Wednesday, January 9, 2008

ತೆಲುಗು, ಕನ್ನಡ, ಮಲಯಾಳಂ, ತ‌ಮಿಳಂ ಭಾಷೆಗಳಲ್ಲಿ "ಜಬ್ ವಿ ಮೆಟ್ " ರೀಮೇಕ್


(ಕ‌ರ್ಟೆಸೀ: ವೆಬ್ ದುನಿಯಾ)
ಶಾಹಿದ್ ಕರೀನಾ ಜೋಡಿಯ ಜಬ್ ವೀ ಮೆಟ್ ಚಿತ್ರವನ್ನು ಇಷ್ಟಪಡದವರು ಯಾರಿಲ್ಲ? 2007ರಲ್ಲಿನ ಅತ್ಯುತ್ತಮ ಚಿತ್ರವಾಗಿದ್ದ ಜಬ್ ವಿ ಮೆಟ್ ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಈ ನಾಲ್ಕು ಭಾಷೆಗಳಲ್ಲಿ ಮೋಸರ್ ಬೇರ್‌ನಿಂದ ಪುನರ್‌ನಿರ್ಮಾಣಗೊಳ್ಳಲಿದೆ. ವಾಸ್ತವವಾಗಿ ಮೋಸರ್ ಬೇರ್ ಮತ್ತು ಜಬ್ ವಿ ಮೆಟ್ ನಿರ್ಮಾಪಕರಾದ ಅಷ್ಟ ವಿನಾಯಕ ಸಿವಿಶನ್ ಈಗಾಗಲೇ ಕೈಜೋಡಿಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಒಪ್ಪಂದಕ್ಕೆ ಸಹಿ ಹಾಕಲಿದೆ.ನಾಲ್ಕು ಆವೃತ್ತಿಯಲ್ಲಿ ಕಲಾವಿದರು ಮತ್ತು ನಿರ್ದೇಶಕರು ಯಾರೆಂದು ಇನ್ನೂ ತೀರ್ಮಾನವಾಗಿಲ್ಲ. ಏತನ್ಮಧ್ಯೆ, ಮೋಸರ್ ಬೇರ್ 2008ರ ಹಿಂದಿ ಚಿತ್ರದಲ್ಲಿ ತನ್ನ ಮೊದಲ ಹೆಜ್ಜೆ ಇಡಲು ಸಿದ್ಧವಾಗಿ ನಿಂತಿದೆ. ಮೋಸರ್ ಬೇರ್‌ನ ಮೊದಲ ನಿರ್ಮಾಣದ, ಸಮರ್ ಖಾನ್ ನಿರ್ದೇಶಿಸುತ್ತಿರುವ, ಶೌರ್ಯ ಚಿತ್ರವು ಎಪ್ರಿಲ್ 4ರಂದು ತೆರೆ ಮೇಲೆ ಮೂಡಲಿದೆ. ಅಂತೆಯೇ ಪಂಕಜ್ ಅಡ್ವಾಣಿ ನಿರ್ದೇಶನದ ಶಂಕರ್ ಸಿಟಿ ಚಿತ್ರವು ಮೇ ಅಥವಾ ಜೂನ್‌ನಲ್ಲಿ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ. ಈ ಚಿತ್ರವು, ಶಂಕರ್ ಸಿಟಿ ರಿಮಿ ಸೇನ್, ಅನುಪಮ್ ಖೇರ್, ಚಂಕೀ ಪಾಂಡೆ ಮುಂತಾದ ತಾರಾಗಣವನ್ನೊಳಗೊಂಡ ನಿರಂತರ ಎರಡು ಗಂಟೆಗಳ ಚಿತ್ರವಾಗಿದ್ದು, ಅನುಭವ್ ಸಿನ್ಹಾ ನಡುವಿನ ಜಂಟಿ ಲಾಭ ನಿರ್ಮಾಣದ ಚಿತ್ರವಾಗಿದೆ.

Tuesday, January 8, 2008

ಯೋಗರಾಜ್ ಭಟ್, ಗಣೇಶ್ ಜಯಂತ್ ಕಾಯ್ಕಿಣಿ ಜೋಡಿಯ "ಗಾಳಿಪಟ" ಗ್ರಾಫಿಕ್ಸ್‌ಗೇ 50 ಲಕ್ಷ!


(ಕ‌ರ್ಟೆಸೀ: ವ‌ನ್ ಇಂಡಿಯಾ)
ಯೋಗರಾಜ್ ಭಟ್, ಗಣೇಶ್, ಜಯಂತ್ ಕಾಯ್ಕಿಣಿ ಜೋಡಿಯ ಗಾಳಿಪಟ ಮನದ ಮುಗಿಲಲ್ಲಿ ಮೊಹಬ್ಬತ್ ಬಿತ್ತಲು ಅಣಿಯಾಗಿದೆ. ಮುಂಗಾರು ಮಳೆ ಸುರಿದಂತೆ ಗಾಳಿಪಟ ಎತ್ತರೆತ್ತರೆಕ್ಕೆ ಹಾರುತ್ತದಾ? ಗೊತ್ತಿಲ್ಲ. ಆದರೆ ಚಿತ್ರತಂಡದಲ್ಲಿ ಇರುವ ಕಲಾವಿದರನ್ನು ನೋಡಿದರೆ ಖಂಡಿತಾ ಮುಗಿಲೆತ್ತರೆಕ್ಕೆ ಹಾರುತ್ತದೆ ಅನಿಸುತ್ತದೆ. ಈ ಚಿತ್ರದ ಗ್ರಾಫಿಕ್ಸ್ ಕೆಲಸಕ್ಕೇ ಬರೋಬ್ಬರಿ 50 ಲಕ್ಷ ಖರ್ಚು ಮಾಡಲಾಗಿದೆ. ಇದಕ್ಕಾಗಿ 'ಇಂಡಿಯನ್ ಆರ್ಟಿಸ್ಟ್' ಎಂಬ ಮದ್ರಾಸ್ ಕಂಪನಿಯನ್ನು ಕರೆತರಲಾಗಿದೆ. 'ಶಿವಾಜಿ' ಚಿತ್ರದಲ್ಲಿ ರಜನಿಕಾಂತರನ್ನು ಬೆಳ್ಳಗೆ ಮಾಡಿದ್ದೂ ಇವರೇ. ತಮಿಳು ನಿರ್ದೇಶಕ ಶಂಕರ್‌ರ ಬಹುತೇಕ ಚಿತ್ರಗಳಿಗೆ ಈ ಕಂಪನಿಯೇ ಗ್ರಾಫಿಕ್ಸ್ ಕೆಲಸ ಮಾಡುತ್ತದೆ. ಸಿನಿಮಾ ಒಂದಕ್ಕೆ ಸಾಮಾನ್ಯವಾಗಿ ಗ್ರಾಫಿಕ್ಸ್ ಬಜೆಟ್ ಅಂತ ಒಂದು ರೂಪಾಯಿ ಇದ್ದರೆ ನಾವು 'ಗಾಳಿಪಟಕ್ಕೆ' ಐದು ರೂಪಾಯಿ ಖರ್ಚು ಮಾಡಿದ್ದೇವೆ ಎನ್ನುತ್ತಾರೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ದಯಾಳ್. ಗ್ರಾಫಿಕ್ಸ್‌ಗೆ ಇಷ್ಟೊಂದು ದುಡ್ಡು ಸುರಿದಿದ್ದೀರಲ್ಲಾ? ಅಂತ ಕೇಳಿದರೆ ಇದನ್ನ 20 ಲಕ್ಷಕ್ಕೂ ಮಾಡುವವರಿದ್ದಾರೆ ಆದರೆ ಈ ಒಂದು ಕ್ವಾಲಿಟಿ ಸಿಗಬೇಕಲ್ಲಾ ಎನ್ನುತ್ತಾರೆ. ಅಷ್ಟೊಂದು ಸಹಜವಾಗಿ ಮೂಡಿಬಂದಿದೆ ಎನ್ನುವುದು ಅವರ ಮಾತಿನ ಮರ್ಮ.

Monday, January 7, 2008

ರಾಣಿ ಮುಖರ್ಜಿ ಜೊತೆ ಅಭಿನಯಿಸಲಿರುವ ಶಾಹಿದ್ ಕಪೂರ್


(ಕ‌ರ್ಟೆಸೀ: ವೆಬ್ ದುನಿಯಾ)
ಬಾಲಿವುಡ್ ನಟಿ ರಾಣಿ ಮುಖರ್ಜಿ ಕೈಯಲ್ಲಿ ಸದ್ಯಕ್ಕೆ ಕುನಾಲ್ ಕೋಹ್ಲಿ ನಿರ್ದೇಶನದ ಒಂದು ಚಿತ್ರ ಮಾತ್ರವೇ ಇದೆ. ಆದರೆ ರಾಣಿ ಇನ್ನೊಂದು ಚಿತ್ರ ಮಾಡಲಿದ್ದಾರೆ ಎಂದು ರಹಸ್ಯ ಮಾಧ್ಯಮಗಳಿಂದ ತಿಳಿದುಬಂದಿದೆ. ಅನುರಾಗ್ ಸಿಂಗ್ ನಿರ್ದೇಶನದ ಚಿತ್ರದಲ್ಲಿ ಶಾಹಿದ್ ಕಪೂರ್ ಅವರೊಂದಿಗೆ ಜೊತೆಯಾಗಿ ರಾಣಿ ನಟಿಸಲಿದ್ದು, ಈ ಚಿತ್ರವು ಮಾರ್ಚ್‌ನಲ್ಲಿ ಸೆಟ್ಟೇರಲಿದೆ. ವರ್ಷಗಳ ಹಿಂದೆ ಈ ಜೋಡಿಗಳಿಬ್ಬರ ಪೆಪ್ಸಿ ಜಾಹೀರಾತಿನ ನಂತರ ಮೊದಲ ಬಾರಿಗೆ ರಾಣಿ, ಶಾಹಿದ್ ಕಪೂರ್‌ನೊಂದಿಗೆ ಸ್ಕ್ರೀನ್ ಸ್ಪೇಸ್‌ ಹಂಚಿಕೊಳ್ಳಲಿದೆ. ಜಾಹೀರಾತಿನಲ್ಲಿ ಸ್ಟಾರ್ ಸಟ್ಕ್ ಆಗಿ ಅಭಿನಯಿಸುತ್ತಿದ್ದ ಶಾಹಿದ್ ಆ ಸಮಯದಲ್ಲಿ ಚಿತ್ರರಂಗಕ್ಕೆ ಬರಲು ಹೆಣಗಾಡುತ್ತಿದ್ದ ಹೊಸಬರಲ್ಲಿ ಒಬ್ಬರಾಗಿದ್ದರು. ಒಂದುವೇಳೆ ಈ ಯೋಜನೆಯು ಯಶಸ್ವಿಯಾದಲ್ಲಿ ಶಾಹಿದ್ ಜೀವನ ಶೈಲಿಯನ್ನೇ ಬದಲಾಯಿಸಲಿದೆ. ತನ್ನ ಚೊಚ್ಚಲ ನಿರ್ದೇಶನದ ಚಿತ್ರದಲ್ಲಿ ರಾಣಿ ಮತ್ತು ಶಾಹಿದ್ ಮುಖ್ಯಪಾತ್ರದಲ್ಲಿ ಜೊತೆಯಾಗಿ ನಟಿಸುವುದನ್ನು ಅನುರಾಗ್ ಖಚಿತಪಡಿಸಿದ್ದಾರೆ ಎಂದು ಹೇಳಿದರು.ನಾನು ಅನುರಾಗ್ ಯಶಸ್ಸಿನ ಬಗ್ಗೆ ಅತ್ಯಂತ ಸಂತೋಷಗೊಂಡಿದ್ದೇನೆ, ಚಿತ್ರ ಯಾವಾಗ ಸೆಟ್ಟೇರಲಿದೆ ಎಂದು ನನಗೆ ಗೊತ್ತಿಲ್ಲ ಅದರೆ ಬಗೆಗ ಅವರನ್ನೇ ಕೇಳಬೇಕು ಎಂದು ಮ್ ತೋ ಮೊಹಾಬತ್ ಕರೇಗಾ, ಜರ್ಮ್ ಮುಂತಾದ ಚಿತ್ರಗಳನ್ನು ನಿರ್ಮಿಸಿದ್ದ ಹಿರಿಯ ನಿರ್ಮಾಪಕ ಅನುರಾಗ್ ಸಿಂಗ್ ತಂದೆ ಕೆ.ಪಿ.ಸಿಂಗ್ ಹೇಳಿದರು. ರಾಕೇಶ್ ರೋಶನ್ ಅವರೊಂದಿಗೆ ಅನುರಾಗ್ ಸಿಂಗ್ ಕೆಲವು ವರ್ಷ ಕೆಲಸ ಮಾಡಿದ್ದರು. ನಂತರ ಧೂಮ್ 2ನಲ್ಲಿ ಸಹಾಯಕ ನಿರ್ದೇಶಕನಾಹಿಯೂ ಕಾರ್ಯನಿರ್ವಹಿಸಿದ್ದರು.

Friday, January 4, 2008

ಜಾನ್-ಬಿಪಾಶಾ ಜೋಡಿ


(ಕ‌ರ್ಟೆಸೀ: ಪಿ ಟಿ ಐ)

ಬಾಲಿವುಡ್ ನಟ ಜಾನ್ ಅಬ್ರಹಾಂ ತನ್ನ ಪ್ರಿಯತಮೆ ಬಿಪಾಶಾ ಬಸು ಅವರ ಬೆರಳಿಗೆ ಸದ್ಯದಲ್ಲಿಯೇ ಉಂಗುರ ತೊಡಿಸಲಿದ್ದಾರೆ. ಸುಮಾರು 2002ರಿಂದ ಡೇಟಿಂಗ್ ಮಾಡುತ್ತಿದ್ದ ಈ ಬಾಲಿವುಡ್ ಜೋಡಿಗಳು ಅತ್ಯಂತ ದೀರ್ಘ ಸಮಯಗಳವರೆಗೆ ತಮ್ಮ ಪ್ರೇಮವನ್ನು ಉಳಿಸಿಕೊಂಡು ಬಂದಿದ್ದರು. ಜನವರಿಯ ಬಳಿಕ ಬಿಪಾಶಾ ಮತ್ತು ಜಾನ್ ತಮ್ಮ ಕೆಲಸದಲ್ಲಿ ತೊಡಗಬೇಕಾಗಿರುವುದರಿಂದ ಜನವರಿ ಮಾಸದಲ್ಲಿ ನಿಶ್ಚತಾರ್ಥ ನಡೆಸಲು ನಿರ್ಧಾರಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸಂಬಂಧ ಮುಂದುವರಿಸುವ ಬಗ್ಗೇ ಎರಡೂ ಕುಟುಂಬಗಳು ಮಾತುಕತೆ ನಡೆಸಿದ್ದು, ಮದುವೆಯನ್ನು ಬಂಗಾಳಿ ಶೈಲಿಯಲ್ಲೇ ನಡೆಸಬೇಕೆಂದು ಬಿಪಾಶಾ ಕುಟುಂಬದವರ ಆಸೆಯಂತೆ.

Thursday, January 3, 2008

ಅನುಪಮ್ ಖೇರ್ ಇನ್ ಕ‌ನ್ನ‌ಡ‌ "ಹವಾಯ್ ದಾದಾ"

(ಕ‌ರ್ಟೆಸೀ:ವೆಬ್ ದುನಿಯಾ)
ಅಜ್ಜ ಮತ್ತು ಮೊಮ್ಮಗಳ ನಡುವಿನ ಮಮತೆಯ ಸಂಬಂಧದ ಕುರಿತಾದ ಹೊಸ ಆಕರ್ಷಕ ಚಿತ್ರ'ಹವಾಯ್ ದಾದಾ' ಚಿತ್ರೀಕರಣವನ್ನು ಅನುಪಮ್ ಖೇರ್ ನಡೆಸುತ್ತಿದ್ದು,ಪ್ರಸಿದ್ಧ ನಟಿ ತನುಜಾ ಅನುಪಮ್ ಅವರ ಪತ್ನಿಯಾಗಿ ನಟಿಸುತ್ತಿರುವುದು ಈ ಚಿತ್ರದಲ್ಲಿ ವಿಶೇಷತೆಯನ್ನು ಮೂಡಿಸಿದೆ.
ತನುಜಾ ಎಂದಿಗೂ ಎಲ್ಲರ ಪ್ರೀತಿಪಾತ್ರರು. ಅವರು ಹುಟ್ಟಾ ಕಲಾವಿದೆಯಾಗಿದ್ದಾರೆ. 'ಹವಾಯ್ ದಾದಾ' ಚಿತ್ರದಲ್ಲಿ ತನುಜಾ ಅವರೊಂದಿಗೆ ನಟಿಸುತ್ತಿರುವುದು ಅತ್ಯಂತ ಹರ್ಷವನ್ನು ಉಂಟುಮಾಡಿದೆ ಎಂದು ಅನುಪಮ್ ಅವರು ಸುದ್ದಿಗಾರರೊಂದಿಗೆ ಹೇಳಿದ್ದಾರೆ.
ದಸ್ ಕಹಾನಿಯಾ, ಲಾಗಾ ಚುನಾರಿ ಮೈನ್ ದಾಗ್ , ಅಪ್ನಾ ಅಸ್ಮಾನ್ ಮುಂತಾದ ಚಿತ್ರಗಳಲ್ಲಿ ನಟಿಸಿರುವ ಅನುಪಮ್ , ತನುಜಾ ಸಮಸ್ಯಾರಹಿತ ನಟಿಯಾಗಿದ್ದು, ತಂಡದಲ್ಲಿ ಎಲ್ಲರನ್ನೂ ಮನರಂಜಿಸುತ್ತಾರೆ ಎಂದು ಹೇಳುತ್ತಾರೆ.
ಹವಾಯ್ ದಾದಾ ಚಿತ್ರವನ್ನು ಅಜಯ್ ಕಾರ್ತಿಕ್ ನಿರ್ದೇಶಿಸುತ್ತಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಚಿತ್ರವಾಗಿದೆ.
ಎಲ್ಲಾ ಸಮಯದಲ್ಲೂ ನಾನು ಹೊಸ ಮತ್ತು ಪ್ರತಿಭಾವಂತ ನಿರ್ದೇಶಕರೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ವಾಸ್ತವವಾಗಿ ಈ ವರ್ಷದ ನನ್ನ ಉತ್ತಮ ಚಿತ್ರ 'ವೆಡ್ನಸ್‌ಡೇ' ಕೂಡಾ ನೀರಜ್ ಪ್ಯಾಂಡಿ ಅವರ ಮೊದಲ ನಿರ್ದೇಶನದ ಚಿತ್ರವಾಗಿದ್ದು

Monday, December 31, 2007

ರಾಜ್ ಕುಂದ್ರಾ ಆಂಡ್ ಶಿಲ್ಪಾ ಶೆಟ್ಟಿ'ಡೇಟಿಂಗ್'


(ಕರ್ಟೆಸೀ: ವೆಬ್ ದುನಿಯಾ)
ಬ್ರಿಟನ್‌ನಲ್ಲಿ ತಾನು 32 ವರ್ಷದ ಲಂಡನ್‌ನಲ್ಲಿ ಜನಿಸಿದ ಭಾರತೀಯ ಮೂಲದ ಕೋಟ್ಯಾಧಿಪತಿ ರಾಜ್ ಕುಂದ್ರಾ ಅವರೊಂದಿಗೆ ಡೇಟಿಂಗ್ ಮಾಡಿರುವುದಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಒಪ್ಪಿಕೊಂಡಿದ್ದಾರೆ. ಈ ಹೊಸ ಸಂಬಂಧವು ನನ್ನ ಒಂಟಿತನವನ್ನು ದೂರ ಮಾಡಿ ನನ್ನ ಬಾಳಿನಲ್ಲಿ ಲವಲವಿಕೆಯನ್ನು ಉಂಟುಮಾಡಿದೆ ಎಂಬುದನ್ನು ಶಿಲ್ಪಾ ಶೆಟ್ಟಿ ನಿಯತಕಾಲಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ನಾನು ಒಬ್ಬರೊಂದಿಗೆ ಡೇಟಿಂಗ್ ಮಾಡುತ್ತಿದ್ದೆ. ಅವರ ಬಗ್ಗೆ ನನಗೆ ಮೊದಲೇ ಗೊತ್ತಿತ್ತು. ಅವರ ಬಗ್ಗೆ ಹೆಚ್ಚಿನ ಕುರಿತಾಗಿ ನಾನು ಹೇಳಲು ಬಯಸುವುದಿಲ್ಲ ಯಾಕೆಂದರೆ ಇದು ನಮ್ಮಿಬ್ಬರ ನಡುವಿನ ಸಂಬಂಧದ ಪ್ರಾರಂಭವಾಗಿದೆ ಎಂದು ಶಿಲ್ಪಾ ಹೇಳಿದರು. ತನ್ನ ನೂತನ ಪ್ರಿಯತಮನ ಹೆಸರನ್ನು ಶಿಲ್ಪಾ ಬಹಿರಂಗಪಡಿಸದಿದ್ದರೂ, ಲಂಡನ್‌ನಲ್ಲಿ ಜನಿಸಿದ ಭಾರತೀಯ ಮೂಲದ ಮಿಲಿಯನರ್ ರಾಜ್ ಕುಂದ್ರಾ ಎಂಬವರೇ ಈಕೆಯ ಗೆಳೆಯ ಎಂದು ಪತ್ರಿಕೆಯೊಂದು ವರದಿ ಮಾಡಿದ್ದು ತಮ್ಮಿಬ್ಬರ ಸಂಬಂಧವನ್ನು ಹಾಳುಮಾಡಿದಕ್ಕಾಗಿ ಶಿಲ್ಪಾ ಶೆಟ್ಟಿಯನ್ನು ರಾಜ್ ಕುಂದ್ರಾ ಅವರ ಮಾಜಿ ಪತ್ನಿ ದೂಷಿಸಿದ್ದಾರೆ ಎಂಬ ವಿಷಯವನ್ನು ಕೂಡಾ ಬಹಿರಂಗಗೊಳಿಸಿದೆ. ಈ ವಿಚಾರವನ್ನು ನಾನು ತಳ್ಳಿಹಾಕುವುದಿಲ್ಲ ಆದರೆ ಅವರೇ ಎಂಬುದನ್ನು ನಾನು ಹೇಳುವುದಿಲ್ಲ ಯಾಕೆಂದರೆ ನನಗೆ ಅವರನ್ನು ದಿಗಿಲುಗೊಳಿಸಲು ಇಷ್ಟವಿಲ್ಲ, ಅವರು ನನ್ನನ್ನು ಗೌರವಿಸುತ್ತಾರೆ ಮತ್ತು ಅರ್ಥೈಸುತ್ತಾರೆ. ಅಲ್ಲದೆ ನನ್ನ ಬಗ್ಗೆ ಅತಿಯಾದ ಕಾಳಜಿಯನ್ನು ತೆಗೆದುಕೊಳ್ಳುತ್ತಾರೆ. ತುಂಬಾ ಸಮಯಗಳಿಂದ ನಾನು ಒಂಟಿಯಾಗಿದ್ದೆ. ಆದರೆ ಈಗ ನನ್ನ ಬಗ್ಗೆ ಕಾಳಜಿವಹಿಸಲು ಯಾರೋ ಒಬ್ಬರು ಇದ್ದಾರೆ ಎಂದು ತಿಳಿದು ಸಂತೋಷವಾಗುತ್ತಿದೆ. ಎಂದು ಶಿಲ್ಪಾ ಶೆಟ್ಟಿ ಹೇಳುತ್ತಾರೆ. ಈ ವರ್ಷವು ನನಗೆ ನಂಬಲಾರದ ವರ್ಷವಾಗಿದೆ ಆದರೆ ನಾನು ತುಂಬಾ ತುಂಬಾ ಒಂಟಿಯಾಗಿದ್ದೆ. ನಾನು ನನ್ನ ಮನೆಯವರಿಂದ ದೂರ ಇರುವುದರಿಂದ ತುಂಬಾ ಸಮಯಗಳವರೆಗೆ ನನಗೆ ಯಾರು ಗೆಳೆಯರಿರಲಿಲ್ಲ. ಯಾರಾದರೂ ನನ್ನನ್ನು ಪ್ರೇಮಿಸಬೇಕು ಎಂದು ನನಗೆ ಅನಿಸಿತ್ತು. ನಾನು ತುಂಬಾ ಸುಂದರಿಯಾಗಿದ್ದು ನೂರಾರು ಯುವಕರು ನನ್ನನ್ನು ಪ್ರೀತಿಸಲು ತಯಾರಿದ್ದಾರೆ ಎಂಬುದಾಗಿ ಪತ್ರಿಕೆಗಳು ಯಾವಾಗಲೂ ಹೇಳಿಕೊಂಡಿದ್ದವು. ಆದರೆ ಯಾರೂ ಆ ರೀತಿ ಮಾಡುತ್ತಿರಲಿಲ್ಲ ಎನ್ನುತ್ತಾರೆ ಶಿಲ್ಪಾ. ನಾನು ಪಾರ್ಟಿಗಳಿಗೆ ಹೋದರೆ ಅಲ್ಲಿ ಎಲ್ಲಾ ಯುವಕರು ನನ್ನನ್ನು ಇಷ್ಟಪಡುತ್ತಾರೆ ಎಂಬುದಾಗಿ ನಾನು ತಿಳಿದಿದ್ದೆ. ಆದರೆ ನನ್ನ ಮೇಲಿನ ಭಯಮಿಶ್ರಿತ ಗೌರವದಿಂದಾಗಿ ಎಲ್ಲರೂ ನನ್ನಿಂದ ದೂರ ಉಳಿಯುತ್ತಿದ್ದರು. ಯಾರೂ ನನ್ನೊಂದಿಗೆ ಡೇಟಿಂಗ್‌ಗೆ ಬರುತ್ತಿರಲಿಲ್ಲ ಎಂದು ಶಿಲ್ಪಾ ಬೇಸರ ವ್ಯಕ್ತಪಡಿಸುತ್ತಾರೆ.

Friday, December 28, 2007

'ಕ್ರೇಜಿ 4'ನಲ್ಲಿ ಐಟಂ ಬಾಯ್ ಆಗಿ ಹೃತಿಕ್ ರೋಶನ್

(ಕರ್ಟೆಸೀ:ವೆಬ್ ದುನಿಯಾ)
ಮೊದಲ ಬಾರಿಗೆ ತನ್ನ ಪುತ್ರ ಹೀರೋ ಆಗಿ ನಟಿಸದ ರಾಕೇಶ್ ರೋಶನ್ ಅವರ ಕಾಮಿಡಿ ಚಿತ್ರ 'ಕ್ರೇಜಿ 4'ನಲ್ಲಿ ತನ್ನ ಮೊಣಕಾಲು ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಹೃತಿಕ್ ಅಭಿನಯಿಸಲು ಸಿದ್ಧರಾಗಿದ್ದಾರೆ. ಎರಡು ವಾರಗಳ ಹಿಂದೆ ಸಿಂಗಾಪುರದಿಂದ ಮರಳಿದ್ದ ಹೃತಿಕ್ ಈಗ ಆಸ್ಟ್ರೇಲಿಯಾದಲ್ಲಿ ಗುಣಮುಖ ಹೊಂದುತ್ತಿದ್ದಾರೆ. ರಾಜಾ ಸೇನ್ ನಿರ್ದೇಶಿಸುತ್ತಿರುವ 'ಕ್ರೇಜಿ 4' ಹಾಸ್ ಚಿತ್ರದಲ್ಲಿ ಐಟಂ ಬಾಯ್ ಆಗಿ ಹೃತಿಕ್ ಕಾಣಿಸಿಕೊಳ್ಳಲಿದ್ದು,ಇದರಲ್ಲಿ ಆರ್ಶದ್ ವಾರ್ಸಿ, ಇರ್ಫಾನ್ ಖಾನ್, ಸುರೇಶ್ ಮೆನನ್ ಮತ್ತು ರಾಜ್‌ಪಾಲ್ ಯಾದವ್ ತಾರಾಗಣವಿಗದೆ. ಹೃತಿಕ ಇಲ್ಲದೆ ನಾನು ಹೇಗೆ ಚಿತ್ರ ಮಾಡುತ್ತೇನೆ ಎಂದು ಪ್ರೇಕ್ಷಕರು ಯಾವತ್ತೂ ಆಶ್ಚರ್ಯಪಡುತ್ತಿದ್ದರು.ಈ ಚಿತ್ರದಲ್ಲಿ ಹೃತಿಕ್ ಅವರು ತನ್ನ ವೃತ್ತಿ ಜೀವನದ ಮೊದಲ ಐಟಂ ಸಾಂಗ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ ಎಂದು ರಾಕೇಶ್ ರೋಶನ್ ಹೇಳಿದರು. ಚಿತ್ರದ ಹಾಡುಗಳನ್ನು ನನ್ನ ಸಹೋದರ ರಾಜೇಶ್ ರೋಶನ್ ಈಗಾಗಲೇ ರೆಕಾರ್ಡ್ ಮಾಡಿದ್ದು, ಇದನ್ನು ಮಾರ್ಚ್ 2008ರಲ್ಲಿ ಚಿತ್ರೀಕರಣ ನಡೆಸಲು ನಾನು ಎಲ್ಲಾ ಸಿದ್ಧತೆಗಳನ್ನು ನಡೆಸುತ್ತಿದ್ದೇನೆ. ಒಂದು ವೇಳೆ ಹೃತಿಕ‌ಗೆ ಮೊಣಕಾಲು ನೋವಿದ್ದಲ್ಲಿ ಹಾಡನ್ನು ಚಿತ್ರೀಕರಣ ಮಾಡುವುದಿಲ್ಲ ಎಂದು ಕಾಳಜಿಯುಕ್ತ ತಂದೆ ಹೇಳಿದರು. ರೋಶನ್ ಅವರು ನಿರ್ದೇಶಕ ವೃತ್ತಿಯಿಂದ ದೀರ್ಘ ರಜೆಯನ್ನು ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದು, ಅದಕ್ಕೂ ಮೊದಲು ತನ್ನ ನೂತನ ಚಿತ್ರವೊಂದು ಜುಲೈ 2008ರಲ್ಲಿ ಪ್ರಾರಂಭವಾಗಲಿದ್ದು, ಅದರಲ್ಲಿ ಹೃತಿಕ ಈ ಮೊದಿಗಿಂತಲೂ ವಿಶಿಷ್ಟವಾದ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.