Monday, January 19, 2009

'ಪೊಲ್ಲದವನ್' ಟು ಬಿ ರೀಮೇಡ್ ಇನ್ ಕನ್ನಡ ವಿತ್ ಯೋಗೇಶ್

ತಮಿಳಿನ 'ಕಾದಲ್ ಕೊಂಡೇನ್' ಚಿತ್ರ ಕನ್ನಡದಲ್ಲಿ 'ರಾವಣ' ಆಯಿತು। ಈಗ ತಮಿಳಿನ ಮತ್ತೊಂದು ಚಿತ್ರ 'ಪೊಲ್ಲಾದವನ್' ಕನ್ನಡದಲ್ಲಿ 'ಪುಂಡ'ನಾಗಿ ಬರುತ್ತಿದೆ. ಪೊಲ್ಲಾದವನ್ ಚಿತ್ರದಲ್ಲಿ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ರ ಅಳಿಯ ಧನುಶ್ ಮತ್ತು ಕನ್ನಡ ಹುಡುಗಿ ರಮ್ಯಾ ಅಭಿನಯಿಸಿದ್ದರು.ಗಲ್ಲಾಪೆಟ್ಟಿಗೆಯಲ್ಲಿ ಜಯಗಳಿಸಿದ ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದೆ.
ಲೂಸ್ ಮಾದ ಖ್ಯಾತಿಯ ಯೋಗೀಶ್ ರನ್ನು ತಮಿಳಿನ ಧನುಶ್ ಪಾತ್ರಕ್ಕೆ ಗಾಂಧಿನಗರ ಹೋಲಿಸುತ್ತಿದೆ। ಕಾರಣ ಯೋಗೀಸ್ ಮತ್ತು ಧನುಶ್ ಅವರ ಮೈಬಣ್ಣ ಮತ್ತು ದೇಹಗಳು ಒಂದಕ್ಕೊಂದು ಮ್ಯಾಚ್ ಆಗುತ್ತಿವೆಯಂತೆ! ಈ ಕಾರಣಕ್ಕೆ ಇರಬೇಕು ತಮಿಳಿನಲ್ಲಿ ಧನುಶ್ ಮಾಡಿದ ಪಾತ್ರವನ್ನು ನಮ್ಮ ಯೋಗಿಶ ಕನ್ನಡದಲ್ಲಿ ಮಾಡಲು ಹೊರಟಿದ್ದಾರೆ. ಈಗಾಗಲೇ ಕಾದಲ್ ಕೊಂಡೇನ್ ಕನ್ನಡ ಅವತರಿಣಿಕೆ 'ರಾವಣ' ಚಿತ್ರಕ್ಕೆ ತಯಾರಿ ಆರಂಭವಾಗಿದೆ. ಈಗ ಇನ್ನೊಂದು ರಿಮೇಕ್ ಚಿತ್ರದ ಸಿದ್ಧತೆಯಲ್ಲಿದೆ ಗಾಂಧಿನಗರ.

ರಮ್ಯಾ ಸ್ಥಾನಕ್ಕೆ ಹರಿಪ್ರಿಯಾ ಬರುವ ಸಾಧ್ಯತೆಗಳಿವೆ। ಹಾಗೆಯೇ ಕಿಶೋರ್ ಮಾಡಿದ ಪಾತ್ರವನ್ನು ಅವರಿಂದಲೇ ಮಾಡಿಸುವ ತಯಾರಿ ನಡೆದಿದೆ. 'ಪೊಲ್ಲಾದವನ್' ತಮಿಳು ಚಿತ್ರದಲ್ಲಿನ ಕಿಶೋರ್ ಅವರ ಅಭಿನಯ ತಮಿಳುನಾಡಿನಲ್ಲಿ ಮನೆಮಾತಾಗಿತ್ತು.ತಮಿಳು, ತೆಲುಗಿನಲ್ಲಿ ಯಶಸ್ವಿಯಾದ ಚಿತ್ರಗಳು ಸಾಲುಸಾಲಾಗಿ ಕನ್ನಡಕ್ಕೆ ರೀಮೇಕ್ ಆಗುತ್ತಿವೆ. ಈಗ ಪೊಲ್ಲಾದವನ್ ಆ ಸರಣಿಯನ್ನು ಮುಂದುವರಿಸಿದೆ ಅಷ್ಟೆ!
ಶ್ರೀವೆಂಕಟ್

No comments: