ಕನ್ನಡವನ್ನು ಕಡ್ಡಾಯ ಮಾಡಬೇಕು. ಕನ್ನಡ ಮಾತನಾಡದವರಿಗೆ ಯಾವುದೇ ಸೌಲಭ್ಯ ಕೊಡಬಾರದು, ಭಾಷಾಭಿಮಾನ ಜನರ ರಕ್ತದಲ್ಲಿ ಬೆರೆಯುವಂತೆ ಮಾಡಬೇಕು. ಕನ್ನಡ ಕಲಿಯುವವರೆಗೂ ಬಿಡಬಾರದು ಎಂದರು. ನೀವು ಒಂದು ದಿನದ ಮಟ್ಟಿಗೆ ಮುಖ್ಯಮಂತ್ರಿಯಾಗಿ ಆಯ್ಕೆಯಾದರೆ ಏನು ಮಾಡುತ್ತೀರಾ ಎಂಬ ಪ್ರಶ್ನೆ ಸಾಹಸಸಿಂಹ ಮೇಲಿನ ಉತ್ತರ ನೀಡಿದರು.
ತಕ್ಷಣ ಪತ್ರಕರ್ತರೊಬ್ಬರು ಎದ್ದು ನಿಂತು ಇದು ಪ್ರಜಾಪ್ರಭುತ್ವಕ್ಕೆ ವಿರೋಧಿ ಕೆಲಸವಲ್ಲವೇ ಎಂದು ಕೇಳಿದರು. ಪ್ರಜಾಪ್ರಭುತ್ವ ಇಲ್ಲದಿದ್ದರೂ ಪರವಾಗಿಲ್ಲ. ಫ್ಯಾಸಿಸಂ ಬಂದರೂ ಪರವಾಗಿಲ್ಲ. ಈ ದೇಶಕ್ಕೆ ಬೋಧಿಸಿದ್ದು ಶಿಷ್ಟ ರಾಜಕೀಯ. ಆದರೆ, ಆಗುತ್ತಿರುವುದು ಬರೀ ದುಷ್ಟ ರಾಜಕೀಯ. ಹಾಗಾಗಿ ನೋ ಎಲೆಕ್ಷನ್, ಒನ್ಲಿ ಸೆಲೆಕ್ಷನ್ ಸರಿಯಾದ ಮಾರ್ಗ ಎಂದು ಅವರು ಅಭಿಪ್ರಾಯಪಟ್ಟರು.
ಹೊಗೇನಕಲ್ ವಿವಾದದ ಸಂದರ್ಭದಲ್ಲಿ ವಿಷ್ಣು ಹಾಗೂ ಅಂಬರೀಷ ಗೈರು ಹಾಜರಾಗಿದ್ದರ ಬಗ್ಗೆ ಪ್ರಸ್ತಾಪವಾದಾಗ, ನಾವ್ಯಾಕೆ ಬರಲಿಲ್ಲ ಎಂಬ ಪ್ರಶ್ನೆ ಮುಖ್ಯವಲ್ಲ. ಸಮಸ್ಯೆ ಬಗೆಹರಿಯಿತಾ ಎಂಬುದೊಂದೇ ಸರಿಯಾದ ಪ್ರಶ್ನೆ. ನಾವು ಅಂದು ಬರದಿದ್ದರೂ ಇರುವ ಜಾಗದಲ್ಲೇ ಸ್ಪಂದಿಸಿದೆವು ಎಂದರು.
(ಕರ್ಟೆಸೀ: ದಟ್ಸ್ ಕನ್ನಡ)