Wednesday, December 31, 2008

ಕನ್ನಡ ಪ್ರೇಮಿ ಪೂಜಾಗಾಂಧಿ...


ಪರ ಭಾಷಾ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಪೂಜಾಗಾಂಧಿ ಈಗ ಕನ್ನಡಿಗರೇ ಆಗಿ ಹೋಗಿದ್ದಾರೆ. ಅಲ್ಪಾವಧಿಯಲ್ಲೇ ಕನ್ನಡ ಕಲಿಯುವ ಮೂಲಕ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ತಾವು ನಟಿಸಿರುವ 'ನಿನಗಾಗಿ ಕಾದಿರುವೆ' ಚಿತ್ರಕ್ಕೆ ಸ್ವತಃ ತಾವೇ ಡಬ್ ಮಾಡಿದ್ದಾರೆ.

ಈ ಚಿತ್ರವನ್ನು ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ನಿರ್ದೇಶಿಸುತ್ತಿದ್ದಾರೆ. ಹಿಂದೆ ಇವರು 'ಯಾರೇ ನೀ ಯಾಮಿನಿ' ಚಿತ್ರಕ್ಕೆ ಮುಹೂರ್ತ ಮಾಡಿದ್ದರು. ಆದರೆ ಚಿತ್ರ ಒಂದು ವಾರದಲ್ಲಿ ಪ್ಯಾಕಪ್ ಆಯಿತು. ಈಗ 'ನಿನಗಾಗಿ...' ಚಿತ್ರವನ್ನು ಪೂರ್ಣಗೊಳಿಸಿ, ಚಿತ್ರದ ಧ್ವನಿಸುರುಳಿಯೂ ಬಿಡುಗಡೆಯಾಗಿದೆ.

ಪೂಜಾ ಅವರ ಕನ್ನಡದ ಮೇಲಿನ ಅಭಿಮಾನ ಕಂಡರೆ ಖುಷಿಯಾಗುತ್ತದೆ. ಇದೇ ಮೊದಲಾಗಿರುವುದರಿಂದ ಕೆಲವು ತಿದ್ದುಪಡಿ ಮಾಡಿಕೊಂಡು, ಕಷ್ಟಪಟ್ಟು ಮಾಡಿದ್ದಾರೆ. ಅದಕ್ಕಾಗಿ ಅವರ ಪಾತ್ರವನ್ನೇ ಹಾಗೆ ಬೆಸೆದಿದ್ದೇವೆ. ಚಿತ್ರದಲ್ಲಿ ಪೂಜಾ ದಿಲ್ಲಿಯಿಂದ ಬೆಂಗಳೂರಿಗೆ ಬಂದ ಹುಡುಗಿಯಾಗಿರುತ್ತಾಳೆ. ಆದ್ದರಿಂದ ಹರಕು ಮುರುಕಾಗಿ ಮಾತನಾಡಿದರೂ ಅಡ್ಡಿ ಇಲ್ಲ. ದಿಲ್ಲಿಯಿಂದ ಬಂದಿರುವ ಹುಡುಗಿಯಾದ್ದರಿಂದ ಹೀಗೆ ಮಾತನಾಡುತ್ತಾರೆ ಎಂದು ಜನ ಭಾವಿಸುತ್ತಾರೆ ಎಂದರು ನಿರ್ದೇಶಕರು.


(ಕರ್ಟೆಸೀ: ವೆಬ್ ದುನಿಯಾ)

No comments: