(ಕರ್ಟೆಸೀ: ವನ್ ಇಂಡಿಯಾ)
ಫೆ.24ರ ಭಾನುವಾರ ಗೋಲ್ಡನ್ ಫಾಮ್ ರೆಸಾರ್ಟ್‌ನಲ್ಲಿ ಗಣೇಶ್-ಶಿಲ್ಪಾರ ಆರತಕ್ಷತೆ ಕಾರ್ಯಕ್ರಮಕ್ಕೆ ಇಡೀ ಕನ್ನಡ ಚಿತ್ರೋದ್ಯಮವೇ ಆಗಮಿಸಿತ್ತು. ಪ್ರಣಯರಾಜ ಶ್ರೀನಾಥ್ ದಂಪತಿಗಳು ನವ ವಧೂ-ವರನಿಗೆ ಶುಭಕೋರಲು ಆರತಕ್ಷತೆಗೆ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಶ್ರೀನಾಥ್ ಗೋಲ್ಡನ್ ಸ್ಟಾರ್ ಗಣೇಶ್‌ಗೆ ಮರೆಯಲಾಗದ ಉಡುಗೊರೆಯನ್ನು ಕೊಟ್ಟಿದ್ದಾರೆ. ಮೂರು ದಶಕಗಳಿಗೂ ಅಧಿಕ ಕಾಲದಿಂದ ''ಪ್ರಣಯರಾಜ'' ಎಂದು ಕರೆಸಿಕೊಳ್ಳುತ್ತಿರುವ ಶ್ರೀನಾಥ್ ಆ ಬಿರುದನ್ನು 1976ರಲ್ಲಿ ಪಡೆದುಕೊಂಡಿದ್ದರು. ಈಗ ''ಪ್ರಣಯರಾಜ'' ಕಿರೀಟವನ್ನ್ನು ಗಣೇಶ್‌ಗೆ ಕೊಡುವುದಾಗಿ ಶ್ರೀನಾಥ್ ಮತ್ತವರ ಪತ್ನಿ ಗೀತಾ ನಿರ್ಧರಿಸಿದ್ದಾರೆ. ನಾನೀಗ ಬೆಳ್ಳಿ ತೆರೆ ಯ''ಪ್ರಣಯರಾಜ''ನಾಗಿ ಉಳಿದಿಲ್ಲ. ಆದ್ದರಿಂದ ಈ ಕಿರೀಟವನ್ನು ಪ್ರಸ್ತುತ ಕನ್ನಡ ಚಿತ್ರರಂಗದ ಪ್ರಣಯರಾಜನ ಪಾತ್ರಗಳಲ್ಲಿ ಮಿಂಚುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್‌ಗೆ ವರ್ಗಾಯಿಸುತ್ತಿರುವುದಾಗಿ ಶ್ರೀನಾಥ್ ಪ್ರಕಟಿಸಿದ್ದಾರೆ. ಬರುವ ಯುಗಾದಿ ಹಬ್ಬದಂದು ಬೆಂಗಳೂರಿನ ಕಾರ್ಯಕ್ರಮದಲ್ಲಿ ''ಪ್ರಣಯರಾಜ'' ಕಿರೀಟ ಗಣೇಶ್ ತೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀನಾಥ್ ತುಂಬಾ ದಿನಗಳಿಂದ ತಮ್ಮಲ್ಲೇ ಅದುಮಿಟ್ಟುಕೊಂಡ ಆಸೆಯೊಂದನ್ನು ಪ್ರಕಟಿಸಿದರು. ಗಣೇಶ್ ನಾಯಕ ನಟನಾಗಿ ಶ್ರೀನಾಥ್ ಚಿತ್ರವೊಂದನ್ನು ನಿರ್ದೇಶಿಸುವುದಾಗಿ ತಿಳಿಸಿದ್ದಾರೆ. ಇದಕ್ಕಾಗಿ ಶ್ರೀನಾಥ್ ಎರಡು ಚಿತ್ರಕಥೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರವನ್ನು ತಮ್ಮ ಗುರು,ಗೆಳೆಯ, ಮಾರ್ಗದರ್ಶಿಯಾದ ಎಸ್.ಆರ್.ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸುವುದಾಗಿ ಶ್ರೀನಾಥ್ ತಿಳಿಸಿದರು.
ಈ ವರ್ಷದ ಆರಂಭದಲ್ಲೆ ಚಿತ್ರವನ್ನು ಕೈಗೆತ್ತಿಕೊಳ್ಳಬೇಕಾಗಿತ್ತು. ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಾಧ್ಯತೆ ಇರುವ ಕಾರಣ ರಾಜಕೀಯದಲ್ಲಿ ಕಾರ್ಯಮಗ್ನರಾಗಿ ನಿರ್ದೇಶನವನ್ನು ಪಕ್ಕಕ್ಕಿಟ್ಟರು. ಆದರೆ ಚುನಾವಣೆ ನವೆಂಬರ್‌ಗೆ ಮುಂಡೂಡಲ್ಪಡುವ ಸಾಧ್ಯತೆಗಳು ಇವೆ ಎಂಬ ಮತ್ತೊಂದು ಸುದ್ದಿ ಬಂದ ಕಾರಣ ಶ್ರೀನಾಥ್ ಅವರಿಗೆ ಸ್ವಲ್ಪ ಕಾಲಾವಕಾಶ ಸಿಕ್ಕಿದೆ. ಹಾಗಾಗಿ ನಿರ್ದೇಶನಕ್ಕೆ ಮುಂದಾಗಿರುವುದಾಗಿ ಶ್ರೀನಾಥ್ ತಿಳಿಸಿದ್ದಾರೆ. ಅವರು ನಿರ್ದೇಶಿಸಲಿರುವ ಚಿತ್ರದ ಬಗ್ಗೆ ಯಾವುದೇ ವಿವರಗಳೂ ಲಭ್ಯವಿಲ್ಲ. ಶ್ರೀನಾಥ್ ಅವರ ಆಪ್ತ ಸ್ನೇಹಿತರೊಬ್ಬರು ಈ ಚಿತ್ರಕ್ಕೆ ನಿರ್ಮಾಪಕ ಎಂದಷ್ಟೇ ಗೊತ್ತಿರುವ ವಿಚಾರ. ಇನ್ನು ಮುಂದೆ ಶ್ರೀನಾಥ್ ಹೆಸರಿನ ಮುಂದೆ ''ಪ್ರಣಯರಾಜ'' ಬದಲಾಗಿ ''ನಿರ್ದೇಶಕ'' ಎಂಬ ಬಿರುದು ಅಂಟಿಕೊಳ್ಳಲಿದೆ. ಸ್ವಲ್ಪ ಕಷ್ಟವಾಗಬಹುದು ನಿರ್ದೇಶಕ ಶ್ರೀನಾಥ್ ಎಂದು ಕರೆಯಲು. ಕೆಲವರು ಆದರ್ಶ ದಂಪತಿಗಳು ಶ್ರೀನಾಥ್ ಎಂದು ಕರೆಯುವುದೂ ಉಂಟು. ಅವರ ನಿರ್ದೇಶನದಲ್ಲಿ ಉತ್ತಮ ಚಿತ್ರಗಳು ಮೂಡಿ ಬರಲಿ ಎಂದು ಹಾರೈಸೋಣ.

No comments:
Post a Comment