
ರೂಪದರ್ಶಿ ಕಮ್ ನಟಿಯಾದ ಈಕೆಗೆ ಮೊದಲ ಚಿತ್ರ ಬಿಡುಗಡೆಗೆ ಮುನ್ನವೇ ಸಾಲುಸಾಲಾಗಿ ಚಿತ್ರಗಳ ಆಫರ್ ಹುಡುಕಿಕೊಂಡು ಬಂದಿವೆ.ಬೆಂಗಳೂರು ಮೂಲದ ಈ ಹುಡುಗಿಗೆ ಹರಕು ಮುರುಕಿನ ಕನ್ನಡ ಮಾತಾಡಿ ಅಭ್ಯಾಸ ಇದೆ. ಕನ್ನಡಭಾಷೆ ಕಲಿಯುವ ಉತ್ಸಾಹವಿದೆ.ಪ್ರಜ್ವಲ್ ದೇವರಾಜ್ ಜತೆಗಿನ 'ಮೆರವಣಿಗೆ'ಚಿತ್ರಕ್ಕೆ ಆಯ್ಕೆಯಾದ ನಂತರ ಈಕೆಗೆ ಅದೃಷ್ಟ ಖುಲಾಯಿಸಿದೆ. ಸುಮಾರು ನಾಲ್ಕಾರು ಚಿತ್ರಗಳಿಗೆ ಬುಕ್ ಆಗಿದ್ದಾರೆ. ವಿಷ್ಯ ಅಂದ್ರೆ ಮೆರವಣಿಗೆ ಇನ್ನೂ ತೆರೆ ಕಂಡಿಲ್ಲ. ಮೇ ಅಂತ್ಯಕ್ಕೆ ಚಿತ್ರ ತೆರೆ ಕಾಣುವ ನಿರೀಕ್ಷೆಯಿದೆ. ಪ್ರಜ್ವಲ್ ಜತೆಗೆ "ನನ್ನವನು' ಎಂಬ ಇನ್ನೊಂದು ಚಿತ್ರಕ್ಕೆ ಆಗಲೇ ಸಹಿ ಹಾಕಿರುವ ಆಂದ್ರಿತಾಗೆ ಇನ್ನೆರಡು ಚಿತ್ರಗಳು ಕಾದಿವೆ.ನೆನಪಿರಲಿ ಪ್ರೇಮ್ ನಾಯಕತ್ವದ 'ಜನುಮ ಜನುಮದಲ್ಲೋ' ಚಿತ್ರಕ್ಕೆ ಕೂಡ ಈಕೆಯೇ ನಾಯಕಿ, ಈ ಚಿತ್ರವನ್ನು ಖ್ಯಾತ ನಿರ್ದೇಶಕ ದಿನೇಶ್ ಬಾಬು ನಿರ್ದೇಶಿಸುತ್ತಿದ್ದಾರೆ. ಅರ್ಜುನ್ ಸರ್ಜಾ ಅವರ ಬ್ಯಾನರ್ ನಲ್ಲಿ ತಯಾರಾಗುತ್ತಿರುವ 'ವಾಯುಪುತ್ರ' ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜತೆಗೆ ನಟಿಸಲಿದ್ದಾರೆ. ಈ ಚಿತ್ರವನ್ನು ಕಿಶೋರ್ ಸರ್ಜಾ ನಿರ್ದೇಶಿಸಲಿದ್ದಾರೆ. ಈ ಚಿತ್ರ ತೆಲುಗಿಗೂ ಡಬ್ ಆಗುವ ಸಾಧ್ಯತೆಗಳಿವೆ. ಕನ್ನಡ ಚಿತ್ರಗಳ ಜತೆಗೆ ಈಕೆ ಚಂದ್ರ ಮಹೇಶ್ ನಿರ್ದೇಶನದ ತೆಲುಗು ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.ಪ್ರಜ್ವಲ್ ಅವರೊಡನೆ ಎರಡನೇ ಚಿತ್ರದಲ್ಲಿ ಕೆಲಸ ಮಾಡಲು ಖುಷಿಯಾಗುತ್ತದೆ.ನಾನು ಸ್ವಲ್ಪ ವಾಚಾಳಿ, ಪ್ರಜ್ವಲ್ ಕೂಡ ಮಾತಾಡುತ್ತಿದ್ದರೆ ಹೊತ್ತು ಹೋಗುವುದು ಗೊತ್ತಾಗುವುದಿಲ್ಲ. ಆದ್ರೆ ಕೆಲಸದ ವಿಷ್ಯದಲ್ಲಿ ತುಂಬಾ ಶ್ರದ್ಧೆವಹಿಸಿ ನಿರ್ದೇಶಕರ ಅಗತ್ಯಕ್ಕೆ ತಕ್ಕಂತೆ ನಟಿಸುತ್ತಿರುವೆ. ಮೆರವಣಿಗೆಯಲ್ಲಿ ನಗರ ಭಾಗಕ್ಕಿಂತ ಕಾಡುಮೇಡುಗಳಲ್ಲಿ ಚಿತ್ರೀಕರಣ ಹೆಚ್ಚಾಗಿತ್ತು. 'ನನ್ನವನು' ಚಿತ್ರ ಹೆಚ್ಚಾಗಿ ಬೆಂಗಳೂರಿನಲ್ಲಿ ನಡೆದಿದೆ. ಹಾಡುಗಳ ಶೂಟಿಂಗ್ ವಿದೇಶದಲ್ಲಿ ಆಗಬಹುದು. ಪ್ರಜ್ವಲ್ ಜೊತೆ ಹೆಚ್ಚಿನ ಚಿತ್ರಗಳಲ್ಲಿ ನಟಿಸುವ ನಿರೀಕ್ಷೆಯಿದೆ. ಕನ್ನಡ ಚಿತ್ರರಂಗದಲ್ಲಿ ಹೆಚ್ಚು ನಟಿಸುವ ಬಯಕೆಯಿದೆ ಎನ್ನುತ್ತಾರೆ 'ನನ್ನವನು' ಚಿತ್ರದಶೂಟಿಂಗ್ ನಲ್ಲಿದ್ದ
ಆಂದ್ರಿತಾ .(ಕರ್ಟೆಸಿ: ದಟ್ಸ್ ಕನ್ನಡ)
No comments:
Post a Comment