
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪಾತ್ರಕ್ಕೆ ಬಾಲಿವುಡ್ ಲೇಟೆಸ್ಟ್ ಸೆನ್ಸೇಷನ್ ಹುಡುಗಿ ಕತ್ರಿನಾ ಕೈಫ್ ಹಾಗೂ ಸೋನಿಯಾ ಗಂಡನಾಗಿ ರಾಜೀವ್ ಗಾಂಧಿ ಪಾತ್ರಕ್ಕೆ ರಣಬೀರ್ ಕಪೂರ್ ಆಯ್ಕೆಯಾಗಿದ್ದಾರಂತೆ..!

ಪ್ರಕಾಶ್ ಝಾರವರ 'ರಾಜ್‌ನೀತಿ' ಚಿತ್ರಕ್ಕಾಗಿ ಈ ಕಸರತ್ತು ನಡೆದಿದೆ. ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯನ್ನು ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಹೋಲುವ ಕಾರಣ ಈ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
IFMನಿಜ ಜೀವನವನ್ನೇ ತೆರೆಗೂ ತರುತ್ತಿರುವುದರಿಂದ ರಾಜೀವ್ ಸಾವಿನ ನಂತರ ರಾಜಕೀಯಕ್ಕಿಳಿಯುವ ಸೋನಿಯಾ ಪಾತ್ರವನ್ನು ಕತ್ರಿನಾ ನಿಭಾಯಿಸಲಿದ್ದಾರೆ. ಇಲ್ಲಿಆಕೆ ಪಕ್ಷವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಪಾತ್ರದಲ್ಲಿ ಮಿಂಚಲಿದ್ದಾರೆ. ಸೋನಿಯಾ ಪೂರ್ವಾಪರವನ್ನೂ ಚಿತ್ರದಲ್ಲಿ ಬಿಂಬಿಸುತ್ತಿರುವ ಕಾರಣ ಗ್ಲಾಮರ್ ಅಗತ್ಯ. ಹಾಗಾಗಿ ಕತ್ರಿನಾಳನ್ನು ಆರಿಸಲಾಗಿದೆ ಎಂದು ಹೇಳಲಾಗಿದೆ.

ನಂತರ ಸುದ್ದಿಗಾರರ ಎದುರಿಗೆ ಸಿಕ್ಕ ಆಕೆಯನ್ನೇ ಈ ಬಗ್ಗೆ ಕೇಳಿದಾಗ ಉತ್ತರಿಸಲು ನಿರಾಕರಿಸಿದ್ದಾಳೆ. ಆದರೆ ಇತ್ತೀಚೆಗೆ 'ಸಾಮ್ನಾ'ದಲ್ಲಿ ಕತ್ರಿನಾ-ಸಲ್ಮಾನ್ ಮದುವೆ ವರದಿಯಾಗಿದ್ದ ಬಗ್ಗೆ ಕತ್ರಿನಾಳನ್ನು ಪ್ರಶ್ನಿಸಿದಾಗ, "ಆ ವರದಿಯೇ ಸುಳ್ಳು ಮತ್ತು ಇದನ್ನು ಪತ್ರಿಕೆಯೇ ಸ್ಪಷ್ಟಪಡಿಸಿದೆ. ನಾನು ಮದುವೆಯಾದಾಗ ಜಗತ್ತಿಗೇ ಗೊತ್ತಾಗುತ್ತದೆ. ಸದ್ಯಕ್ಕೆ ಅಂತಹ ಯಾವುದೇ ಯೋಜನೆಗಳಿಲ್ಲ" ಎಂದಿದ್ದಾಳೆ.
ನಂತರ ಸಲ್ಮಾನ್ ಸಂಬಂಧದ ಬಗ್ಗೆ ಮಾತನಾಡುತ್ತಾ ಆಕೆ, "ಅದಕ್ಕೆ ಯಾವ ನಿರ್ಬಂಧಗಳೂ ಇಲ್ಲ. ನೀವೊಂದು ಸಾರ್ವಜನಿಕ ವ್ಯಕ್ತಿಯಾದ ಕಾರಣಕ್ಕೆ ಪ್ರತಿಯೊಂದನ್ನೂ ಸ್ಪಷ್ಟಪಡಿಸುತ್ತಾ ಹೋಗಲು ಸಾಧ್ಯವಿಲ್ಲ. ಇಂತಹ ಗಾಳಿಸುದ್ದಿಗಳಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅಷ್ಟಕ್ಕೂ ಖಾಸಗಿ ಸಂಬಂಧಗಳನ್ನು ಹೊರಗಡೆ ಯಾಕೆ ಹೇಳಿಕೊಳ್ಳಬೇಕು" ಎಂದು ಜಾರಿಕೊಂಡಿದ್ದಾಳೆ.
(ಕರ್ಟಸಿ: ವೆಬ್ ದುನಿಯಾ)