈನ್ಸ್ ಬ್ರಾಂಡ್ ರಾಯಭಾರಿ ಮಾತ್ರವಾಗಿರದೇ ಅತಿಥಿಗಳನ್ನು ಒಳ್ಳೆಯ ರೀತಿಯಲ್ಲಿ ಸತ್ಕರಿಸಿ ಜಗತ್ತಿನ ವಿಮಾನ ಪ್ರಯಾಣದ್ಲಲೇ ಅತ್ಯುತ್ತಮ ಅನುಭವ ನೀಡುವುದು ದೀಪಿಕ ಸಹಿ ಹಾಕಿಸಿಕೊಂಡ ಉದ್ದೇಶವಾಗಿದೆ. ಈ ಉಪಕ್ರಮಕ್ಕೆ ಪ್ರೇರಣೆ ಮತ್ತು ದೀಪಿಕಾ ಹೇಗೆ ಬ್ರಾಂಡ್‌ಗೆ ಸೂಕ್ತರಾಗುತ್ತಾರೆಂದು ಒಳನೋಟವನ್ನು ಕಿಂಗ್‌ಫಿಷರ್ ಅಧ್ಯಕ್ಷ ವಿಜಯ್ ಮಲ್ಯ ಬಿಚ್ಚಿಟ್ಟರು.ದೀಪಿಕಾ ಪಡುಕೋಣೆ ಓಂ ಶಾಂತಿ ಓಂನಲ್ಲಿ ಶಾರುಖ್ ಖಾನ್‌ಗೆ ಜತೆ ನಟನೆಗೆ ಚೊಚ್ಚಲ ಪ್ರವೇಶ ಮಾಡಿದ್ದು, ನ.9ರಂದು ಚಿತ್ರ ಬಿಡುಗಡೆಯಾಗಲಿದೆ.
No comments:
Post a Comment