
Saturday, January 31, 2009
Monday, January 19, 2009
'ಪೊಲ್ಲದವನ್' ಟು ಬಿ ರೀಮೇಡ್ ಇನ್ ಕನ್ನಡ ವಿತ್ ಯೋಗೇಶ್
ತಮಿಳಿನ 'ಕಾದಲ್ ಕೊಂಡೇನ್' ಚಿತ್ರ ಕನ್ನಡದಲ್ಲಿ 'ರಾವಣ' ಆಯಿತು। ಈಗ ತಮಿಳಿನ ಮತ್ತೊಂದು ಚಿತ್ರ 'ಪೊಲ್ಲಾದವನ್' ಕನ್ನಡದಲ್ಲಿ 'ಪುಂಡ'ನಾಗಿ ಬರುತ್ತಿದೆ. ಪೊಲ್ಲಾದವನ್ ಚಿತ್ರದಲ್ಲಿ ತಮಿಳು ಸೂಪರ್ ಸ್ಟಾರ್ ರಜನೀಕಾಂತ್ ರ ಅಳಿಯ ಧನುಶ್ ಮತ್ತು ಕನ್ನಡ ಹುಡುಗಿ ರಮ್ಯಾ ಅಭಿನಯಿಸಿದ್ದರು.ಗಲ್ಲಾಪೆಟ್ಟಿಗೆಯಲ್ಲಿ ಜಯಗಳಿಸಿದ ಈ ಚಿತ್ರವನ್ನು ಕನ್ನಡಕ್ಕೆ ರಿಮೇಕ್ ಮಾಡಲಾಗುತ್ತಿದೆ.
ಲಿಸುತ್ತಿದೆ। ಕಾರಣ ಯೋಗೀಸ್ ಮತ್ತು ಧನುಶ್ ಅವರ ಮೈಬಣ್ಣ ಮತ್ತು ದೇಹಗಳು ಒಂದಕ್ಕೊಂದು ಮ್ಯಾಚ್ ಆಗುತ್ತಿವೆಯಂತೆ! ಈ ಕಾರಣಕ್ಕೆ ಇರಬೇಕು ತಮಿಳಿನಲ್ಲಿ ಧನುಶ್ ಮಾಡಿದ ಪಾತ್ರವನ್ನು ನಮ್ಮ ಯೋಗಿಶ ಕನ್ನಡದಲ್ಲಿ ಮಾಡಲು ಹೊರಟಿದ್ದಾರೆ. ಈಗಾಗಲೇ ಕಾದಲ್ ಕೊಂಡೇನ್ ಕನ್ನಡ ಅವತರಿಣಿಕೆ 'ರಾವಣ' ಚಿತ್ರಕ್ಕೆ ತಯಾರಿ ಆರಂಭವಾಗಿದೆ. ಈಗ ಇನ್ನೊಂದು ರಿಮೇಕ್ ಚಿತ್ರದ ಸಿದ್ಧತೆಯಲ್ಲಿದೆ ಗಾಂಧಿನಗರ. Tuesday, January 13, 2009
Wednesday, December 31, 2008
ಕನ್ನಡ ಪ್ರೇಮಿ ಪೂಜಾಗಾಂಧಿ...

(ಕರ್ಟೆಸೀ: ವೆಬ್ ದುನಿಯಾ)
Friday, November 21, 2008
Saturday, October 11, 2008
ಅಗ್ನಿ ಶ್ರೀಧರ್ ಬತ್ತಳಿಕೆಯಲ್ಲಿನ ಹೊಸ ಅಸ್ತ್ರ!
'ಆ ದಿನಗಳು' ಯಶಸ್ವಿಯ ನಂತರ 'ದಾದಾಗಿರಿಯ ದಿನಗಳ' ಜಾಡಿನಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಚಿತ್ರ 'ಸ್ಲಂ ಬಾಲ'. ಎರಡೇ ಎರಡು ಹಾಡುಗಳನ್ನು ಹೊಂದಿರುವ ಈ ಚಿತ್ರದ ಧ್ವನಿ ಸುರುಳಿ ಇತ್ತೀಚೆಗಷ್ಟೆ ಹೊಟೇಲ್ ಏಟ್ರಿಯಾದಲ್ಲಿ ಹಲವು ಚಿತ್ರೋದ್ಯಮದ ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು. ಪತ್ರಕರ್ತೆಯರಾದ ಸಂಯುಕ್ತ ಕರ್ನಾಟಕದ ಕೆ.ಎಚ್.ಸಾವಿತ್ರಿ ಹಾಗೂ ಸಿನಿಮಾ ಮಾಸಿಕ 'ಚಿತ್ರಾ'ದ ತುಂಗರೇಣುಕ ಮತ್ತು ಸರಸ್ವತಿ ಜಾಹಗೀರ್ ದಾರ್ ಧ್ವನಿಸುರುಳಿಯನ್ನು ಬಿಡುಗಡೆ ಮಾಡಿದರು. ಸ್ಲಂ ಬಾಲನ ನಿರ್ದೇಶನದ ಜವಾಬ್ದಾರಿ ಹೊತ್ತಿರುವ 'ಅಗ್ನಿ' ವಾರಪತ್ರಿಕೆ ಪತ್ರಕರ್ತೆ ಡಿ.ಸುಮನಾ ಕಿತ್ತೂರು ಈ ಎರಡು ಹಾಡುಗಳನ್ನು ರಚಿಸಿದ್ದಾರೆ.ಬರಹಗಾರ ಹಾಗೂ 'ಅಗ್ನಿ ' ವಾರಪತ್ರಿಕೆಯ ಸಂಪಾದಕ ಶ್ರೀಧರ್ ಮಾತನಾಡುತ್ತಾ, ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ, ಜವಾಬ್ದಾರಿಯುತವಾದ ಚಿತ್ರಗಳನ್ನು ನಿರ್ಮಿಸಬೇಕಾಗಿದೆ ಎಂದರು. ಸುಮನಾ ಕಿತ್ತೂರು ಅವರು ಈ ಚಿತ್ರವನ್ನು ಮಾಡಲು ಬಹಳಷ್ಟು ಹೆಣಗಿದ್ದಾರೆ. ಪ್ರತಿ ಫ್ರೇಂನಲ್ಲೂ ಅವರ ಪ್ರತಿಭೆ ಎದ್ದು ಕಾಣುತ್ತದೆ. ಸ್ಲಂ ಬಾಲನ ಪಾತ್ರದಲ್ಲಿ ಕಾಣಿಸುವ ವಿಜಯ್ ಸಹ ಈ ಪಾತ್ರಕ್ಕಾಗಿ ಬಹಳಷ್ಟು ಶ್ರಮಿಸಿದ್ದಾರೆ. ನನ್ನ ಪುಸ್ತಕದಲ್ಲಿನ ಮತ್ತೊಂದು ಪಾತ್ರವಾದ ರಜ್ಜುವಿನ ಪಾತ್ರ ನಿರೂಪಣೆ ಅದ್ಭುತವಾಗಿ ಮೂಡಿಬಂದಿದೆ ಎಂದು ಶ್ರೀಧರ್ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಶ್ರೀಧರ್ ಮತ್ತೊಂದು ವಿಷಯವನ್ನ್ನು ತಿಳಿಸಿದರು. ಮಲಯಾಳಂ ನಟ ಮೋಹನ್ ಲಾಲ್ ಅವರೊಂದಿಗೆ ಚಿತ್ರವನ್ನು ನಿರ್ದೇಶಿಸುವ ಇಂಗಿತವನ್ನು ಅವರು ವ್ಯಕ್ತಪಡಿಸಿದರು. ಮುಂದಿನ ವರ್ಷಮೋಹನ್ ಲಾಲ್ ಕಾಲ್ ಷೀಟ್ ಸಿಗುವ ಸಾಧ್ಯತೆಗಳಿವೆ.ತಮ್ಮ ಬತ್ತಳಿಕೆಯಲ್ಲಿ ಸಾಕಷ್ಟು ಅಸ್ತ್ರಗಳನ್ನು ಇಟ್ಟುಕೊಂಡಿರುವ ಅಗ್ನಿ ಶ್ರೀಧರ್, ಮುಂದಿನ ದಿನಗಳಲ್ಲಿ ಅವುಗಳನ್ನು ಒಂದಾಗಿ ಪ್ರಯೋಗಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸುವ ದಿನಗಳು ದೂರವಿಲ್ಲ.
ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಕವಿ ಸಿದ್ಧಲಿಂಗಯ್ಯ, ಇಂದುಧರ ಹೊನ್ನಾಪುರ, ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಚ್.ಡಿ.ಗಂಗರಾಜು, ನಿರ್ಮಾಪಕ ಕನಕಪುರ ಶ್ರೀನಿವಾಸ್, ನಾಯಕ ನಟ ವಿಜಯ್ ಹಾಗೂ ನಾಯಕಿ ಶುಭಾ ಪುಂಜಾ ಉಪಸ್ಥಿತರಿದ್ದರು. ಇಂದುಧರ ಹೊನ್ನಾಪುರ ಮಾತನಾಡುತ್ತಾ, ಸ್ಲಂ ಬಾಲ ಎಲ್ಲ ಚಿತ್ರಗಳಂತಲ್ಲದ ಉತ್ತಮ ಗುಣಮಟ್ಟದಿಂದ ಕೂಡಿದ ಚಿತ್ರ ಎಂದರು. ಈ ರೀತಿಯ ಚಿತ್ರ ಕನ್ನಡದಲ್ಲಿ ಮಾತ್ರ ಮಾಡಲು ಸಾಧ್ಯ. ಜೀವನದ ಪ್ರತಿ ಹೆಜ್ಜೆಯಲ್ಲೂ ಭೂಗತ ಜಗತ್ತು ಹೇಗೆ ತನ್ನ ಕರಾಳ ಹಸ್ತಗಳನ್ನು ಚಾಚಿದೆ ಎಂಬುದು ಈ ಚಿತ್ರ ನೋಡಿದ ನಂತರ ತಿಳಿಯುತ್ತದೆ ಎಂದು 'ಸ್ಲಂ ಬಾಲ'ನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Thursday, October 9, 2008
ಪೂಜಾಗಾಂಧಿ ಜನ್ಮ ದಿನೊತ್ಸವ
ಕನ್ನಡಕ್ಕೆ ಸಿಕ್ಕ ಕನ್ನಡವರೇ ಆದ ಕನ್ನಡೇತರ ನಟಿ ಪೂಜಾಗಾಂಧಿ! ಕನ್ನಡ ಚಿತ್ರರಂಗದಲ್ಲಿ 'ಮುಂಗಾರು ಮಳೆ' ಹುಯ್ಯುವ ತನಕ ಅಪರಿಚರಾಗಿದ್ದು ನಂತರ ದಿಢೀರನೆ ಖ್ಯಾತಿಯ ಉತ್ತುಂಗ ಏರಿದ ಹುಡುಗಿ. ಮಿಲನದ ಮೂಲಕ ಮುಂಗಾರು ಮಳೆಯನ್ನು ಮರೆಸಿ ತಾಜ್ ಮಹಲ್ ಹಾಗೂ ಬುದ್ಧಿವಂತನ ಮೂಲಕ ಕನ್ನಡ ಚಿತ್ರರಸಿಕರನ್ನ್ನುಕಾಡುತ್ತಿರುವ ನಟಿ. ಇಂದು ಪೂಜಾಗಾಂಧಿಯ ಜನುಮದಿನ ಎಂದು ಹೇಳಲಷ್ಟೇ ಇಷ್ಟೆಲ್ಲಾ ಪೀಠಿಕೆ। ಹೆಂಗಸರ ವಯಸ್ಸು, ಗಂಡಸರ ಸಂಬಳ ಕೇಳಬಾರದು ಎಂಬ ಗಾದೆಯೇ ಇರುವುದರಿಂದ ಪೂಜಾ ವಯಸ್ಸು ಇಲ್ಲಿ ಅಪ್ರಸ್ತುತ. ಪ್ರಸ್ತುತ ಪೂಜಾ 'ಗಾಂಧಿ'ನಗರದಲ್ಲಿ ಬ್ಯುಸಿಯಾಗಿರುವ ನಟಿ. ಜನುಮದ ಗೆಳತಿ, ಮಹರ್ಷಿ, ಅನು ಚಿತ್ರಗಳು ತೆರೆಕಾಣಬೇಕಾಗಿವೆ। ತಮಿಳಿನಲ್ಲಿ ಅರ್ಜುನ್ ಸರ್ಜಾ ಜತೆ ಒಂದು ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ಇಂದು ಅವರು ಬೆಂಗಳೂರಿನ ರಮಣಶ್ರೀ ಅಂಧರ ಶಾಲೆಯ ಮಕ್ಕಳ ಜೊತೆ ಸ
ರಳವಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.Monday, October 6, 2008
ಮದಕರಿ ಸುದೀಪರ ಕಳ್ಳ ಪೊಲೀಸ್ ಆಟ

Monday, September 29, 2008
ಗಾನಕೋಗಿಲೆ ಲತಾ ಮಂಗೇಶ್ಕರ್ ಜನ್ಮದಿನೋಸ್ತವ
ತಮ್ಮ ಅಪ್ರತಿಮ ಕಂಠದ ಮೂಲಕ ಆರು ದಶಕಗಳಿಂದ ಸಂಗೀತ ಪ್ರೇಮಿಗಳ ಮನಗೆಲ್ಲುತ್ತಿರುವ ಗಾನಕೋಗಿಲೆ ಲತಾ ಮಂಗೇಶ್ಕರ್ 80ನೇ ವರ್ಷಕ್ಕೆ ಅಡಿಯಿಟ್ಟರು। ಭಾನುವಾರ ಪುಣೆಯ ತಮ್ಮ ಮನೆಯಲ್ಲಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು. ಪುಣೆಯ ಬಾಲಗಂಗಾಧರ್ ರಂಗ ಮಂದಿರದಲ್ಲಿ ಲತಾ ಅವರ ಸಹೋದರ ಹೃದನಾಥ್ ಮಂಗೇಶ್ಕರ್ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದರು.ವಿಕ್ರಂ ಭಟ್ ರ ''1920'' ಎಂಬ ಬಾಲಿವುಡ್ ಚಿತ್ರದಲ್ಲಿ ಲತಾ ಅವರು ಪಂಡಿತ್ ಜಸ್ ರಾಜ್ ಹಾಗೂ ಆಶಾ ಬೋಂಸ್ಲೆ ಯೊಂದಿಗೆ ತೀರಾ ಇತ್ತೀಚೆಗಷ್ಟೆ ಹಾಡಿದ್ದರು। ತಮ್ಮ 75 ನೇ ಹುಟ್ಟುಹಬ್ಬವನ್ನು ಲತಾ ಮಂಗೇಶ್ಕರ್ ಮುಂಬೈನ ತಮ್ಮ ನಿವಾಸದಲ್ಲಿ ಆಚರಿಸಿಕೊಂಡಿದ್ದರು. ಆಗ ಅವರ ಹುಟ್ಟು ಹಬ್ಬದ ಸಮಾರಂಭಕ್ಕೆ ಶರದ್ ಪವಾರ್, ಎಲ್.ಕೆ.ಅಡ್ವಾಣಿ ಹಾಜರಾಗಿದ್ದರು. ಅವರು ತಮ್ಮ ಹುಟ್ಟುಹಬ್ಬವನ್ನು ಮುಂಬೈಯಲ್ಲಿ ಆಚರಿಸಿಕೊಂಡಿದ್ದೆ ವಿರಳ. ಅವರು ಯಾವತ್ತು ಪುಣೆ ಅಥವಾ ಕೊಲ್ಲಾಪುರದ ತಮ್ಮ ನಿವಾಸಗಳಲ್ಲಿ ಸರಳವಾಗಿ, ಖಾಸಗಿಯಾಗಿ ಹುಟ್ಟುಹಬ್ಬವನ್ನು ಆಚರಿಕೊಳ್ಳುತ್ತಿದ್ದರು.
ಖ್ಯಾತ ರಂಗಭೂಮಿ ಕಲಾವಿದ ದೀನಾನಾಥ್ ಮಂಗೇಶ್ಕರ್ ಪುತ್ರಿಯಾಗಿ ಲತಾ ಮಂಗೇಶ್ಕರ್ ಜನಿಸಿದ್ದು 1929ರಲ್ಲಿ। ತಂದೆ ಅಕಾಲಿಕ ಮರಣಕ್ಕೀಡಾದಾಗ 13ರ ಹರಯದಲ್ಲಿದ್ದ ಲತಾ ಅವರಿಗೆ ಸಂಸಾರದ ಹೊಣೆ ಹೆಗಲೇರಿತು. ಸಂಸಾರ ನೌಕೆಯನ್ನು ಸಾಗಿಸಲು ಮೊದಲು ಲತಾ ಆಯ್ಕೆ ಮಾಡಿಕೊಂಡಿದ್ದು ನಟನೆಯನ್ನು. ಹಾಗಾಗಿ ಅವರು ಒಂಬತ್ತು ಚಿತ್ರಗಳಲ್ಲಿ ನಟಿಸಿದ್ದಾರೆ. ನಂತರ ಹಾಡಲು ಅವಕಾಶಗಳು ದೊರೆತ ಬಳಿಕ ಗಾಯಕಿಯಾಗಿ ಬದಲಾದರು.
ಆರಂಭದಲ್ಲಿ ಲತಾ ಅವರಿಗೆ ನಟಿಯಾಗಿಯೇ ಮುಂದುವರಿಯುವ ಆಲೋಚನೆ ಇತ್ತು। 1947ರಲ್ಲಿ ಬಿಡುಗಡೆಯಾದ 'ಆಪ್ ಕಿ ಸೇವಾ ಮೆ' ಚಿತ್ರದಲ್ಲಿ ಹಾಡಲು ಮೊದಲ ಅವಕಾಶ ದೊರೆಯಿತು. ಅಲ್ಲಿಂದ ಅವರು ಹಿಂತಿರುಗಿ ನೋಡಿದ್ದೆ ಇಲ್ಲ. ಹಲವಾರು ಭಾಷೆಗಳಲ್ಲಿ ಹಾಡಿರುವ ಲತಾ ಮಂಗೇಶ್ಕರ್ ಕನ್ನಡ ಚಿತ್ರ 'ಸಂಗೊಳ್ಳಿ ರಾಯಣ್ಣ' ಚಿತ್ರದಲ್ಲಿ ಬೆಳ್ಳನೆ ಬೆಳಗಾಯಿತು ಎಂದು ಹಾಡಿದ್ದರು. ನಂತರ ಈ ಗಾನಕೋಗಿಲೆ ಕನ್ನಡಲ್ಲಿ ಹಾಡಲಿಲ್ಲ.
Thursday, September 25, 2008
ಡಾ.ರಾಜ್ ಸ್ಮಾರಕ ಅಭಿವೃದ್ಧಿಗೆ ಕಟ್ಟಾ ಭರವಸೆ
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬುಧವಾರ ಬೆಂಗಳೂರಿನಲ್ಲಿ ಕನ್ನಡ ಚಿತ್ರರಂಗದ ಗಣ್ಯರಿಗೆ ಹಾಗೂ 2007ರಲ್ಲಿ ಬಿಡುಗಡೆಯಾದ ಯಶಸ್ವಿ ಚಿತ್ರಗಳ, ನಿರ್ಮಾಪಕರ, ನಿರ್ದೇಶಕರನ್ನು ಗುರುತಿಸಿ ಸನ್ಮಾನಿಸಿ ಗೌರವಿಸಿತು। ಅಭಿಮಾನಿ ಸಾಗರದ ನಡುವೆ ತಾರೆಗಳು ಬೆಳಗ್ಗೆ 10.30ಕ್ಕೆ ಸರಿಯಾಗಿ ಬಸವೇಶ್ವರ ನಗರದ ಅಭಿಮಾನಿ ಸಭಾಂಗಣದಲ್ಲಿ ಸಂಗಮವಾಗಿದ್ದರು.



















