ಕನ್ನಡ ಚಿತ್ರರಂಗದ ಬೇರುಗಳು ಬಲಿಷ್ಠವಾಗಿವೆ. ಹಾಗಾಗಿಯೇ ಹೊಸ ಕನಸುಗಳನ್ನು ಕಟ್ಟಿಕೊಂಡು ಕನ್ನಡ ಚಿತ್ರರಂಗಕ್ಕೆ ಬರುವ ನಿರ್ಮಾಪಕ, ನಿರ್ದೇಶಕರಿಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಕನ್ನಡ ಚಿತ್ರೋದ್ಯಮ ವೇದಿಕೆ ಒದಗಿಸುತ್ತದೆ. ದಕ್ಷಿಣ ಭಾರತದ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಅತ್ಯಂತ ಚಟುವಟಿಕೆಯಿಂದ ಇರಲು ಇದೂ ಒಂದು ಕಾರಣ. 'ಬಾ ಬೇಗ ಚಂದ ಮಾಮ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಮಾಡುತ್ತಾ ಹೀಗೆಂದರು ಹಂಸಲೇಖಾ. ಬಿ.ಆರ್.ಪಂತುಲು ಅವರ 'ರತ್ನಗಿರಿಯ ರಹಸ್ಯ' ಚಿತ್ರದ ಅಮರ ಮಧುರ ಪ್ರೇಮ ನೀ ಬಾ ಬೇಗ ಚಂದಮಾಮ... ಹಾಡಿನ ಚರಣ ಈ ಚಿತ್ರಕ್ಕೆ ಸ್ಪೂರ್ತಿಎಂದರು.ಹೆಚ್ಚೂ ಕಡಿಮೆ ಇದೇ ರೀತಿಯ ಅಭಿಪ್ರಾಯ ಕರ್ತೆಸಿ ಕರ್ತೆಸಿ:ಕರ್ತೆಸಿ:ಕರ್ತೆಸಿ:ಕರ್ತೆಸಿವಿಷ್ಣುವರ್ಧನ್ ರ ಮನದಾಳದಿಂದಲೂ ಹೊರಹೊಮ್ಮಿದವು.ಶತಕ ಬಾರಿಸುವುದಕ್ಕಿಂತ ಪಂದ್ಯದ ಗೆಲ್ಲುವುದು ಮುಖ್ಯ.ನಿಮ್ಮ ಪ್ರಥಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ. ಬಿ.ಎಚ್.ಮುರಳಿ ಈ ಹಿಂದೆ ಡಬ್ಬಿಂಗ್ ಕಲಾವಿದಹಾಗೂ ಹಾಡುಗಾರರಾಗಿದ್ದವರು. ಈಗ ತಮ್ಮ ಪ್ರಥಮ ಪ್ರಯತ್ನದಲ್ಲಿ ಬಾ ಬೇಗ ಚಂದ ಮಾಮದ ನಿರ್ದೇಶನ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.ಅವರ ಪ್ರಥಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ವಿಷ್ಣು ಬಾ ಬೇಗ ಚಂದ ಮಾಮ ಚಿತ್ರತಂಡಕ್ಕೆ ಹಾರೈಸಿದರು. ಬೆಂಗಳೂರಿನ ರಿಜಾಯ್ಸ್ ಆಡಿಟೋರಿಯಂನಲ್ಲಿ 'ಬಾ ಬೇ ಚಂ ಮಾ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ನಟಿ ಸುಧಾರಾಣಿ, ನಿರ್ದೇಶಕ ಬಿ.ಎಚ್.ಮುರಳಿ, ಪೂಜಾ ಗಾಂಧಿ, ರಾಜಕಾರಣಿಗಳಾದ ಸಲೀಂ ಅಹ್ಮದ್ ಮತ್ತು ಆರ್.ವಿ.ಹರೀಶ್, ಹರ್ಷಪ್ಪ ರೆಡ್ಡಿ, ಲಹರಿ ರೆಕಾರ್ಡಿಂಗ್ ಕಂಪನಿಯ ಮಾಲೀಕ ವೇಲು, ಬಾ ಬೇಗ ಚಂದ ಮಾಮದ ನಾಯಕ ದೀಪಕ್, ನಿರ್ಮಾಪಕ ಕುಮಾರಸ್ವಾಮಿ ಇನ್ನಿತರರು ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.'ಅಮರ ಮಧುರ ಪ್ರೇಮ' ಹೆಸರಿನ ಚಿತ್ರ 1982ರಲ್ಲಿ ತೆರೆಕಂಡಿತ್ತು. ಸುರೇಶ್ ಹೆಬ್ಳೀಕರ್ ಹಾಗೂ ಶೋಭ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಪಿ.ಆರ್.ರಾಮದಾಸ್ ನಾಯ್ಡು ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ರತ್ನಗಿರಿ ರಹಸ್ಯ ಚಿತ್ರದ ಅಮರ ಮಧುರ ಗೀತೆ ಇಷ್ಟಿಲ್ಲಾ ಸಿನೆಮಾ ಶೀರ್ಷಿಕೆಗಳಿಗೆ ಸ್ಫೂರ್ತಿಯಾಗುತ್ತಿರಬೇಕಾದರೆ, ನಮ್ಮ ಇಂದಿನ ನಿರ್ದೇಶಕ, ನಿರ್ಮಾಪಕರು ಅರ್ಥವಿಲ್ಲದ ಶೀರ್ಷಿಕೆಗಳನ್ನು ಯಾಕಾದರೂ ಇಡುತ್ತಿದ್ದಾರೋ ಅರ್ಥವಾಗುತ್ತಿಲ್ಲ! (ದಟ್ಸ್ ಕನ್ನಡ ವಾರ್ತ)
Thursday, April 17, 2008
"ಬೇಗ ಚಂದ ಮಾಮ" ಸಾಂಗ್ಸ್ ರಿಲಿಸ್
ಕನ್ನಡ ಚಿತ್ರರಂಗದ ಬೇರುಗಳು ಬಲಿಷ್ಠವಾಗಿವೆ. ಹಾಗಾಗಿಯೇ ಹೊಸ ಕನಸುಗಳನ್ನು ಕಟ್ಟಿಕೊಂಡು ಕನ್ನಡ ಚಿತ್ರರಂಗಕ್ಕೆ ಬರುವ ನಿರ್ಮಾಪಕ, ನಿರ್ದೇಶಕರಿಗೆ ಹೊಸ ಹೊಸ ಪ್ರಯೋಗಗಳನ್ನು ಮಾಡಲು ಕನ್ನಡ ಚಿತ್ರೋದ್ಯಮ ವೇದಿಕೆ ಒದಗಿಸುತ್ತದೆ. ದಕ್ಷಿಣ ಭಾರತದ ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ ಅತ್ಯಂತ ಚಟುವಟಿಕೆಯಿಂದ ಇರಲು ಇದೂ ಒಂದು ಕಾರಣ. 'ಬಾ ಬೇಗ ಚಂದ ಮಾಮ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಮಾಡುತ್ತಾ ಹೀಗೆಂದರು ಹಂಸಲೇಖಾ. ಬಿ.ಆರ್.ಪಂತುಲು ಅವರ 'ರತ್ನಗಿರಿಯ ರಹಸ್ಯ' ಚಿತ್ರದ ಅಮರ ಮಧುರ ಪ್ರೇಮ ನೀ ಬಾ ಬೇಗ ಚಂದಮಾಮ... ಹಾಡಿನ ಚರಣ ಈ ಚಿತ್ರಕ್ಕೆ ಸ್ಪೂರ್ತಿಎಂದರು.ಹೆಚ್ಚೂ ಕಡಿಮೆ ಇದೇ ರೀತಿಯ ಅಭಿಪ್ರಾಯ ಕರ್ತೆಸಿ ಕರ್ತೆಸಿ:ಕರ್ತೆಸಿ:ಕರ್ತೆಸಿ:ಕರ್ತೆಸಿವಿಷ್ಣುವರ್ಧನ್ ರ ಮನದಾಳದಿಂದಲೂ ಹೊರಹೊಮ್ಮಿದವು.ಶತಕ ಬಾರಿಸುವುದಕ್ಕಿಂತ ಪಂದ್ಯದ ಗೆಲ್ಲುವುದು ಮುಖ್ಯ.ನಿಮ್ಮ ಪ್ರಥಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ. ಬಿ.ಎಚ್.ಮುರಳಿ ಈ ಹಿಂದೆ ಡಬ್ಬಿಂಗ್ ಕಲಾವಿದಹಾಗೂ ಹಾಡುಗಾರರಾಗಿದ್ದವರು. ಈಗ ತಮ್ಮ ಪ್ರಥಮ ಪ್ರಯತ್ನದಲ್ಲಿ ಬಾ ಬೇಗ ಚಂದ ಮಾಮದ ನಿರ್ದೇಶನ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.ಅವರ ಪ್ರಥಮ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂದು ವಿಷ್ಣು ಬಾ ಬೇಗ ಚಂದ ಮಾಮ ಚಿತ್ರತಂಡಕ್ಕೆ ಹಾರೈಸಿದರು. ಬೆಂಗಳೂರಿನ ರಿಜಾಯ್ಸ್ ಆಡಿಟೋರಿಯಂನಲ್ಲಿ 'ಬಾ ಬೇ ಚಂ ಮಾ' ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಆಯೋಜಿಸಲಾಗಿತ್ತು. ನಟಿ ಸುಧಾರಾಣಿ, ನಿರ್ದೇಶಕ ಬಿ.ಎಚ್.ಮುರಳಿ, ಪೂಜಾ ಗಾಂಧಿ, ರಾಜಕಾರಣಿಗಳಾದ ಸಲೀಂ ಅಹ್ಮದ್ ಮತ್ತು ಆರ್.ವಿ.ಹರೀಶ್, ಹರ್ಷಪ್ಪ ರೆಡ್ಡಿ, ಲಹರಿ ರೆಕಾರ್ಡಿಂಗ್ ಕಂಪನಿಯ ಮಾಲೀಕ ವೇಲು, ಬಾ ಬೇಗ ಚಂದ ಮಾಮದ ನಾಯಕ ದೀಪಕ್, ನಿರ್ಮಾಪಕ ಕುಮಾರಸ್ವಾಮಿ ಇನ್ನಿತರರು ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.'ಅಮರ ಮಧುರ ಪ್ರೇಮ' ಹೆಸರಿನ ಚಿತ್ರ 1982ರಲ್ಲಿ ತೆರೆಕಂಡಿತ್ತು. ಸುರೇಶ್ ಹೆಬ್ಳೀಕರ್ ಹಾಗೂ ಶೋಭ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಪಿ.ಆರ್.ರಾಮದಾಸ್ ನಾಯ್ಡು ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು. ರತ್ನಗಿರಿ ರಹಸ್ಯ ಚಿತ್ರದ ಅಮರ ಮಧುರ ಗೀತೆ ಇಷ್ಟಿಲ್ಲಾ ಸಿನೆಮಾ ಶೀರ್ಷಿಕೆಗಳಿಗೆ ಸ್ಫೂರ್ತಿಯಾಗುತ್ತಿರಬೇಕಾದರೆ, ನಮ್ಮ ಇಂದಿನ ನಿರ್ದೇಶಕ, ನಿರ್ಮಾಪಕರು ಅರ್ಥವಿಲ್ಲದ ಶೀರ್ಷಿಕೆಗಳನ್ನು ಯಾಕಾದರೂ ಇಡುತ್ತಿದ್ದಾರೋ ಅರ್ಥವಾಗುತ್ತಿಲ್ಲ! (ದಟ್ಸ್ ಕನ್ನಡ ವಾರ್ತ)
Tuesday, April 15, 2008
ಪುಜ ಗಾಂಧಿ ಇನ್ ಜರ್ನಲಿಸ್ಟ್ ರೋಲ್

Thursday, April 10, 2008
Wednesday, April 9, 2008
ಹುಬ್ಬೇರಿಸುವ ನಾಗತಿಹಳ್ಳಿಯ ಸಂಸ್ಕೃತಿ ಹಬ್ಬ
''...ನಿಜವಾದ ಸ್ವಾತಂತ್ರ್ಯ ತಳಮಟ್ಟದಿಂದ ಆರಂಭವಾಗಬೇಕು. ಹಾಗೆ ಆರಂಭವಾದಾಗ ಪ್ರತಿಯೊಂದು ಹಳ್ಳಿಯು ಪ್ರಜಾಪ್ರಭುತ್ವದ ವಾಹಕವಾಗುತ್ತದೆ. ತಮ್ಮ ವ್ಯವಹಾರಗಳನ್ನು ತಾವೇ ನಿರ್ವಹಿಸಿಕೊಳ್ಳುವ ಸಾಮರ್ಥ್ಯ ಮತ್ತು ಸ್ವಾವಲಂಬನೆಯನ್ನು ನಮ್ಮ ಹಳ್ಳಿಗಳು ಪಡೆಯುವಂತಾಗಬೇಕು. ಹಳ್ಳಿಗಳು ಸಾಂಸ್ಕೃತಿಕ ಕೇಂದ್ರಗಳಾಗಬೇಕು.'' ಎಂಬ ಮಹಾತ್ಮ ಗಾಂಧೀಜಿ ಅವರ ಕನಸು ಎಷ್ಟು ಹಳ್ಳಿಗಳಲ್ಲಿ ನನಸಾಗಿದೆಯೋ ಗೊತ್ತಿಲ್ಲ. ಆದರೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 48ರಲ್ಲಿ ಬೆಂಗಳೂರಿನಿಂದ ನೆಲಮಂಗಲ, ಕುಣಿಗಲ್ ಮಾರ್ಗವಾಗಿ ಬರೋಬ್ಬರಿ110 ಕಿ.ಮೀನ ಒಂದು ಹಳ್ಳಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಕನ್ನಡಿ ಹಿಡಿಯಿತು.ಅದು ಎ.ನಾಗತಿಹಳ್ಳಿ ಗ್ರಾಮ. ಏ.4,5,6 ಮತ್ತು 7ರಂದು ಅಲ್ಲಿ ನಾಲ್ಕು ದಿನಗಳ ಸಾಂಸ್ಕೃತಿಕ ಹಬ್ಬದ ಸಡಗರ. ನಮ್ಮೂರ ಹಬ್ಬಕ್ಕೆ ಬನ್ನಿ ಎಂದು ನಾಗತಿಹಳ್ಳಿಯ ಅಭಿವ್ಯಕ್ತಿ ಮಹಿಳಾ ಸಂಘ, ಅಭಿವ್ಯಕ್ತಿ ಯುವಕರ ಸಂಘ, ಶ್ರೀ ಸ್ವಾಮಿ ವಿವೇಕಾನಂದ ಯುವಕ ರೈತ ಸಂಘ, ಸ್ತ್ರೀಶಕ್ತಿ ಸಂಘ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ನಾಗತಿಹಳ್ಳಿಯ ಸುತ್ತಣ ಹತ್ತೂರು ಗ್ರಾಮಸ್ಥರು ಸ್ವಾಗತಕೋರಿದರು. ನಾಲ್ಕು ದಿನಗಳ ಕಾಲ ಉಚಿತ ವೈದ್ಯಕೀಯ ಶಿಬಿರ, ಮಕ್ಕಳ ಕಲಾ ಶಿಬಿರ, ಗ್ರಾಮೀಣ ಕ್ರೀಡೆಗಳು, ರಾಸುಗಳ ಪ್ರದರ್ಶನ, ಶ್ರಮದಾನ, ಗ್ರಾಮ ನೈರ್ಮಲ್ಯ, ಕೃಷಿ ಚಿಂತನೆ, ಜನಪದ ಮೇಳ, ಭಾವಗೀತೆ, ಯಕ್ಷಗಾನ, ನಾಟಕ ಹೀಗೆ ಹತ್ತು ಹಲವು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ 'ನಾಗತಿಹಳ್ಳಿ ಸಾಂಸ್ಕೃತಿಕ ಹಬ್ಬ-2008' ವೇದಿಕೆ ಒದಗಿಸಿತು.
ಏ.4ರಂದು ಬೆಳಗ್ಗೆ 9.30ಕ್ಕೆ ಶುರುವಾದ ನಾಗತಿಹಳ್ಳಿ ಹಬ್ಬ 'ದಕ್ಷಾಧ್ವರ' ಕಥಾಭಾಗದ ಯಕ್ಷಗಾನ ಬಯಲಾಟದೊಂದಿಗೆ ಸಾಂಸ್ಕೃತಿಕ ಉತ್ತುಂಗಕ್ಕೆ ಕೊಂಡೊಯ್ಯಿತು. ಅಂದಿನ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕವಿ ಜಯಂತ ಕಾಯ್ಕಿಣಿ, ನಟ ಶ್ರೀನಗರ ಕಿಟ್ಟಿ, ರಮಣಶ್ರೀ ಗ್ರೂಪ್‌ನ ಷಡಕ್ಷರಿ ಮುಖ್ಯ ಅತಿಥಿಗಳಾಗಿದ್ದರು. ಸಾಹಿತಿ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ 'ದಕ್ಷಾಧ್ವರ' ದಲ್ಲಿ ದಕ್ಷನಾಗಿ ಕಟ್ಟಿಕೊಟ್ಟ ಪಾತ್ರ ಗಮನ ಸೆಳೆಯಿತು.
ಬಣ್ಣದ ಲೋಕದ ನಿರ್ಮಾಣ, ನಿರ್ದೇಶನ ಜೊತೆಗೆ ಆಗಾಗ ಅತಿಥಿ ಪಾತ್ರಗಳಲ್ಲಿ ದರ್ಶನ ಕೊಡುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಯಕ್ಷಗಾನ ಬಯಲಾಟದಲ್ಲಿ ಈ ಪಾಟಿ ಪ್ರದರ್ಶನ ನೀಡುತ್ತಾರೆ ಎಂದು ಗೊತ್ತಿರಲಿಲ್ಲಚಂದ್ರು ಅವರಿಗೆ ಯಕ್ಷಗಾನ ಗೊತ್ತು ಎಂದು ಅವರ ಆಪ್ತರಿಗಷ್ಟೇ ಗೊತ್ತಿದ್ದ ವಿಚಾರ। ನಾಗತಿಹಳ್ಳಿಯಲ್ಲಿ ಅಂದಿನ ಯಕ್ಷಗಾನ ಬಯಲಾಟದಲ್ಲಿ ಅವರ ಮತ್ತೊಂದು ಪ್ರತಿಭೆ ಬಯಲಾಯಿತು!ಹಾಗೆಯೇ ಎಲ್ಲ ಹಳ್ಳಿಗಳಲ್ಲಿ ಈ ರೀತಿಯ ಸಾಂಸ್ಕೃತಿಕ ಹಬ್ಬಗಳು ನಡೆದರೆ ಎಷ್ಟು ಚೆನ್ನ ಅನ್ನಿಸುತ್ತದೆ.
Tuesday, April 8, 2008
ರಜನಿಯ ಪ್ರತ್ಯುತ್ತರ ಉಡಾಫೆ ಮಾತು:ಚಂಪಾ
ಬೆಂಗಳೂರು: ತಮಿಳುನಾಡು ಹಾಗೂ ಕನ್ನಡ ಚಿತ್ರರಂಗ ನಡೆಸಿದ ಸತ್ಯಾಗ್ರಹ ಕೊನೆಗೆ , ರಜನಿ ವರ್ಸಸ್ ಕನ್ನಡಿಗ ಎಂದು ತಿರುಗಿದೆ. ಆವೇಶದ ಭರದ ಭಾಷಣದಲ್ಲಿ 'ಕನ್ನಡಿಗರಿಗೆ ಒದೆಯಿರಿ' ಎಂಬ ಪ್ರಚೋದನಾಕಾರಿ ಮಾತುಗಳನ್ನು ಆಡಿದ ರಜನಿಕಾಂತ್ ತಮ್ಮ ತಪ್ಪನ್ನು ಒಪ್ಪಿಕೊಂಡು ಸಮಸ್ತ ಕನ್ನಡಿಗರ ಕ್ಷಮೆಯಾಚನೆ ಮಾಡಬೇಕು ಎಂದು ಕನ್ನಡಪರಸಂಘಟನೆಗಳು ಆಗ್ರಹಿಸಿವೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಗೆ ರಜನಿ ನೀಡಿದ ಪ್ರತ್ಯುತ್ತರದಲ್ಲಿ 'ನಾನು ಸಮಸ್ಯೆ ಹುಟ್ಟುಹಾಕುತ್ತಿರುವ ವ್ಯಕ್ತಿಗಳನ್ನು ಒದೆಯಬೇಕು ಎಂದಿದ್ದೇನೆಯೇ ವಿನಾ ಅದು ಎಲ್ಲಾ ಕನ್ನಡಿಗರಿಗೆ ಅಲ್ಲಾ. ಆ ರೀತಿ ಹೇಳಲು ನಾನು ಅವಿವೇಕಿ ಅಲ್ಲ ಎಂದ ರಜನಿಯವರು ಹೇಳಿದ್ದರು.
ಈ ಮಾತುಗಳಿಂದ ತೃಪ್ತರಾಗದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪಾಟೀಲರು ರಜನಿ ಕಾಂತ್ ಅಲ್ಲಿನ ಜನತೆಗೆ ದೇವರೇ ಇರಬಹುದು. ಆದರೆ ಆಡಿದ ಮಾತಿನಿಂದ ತಪ್ಪಿಸಿಕೊಳ್ಳಲು, ವಿಷ್ಣುವರ್ಧನ್, ಅಂಬರೀಷ್, ಗಿರೀಶ್ ಕಾರ್ನಡ್, ಪಾರ್ವತಮ್ಮ ರಾಜ್ ಕುಮಾರ್ ಹಾಗೂ ಅಶ್ವತ್ಥ್ ಅವರುಗಳು ಹೇಳಿದರೆ ಕ್ಷಮೆ ಕೋರುವೆ ಎಂದು ಉಡಾಫೆ ಮಾತನಾಡಿದ್ದಾರೆ. ಮೇಲ್ಕಂಡ ಗಣ್ಯರಲ್ಲಿ ಅಂಬಿ, ವಿಷ್ಣು ಅವರು ಕನ್ನಡಿಗರೇ ಅಲ್ಲ. ಕನ್ನಡ ಚಳವಳಿಗೆ ಕೈಜೋಡಿಸಿದವರಲ್ಲ. ಉಳಿದವರ ವಿಷಯ ಬೇಡ ಎಂದು ಚಂಪಾ ಹೇಳಿದ್ದಾರೆ.
ನಾಡಿನ ಹಲವಾರು ಕಲಾವಿದರು, ರಾಜಕಾರಣಿಗಳ ಅಭಿಪ್ರಾಯಗಳು ಇದಕ್ಕೆ ಪೂರಕವಾಗಿದ್ದು, ಎಲ್ಲರೂ ರಜನಿಕಾಂತ್ ಅವರ ಕ್ಷಮೆಯಾಚನೆಗೆ ಆಗ್ರಹಿಸಿದ್ದಾರೆ। ರಜನಿ ಕಾಂತ್ ಚಿತ್ರಗಳ ಬಿಡುಗಡೆ ಕರ್ನಾಟಕದಲ್ಲಿ ಅವಕಾಶ ನೀಡುವುದಿಲ್ಲ ಎಂಬ ಕರವೇ ಅಧ್ಯಕ್ಷ ನಾರಾಯಣಗೌಡರ ಹೇಳಿಕೆಗೆ ಉತ್ತರಿಸಿದ ರಜನಿ ಕಾಂತ್ ಕರ್ನಾಟಕದಲ್ಲಿ ತಮಿಳರಿಗಿಂತ ಕನ್ನಡಿಗರೇ ಹೆಚ್ಚು ನನ್ನ ಚಿತ್ರಗಳನ್ನು ಇಷ್ಟಪಡುತ್ತಾರೆ। ಇದರಿಂದ ಅವರಿಗೇ ನಷ್ಟ ಎಂದಿದ್ದಾರೆ. ರಜನಿಕಾಂತ್ ವಿರುದ್ಧ ವಿವಿಧ ಸಂಘಟನೆಗಳಿಂದ ಭಾನುವಾರವೂ ಪ್ರತಿಭಟನೆ ಮುಂದುವರೆದಿತ್ತು.
(ಕರ್ಟೆಸೀ: ದಟ್ಸ್ ಕನ್ನಡ)
Monday, March 31, 2008
ಚಿತ್ರ ವಿಮರ್ಶೆ: ಸತ್ಯ ಇನ್ ಲವ್
ಶಿವರಾಜ್ ಕುಮಾರ್ ಮಚ್ಚು ಹಿಡಿದು ನಿಂತಿದ್ದಾರೆ, ಎಂತಹ ಬಿರುಗಾಳಿಯನ್ನೂ ಎದುರಿಸುವ ಸಲುವಾಗಿ 'ಅಖಾಡ'ಕ್ಕಿಳಿದಿದ್ದಾರೆ ಎಂದರೆ ಸಾಕು. ಅದಕ್ಕೊಂದು ಕಾರಣ ಇರಲೇ ಬೇಕು. ಸುಖಾಸುಮ್ಮನೆ ಪೋಸ್ ಕೊಡುವವರಲ್ಲ ಶಿವಣ್ಣ.ಎತ್ತಾಡಿಸಿ, 'ಜೋ'ಗುಳ ಹಾಡಿ, ತೊಟ್ಟಿಲು ತೂ'ಗಿ'ದ ತಾಯಿಗಾಗಿಯೋ, ಬೆನ್ನಿಗೆ ಬಿದ್ದ ತಂಗಿಯ 'ಸಂತ'ಸಕ್ಕೆ ಅಡ್ಡಿಬಂದವರನ್ನು ಬಗ್ಗುಬಡಿಯುವ ಸಲುವಾಗಿಯೋ, ದೇಹಿ ಎಂದ ಬಡ ಜನರನ್ನು ಕಾಡುವ ವೈರಿಗಳ ಮಗ್ಗುಲು ಮುರಿಯಲೋ... ಒಟ್ಟಾರೆ ಅದಕ್ಕೊಂದು 'ಧರ್ಮಕಾರಣ' ಇದ್ದೇ ಇರುತ್ತೆ; ಇರಲೇ ಬೇಕು ಕೂಡ.
ಶಿವಣ್ಣ ಮತ್ತೊಮ್ಮೆ ಅದೇ ಮಚ್ಚು ಹಿಡಿದು, ತೊಡೆ ತಟ್ಟಿ ನಿಂತಿದ್ದಾರೆ. ಅದಕ್ಕೊಂದು ಕಾರಣವನ್ನೂ ಕೊಟ್ಟಿದ್ದಾರೆ. ತಮ್ಮಲ್ಲಿ ಅಂಕುರಿಸಿದ ಪ್ರೀತಿಗಾಗಿ, ಅದರ ನೀತಿಗಾಗಿ, ಆ ನೀತಿಯ ಪರಿಪೂರ್ಣ ಪಾಲನೆಗಾಗಿ ಆ ವೇಷ ಧರಿಸಿದ್ದಾರೆ. 'ಸತ್ಯ'ನಾಗಿ ಬದಲಾಗಿದ್ದಾರೆ. ಐ ಆಮ್ 'ಇನ್ ಲವ್' ಎಂದು ಸಾರಿ ಸಾರಿ ಹೇಳುತ್ತಿದ್ದಾರೆ.
ಸತ್ಯವನ್ನೇ ಹೇಳುತ್ತೇನೆ. ಅದನ್ನು ಬಿಟ್ಟು ಇನ್ನೇನು ಹೇಳುವುದಿಲ್ಲ. ಆ ಸತ್ಯದಾಣೆಗೂ ಪ್ರೀತಿಯೇ ಸತ್ಯ ಎಂಬ ಕಹಿ ಸತ್ಯವನ್ನು ಶಿವಣ್ಣನ ಮೂಲಕ ಹೇಳಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ರಾಘವ ಲೋಕಿ.
ಒಂದು ಸಾಮಾನ್ಯ ಕಥೆಯ ಎಳೆಯನ್ನಿಟ್ಟುಕೊಂಡು 'ಈ ಭೂಮಿ ಮೇಲೆ ಪ್ರೀತಿ ಏಕಿದೆ?'
ಪ್ರೀತಿಯ ಮುಂದಿರುವ ಸವಾಲುಗಳೇನು? ಅಂಥದ್ದೊಂದು ಪರಿಪೂರ್ಣ ಪ್ರೀತಿಗೆ ಹೇಗೆ ನ್ಯಾಯ ಸಲ್ಲಿಸಬೇಕು? ಎಂಬ ಪ್ರಶ್ನೆಗಳಿಗೆ ಉತ್ತರಿಸುವ ಯತ್ನ ಮಾಡಿದ್ದಾರೆ. ಆ ಪ್ರೀತಿಯನ್ನು ಪ್ರಚುರ ಪಡಿಸಲು ಸತ್ಯ ಎಂಬ ಪ್ರಧಾನ ಪಾತ್ರ ಸೃಷ್ಟಿಸಿದ್ದಾರೆ. ಆ ಪಾತ್ರದ ಹತ್ತು ಹಲವು ನೇಪಥ್ಯ ದೃಶ್ಯಗಳನ್ನು ಸೃಷ್ಟಿಸಿ ಕತೆಗೆ ಇನ್ನಷ್ಟು ಮೆರುಗು ನೀಡಿದ್ದಾರೆ.ಒಂದು ಪಕ್ಕಾ ಮಾಸ್ ಚಿತ್ರಕ್ಕೆ ಏನೇನು ಬೇಕೋ ಅವೆಲ್ಲವನ್ನು ಒಂದೆಡೆ ಕಲೆಹಾಕಿ ಪ್ಯಾಕೇಜ್ ರೀತಿಯಲ್ಲಿ ನೀಡಿದ್ದಾರೆ. ಒಂದು ದೃಶ್ಯ, ಅದರ ಬೆನ್ನಿಗೇ ಒಂದು ಫೈಟು, ಮತ್ತೊಂದಿಷ್ಟು ಕಾಮಿಡಿ ಟ್ರ್ಯಾಕ್, ಜತೆಗೊಂದು ಹಾಡು, ನಂತರ ಮತ್ತೊಂದು ದೃಶ್ಯ... ಹೀಗೆ ಎಲ್ಲವೂ ಫಟಾಫಟ್. ಶಿವಣ್ಣನ ಮ್ಯಾನರಿಸಂಗೆ ಸರಿಹೊಂದುವಂತಹ ಡೈಲಾಗ್‌ಗಳು, ಅವರಿಗೆ ಸರಿಹೊಂದುವ ವಿಲನ್‌ಗಳು ಹೀಗೆ ಪ್ರತಿ ಫ್ರೇಮ್‌ನಲ್ಲೂ ಹೊಸತನ ಸೃಷ್ಟಿಸಲು ಪ್ರಯತ್ನಿಸಿದ್ದಾರೆ.
ಎಲ್ಲಾ ಅರ್ಥವಾಗಬೇಕಾದರೆ ಮೊದಲು ಕತೆ ಕೇಳಲೇ ಬೇಕು. ಆತ ಸತ್ಯ. ಅಪ್ಪ, ಅಮ್ಮ, ಅಕ್ಕ-ಭಾವನೊಂದಿಗಿರುತ್ತಾನೆ. ಜತೆಗೊಂದಿಷ್ಟು ಪಡ್ಡೆ ಹುಡುಗರು. ಎಲ್ಲರದ್ದೂ ಪಾರ್ಕು, ಡಿಸ್ಕೋಥೆಕ್ ಅಲ್ಲಿ ಇಲ್ಲಿ ಅಂಡಲೆಯುವ ವೃತ್ತಿ. ಸತ್ಯ ಜಂಟಲ್‌ಮನ್. ಯಾರಾದರೂ ಹೆಣ್ಣುಮಕ್ಕಳ ತಂಟೆಗೆ ಹೋದರೆ ಅವರ ಜತೆ ಫೈಟ್ ಮಾಡುತ್ತಾನೆ. ಆದರೆ ಪ್ರೀತಿ, ಪ್ರೇಮದ ಬಗ್ಗೆ ಮಾತ್ರ ಆತ ನೂರು ಮಾರು ದೂರ. ಆದರೆ ಲಲನಾಮ
ಣಿಯರಿಗೆ ಮಾತ್ರ ಸತ್ಯ ನಿತ್ಯ ಮದನ.ಮನೆಮಂದಿಯಲ್ಲಾ ಸೇರಿ ಮಂತ್ರಾಲಯಕ್ಕೆ ಟ್ರಿಪ್ ಹೋಗುತ್ತಾರೆ. ಸತ್ಯನಿಗೆ ಅಲ್ಲೊಬ್ಬಳು ವೇದಾ ಎಂಬ ಹುಡುಗಿ ಸಿಗುತ್ತಾಳೆ. ಅವರಳ ನೋಟ, ಮೈಮಾಟ ಸತ್ಯನ ಮನಸ್ಸಿನಲ್ಲಿ ಪ್ರೀತಿಯ ಅಲೆ ಎಬ್ಬಿಸುತ್ತದೆ. ಅದುವೇ ನಿಜವಾದ ಪ್ರೀತಿ ಎಂದು ಮನದಟ್ಟಾಗುವ ವೇಳೆಗೆ ಆಕೆ ಮಾಯವಾಗುತ್ತಾಳೆ. ಅವಳ ಹುಡುಕಾಟದಲ್ಲಿ ಒಂದಷ್ಟು ಕಾಲಹರಣ ಮಾಡುತ್ತಾನೆ. ಕೊನೆಗೂ ಅವಳ ಮೂಲವನ್ನು ಪತ್ತೆಹಚ್ಚುತ್ತಾನೆ. ಆಕೆ ಆಂಧ್ರದ ಕರ್ನೂಲು ಮೂಲದ ರೌಡಿ ರಂಗಾರೆಡ್ಡಿಯ ಮಗಳು ಎಂಬ ವಿಷಯ ಅರಿತು ಅವಳನ್ನು ಪಡೆದುಕೊಳ್ಳಲು ರೈಲು ಹತ್ತುತ್ತಾನೆ. ಇತ್ತ ರಂಗಾರೆಡ್ಡಿ ಮಕ್ಕಳಿಗೆ ಸತ್ಯನ ಉದ್ದೇಶ ಗೊತ್ತಾಗಿ ಅವನನ್ನು ಮುಗಿಸುವ ಸಂಚು ಹೂಡುತ್ತಾರೆ. ಆದರೂ ಸತ್ಯ ಎಲ್ಲರನ್ನೂ ಬಗ್ಗು ಬಡಿಯುತ್ತಾನೆ. ಅವಳಿಗಾಗಿ ಎಲ್ಲದಕ್ಕೂ ಸಿದ್ಧನಾಗುತ್ತಾನೆ. ಅವಳ ಮನಸ್ಸು ಗೆಲ್ಲಲು ಯತ್ನಿಸುತ್ತಾನೆ. ಸಾಕಷ್ಟು ಬಾರಿ ಸಾವಿನ ದವಡೆಗೂ ಹೋಗಿ ಮತ್ತೆ ಎದ್ದು ಬರುತ್ತಾನೆ... ಮುಂದಿನದನ್ನು ತೆರೆ ಮೇಲೆ ನೋಡಿದರಷ್ಟೇ ಚೆಂದ.
ಇಡೀ ಚಿತ್ರದ ಹೈಲೈಟ್ ಎಂದರೆ ಶಿವಣ್ಣನ ಅಮೋಘ ಅಭಿನಯ. ಒಟ್ಟಾರೆ ಹೇಳುವುದಾದರೆ ಸರ್ವಂ 'ಶಿವ' ಮಯಂ. ಪ್ರೀತಿಯ ಹುಡುಕಾಟದಲ್ಲಿ ಅವರು ಪಡುವ ಪಾಡು, ಅದು ಸಿಗುವ ಸೂಚನೆಗಳೇ ಇಲ್ಲದಿದ್ದಾಗ ನಲುಗುವ ಪರಿ... ಅವೆಲ್ಲ ಶಿವಣ್ಣನಿಂದ ಮಾತ್ರ ಸಾಧ್ಯ. ಹಾಗಂತ ದೂರದಿಂದ ಬಂದಂತ ಸುಂದರಾಂಗ ಜಾಣೆ ಜೆನಿಲಿಯಾಳನ್ನು ಮಾತ್ರ ಸಹಿಸಿಕೊಳ್ಳುವುದು ಕಷ್ಟ. ಆದರೆ ಆಕೆ ಗಟ್ಟಿಯಾಗಿ ತುಟಿ ಕಚ್ಚಿ ನುಲಿದಾಗ, ಅಂದವಾಗಿ ನಕ್ಕಾಗ, ಶಿವಣ್ಣನ ಜತೆ ಥೈ ಥೈ ಎನ್ನುವಾಗ ಮಾತ್ರ ನೋಡಲು ಎರಡು ಕಣ್ಣು ಸಾಲದು. ಇನ್ನು ಗುರುಕಿರಣ್ ಸಂಗೀತದಲ್ಲಿ ಎರಡು ಹಾಡುಗಳು ಗುನುಗುವಂತಿವೆ. ಸೆರೆಯಾದೆನೂ...ಮತ್ತು ರೋಮಾಂಚನಾ... ಹಾಡುಗಳು ಖುಷಿ ಕೊಡುತ್ತವೆ. ಶ್ರೀನಾಥ್, ವಿನಯಾ ಪ್ರಸಾದ್, ಜಯಪ್ರಕಾಶ್, ಅಜಯ್, ಸುಬ್ಬರಾವ್ ಮುಂತಾದ ಪಾತ್ರಗಳು ಕತೆಗೆ ಅನಿವಾರ್ಯ.
ಮಳವಳ್ಳಿ ಸಾಯಿಕೃಷ್ಣರ ಸಂಭಾಷಣೆ ಚೆನ್ನಾಗಿದೆ. ಆದರೆ ಕೆಲವು ಕಡೆ ಬರುವ ತೆಲುಗು ಸಂಭಾಷಣೆ ಅಚ್ಚಕನ್ನಡಿಗರಿಗೆ ಅರಗಿಸಿಕೊಳ್ಳುವುದು ತುಸು ಕಷ್ಟ.ಅಂದಹಾಗೆ ನಿರ್ದೇಶಕರ ಬಗ್ಗೆ ಒಂದು ಮಾತು ಹೇಳಲೇ ಬೇಕು. ತಮ್ಮ ಚೊಚ್ಚಲ ನಿರ್ದೇಶನದಲ್ಲೇ ಅವರು ಗೆದ್ದಿದ್ದಾರೆ. ಚಿತ್ರದ ಪ್ರತಿ ಸೀನ್‌ನಲ್ಲೂ ಥಳಥಳಿಸುವ ಅದ್ದೂರಿತನ, ಕರ್ನೂಲಿನ ದೃಶ್ಯಗಳಿಗೆ ತೆಲುಗಿನ ನಟರನ್ನೇ ಬಳಸಿಕೊಂಡು ಎಲ್ಲೂ ಅಭಾಸವಾಗದಂತೆ ಚಿತ್ರಿಸಿರುವುದು ಸುಲಭದ ಮಾತಲ್ಲ. ಆ ಮಟ್ಟಿಗೆ ಅವರ ಪ್ರಯತ್ನ ಶ್ಲಾಘನೀಯವೇ ಸರಿ. ಅವರು ನಿರ್ಮಾಪಕರು ವ್ಯಯಿಸಿದ ಕಾಸಿಗಂತೂ ಮೋಸ ಮಾಡಿಲ್ಲ. ಒಟ್ಟಾರೆ ಶಿವಣ್ಣನ ಹಳೇ ಖದರ್ ನೋಡುವ ಹಂಬಲವಿದ್ದರೆ ಚಿತ್ರವನ್ನು ನೋಡಿ...
Wednesday, March 26, 2008
ಗೋಲ್ಡನ್ ಸ್ಟಾರ್ ಗಣೇಶ್ ಏಳು ಅವತಾರಗಳು
ಅರಮನೆ ಚಿತ್ರದಲ್ಲಿ ಗಣೇಶ್ ಏಳು ಅವತಾರಗಳಲ್ಲಿ ಕಾಣಿಸಲಿದ್ದಾರೆ. ಪ್ರೇಮಿ, ಛಾಯಾಗ್ರಾಹಕ, ವಿದೂಷಕ, ರಾಜ್ ಕಪೂರ್, ಚಾರ್ಲಿ ಚಾಪ್ಲಿನ್ ಮತ್ತು ಅಪ್ಪು ರಾಜ ಪಾತ್ರಗಳಲ್ಲಿ ಬಣ್ಣ ಬಳಿದುಕೊಳ್ಳಲಿದ್ದಾರೆ(ಇನ್ನೊಂದು ಪಾತ್ರ ಯಾವುದು ಎಂದು ಗೊತ್ತಾಗಿಲ್ಲ!). ಅಪ್ಪುರಾಜ ಪಾತ್ರದ ಎರಡು ದಿನಗಳ ಚಿತ್ರೀಕರಣಕ್ಕಾಗಿ ಗಣೇಶ್ ಎರಡು ತಿಂಗಳಿಂದ ಕಠೋರವಾಗಿ ಅಭ್ಯಾಸ ಮಾಡಿದ್ದಾರೆ. ಅಪ್ಪುರಾಜನ ಕೊನೆ ದೃಶ್ಯವನ್ನು ಕ್ಯಾಮೆರಾ ಕಣ್ಣಲ್ಲಿ ಬಂಧಿಸಿದ ಮೇಲೆ ಗಣೇಶ್ ಮಧುರ ಯಾತನೆಯಿಂದ ಹೊರಬಂದಿದ್ದಾರೆ.
ಅಪ್ಪು ರಾಜ ಚಿತ್ರದಲ್ಲಿ ಕಮಲ್ ಹಾಸನ್ ಮೂರುವರೆ ಅಡಿ ಎತ್ತರದ ವಿದೂಷಕನ ಪಾತ್ರದಲ್ಲಿ ನಟಿಸಿದ್ದರು. ಈಗ ಅದೇ ರೀತಿಯ ಪಾತ್ರವನ್ನು ಗಣೇಶ್ ಮಾಡುತ್ತಿದ್ದಾರೆ. ಇದೊಂದು ರೀತಿ ಕಷ್ಟದ ಕೆಲಸ. ಕಾಲನ್ನು ಮಡಿಚಿ ಪ್ಯಾಕ್ ಮಾಡಿಕೊಂಡು ಮೊಣಕಾಲಿನ ಮೇಲೆ ನಡೆದಾಡಬೇಕು. ಹಾಡಿನ ಸನ್ನಿವೇಶದಲ್ಲಿ ಎರಡು ದಿನ ಮೊಣಕಾಲಿನ ಮೇಲೆ ನಡೆದು ಸುಸ್ತಾದಗಣೇಶ್ ಕೊನೆಯ ಶಾಟ್‌ನಲ್ಲಿ ಇನ್ನು ನನ್ನ ಕೈಲಿ ಆಗುವುದಿಲ್ಲ ಎಂದು ನೆಲದ ಮೇಲೆ ಬಿದ್ದು ಅತ್ತೇಬಿಟ್ಟರಂತೆ. ನಂತರ ಗಣೇಶ್ ಅವರನ್ನು ಪರೀಕ್ಷಿಸಿದ ವೈದ್ಯರ ತಂಡ ಎಲ್ಲಾ ಓಕೆ ಎಂದು ಹೇಳಿದೆ.
ಈ ಚಿತ್ರದ ಒಂದು ದೃಶ್ಯಕ್ಕಾಗಿ 35ಲಕ್ಷ ರೂ. ವೆಚ್ಚದಲ್ಲಿ ಸೆಟ್ ಹಾಕಲಾಗಿತ್ತು. ನಿರ್ಮಾಪಕ ಕೆ.ಮಂಜು ಅವರ 'ಅರಮನೆ' 18ನೇ ಚಿತ್ರ. ಅರಮನೆ ಏಪ್ರಿಲ್ 4,2008ರಂದು ಕರ್ನಾಟಕ ರಾಜ್ಯದಾದ್ಯಂತ ತೆರೆಕಾಣಲಿದೆ.
Tuesday, March 25, 2008
10ಎ ರೂಟ್ ಬಸ್ ಕಂಡಕ್ಟರಾಗಿ ರಜನಿ ತೆರೆಯಮೇಲೆ

ಶ್ರೀನಗರ ಯಾರ್ರೀ? ಎಷ್ಟೊಂದ್ ಜಗಾ ಇದೆಯಲ್ರೀ, ಹೋಗ್ರಿ ಒಳಗೆ, ಯಾಕ್ರೀ ಫುಟ್‌ಬೋರ್ಡ್ ಮೇಲೆ ನಿಂತ್ಕೊಂಡು ಸಾಯ್ತೀರಾ? ಹೆಣ್ಮಕ್ಕಳಿಗೆ ಜಾಗ ಬಿಟ್ಟುಕೊಡಬೇಕಂತ ಗೊತ್ತಾಗಲ್ವಾ? ಶ್ರೀನಗರ ಶ್ರೀನಗರ ಅಂತ ಕೂಗಿದ್ದು ಯಾರಾದ್ರೂ ಹತ್ಕೊಳ್ಳಿ ಅಂತ, ನೀವು ಇಳ್ಕೊಂಡೇ ಬಿಟ್ರಲ್ಲ, ಶ್ರೀನಗರ ಇನ್ನೂ ಬಂದಿಲ್ಲ ಹತ್ರೀ ಮೇಲೆ... ರಜನಿ ಬಾಯಿಂದ ಇಂಥಾ ಮಾತುಗಳು ಬರುವುದನ್ನು ಕೇಳಲು ಕಾಯುತ್ತಿರುವ 10ಎ ರೂಟ್ ಬಸ್ ಚಿತ್ರಪ್ರೇಮಿಗಳೇ ಸಂಭ್ರಮಿಸುವ ಮುನ್ನ ಮುಂದಿನದನ್ನು ಓದಿಬಿಡಿ.
10ಎ ರೂಟ್ ನಂಬರ್ ಬಸ್ ಕಂಡಕ್ಟರ್ ಆಗಿ ಮತ್ತೆ ಆವಿರ್ಭವಿಸುತ್ತಿರುವುದು ತಮಿಳು ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ತಯಾರಾಗುತ್ತಿರುವ ಚಿತ್ರದಲ್ಲಿ. ಮಲಯಾಳಂ ಸೂಪರ್ ಸ್ಟಾರ್ ಮಮ್ಮೂಟ್ಟಿ ನಟಿಸಿದ್ದ 'ಕಥಾ ಪರಯುಂಬೋಲ್' ಚಿತ್ರದ ಅವತರಣಿಕೆಯಲ್ಲಿ ಕಂಡಕ್ಟರ್‌ಗಿರಿಯಿಂದ ಸ್ಟಾರ್‌ಗಿರಿಯವರೆಗೆ ಏರಿದ ವ್ಯಕ್ತಿಯ ಪಾತ್ರದಲ್ಲಿ ವಿಜೃಂಭಿಸಲಿದ್ದಾರೆ ರಜನಿ.
ತಮಿಳಿನಲ್ಲಿ 'ಕುಸೇಲನ್' ಆಗಿದ್ದರೆ ತೆಲುಗಿನಲ್ಲಿ 'ಕುಚೇಲುಡು' ಆಗಿ ಕಾಣಿಸಿಕೊಳ್ಳಲಿದ್ದಾರೆ. ಕೃಷ್ಣ ರಾಜೇಂದ್ರ ಮಾರುಕಟ್ಟೆಯಿಂದ ಶ್ರೀನಗರದವರೆಗೆ ಚಲಿಸುತ್ತಿದ್ದ ಬಸ್ಸು ಈಗ ಹೈದರಾಬಾದ್ ಸ್ಟುಡಿಯೋದಲ್ಲಿ ಚಲಿಸಲಿದೆ. ಇದರ ಶೂಟಿಂಗ್ ಬೆಂಗಳೂರಿನಲ್ಲಿ ಸಾಧ್ಯವಿಲ್ಲದಿರುವುದರಿಂದ ಹೈದರಾಬಾದ್‌ನ ಸ್ಟುಡಿಯೋದಲ್ಲಿ ರಜನಿ ಮತ್ತು ರಾಜ್ ಬಸ್ ಕಂ
ಡಕ್ಟರ್ ಮತ್ತು ಡ್ರೈವರ್ ಆಗಿ ಬಣ್ಣ ಹಚ್ಚಲಿದ್ದಾರೆ.ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ಕಥೆಯನ್ನು ಚಿತ್ರ ಹೊಂದಿದ್ದರೂ ಇದು ಅವರ ನಿಜ ಜೀವನದ ಕಥೆ ಅಲ್ಲ. ಹಾಗೆ, ಇದನ್ನು ಸಂಪೂರ್ಣ ಅಲ್ಲಗಳೆಯಲೂ ಆಗದು. ಏಕೆಂದರೆ, ಚಿತ್ರರಂಗಕ್ಕೆ ಧುಮುಕಲು ಪ್ರೇರೇಪಿಸಿ ತನುಮನಧನವನ್ನು ಅರ್ಪಿಸಿದ್ದ ರಾಜ್ ಬಹಾದ್ದೂರ್ ಅವರು ಮಾತ್ರವಲ್ಲ ಸ್ಟಾರ್‌ಗಿರಿಗೆ ಏರಲು ಕಾರಣಕರ್ತನಾದ ನಾಪಿತನ ಪಾತ್ರ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದೆ. ಉಳಿದಂತೆಲ್ಲ ಮಲಯಾಳಂ ಚಿತ್ರದ ನಕಲಾಗಲಿದೆ 'ಕುಸೇಲನ್'.
ಸಂತಸದ ಸಂಗತಿಯೆಂದರೆ ರಜನಿ ಕೂಡ ತಮ್ಮ ಅಂದಿನ ದಿನಗಳನ್ನು ಮರೆತಿಲ್ಲ. ನಟನೆಯ ಏಕತಾನತೆ ಬೇಸರವೆನಿಸಿದಾಗ ರಜನಿ ಛದ್ಮವೇಷದಲ್ಲಿ ಬೆಂಗಳೂರಿಗೆ ಬಂದು ತಮ್ಮ ಸ್ನೇಹಿತರನ್ನು ಭೇಟಿಯಾಗುತ್ತಿದ್ದ ಸಂಗತಿಯೂ ಚಿತ್ರದಲ್ಲಿ ಸೇರಿಸಲಾಗಿದೆ. ಆದರೆ ಇಲ್ಲಿ ಅವರು ಛದ್ಮವೇಷ ಧರಿಸಿದರೂ ಯಾವ ಸ್ನೇಹಿತನನ್ನೂ ಭೇಟಿಯಾಗುವುದಿಲ್ಲ. ನಿರ್ದೇಶನದ ಸಾರಥ್ಯವಹಿಸಿರುವ ಪಿ.ವಾಸು ಅವರು ರಜನಿ ನಿಜ ಜೀವನದ ಕೆಲ ಸನ್ನಿವೇಶಗಳನ್ನು 'ಕುಸೇಲನ್' ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ. ಕಂಡಕ್ಟರಾಗಿ ಮಾತ್ರವಲ್ಲದೆ ಬೆಂಗಳೂರಿನಲ್ಲಿ ಆರಂಭದ ದಿನಗಳಲ್ಲಿ ರಜನಿ ಕಂಡ ಕಷ್ಟದ ದಿನಗಳು, ಅವರ ನಾಟಕದ ಹುಚ್ಚು ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿವೆ.
ಚಿತ್ರದಲ್ಲಿ ರಜನಿಯ ಪ್ರೇಯಸಿಯಾಗಿ ಅವರ ಹಿಂದಿನೆರಡು ಚಿತ್ರಗಳಾದ ಚಂದ್ರಮುಖಿ ಮತ್ತು ಶಿವಾಜಿ ಚಿತ್ರಗಳಲ್ಲಿ ಅಭಿನಯಿಸಿದ್ದ ನಯನತಾರಾ ಅಭಿನಯಿಸಲಿದ್ದಾರೆ. ಚಿತ್ರೀಕರಣ ಮಾರ್ಚ್ 15ರಿಂದ ಹೈದರಾಬಾದ್‌ನ ಸ್ಟುಡಿಯೋದಲ್ಲಿ ಆರಂಭವಾಗಿದೆ. ಅಂದ ಹಾಗೆ, ತಮಿಳು ಚಿತ್ರರಂಗದಲ್ಲಿ ವಿರಾಜಿಸುತ್ತಿರುವ ಮತ್ತೊಬ್ಬ ಸೂಪರ್ ಸ್ಟಾರ್ ಕಮಲಹಾಸನ್ ಕೂಡ ಈ ಚಿತ್ರದಲ್ಲಿ ಅತಿಥಿಯಾಗಿ ನಟಿಸಲಿದ್ದಾರೆ.
ಕಿಶನ್ ಮುಡಿಗೆ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿ
ಬೀದಿ ಬೀದಿಗಳಲ್ಲಿ ರದ್ದಿ ಆಯುವ ಹುಡುಗರ ಕುರಿತ ಮನೋಜ್ಞ ಚಿತ್ರ 'ಕೇರಾಫ್ ಫುಟ್‌ಪಾತ್' ತಯಾರಿಸಿದ ವಿಶ್ವದ ಅತಿ ಕಿರಿಯ ಚಿತ್ರ ನಿರ್ದೇಶಕ ಮಾಸ್ಟರ್ ಕಿಶನ್ ಕೈರೋ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಮೂರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಆಯ್ದುಕೊಂಡಿದ್ದಾನೆ.
ಹಿಂದಿ ಚಿತ್ರರಂಗದ ಶೆಹೆನ್‌ಷಾ ಅಮಿತಾಭ್ ಬಚ್ಚನ್ ಪಡೆದಿದ್ದ ಪ್ರಶಸ್ತಿಯೊಂದು ವಿಶ್ವದ ಕಿರಿಯ ನಿರ್ದೇಶಕನೆಂದು ಗಿನ್ನೆಸ್ ರೆಕಾರ್ಡ್ ಸೇರಿದ ಕಿಶನ್ ಷೋಕೇಸಲ್ಲಿ ರಾರಾಜಿಸುತ್ತಿರುವುದು ಈ ಪೋರನ ಸಂಸತವನ್ನು ನೂರ್ಮಡಿಸಿದೆ.
ಮಕ್ಕಳ ವಿಭಾಗದಲ್ಲಿ ಪ್ರದರ್ಶಿತವಾದ ಕೇರಾಫ್ ಪುಟ್‌ಪಾತ್ ಚಿತ್ರ ಜ್ಯೂರಿ ಪ್ರಶಸ್ತಿ, ಅಂತಾರಾಷ್ಟ್ರೀಯ ಜ್ಯೂರಿಗಳ ವಿಶೇಷ ಪ್ರಶಸ್ತಿ ಮತ್ತು ಅಮಿತಾಭ್ ಬಚ್ಚನ್‌ಗೆ ನೀಡಿದ್ದ ಮತ್ತೊಂದು ಪ್ರಶಸ್ತಿಗೆ ಕಿಶನ್ ಆಯ್ಕೆಯಾಗಿದ್ದಾನೆ.
ಚಿತ್ರ ನಿರ್ದೇಶನಕ್ಕೆ ಇಳಿಯುವ ಮೊದಲು ಸಣ್ಣಪುಟ್ಟ ಚಿತ್ರ ಮತ್ತು ಧಾರಾವಾಹಿಗಳಲ್ಲಿ ನಟಿಸುತ್ತಿದ್ದ ಕಿಶನ್ ಎಲ್ಲ ಹುಡುಗರಂತೆ ಆಟವಾಡಿಕೊಂಡಿದ್ದ. ಒಂದು ಶಾಲೆಯಿಂದ ಮರಳುವಾಗ ರದ್ದಿಯನ್ನು ಆರಿಸುತ್ತಿದ್ದ ಹುಡುಗರೇ ಕೇರಾಫ್ ಪುಟ್‌ಪಾತ್ ತೆಗೆಯಲು ಕಿಶನ್‌ಗೆ ಪ್ರಚೋದನೆ ನೀಡಿತು. ಅದಕ್ಕೆ ಹೆತ್ತವರ ಮತ್ತು ಶಾಲಾ ಮುಖ್ಯೋಪಾಧ್ಯಾಯರ ಪ್ರೋತ್ಸಾಹವೂ ದೊರೆಯಿತು.
ರದ್ದಿ ಆಯುವ ಹುಡುಗನೊಬ್ಬ ಶಾಲೆಗೆ ಹೋಗಿ ಅಸಾಧ್ಯವನ್ನು ಸಾಧಿಸುವುದೇ ಚಿತ್ರದ ತಿರುಳು. ಇದು ಇತರ ಬೀದಿಬದಿಯ ಮಕ್ಕಳಿಗೂ ಪ್ರೇರಣೆಯಾಗಬೇಕೆಂಬುದೇ ಕಿಶನ್ ಮನದಿಚ್ಛೆ.
Saturday, March 22, 2008
ಪತ್ನಿಗೆ ವಿಚ್ಛೇದನ ಕೊಡಲು ಮುಂದಾದ ಪ್ರಕಾಶ್ ರೈ
ಇತ್ತೀಚಿನ ಸುದ್ದಿಯಂತೆ ಪ್ರಕಾಶ್ ರೈ ಚೆನ್ನೈನ ಎಗ್‌ಮೋರ್ ಫ್ಯಾಮಿಲಿ ಕೋರ್ಟ್‌ನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಬಹಳಷ್ಟು ದಿನಗಳಿಂದ ಪ್ರಕಾಶ್ ರೈ ಮತ್ತು ಲಲಿತಕುಮಾರಿಅವರ ದಾಂಪತ್ಯ ಹಳಸಿರುವ ಬಗ್ಗೆ ಪತ್ರಿಕೆಗಳು ಆಗಿಂದಾಗ್ಗೆ ವರದಿ ಮಾಡುತ್ತಿದ್ದವು. ನಾವಿಬ್ಬರೂ ಬೇರೆ ಬೇರೆ ಯಾಗಿ ಇರಲು ಇಚ್ಛಿಸಿದ್ದೇವೆ ಎಂದು ಪ್ರಕಾಶ್ ರೈ ಗುರುವಾರ ಸುದ್ದಿಗಾರರಿಗೆ ತಿಳಿಸಿ ಅವರ ದಾಂಪತ್ಯದ ಬಗ್ಗೆ ಕೇಳಿಸುತ್ತಿದ್ದ ಗುಸುಗುಸು ಸುದ್ದಿಗಳಿಗೆ ತೆರೆ ಎಳೆದಿದ್ದಾರೆ.
ಮಗಳನ್ನು ತನ್ನ ಸುಪರ್ದಿಗೆ ಒಪ್ಪಿಸಬೇಕೆಂದು ಫ್ಯಾಮಿಲಿ ಕೋರ್ಟಲ್ಲಿ ಪ್ರಕಾಶ್ ರೈ ವಿನಂತಿಸಿಕೊಂಡಿದ್ದಾರೆ. ಮೇಕಪ್ ಸಹಾಯಕಿ ಬೋನಿ ವರ್ಮಾ ಜೊತೆ ಅನೈತಿಕ ಸಂಬಂಧ ಇರುವುದು ನಿಜ ಎಂದು ಸ್ವತಃ ಪ್ರಕಾಶ್ ರೈ ಅವರು ಒಪ್ಪಿಕೊಂಡಿದ್ದಾರೆ. ಬೋನಿ ವರ್ಮಾಳನ್ನು ಮದುವೆಯಾಗಿ ಮುಂದಿನ ಜೀವನ ಆಕೆಯೊಂದಿಗೆ ಕಳೆಯುವುದಾಗಿ ಪ್ರಕಾಶ್ ರೈ ತೀರ್ಮಾನಿಸಿದ್ದಾರೆ.
ಮಹಿಳಾ ಸಂಗಾತಿಯನ್ನು ನನ್ನೊಂದಿಗೆ ಇಟ್ಟುಕೊಳ್ಳುವುದು ಅದು ನನ್ನ ಶುದ್ಧ ವೈಯಕ್ತಿಯ ವಿಚಾರ. ಇದನ್ನು ಯಾರು ತಡೆಯಲು ವಿರೋಧಿಸಲು ಸಾಧ್ಯವಿಲ್ಲ. ನನ್ನ ಪತ್ನಿಗೆ ಈ ಬಗ್ಗೆ ಎಲ್ಲಾ ಗೊತ್ತು. ಈಗ ನಾವು ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ. ಇಷ್ಟಕ್ಕೂ ಮಾಧ್ಯಮ ನಮ್ಮ ವೈಯಕ್ತಿಕ ಜೀವನಕ್ಕೆ ಏಕಿಷ್ಟು ಪ್ರಾಮುಖ್ಯತೆ ಕೊಡುತ್ತಿದೆ. ದಯವಿಟ್ಟು ನಮ್ಮ ಪಾಡಿಗೆ ನಮ್ಮನ್ನು ಬಿಟ್ಟು ಬಿಡಿ ಎಂದು ಪತ್ರಕರ್ತರೆಡೆಗೆ ಕೆಂಗಣ್ಣಿನಿಂದ ನೋಡಿದರು ಪ್ರಕಾಶ್ ರೈ.
ಪ್ರಕಾಶ್ ರೈ ಒಬ್ಬ ಪ್ಲೇಬಾಯ್ ಅನ್ನುವ ವಿಚಾರ ಗುಟ್ಟಾಗಿ ಏನೂ ಉಳಿದಿಲ್ಲ. ಕನ್ನಡದಲ್ಲೂ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದ ಪ್ರಕಾಶ್ ರೈ 'ಅನುಕೂಲಕ್ಕೊಬ್ಬ ಗಂಡ'ನಾಗಿ ಬದಲಾಗಿದ್ದಾರೆ ಅಷ್ಟೆ.










