ತಮ್ಮನ್ನು ತಾವು ವಿಭಿನ್ನ ಪಾತ್ರಗಳಿಗೆ ತೊಡಗಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದರ ಕನಸು. ಆ ಕನಸು ಎಲ್ಲ ಕಲಾವಿದರಿಗೂ ಕೈಗೂಡುವುದಿಲ್ಲ.ಆದರೆ ಮಾಜಿ ವಿಶ್ವ ಸುಂದರಿ ಹಾಲಿ ಬಾಲಿವುಡ್ ಬಿನ್ನಾಣಗಿತ್ತಿ ಐಶ್ವರ್ಯ ರೈ ಬಚ್ಚನ್ ಮಾತ್ರ ಇದಕ್ಕೆ ಅಪವಾದ. ಅವರು ವಿಭಿನ್ನ ಪಾತ್ರಗಳಲ್ಲಿ ನಟಿಸುತ್ತಾ ಪ್ರೇಕ್ಷಕರ ಪಾಲಿಗೆ ಸದಾ ಕಾಡುವ ನಟಿ. ಪ್ರಸ್ತುತ ಐಶ್ವರ್ಯ ರೈ ಹಾಲಿವುಡ್ ಚಿತ್ರವೊಂದರಲ್ಲಿ ಲೈಂಗಿಕ ಕಾರ್ಯಕರ್ತೆ ಪಾತ್ರದಲ್ಲಿ ಕಾಣಿಸಲಿದ್ದಾರೆ. 2001ರಲ್ಲಿ ಉತ್ತಮ ಚಿತ್ರ ಪ್ರಶಸ್ತಿ ಪಡೆದ ಫ್ರೆಂಚ್ ರಿಮೇಕ್ ಚಿತ್ರ ಇದಾಗಲಿದೆ. ಐಶ್ವರ್ಯ ರೈ ಅವರೊಂದಿಗೆ ಸಹ ನಟಿಯಾಗಿ ಅಮೆರಿಕಾದ ಮೆರಿಲ್ ಸ್ಟ್ರೀಪ್ ನಟಿಸಲಿದ್ದಾರೆ. 'ಜೋಧಾ ಅಕ್ಬರ್' ಹಾಗೂ 'ಗುರು' ಚಿತ್ರಗಳ ಉತ್ತಮ ಅಭಿನಯದ ನಂತರಐಶ್ ನಟಿಸುತ್ತಿರುವ ಮತ್ತೊಂದು ವಿಭಿನ್ನ ಚಿತ್ರ ಇದಾಗಲಿದೆ.ಸದ್ಯಕ್ಕೆ ರೋಬೋಟ್ ಹಾಗೂ ಮಣಿರತ್ನಂ ಸರ್ ಅವರ ಚಿತ್ರಗಳಲ್ಲಿ ಬ್ಯುಸಿಯಾಗಿದ್ದೇನೆ. ಹಾಲಿವುಡ್ನ ಈ ಚಿತ್ರಕ್ಕೆ ಡೇಟ್ಸ್ ಹೊಂದಿಸಿಕೊಳ್ಳುವುದೇ ದೊಡ್ಡ ತಲೆನೋವಾಗಿದೆ. ಬಿಗಿ ಒತ್ತಡದಲ್ಲಿ ನಟಿಸಬೇಕಾಗಿದೆ ಎನ್ನುತ್ತ್ತಾರೆ ಐಶ್. ಹಾಲಿವುಡ್ನ ಈ ಚಿತ್ರದಲ್ಲಿ ನಟಿಸಲು ಐಶ್ರನ್ನು ಕಾಡುತ್ತಿರುವುದು ಸಮಯ ಹೊಂದಾಣಿಕೆ. ಮಣಿರತ್ನಂರ ಹೊಸ ಚಿತ್ರದಲ್ಲಿ ನಟಿಸಲು ಆಕೆ ಸಜ್ಜಾಗುತ್ತಿದ್ದಾರೆ. ಸಮಯಾಭಾವದ ನಡುವೆ ಐಶ್ ಹಾಲಿವುಡ್ ಚಿತ್ರದಲ್ಲಿ ಹೇಗೆ ನಟಿಸುತ್ತಾರೆ ಎನ್ನುವುದೇ ಐಶ್ ಹಾಗೂ ಅವರ ಅಭಿಮಾನಿಗಳಿಗೆ ಕಾಡುತ್ತಿರುವ ಸಮಸ್ಯೆ.'ಬ್ರೈಡ್ ಅಂಡ್ ಪ್ರೆಜ್ಯೂಡೀಸ್', 'ದಿ ಮಿಸ್ಟ್ರೆಸ್ ಆಫ್ ಸ್ಪೈಸಸ್', 'ಪ್ರೊವೊಕ್ಡ್' ಹಾಗೂ 'ದ ಲಾಸ್ಟ್ ಲೆಜಿಯನ್ ' ಚಿತ್ರಗಳ ನಂತರ ಐಶ್ ನಟಿಸುತ್ತಿರುವ ಮತ್ತೊಂದು ಆಂಗ್ಲ ಚಿತ್ರ ಇದು. ಹರಾಲ್ಡ್ ನಿರ್ದೇಶನದ ಹಾಲಿವುಡ್ನ ಹಾಸ್ಯ ಪ್ರಧಾನ ಚಿತ್ರ 'ದಿ ಪಿಂಕ್ ಪಾಂಥರ್ ಡೀಕ್ಸ್' ತೆರೆ ಕಾಣಬೇಕಾಗಿದೆ. ಇದೆಲ್ಲದರ ನಡುವೆ ಹಾಲಿವುಡ್ನ ಇನ್ನೊಂದು ಚಿತ್ರಕ್ಕಾಗಿ ಅಮಿತಾಬ್ ಸೊಸೆ ಮಾತುಕತೆ ನಡೆಸಿದ್ದಾರೆ. ಒಟ್ಟಿನಲ್ಲಿ ಐಶ್ ಬಾಲಿವುಡ್ನಿಂದ ಹಾಲಿವುಡ್ನತ್ತ ಮುಖ ಮಾಡಿ ಎತ್ತರೆತ್ತರಕ್ಕೆ ಏರುತ್ತಿದ್ದಾರೆ.
(ಕರ್ಟೆಸಿ: ದಟ್ಸ್ ಕನ್ನಡ)
5 comments:
It could widen my imagination towards the things that you are posting.
It could widen my imagination towards the things that you are posting.
To the owner of this blog, how far youve come?You were a great blogger.
Baw, kasagad-sagad sa iya ubra blog!
Katon, Goukakyu no jutsu.
Post a Comment