e- ಪ್ರೀತಿ' ಚಿತ್ರದ ನಾಯಕಿಯಾಗಿ ಮತ್ತೊಬ್ಬ ಅನಿವಾಸಿ ಭಾರತೀಯ ಚೆಲುವೆ ಕನ್ನಡ ಚಿತ್ರರಂಗಕ್ಕ್ಕೆ ಅಡಿ ಇಟ್ಟ್ಟಿದ್ದಾರೆ. ಆಕೆಯ ಹೆಸರು ನೀನಾ ಮಹೇಶ್. 'In Waiting' ಮತ್ತು 'Secret Leave' ಎಂಬ ಎರಡು ಕಿರು ನಾಟಕಗಳಲ್ಲಿ ಈಗಾಗಲೇ ನೀನಾ ತಾನ್ಯಾರೆಂದು ನಿರೂಪಿಸಿಕೊಂಡಿದ್ದಾರೆ.ಹೋಗಲಿ ಈಕೆಗೆ ಕನ್ನಡ ಬರುತ್ತಾ ಅಂದ್ರೆ, ಈಗಾಗಲೇ ಈಕೆ ಕನ್ನಡ ತರಗತಿಗಳಿಗೆ ಹಾಜರಾಗಿ ಕನ್ನಡ ಅಆಇಈ ತಿದ್ದುತ್ತಿದ್ದಾರೆ. ಕನಿಷ್ಟ ಪಕ್ಷ ದಿನಕ್ಕೊಂದು ಕನ್ನಡ ಪದ ಕಲಿಯಲು ಪಣ ತೊಟ್ಟಿದ್ದಾರೆ. ನೀನಾ ಬರೀ ಸುಂದರಿಯಷ್ಟೇ ಅಲ್ಲ ಮನಃಶಾಸ್ತ್ರದಲ್ಲಿ ಮಿಚಿಗನ್ ವಿಶ್ವವಿದ್ಯಾಲಯದ ಸ್ನಾತಕ ಪದವಿ ಪಡೆದ ಜಾಣೆ ಸಹ. ಈಗ 'ಈ ಪ್ರೀತಿ' ಚಿತ್ರೀಕರಣಕ್ಕಾಗಿ ಯುಎಸ್‌ಎ ನಲ್ಲಿದ್ದಾರೆ ನೀನಾ ಮಹೇಶ್.ಕನ್ನಡ ಅಂದ್ರೆ ನಂಗೆ ಪಂಚಪ್ರಾಣ ಎಂದು ಹೇಳಿ ತಮ್ಮ ಭಾಷಾಭಿಮಾನವನ್ನ್ನು 'ಈ ಪ್ರೀತಿ' ಚಿತ್ರದ ಮುಹೂರ್ತದ ಸನ್ನಿವೇಶದಲ್ಲಿ ತೋಡಿಕೊಂಡರು. ಬೆಂಗಳೂರು ಮಲ್ಲೇಶ್ವರಂನ ದಕ್ಷಿಣಮುಖ ನಂದಿ ತೀರ್ಥ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ಸನ್ನಿವೇಶವನ್ನು ಚಿತ್ರೀಕರಿಸಿಕೊಳ್ಳಲಾಯಿತು. ಚಿತ್ರದಲ್ಲಿ ಆಕೆಯದು ನೀಲು ಪಾತ್ರವಂತೆ. ಬೆಳ್ಳಿತೆರೆಯ ಈ ಪಾತ್ರ ನೀನಾ ಮಹೇಶ್ ಹೃದಯಕ್ಕೆ ತೀರಾ ಆಪ್ತವಾಗಿದೆಯಂತೆ. 'ಈ ಪ್ರೀತಿ' ಒಂಥರಾ ತಮಾಷೆಯ ಪ್ರೇಮಕಥೆ. ಡಾ.ನಾರಾಯಣ ಹೊಸಮನೆ ಹಾಗೂ ಪ್ರದೀಪ್ ಬೇಕಲ್, ಮಹಿ ಮಹೇಶ್ ಮತ್ತು ಎಸ್.ವಿ.ನಾರಾಯಣ ಸ್ವಾಮಿ ಒಟ್ಟುಗೂಡಿ 'ಈ ಪ್ರೀತಿ'ಯನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ಅನಿವಾಸಿ ಭಾರತೀಯರಾದ ಪ್ರಿಯಾ ಭಾರತಿ ನಿರ್ದೇಶಕಿಯಾಗಿ ತಮ್ಮ ಚಿತ್ರಪಥವನ್ನು ಆರಂಭಿಸಿದ್ದಾರೆ. ಜಯಂತ ಕಾಯ್ಕಿಣಿ ಸಾಹಿತ್ಯ ಮತ್ತು ಸಂಭಾಷಣೆಗಾಗಿ ಪ್ರಯತ್ನಗಳು ಮುಂದುವರೆದಿವೆ. ದಿಗಂತ್, ತೇಜಸ್ವಿನಿ, ನೀನಾ ಮಹೇಶ್ ಮತ್ತು ಭರತ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
(ಕರ್ಟೆಸಿ: ದಟ್ಸ್‌ಕನ್ನಡ)
No comments:
Post a Comment