
Monday, July 27, 2009
Monday, March 16, 2009
ನಾನು ಸಿಎಂ ಆದ್ರೆ
ಕನ್ನಡ ಮಾತನಾಡುವುದು ಕಡ್ಡಾಯ ಮಾಡುವುದಷ್ಟೇ ಅಲ್ಲ. ಕನ್ನಡವನ್ನು ಮಾತನಾಡದವರಿಗೆ ಯಾವುದೇ ಸೌಲಭ್ಯ ಕೂಡ ಕೊಡಬಾರದು ಎಂದು ಡಾ ವಿಷ್ಣುವರ್ಧನ್ ಅಬಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಸಿನಿ ಪತ್ರಕರ್ತರು ಆಯೋಜಿಸಿದ್ದ ಅಮೃತ ಮಾತು ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಕನ್ನಡವನ್ನು ಕಡ್ಡಾಯ ಮಾಡಬೇಕು. ಕನ್ನಡ ಮಾತನಾಡದವರಿಗೆ ಯಾವುದೇ ಸೌಲಭ್ಯ ಕೊಡಬಾರದು, ಭಾಷಾಭಿಮಾನ ಜನರ ರಕ್ತದಲ್ಲಿ ಬೆರೆಯುವಂತೆ ಮಾಡಬೇಕು. ಕನ್ನಡ ಕಲಿಯುವವರೆಗೂ ಬಿಡಬಾರದು ಎಂದರು. ನೀವು ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ ಏನು ಮಾಡುತ್ತೀರಾ ಎಂಬ ಪ್ರಶ್ನೆ ಸಾಹಸಸಿಂಹ ಮೇಲಿನ ಉತ್ತರ ನೀಡಿದರು.
ತಕ್ಷಣ ಪತ್ರಕರ್ತರೊಬ್ಬರು ಎದ್ದು ನಿಂತು ಇದು ಪ್ರಜಾಪ್ರಭುತ್ವಕ್ಕೆ ವಿರೋಧಿ ಕೆಲಸವಲ್ಲವೇ ಎಂದು ಕೇಳಿದರು. ಪ್ರಜಾಪ್ರಭುತ್ವ ಇಲ್ಲದಿದ್ದರೂ ಪರವಾಗಿಲ್ಲ. ಫ್ಯಾಸಿಸಂ ಬಂದರೂ ಪರವಾಗಿಲ್ಲ. ಈ ದೇಶಕ್ಕೆ ಬೋಧಿಸಿದ್ದು ಶಿಷ್ಟ ರಾಜಕೀಯ. ಆದರೆ, ಆಗುತ್ತಿರುವುದು ಬರೀ ದುಷ್ಟ ರಾಜಕೀಯ. ಹಾಗಾಗಿ ನೋ ಎಲೆಕ್ಷನ್, ಒನ್ಲಿ ಸೆಲೆಕ್ಷನ್ ಸರಿಯಾದ ಮಾರ್ಗ ಎಂದು ಅವರು ಅಭಿಪ್ರಾಯಪಟ್ಟರು.
ಹೊಗೇನಕಲ್ ವಿವಾದದ ಸಂದರ್ಭದಲ್ಲಿ ವಿಷ್ಣು ಹಾಗೂ ಅಂಬರೀಷ ಗೈರು ಹಾಜರಾಗಿದ್ದರ ಬಗ್ಗೆ ಪ್ರಸ್ತಾಪವಾದಾಗ, ನಾವ್ಯಾಕೆ ಬರಲಿಲ್ಲ ಎಂಬ ಪ್ರಶ್ನೆ ಮುಖ್ಯವಲ್ಲ. ಸಮಸ್ಯೆ ಬಗೆಹರಿಯಿತಾ ಎಂಬುದೊಂದೇ ಸರಿಯಾದ ಪ್ರಶ್ನೆ. ನಾವು ಅಂದು ಬರದಿದ್ದರೂ ಇರುವ ಜಾಗದಲ್ಲೇ ಸ್ಪಂದಿಸಿದೆವು ಎಂದರು.
(ಕರ್ಟೆಸೀ: ದಟ್ಸ್ ಕನ್ನಡ)
Saturday, March 14, 2009
Saturday, March 7, 2009
Thursday, February 5, 2009
ಸೋನಿಯಾ ಗಾಂಧಿಯಾಗಲಿರುವ ಕತ್ರಿನಾ ಕೈಫ್..!
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಪಾತ್ರಕ್ಕೆ ಬಾಲಿವುಡ್ ಲೇಟೆಸ್ಟ್ ಸೆನ್ಸೇಷನ್ ಹುಡುಗಿ ಕತ್ರಿನಾ ಕೈಫ್ ಹಾಗೂ ಸೋನಿಯಾ ಗಂಡನಾಗಿ ರಾಜೀವ್ ಗಾಂಧಿ ಪಾತ್ರಕ್ಕೆ ರಣಬೀರ್ ಕಪೂರ್ ಆಯ್ಕೆಯಾಗಿದ್ದಾರಂತೆ..!
ಪ್ರಕಾಶ್ ಝಾರವರ 'ರಾಜ್‌ನೀತಿ' ಚಿತ್ರಕ್ಕಾಗಿ ಈ ಕಸರತ್ತು ನಡೆದಿದೆ. ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿಯನ್ನು ರಣಬೀರ್ ಕಪೂರ್ ಮತ್ತು ಕತ್ರಿನಾ ಕೈಫ್ ಹೋಲುವ ಕಾರಣ ಈ ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.IFMನಿಜ ಜೀವನವನ್ನೇ ತೆರೆಗೂ ತರುತ್ತಿರುವುದರಿಂದ ರಾಜೀವ್ ಸಾವಿನ ನಂತರ ರಾಜಕೀಯಕ್ಕಿಳಿಯುವ ಸೋನಿಯಾ ಪಾತ್ರವನ್ನು ಕತ್ರಿನಾ ನಿಭಾಯಿಸಲಿದ್ದಾರೆ. ಇಲ್ಲಿಆಕೆ ಪಕ್ಷವನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳುವ ಪಾತ್ರದಲ್ಲಿ ಮಿಂಚಲಿದ್ದಾರೆ. ಸೋನಿಯಾ ಪೂರ್ವಾಪರವನ್ನೂ ಚಿತ್ರದಲ್ಲಿ ಬಿಂಬಿಸುತ್ತಿರುವ ಕಾರಣ ಗ್ಲಾಮರ್ ಅಗತ್ಯ. ಹಾಗಾಗಿ ಕತ್ರಿನಾಳನ್ನು ಆರಿಸಲಾಗಿದೆ ಎಂದು ಹೇಳಲಾಗಿದೆ.
ನಂತರ ಸುದ್ದಿಗಾರರ ಎದುರಿಗೆ ಸಿಕ್ಕ ಆಕೆಯನ್ನೇ ಈ ಬಗ್ಗೆ ಕೇಳಿದಾಗ ಉತ್ತರಿಸಲು ನಿರಾಕರಿಸಿದ್ದಾಳೆ. ಆದರೆ ಇತ್ತೀಚೆಗೆ 'ಸಾಮ್ನಾ'ದಲ್ಲಿ ಕತ್ರಿನಾ-ಸಲ್ಮಾನ್ ಮದುವೆ ವರದಿಯಾಗಿದ್ದ ಬಗ್ಗೆ ಕತ್ರಿನಾಳನ್ನು ಪ್ರಶ್ನಿಸಿದಾಗ, "ಆ ವರದಿಯೇ ಸುಳ್ಳು ಮತ್ತು ಇದನ್ನು ಪತ್ರಿಕೆಯೇ ಸ್ಪಷ್ಟಪಡಿಸಿದೆ. ನಾನು ಮದುವೆಯಾದಾಗ ಜಗತ್ತಿಗೇ ಗೊತ್ತಾಗುತ್ತದೆ. ಸದ್ಯಕ್ಕೆ ಅಂತಹ ಯಾವುದೇ ಯೋಜನೆಗಳಿಲ್ಲ" ಎಂದಿದ್ದಾಳೆ.ನಂತರ ಸಲ್ಮಾನ್ ಸಂಬಂಧದ ಬಗ್ಗೆ ಮಾತನಾಡುತ್ತಾ ಆಕೆ, "ಅದಕ್ಕೆ ಯಾವ ನಿರ್ಬಂಧಗಳೂ ಇಲ್ಲ. ನೀವೊಂದು ಸಾರ್ವಜನಿಕ ವ್ಯಕ್ತಿಯಾದ ಕಾರಣಕ್ಕೆ ಪ್ರತಿಯೊಂದನ್ನೂ ಸ್ಪಷ್ಟಪಡಿಸುತ್ತಾ ಹೋಗಲು ಸಾಧ್ಯವಿಲ್ಲ. ಇಂತಹ ಗಾಳಿಸುದ್ದಿಗಳಿಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅಷ್ಟಕ್ಕೂ ಖಾಸಗಿ ಸಂಬಂಧಗಳನ್ನು ಹೊರಗಡೆ ಯಾಕೆ ಹೇಳಿಕೊಳ್ಳಬೇಕು" ಎಂದು ಜಾರಿಕೊಂಡಿದ್ದಾಳೆ.
(ಕರ್ಟಸಿ: ವೆಬ್ ದುನಿಯಾ)
Saturday, January 31, 2009
Monday, January 19, 2009
'ಪೊಲ್ಲದವನ್' ಟು ಬಿ ರೀಮೇಡ್ ಇನ್ ಕನ್ನಡ ವಿತ್ ಯೋಗೇಶ್
ತಮಿಳಿನ 'ಕಾದಲ್ ಕೊಂಡೇನ್' ಚಿತ್ರ ಕನ್ನಡದಲ್ಲಿ 'ರಾವಣ' ಆಯಿತು। ಈಗ ತಮಿಳಿನ ಮತ್ತೊಂದು ಚಿತ್ರ 'ಪೊಲ್ಲಾದವನ್' ಕನ್ನಡದಲ್ಲಿ 'ಪುಂಡ'ನಾಗಿ ಬರುತ್ತಿದೆ. ಪೊಲ್ಲಾದವನ್ ಚಿತ್ರದಲ್ಲಿ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ರ ಅಳಿಯ ಧನುಶ್ ಮತ್ತು ಕನ್ನಡ ಹುಡುಗಿ ರಮ್ಯಾ ಅಭಿನಯಿಸಿದ್ದರು.ಗಲ್ಲಾಪೆಟ್ಟಿಗೆಯಲ್ಲಿ ಜಯಗಳಿಸಿದ ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದೆ.ಲೂಸ್ ಮಾದ ಖ್ಯಾತಿಯ ಯೋಗೀಶ್ ರನ್ನು ತಮಿಳಿನ ಧನುಶ್ ಪಾತ್ರಕ್ಕೆ ಗಾಂಧಿನಗರ ಹೋ
ಲಿಸುತ್ತಿದೆ। ಕಾರಣ ಯೋಗೀಸ್ ಮತ್ತು ಧನುಶ್ ಅವರ ಮೈಬಣ್ಣ ಮತ್ತು ದೇಹಗಳು ಒಂದಕ್ಕೊಂದು ಮ್ಯಾಚ್ ಆಗುತ್ತಿವೆಯಂತೆ! ಈ ಕಾರಣಕ್ಕೆ ಇರಬೇಕು ತಮಿಳಿನಲ್ಲಿ ಧನುಶ್ ಮಾಡಿದ ಪಾತ್ರವನ್ನು ನಮ್ಮ ಯೋಗಿಶ ಕನ್ನಡದಲ್ಲಿ ಮಾಡಲು ಹೊರಟಿದ್ದಾರೆ. ಈಗಾಗಲೇ ಕಾದಲ್ ಕೊಂಡೇನ್ ಕನ್ನಡ ಅವತರಿಣಿಕೆ 'ರಾವಣ' ಚಿತ್ರಕ್ಕೆ ತಯಾರಿ ಆರಂಭವಾಗಿದೆ. ಈಗ ಇನ್ನೊಂದು ರಿಮೇಕ್ ಚಿತ್ರದ ಸಿದ್ಧತೆಯಲ್ಲಿದೆ ಗಾಂಧಿನಗರ.
ಲಿಸುತ್ತಿದೆ। ಕಾರಣ ಯೋಗೀಸ್ ಮತ್ತು ಧನುಶ್ ಅವರ ಮೈಬಣ್ಣ ಮತ್ತು ದೇಹಗಳು ಒಂದಕ್ಕೊಂದು ಮ್ಯಾಚ್ ಆಗುತ್ತಿವೆಯಂತೆ! ಈ ಕಾರಣಕ್ಕೆ ಇರಬೇಕು ತಮಿಳಿನಲ್ಲಿ ಧನುಶ್ ಮಾಡಿದ ಪಾತ್ರವನ್ನು ನಮ್ಮ ಯೋಗಿಶ ಕನ್ನಡದಲ್ಲಿ ಮಾಡಲು ಹೊರಟಿದ್ದಾರೆ. ಈಗಾಗಲೇ ಕಾದಲ್ ಕೊಂಡೇನ್ ಕನ್ನಡ ಅವತರಿಣಿಕೆ 'ರಾವಣ' ಚಿತ್ರಕ್ಕೆ ತಯಾರಿ ಆರಂಭವಾಗಿದೆ. ಈಗ ಇನ್ನೊಂದು ರಿಮೇಕ್ ಚಿತ್ರದ ಸಿದ್ಧತೆಯಲ್ಲಿದೆ ಗಾಂಧಿನಗರ. ರಮ್ಯಾ ಸ್ಥಾನಕ್ಕೆ ಹರಿಪ್ರಿಯಾ ಬರುವ ಸಾಧ್ಯತೆಗಳಿವೆ। ಹಾಗೆಯೇ ಕಿಶೋರ್ ಮಾಡಿದ ಪಾತ್ರವನ್ನು ಅವರಿಂದಲೇ ಮಾಡಿಸುವ ತಯಾರಿ ನಡೆದಿದೆ. 'ಪೊಲ್ಲಾದವನ್' ತಮಿಳು ಚಿತ್ರದಲ್ಲಿನ ಕಿಶೋರ್ ಅವರ ಅಭಿನಯ ತಮಿಳುನಾಡಿನಲ್ಲಿ ಮನೆಮಾತಾಗಿತ್ತು.ತಮಿಳು, ತೆಲುಗಿನಲ್ಲಿ ಯಶಸ್ವಿಯಾದ ಚಿತ್ರಗಳು ಸಾಲುಸಾಲಾಗಿ ಕನ್ನಡಕ್ಕೆ ರೀಮೇಕ್ ಆಗುತ್ತಿವೆ. ಈಗ ಪೊಲ್ಲಾದವನ್ ಆ ಸರಣಿಯನ್ನು ಮುಂದುವರಿಸಿದೆ ಅಷ್ಟೆ!
ಶ್ರೀವೆಂಕಟ್
Tuesday, January 13, 2009
Wednesday, December 31, 2008
ಕನ್ನಡ ಪ್ರೇಮಿ ಪೂಜಾಗಾಂಧಿ...

ಪರ ಭಾಷಾ ನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಪೂಜಾಗಾಂಧಿ ಈಗ ಕನ್ನಡಿಗರೇ ಆಗಿ ಹೋಗಿದ್ದಾರೆ. ಅಲ್ಪಾವಧಿಯಲ್ಲೇ ಕನ್ನಡ ಕಲಿಯುವ ಮೂಲಕ ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ. ತಾವು ನಟಿಸಿರುವ 'ನಿನಗಾಗಿ ಕಾದಿರುವೆ' ಚಿತ್ರಕ್ಕೆ ಸ್ವತಃ ತಾವೇ ಡಬ್ ಮಾಡಿದ್ದಾರೆ.
ಈ ಚಿತ್ರವನ್ನು ಸಾಹಸ ನಿರ್ದೇಶಕ ಜಾಲಿ ಬಾಸ್ಟಿನ್ ನಿರ್ದೇಶಿಸುತ್ತಿದ್ದಾರೆ. ಹಿಂದೆ ಇವರು 'ಯಾರೇ ನೀ ಯಾಮಿನಿ' ಚಿತ್ರಕ್ಕೆ ಮುಹೂರ್ತ ಮಾಡಿದ್ದರು. ಆದರೆ ಚಿತ್ರ ಒಂದು ವಾರದಲ್ಲಿ ಪ್ಯಾಕಪ್ ಆಯಿತು. ಈಗ 'ನಿನಗಾಗಿ...' ಚಿತ್ರವನ್ನು ಪೂರ್ಣಗೊಳಿಸಿ, ಚಿತ್ರದ ಧ್ವನಿಸುರುಳಿಯೂ ಬಿಡುಗಡೆಯಾಗಿದೆ.
ಪೂಜಾ ಅವರ ಕನ್ನಡದ ಮೇಲಿನ ಅಭಿಮಾನ ಕಂಡರೆ ಖುಷಿಯಾಗುತ್ತದೆ. ಇದೇ ಮೊದಲಾಗಿರುವುದರಿಂದ ಕೆಲವು ತಿದ್ದುಪಡಿ ಮಾಡಿಕೊಂಡು, ಕಷ್ಟಪಟ್ಟು ಮಾಡಿದ್ದಾರೆ. ಅದಕ್ಕಾಗಿ ಅವರ ಪಾತ್ರವನ್ನೇ ಹಾಗೆ ಬೆಸೆದಿದ್ದೇವೆ. ಚಿತ್ರದಲ್ಲಿ ಪೂಜಾ ದಿಲ್ಲಿಯಿಂದ ಬೆಂಗಳೂರಿಗೆ ಬಂದ ಹುಡುಗಿಯಾಗಿರುತ್ತಾಳೆ. ಆದ್ದರಿಂದ ಹರಕು ಮುರುಕಾಗಿ ಮಾತನಾಡಿದರೂ ಅಡ್ಡಿ ಇಲ್ಲ. ದಿಲ್ಲಿಯಿಂದ ಬಂದಿರುವ ಹುಡುಗಿಯಾದ್ದರಿಂದ ಹೀಗೆ ಮಾತನಾಡುತ್ತಾರೆ ಎಂದು ಜನ ಭಾವಿಸುತ್ತಾರೆ ಎಂದರು ನಿರ್ದೇಶಕರು.
(ಕರ್ಟೆಸೀ: ವೆಬ್ ದುನಿಯಾ)
Friday, November 21, 2008
Subscribe to:
Posts (Atom)














































