
(ಕರ್ಟೆಸೀ: ವೆಬ್ ದುನಿಯಾ)
ಬ್ರಿಟನ್‌ನಲ್ಲಿ ತಾನು 32 ವರ್ಷದ ಲಂಡನ್‌ನಲ್ಲಿ ಜನಿಸಿದ ಭಾರತೀಯ ಮೂಲದ ಕೋಟ್ಯಾಧಿಪತಿ ರಾಜ್ ಕುಂದ್ರಾ ಅವರೊಂದಿಗೆ ಡೇಟಿಂಗ್ ಮಾಡಿರುವುದಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಪ್ಪಿಕೊಂಡಿದ್ದಾರೆ. ಈ ಹೊಸ ಸಂಬಂಧವು ನನ್ನ ಒಂಟಿತನವನ್ನು ದೂರ ಮಾಡಿ ನನ್ನ ಬಾಳಿನಲ್ಲಿ ಲವಲವಿಕೆಯನ್ನು ಉಂಟುಮಾಡಿದೆ ಎಂಬುದನ್ನು ಶಿಲ್ಪಾ ಶೆಟ್ಟಿ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ನಾನು ಒಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದೆ. ಅವರ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಅವರ ಬಗ್ಗೆ ಹೆಚ್ಚಿನ ಕುರಿತಾಗಿ ನಾನು ಹೇಳಲು ಬಯಸುವುದಿಲ್ಲ ಯಾಕೆಂದರೆ ಇದು ನಮ್ಮಿಬ್ಬರ ನಡುವಿನ ಸಂಬಂಧದ ಪ್ರಾರಂಭವಾಗಿದೆ ಎಂದು ಶಿಲ್ಪಾ ಹೇಳಿದರು. ತನ್ನ ನೂತನ ಪ್ರಿಯತಮನ ಹೆಸರನ್ನು ಶಿಲ್ಪಾ ಬಹಿರಂಗಪಡಿಸದಿದ್ದರೂ, ಲಂಡನ್‌ನಲ್ಲಿ ಜನಿಸಿದ ಭಾರತೀಯ ಮೂಲದ ಮಿಲಿಯನರ್ ರಾಜ್ ಕುಂದ್ರಾ ಎಂಬವರೇ ಈಕೆಯ ಗೆಳೆಯ ಎಂದು ಪತ್ರಿಕೆಯೊಂದು ವರದಿ ಮಾಡಿದ್ದು ತಮ್ಮಿಬ್ಬರ ಸಂಬಂಧವನ್ನು ಹಾಳುಮಾಡಿದಕ್ಕಾಗಿ ಶಿಲ್ಪಾ ಶೆಟ್ಟಿಯನ್ನು ರಾಜ್ ಕುಂದ್ರಾ ಅವರ ಮಾಜಿ ಪತ್ನಿ ದೂಷಿಸಿದ್ದಾರೆ ಎಂಬ ವಿಷಯವನ್ನು ಕೂಡಾ ಬಹಿರಂಗಗೊಳಿಸಿದೆ. ಈ ವಿಚಾರವನ್ನು ನಾನು ತಳ್ಳಿಹಾಕುವುದಿಲ್ಲ ಆದರೆ ಅವರೇ ಎಂಬುದನ್ನು ನಾನು ಹೇಳುವುದಿಲ್ಲ ಯಾಕೆಂದರೆ ನನಗೆ ಅವರನ್ನು ದಿಗಿಲುಗೊಳಿಸಲು ಇಷ್ಟವಿಲ್ಲ, ಅವರು ನನ್ನನ್ನು ಗೌರವಿಸುತ್ತಾರೆ ಮತ್ತು ಅರ್ಥೈಸುತ್ತಾರೆ. ಅಲ್ಲದೆ ನನ್ನ ಬಗ್ಗೆ ಅತಿಯಾದ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ. ತುಂಬಾ ಸಮಯಗಳಿಂದ ನಾನು ಒಂಟಿಯಾಗಿದ್ದೆ. ಆದರೆ ಈಗ ನನ್ನ ಬಗ್ಗೆ ಕಾಳಜಿವಹಿಸಲು ಯಾರೋ ಒಬ್ಬರು ಇದ್ದಾರೆ ಎಂದು ತಿಳಿದು ಸಂತೋಷವಾಗುತ್ತಿದೆ. ಎಂದು ಶಿಲ್ಪಾ ಶೆಟ್ಟಿ ಹೇಳುತ್ತಾರೆ. ಈ ವರ್ಷವು ನನಗೆ ನಂಬಲಾರದ ವರ್ಷವಾಗಿದೆ ಆದರೆ ನಾನು ತುಂಬಾ ತುಂಬಾ ಒಂಟಿಯಾಗಿದ್ದೆ. ನಾನು ನನ್ನ ಮನೆಯವರಿಂದ ದೂರ ಇರುವುದರಿಂದ ತುಂಬಾ ಸಮಯಗಳವರೆಗೆ ನನಗೆ ಯಾರು ಗೆಳೆಯರಿರಲಿಲ್ಲ. ಯಾರಾದರೂ ನನ್ನನ್ನು ಪ್ರೇಮಿಸಬೇಕು ಎಂದು ನನಗೆ ಅನಿಸಿತ್ತು. ನಾನು ತುಂಬಾ ಸುಂದರಿಯಾಗಿದ್ದು ನೂರಾರು ಯುವಕರು ನನ್ನನ್ನು ಪ್ರೀತಿಸಲು ತಯಾರಿದ್ದಾರೆ ಎಂಬುದಾಗಿ ಪತ್ರಿಕೆಗಳು ಯಾವಾಗಲೂ ಹೇಳಿಕೊಂಡಿದ್ದವು. ಆದರೆ ಯಾರೂ ಆ ರೀತಿ ಮಾಡುತ್ತಿರಲಿಲ್ಲ ಎನ್ನುತ್ತಾರೆ ಶಿಲ್ಪಾ. ನಾನು ಪಾರ್ಟಿಗಳಿಗೆ ಹೋದರೆ ಅಲ್ಲಿ ಎಲ್ಲಾ ಯುವಕರು ನನ್ನನ್ನು ಇಷ್ಟಪಡುತ್ತಾರೆ ಎಂಬುದಾಗಿ ನಾನು ತಿಳಿದಿದ್ದೆ. ಆದರೆ ನನ್ನ ಮೇಲಿನ ಭಯಮಿಶ್ರಿತ ಗೌರವದಿಂದಾಗಿ ಎಲ್ಲರೂ ನನ್ನಿಂದ ದೂರ ಉಳಿಯುತ್ತಿದ್ದರು. ಯಾರೂ ನನ್ನೊಂದಿಗೆ ಡೇಟಿಂಗ್‌ಗೆ ಬರುತ್ತಿರಲಿಲ್ಲ ಎಂದು ಶಿಲ್ಪಾ ಬೇಸರ ವ್ಯಕ್ತಪಡಿಸುತ್ತಾರೆ.








































ಯಾವುದೇ ನಟಿಯಾಗಲಿ ನಟನಾಗಲಿ, ಪುನರಾಗಮನದ ಚಿತ್ರ ಎಂದರೆ ಬಹುದೊಡ್ಡ ನಿರೀಕ್ಷೆ ಅವರಲ್ಲಿ ಮತ್ತು ಮೇಲಾಗಿ ಅವರ ಅಭಿಮಾನಿಗಳಲ್ಲಿ ಇದ್ದೆ ಇರುತ್ತದೆ. ದಿಲೀಪ್ ಕುಮಾರ್, (ಕ್ರಾಂತಿ), ಅಮಿತಾಬ್ ಭಚ್ಚನ್( ಮೃತ್ಯುದಾತಾ) ವಿನೋದ್ ಖನ್ನಾ (ಇನ್ಸಾಫ್) ಡಿಂಪಲ್ ಕಪಾಡಿಯಾ ( ಸಾಗರ್) ಕಾಜೋಲ್ ( ಫನ್ಹಾ) ಕೆಲ ಚಿತ್ರಗಳನ್ನು ಮರೆಯುವುದು ಸಾಧ್ಯವಿಲ್ಲ ಯಾಕೆಂದರೆ ಅಂತಹ ಪುನರಾಗಮನದಲ್ಲಿ ಅದೇನೊ ಮಾಸದ ನೆನಪು ಬಿಟ್ಟು ಬಿಡುತ್ತಾರೆ.






