(ಕರ್ಟೆಸೀ:ವೆಬ್ ದುನಿಯಾ)
ಅಜ್ಜ ಮತ್ತು ಮೊಮ್ಮಗಳ ನಡುವಿನ ಮಮತೆಯ ಸಂಬಂಧದ ಕುರಿತಾದ ಹೊಸ ಆಕರ್ಷಕ ಚಿತ್ರ'ಹವಾಯ್ ದಾದಾ' ಚಿತ್ರೀಕರಣವನ್ನು ಅನುಪಮ್ ಖೇರ್ ನಡೆಸುತ್ತಿದ್ದು,ಪ್ರಸಿದ್ಧ ನಟಿ ತನುಜಾ ಅನುಪಮ್ ಅವರ ಪತ್ನಿಯಾಗಿ ನಟಿಸುತ್ತಿರುವುದು ಈ ಚಿತ್ರದಲ್ಲಿ ವಿಶೇಷತೆಯನ್ನು ಮೂಡಿಸಿದೆ.ತನುಜಾ ಎಂದಿಗೂ ಎಲ್ಲರ ಪ್ರೀತಿಪಾತ್ರರು. ಅವರು ಹುಟ್ಟಾ ಕಲಾವಿದೆಯಾಗಿದ್ದಾರೆ. 'ಹವಾಯ್ ದಾದಾ' ಚಿತ್ರದಲ್ಲಿ ತನುಜಾ ಅವರೊಂದಿಗೆ ನಟಿಸುತ್ತಿರುವುದು ಅತ್ಯಂತ ಹರ್ಷವನ್ನು ಉಂಟುಮಾಡಿದೆ ಎಂದು ಅನುಪಮ್ ಅವರು ಸುದ್ದಿಗಾರರೊಂದಿಗೆ ಹೇಳಿದ್ದಾರೆ.
ದಸ್ ಕಹಾನಿಯಾ, ಲಾಗಾ ಚುನಾರಿ ಮೈನ್ ದಾಗ್ , ಅಪ್ನಾ ಅಸ್ಮಾನ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅನುಪಮ್ , ತನುಜಾ ಸಮಸ್ಯಾರಹಿತ ನಟಿಯಾಗಿದ್ದು, ತಂಡದಲ್ಲಿ ಎಲ್ಲರನ್ನೂ ಮನರಂಜಿಸುತ್ತಾರೆ ಎಂದು ಹೇಳುತ್ತಾರೆ.
ಹವಾಯ್ ದಾದಾ ಚಿತ್ರವನ್ನು ಅಜಯ್ ಕಾರ್ತಿಕ್ ನಿರ್ದೇಶಿಸುತ್ತಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ.
ಎಲ್ಲಾ ಸಮಯದಲ್ಲೂ ನಾನು ಹೊಸ ಮತ್ತು ಪ್ರತಿಭಾವಂತ ನಿರ್ದೇಶಕರೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ವಾಸ್ತವವಾಗಿ ಈ ವರ್ಷದ ನನ್ನ ಉತ್ತಮ ಚಿತ್ರ 'ವೆಡ್ನಸ್‌ಡೇ' ಕೂಡಾ ನೀರಜ್ ಪ್ಯಾಂಡಿ ಅವರ ಮೊದಲ ನಿರ್ದೇಶನದ ಚಿತ್ರವಾಗಿದ್ದು
No comments:
Post a Comment