
ತನ್ನ ಪ್ರಥಮ " ಮಿಸ್ ಬಾಲಿವುಡ್ " ಸಂಗೀತ ಕಾರ್ಯಕ್ರಮಕ್ಕೆ ಸಿಕ್ಕಿದ ಪ್ರತಿಕ್ರೆಯೆಯು ಬಹಶ ಅದ್ಭುತವಾಗಿದೆ ಎಂದು ಹೇಳಿರುವ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ, ಲಂಡನ್‌ನ ರಾಯಲ್ ಅಲ್ಬರ್ಟ್ ಹಾಲ್‌ನಲ್ಲಿ ಡಿಸೆಂಬರ್ 12ರಂದು ನಡೆಯಲಿರುವ ಈ ಕಾರ್ಯಕ್ರಮದ ಅಂತಿಮ ಪ್ರದರ್ಶನದ ಹೆಚ್ಚಿನ ಟಿಕೆಟ್‌ಗಳು ಈಗಾಗಲೇ ಮಾರಾಟವಾಗಿವೆ ಎಂದಿದ್ದಾರೆ.ಇದು ನಿಜವಾಗಿಯೂ ನನಗೆ ದೊರೆತ ಗೌರವವಾಗಿದೆ ಅಲ್ಲದೆ ಭಾರತದ ಸಂಸ್ಕೃತಿಯನ್ನು ಪ್ರದರ್ಶಿಸಲು ಇದು ಉತ್ತಮ ವೇದಿಕೆಯಾಗಿದೆ ಎಂದು ಶಿಲ್ಪಾ ಶೆಟ್ಟಿ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.ತನ್ನೊಂದಿಗೆ ನೃತ್ಯ ಪ್ರದರ್ಶಿಸಲಿರುವ ಬಾಲಿವುಡ್ ಮತ್ತು ಅದರ ಹೊರಗಿನ ಸುಮಾರು 40 ನರ್ತಕರ ತಂಡವನ್ನು ಶಿಲ್ಪಾಶೆಟ್ಟಿ ಮುನ್ನಡೆಸಲಿದ್ದಾರೆ.2012ರ ಒಲಿಂಪಿಕ್‌ಗೆ ಲಂಡನ್ ನಗರವು ಸಿದ್ಧಗೊಳ್ಳುತ್ತಿರುವ ಹಿನ್ನೆಲೆಯಲ್ಲಿ " ಮಿಸ್ ಬಾಲಿವುಡ್‌ನ್ನು ರೂಪಿಸಲಾಗಿದೆ.ಇದು ಲಂಡನಿನಲ್ಲಿ ನೃತ್ಯ ಅಕಾಡಮಿಯನ್ನು ಪ್ರಾರಂಭಿಸಲು ಇತ್ತೀಚೆಗೆ ಆಗಮಿಸಿದ್ದ ಕೊರಿಯೋಗ್ರಾಫರ್ ಮತ್ತು ನೃತ್ಯಗಾರರಿಂದ ಶಾಸ್ತ್ರೀಯವಾಗಿ ತರಬೇತಿ ಪಡೆದು ಶಿಲ್ಪಾಶೆಟ್ಟಿ ನಿರ್ವಹಿಸಿದ ಮಾಯಾ ಚಿತ್ರವನ್ನು ಅನುಸರಿಸುತ್ತದೆ.ಮಾಯಾಗೆ ಚಿತ್ರರಂಗದಲ್ಲಿ ತಳ್ಳಿದ ಅನುಭವವಾಗುತ್ತದೆ. ಇದರಲ್ಲಿ ಮುಳುಗಬೇಕು ಅಥವಾ ಈಜಿ ಗೆಲ್ಲಬೇಕು ಎನ್ನುವ ಅರ್ಥದ ಅರಿವಾಗುತ್ತದೆ. ಮನದಲ್ಲಿ ವಿರೋಧವಿದ್ದರೂ ಕೊರಿಯಾಗ್ರಾಫರ್ ಮತ್ತು ತನ್ನ ವೈರಿ ದಿವಾ ಅವರ ಇಚ್ಚೆಯಂತೆ ನಡೆಯಬೇಕಾಗುತ್ತದೆ.
No comments:
Post a Comment