Tuesday, July 15, 2008

ದರ್ಶನ್, ನವ್ಯ ನಾಯರ್ ಈಗ "ಬಸ್"


'ಗಜ' ಮತ್ತು 'ಇಂದ್ರ' ಹಿಟ್ ಚಿತ್ರಗಳ ನಂತರ ದರ್ಶನ್‌ರ ಮತ್ತೆರಡು ಚಿತ್ರಗಳು ತೆರೆ ಕಾಣಲು ರೆಡಿಯಾಗಿವೆ। ಈ ವರ್ಷದ ಬಿಗ್ ಹಿಟ್ ಚಿತ್ರವೆಂದರೆ ಗಜ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಒಂದು ವಿಧದಲ್ಲಿ ಲಕ್ಕಿ ಚಿತ್ರವೂ ಹೌದು. ಚಿತ್ರದಲ್ಲಿನ ಕೆಲ ಹಾಡುಗಳು ಪಡ್ಡೆಗಳನ್ನು ಹುಚ್ಚೆದ್ದು ಕುಣಿಸಿವೆ.ನಂತರ ಬಂದ 'ಇಂದ್ರ' ಚಿತ್ರದ 'ಗುಂ ಗುಂ ಗುಂಮ್ತಾನೆ' ಹಾಡು ಸಾಕಷ್ಟು ಜನಪ್ರಿಯತೆಯನ್ನೂ ಪಡೆದುಕೊಂಡಿತು.ಈ ಎರಡು ಯಶಸ್ವಿ ಚಿತ್ರಗಳ ನಂತರ ಆಗಸ್ಟ್ 15 ರಂದು 'ಅರ್ಜುನ' ಮತ್ತು ಸ್ವಂತ ಬ್ಯಾನರ್ ನಲ್ಲಿ ನಿರ್ಮಿಲಾಗಿರುವ 'ನವಗ್ರಹ' ಚಿತ್ರ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಅನಂತರ 'ಬಾಸ್' ಎನ್ನುವ ಚಿತ್ರಕ್ಕೆ ಸಹಿ ಹಾಕಿರುವ ದರ್ಶನ್, ಗಜ ಚಿತ್ರದ ನಾಯಕಿ ನವ್ಯಾ ನಾಯರ್ 'ಬಾಸ್' ಚಿತ್ರಕ್ಕೂ ನಾಯಕಿಯಾಗಿ ಅಭಿನಯಿಸಲಿದ್ದಾರೆ. ರಮೇಶ್ ಯಾದವ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ರೀರಾಜ್ ಎನ್ನುವ ಹೊಸಬರು ನಿರ್ದೇಶಕರು. 'ಅರ್ಜುನ' ಚಿತ್ರ ಈಗಾಗಲೇ ಆಸ್ಟ್ರೀಯಾ, ಜರ್ಮನಿ, ಬ್ಯಾಂಕಾಕ್, ಮೈಸೂರು ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮುಗಿಸಿಕೊಂಡಿದೆ. ಈ ಚಿತ್ರದಲ್ಲಿ ದರ್ಶನ್ ಪೊಲೀಸ್ ಅಧಿಕಾರಿಯಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಾನೆ. ಇದು ಕಥೆಯ ತಿರುಳು. ಇದರಲ್ಲಿ ದರ್ಶನ್ ಅಭಿನಯ ಮನಮೋಹಕ ಎನ್ನುತ್ತಾರೆ ನಿರ್ಮಾಪಕರು. ಖಳನಾಯಕನ ಪಾತ್ರದಲ್ಲಿ ಶರತ್ ಲೋಹಿತಾಶ್ವ, ಅಜಯ್, ಸುಮನ್ ಮತ್ತು ಅಮಿತ್ ನಟಿಸಿದ್ದಾರೆ. ಮೀರಾ ಚೋಪ್ರಾ ನಾಯಕಿಯಾಗಿ ನಟಿಸಿದ್ದಾರೆ.ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ದರ್ಶನ್, ಸ್ವಂತ ಬ್ಯಾನರ್ ತೂಗುದೀಪ ಪ್ರೊಡಕ್ಷನ್ ನಲ್ಲಿ ನಿರ್ಮಿಸುತ್ತಿರುವ 'ನವಗ್ರಹ' ಚಿತ್ರವನ್ನು ಸಹೋದರ ತೂಗುದೀಪ ದಿನಕರ್ ನಿರ್ದೇಶಿಸಲಿದ್ದಾರೆ. ಕನ್ನಡ ಚಿತ್ರರಂಗದ ಏಳು ಖಳನಟರ ಮಕ್ಕಳ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ದರ್ಶನ್, ವಿನೋದ ಪ್ರಭಾಕರ್, ಗಿರಿ ದಿನೇಶ್, ಸೃಜನ್ ಲೋಕೇಶ್, ತರುಣ್ ಸುಧೀರ್, ಧರ್ಮ ಕೀರ್ತಿರಾಜ್, ನಾಗೇಂದ್ರ ಅರಸ್ ಚಿತ್ರದಲ್ಲಿ ಕಾಣಿಸಲಿದ್ದಾರೆ. ಖಳನಟರ ಮಕ್ಕಳು ಒಟ್ಟಿಗೆ ನಟಿಸುವುದು ಭಾರತೀಯ ಚಿತ್ರರಂಗದಲ್ಲೇ ಪ್ರಥಮ ಎಂದು ಹರ್ಷ ವ್ಯಕ್ತಪಡಿಸಿದರು. ಶರ್ಮಿಳಾ ಮಾಂಡ್ರೆ ಮತ್ತು ವರ್ಷಾ ಈ ಚಿತ್ರದ ನಾಯಕಿರು ಎಂದು ದರ್ಶನ್ ಹೇಳಿದರು. ಛಾಯಾಗ್ರಾಹಕರಾಗಿ ಎ.ವಿ.ಕೃಷ್ಣಕುಮಾರ್ ಮತ್ತು ವಿ.ಹರಿಕೃಷ್ಣ ಸಂಗೀತ ನಿರ್ದೇಶಕರಾಗಿದ್ದಾರೆ ಎಂದು ತಮ್ಮ ಚಿತ್ರದ ಬಗ್ಗೆ ವಿವರಿಸಿದರು.
(ಕರ್ಟೆಸಿ: ದಟ್ಸ್ ಕನ್ನಡ)

Friday, July 11, 2008

'ಸ್ಲಂ ಬಾಲ' ರೆಡಿ ಟು ರಿಲಿಜ್

ವಿಶೇಷ ಅಂಕಣಗಳನ್ನು ಬರೆದು ಓದುಗರಿಗೆ ಅಚ್ಚುಮೆಚ್ಚಾಗಿದ್ದ ಪತ್ರಕರ್ತೆ ಸುಮನ ಕಿತ್ತೂರ ನಿರ್ದೇಶನದ ಪ್ರಥಮ ಚಿತ್ರ 'ಸ್ಲಂಬಾಲ'। ಚಿತ್ರಕ್ಕೆ ನಿಗದಿತ ಯೋಜನೆಯಂತೆ ಚಿತ್ರೀಕರಣ ಪೂರ್ಣವಾಗಿದ್ದು ಆಕಾಶ್ ಸ್ಟೂಡಿಯೊದಲ್ಲಿ ಮಾತುಗಳ ಜೋಡಣೆ ಪ್ರಕ್ರಿಯೆ ನಡೆಯುತ್ತಿದೆ ಎಂದು ಈ ಹಿಂದೆ 'ಆ ದಿನಗಳು' ಚಿತ್ರವನ್ನು ನಿರ್ಮಿಸಿದ್ದ, ಪ್ರಸ್ತುತ ಚಿತ್ರದ ನಿರ್ಮಾಪಕರಾದ ರವೀಂದ್ರ ಹಾಗೂ ಸೈಯ್ಯದ್ ಅಮಾನ್ ತಿಳಿಸಿದ್ದಾರೆ।ಬೆಂಗಳೂರು, ಮುಂಬೈ ಹಾಗೂ ಮುಂತಾದ ಕಡೆ ಚಿತ್ರೀಕರಣವಾದ ಈ ಚಿತ್ರವನ್ನು ಅಗ್ನಿಶ್ರೀಧರ್ ಅರ್ಪಿಸುತ್ತಿದ್ದಾರೆ। 'ಸ್ಲಂಬಾಲ'ನಿಗೆ ಕಥೆ, ಸಂಭಾಷಣೆ ಕೊಡುಗೆ ನೀಡಿರುವ ಅಗ್ನಿಶ್ರೀಧರ್ ನಿರ್ದೇಶಕರಿಗೆ ಚಿತ್ರಕಥೆ ರಚಿಸುವಲ್ಲೂ ನೆರವಾಗಿದ್ದಾರೆ। ಎ.ಸಿ.ಮಹೇಂದರ್ ಛಾಯಾಗ್ರಹಣ,ಅರ್ಜುನ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ, ದಿನೇಶ್ ಮಂಗ್ಳೂರ್ ಕಲೆ, ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ವಿಜಯ್, ಶುಭಾಪುಂಜಾ, ಉಮಾಶ್ರೀ, ಗಿರಿಜಾಲೋಕೇಶ್, ಶಶಿಕುಮಾರ್, ಅಚ್ಯುತ, ಧರ್ಮ, ಬಿ.ಸುರೇಶ್, ಸತ್ಯ ಮುಂತಾದವರಿದ್ದಾರೆ.
(ಕರ್ಟೆಸಿ: ದಟ್ಸ್ ಕನ್ನಡ)