Monday, January 14, 2008

ಅಪಚಾರ: "ಹನುಮಾನ್..." ಚಿತ್ರ ತಂಡದ ವಿರುದ್ಧ ಕೇಸು


(ಕ‌ರ್ಟೆಸೀ: ವೆಬ್ ದುನಿಯಾ)
"ಹನುಮಾನ್ ರಿಟರ್ನ್ಸ್" ಚಿತ್ರದಲ್ಲಿ ಹನುಮದೇವರನ್ನು ಕೆಟ್ಟದಾಗಿ ಬಿಂಬಿಸಲಾಗಿದ್ದು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿರುವ ಆರೋಪದಲ್ಲಿ ಚಿತ್ರ ನಿರ್ದೇಶಕ ವಿ.ಜಿ.ಸಾಮಂತ್ ಹಾಗೂ ಸೆನ್ಸಾರ್ ಮಂಡಳಿ ಅಧ್ಯಕ್ಷೆ ಶರ್ಮಿಳಾ ಠಾಗೋರ್ ಸೇರಿದಂತೆ ಆರು ಮಂದಿಯ ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ.
ದೂರಿನ ಅರ್ಜಿ ಸ್ವೀಕರಿಸಿರುವ ನ್ಯಾಯಾಧೀಶ ಪ್ರದೀಪ್ ಸೋನಿ, ಮುಂದಿನ ವಿಚಾರಣೆಯನ್ನು ಜನವರಿ 18ಕ್ಕೆ ನಿಗದಿಪಡಿಸಿದ್ದಾರೆ. ಚಿತ್ರದಲ್ಲಿ ಹನುಮಾನ್ ದೇವರನ್ನು ಕೆಟ್ಟದಾಗಿ ಬಿಂಬಿಸಲಾಗಿದೆ ಎಂಬುದು ಅರ್ಜಿದಾರ ಪ್ರಕಾಶ್ ಕುಮಾರ್ ಆರೋಪ.
ಚಿತ್ರದಲ್ಲಿ ಹನುಮಂತನು ಗಬ್ಬರ್ ಸಿಂಗ್ ಜತೆಗೆ ಅಸಭ್ಯವಾಗಿ ಮಾತನಾಡುವ ಸನ್ನಿವೇಶವಿದೆ. ಮಾತ್ರವಲ್ಲದೆ ಇಂದ್ರ ಮುಂತಾದ ಹಲವಾರು ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳು ಇದರಲ್ಲಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಿರ್ದೇಶಕ, ನಿರ್ಮಾಪಕ, ಚಿತ್ರಕಥೆ ರಚನೆಕಾರ, ವಿತರಕ ಮತ್ತು ಚಿತ್ರವನ್ನು ಇಂಟರ್ನೆಟ್‌ನಲ್ಲಿ ಪ್ರಕಟಿಸಿರುವ ಕಂಪನಿಗಳು ಹಾಗೂ ಚಿತ್ರಕ್ಕೆ ಅನುಮತಿ ನೀಡಿರುವ ಸೆನ್ಸಾರ್ ಮಂಡಳಿ ಅಧ್ಯಕ್ಷೆ ಶರ್ಮಿಳಾ ಠಾಗೋರ್ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

No comments: